IPL 2025 Points Table: ಆರ್‌ಸಿಬಿ ಅಗ್ರಸ್ಥಾನ ಸುಭದ್ರ; 7ನೇ ಸ್ಥಾನಕ್ಕೆ ಕುಸಿದ ಚೆನ್ನೈ
IPL 2025: ಆರೆಂಜ್ ಕ್ಯಾಪ್ ವಿಭಾಗದಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ. ನಿಕೋಲಸ್ ಪೂರನ್ ಬಳಿಯೇ ಇದೆ. ಆದರೆ ಪರ್ಪಲ್ ಕ್ಯಾಪ್ ವಿಭಾಗದಲ್ಲಿ ಬದಲಾವಣೆಯಾಗಿದೆ. ಲಕ್ನೋ ತಂಡದ ಶಾರ್ದೂಲ್ ಠಾಕೂರ್ ಅವರನ್ನು ಹಿಂದಿಕ್ಕಿ ನೂರ್ ಅಹ್ಮದ್(7 ವಿಕೆಟ್) ಅಗ್ರಸ್ಥಾನಕ್ಕೇರಿದ್ದಾರೆ.


ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್(IPL 2025)ನಲ್ಲಿ ಸತತ ಎರಡು ಗೆಲುವು ಸಾಧಿಸಿರುವ ರಾಯಲ್ ಚಾಲೆಂಜರ್ ಬೆಂಗಳೂರು(RCB vs CSK) ತಂಡ ಅಂಕಪಟ್ಟಿಯಲ್ಲಿ(IPL 2025 Points Table) ತನ್ನ ಅಗ್ರಸ್ಥಾನವನ್ನು ಇನ್ನಷ್ಟು ಭದ್ರಗೊಳಿಸಿದೆ. ಶುಕ್ರವಾರದ ಐಪಿಎಲ್ ಮುಖಾಮುಖಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಅವರದೇ ನೆಲದಲ್ಲಿ 50 ರನ್‌ಗಳಿಂದ ಮಣಿಸಿ ಈ ಸಾಧನೆಗೈದಿದೆ. ಸೋಲು ಕಂಡ ಚೆನ್ನೈ 7ನೇ ಸ್ಥಾನಕ್ಕೆ ಕುಸಿದಿದೆ. ಆರ್‌ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಚೆನ್ನೈ 4ನೇ ಸ್ಥಾನದಲ್ಲಿತ್ತು.
ಚೆನ್ನೈ ಸೋಲಿನಿಂದ ಕೆಕೆಆರ್‌ಗೆ ಲಾಭವಾಗಿದೆ. ಇದು ಒಂದು ಸ್ಥಾನ ಮೇಲೇರಿ 6ನೇ ಸ್ಥಾನ ಪಡೆದಿದೆ. ಉಳಿದಂತೆ 5ನೇ ಸ್ಥಾನದಲ್ಲಿದ್ದ ಡೆಲ್ಲಿ 4ನೇ ಸ್ಥಾನಕ್ಕೇರಿದೆ. ರಾಜಸ್ಥಾನ್ ಕೊನೆಯ ಸ್ಥಾನದಲ್ಲೇ ಮುಂದುವರಿದಿದೆ.
ಆರೆಂಜ್ ಕ್ಯಾಪ್ ವಿಭಾಗದಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ. ನಿಕೋಲಸ್ ಪೂರನ್ ಬಳಿಯೇ ಇದೆ. ಆದರೆ ಪರ್ಪಲ್ ಕ್ಯಾಪ್ ವಿಭಾಗದಲ್ಲಿ ಬದಲಾವಣೆಯಾಗಿದೆ. ಲಕ್ನೋ ತಂಡದ ಶಾರ್ದೂಲ್ ಠಾಕೂರ್ ಅವರನ್ನು ಹಿಂದಿಕ್ಕಿ ನೂರ್ ಅಹ್ಮದ್(7 ವಿಕೆಟ್) ಅಗ್ರಸ್ಥಾನಕ್ಕೇರಿದ್ದಾರೆ.
ಇದನ್ನೂ ಓದಿ MS Dhoni: ಆರ್‌ಸಿಬಿ ವಿರುದ್ಧ ಸೋತರೂ ದಾಖಲೆ ಬರೆದ ಧೋನಿ
ನೂತನ ಅಂಕಪಟ್ಟಿ ಹೀಗಿದೆ
Top of the morning to you, 12th Man Army! ♥
— Royal Challengers Bengaluru (@RCBTweets) March 29, 2025
Long way to go but we’re happy with the start. 🧿🙏#PlayBold #ನಮ್ಮRCB #IPL2025 pic.twitter.com/9qN6MuvSxT
17 ವರ್ಷಗಳ ಬಳಿಕ ತವರಿನಲ್ಲಿ ಸೋತ ಚೆನ್ನೈ
ಶುಕ್ರವಾರದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಅವರ ಅರ್ಧ ಶತಕ ಮತ್ತು ಫಿಲ್ ಸಾಲ್ಟ್, ಟಿಮ್ ಡೇವಿಡ್ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ 7 ವಿಕೆಟಿಗೆ 196 ರನ್ ಪೇರಿಸಿತು. ಗುರಿ ಬೆನ್ನಟ್ಟಿದ ಚೆನ್ನೈ ತಂಡ ನಾಟಕೀಯ ಕುಸಿತದೊಂದಿಗೆ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 146 ರನ್ ಮಾತ್ರ ಗಳಿಸಲು ಶಕ್ತವಾಗಿ ಸೋಲು ಕಂಡಿತು. ಇದು ಚೆನ್ನೈಗೆ ತವರಿನಲ್ಲಿ 17 ವರ್ಷಗಳ ಬಳಿಕ ಆರ್‌ಸಿಬಿ ವಿರುದ್ಧ ಎದುರಾದ 2ನೇ ಸೋಲು.