ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs CSK: 9ನೇ ಕ್ರಮಾಂಕದಲ್ಲಿ ಆಡಿದ ಧೋನಿ ವಿರುದ್ಧ ಭಾರೀ ಟೀಕೆ

MS Dhoni: ಪಂದ್ಯದ ಬಳಿಕ ಮಾತನಾಡಿದ ಚೆನ್ನೈ ಅಭಿಮಾನಿಯೊಬ್ಬರು, ಕ್ರಿಕೆಟ್‌ನಿಂದ ನಿವೃತ್ತಿಯಾದ ಆಟಗಾರರೆಲ್ಲ ಚೆನ್ನೈ ತಂಡದಲ್ಲಿದ್ದಾರೆ. ಅದರಲ್ಲೂ ಧೋನಿ ತಂಡ ಸಂಕಷ್ಟದಲ್ಲಿದ್ದರೂ ಕೂಡ 10 ಎಸೆತಗಳು ಬಾಕಿ ಇರುವಾಗ ಬ್ಯಾಟಿಂಗ್‌ಗೆ ಬಂದು ಸಿನೆಮಾ ಶೈಲಿಯಲ್ಲಿ ಒಂದೆರಡು ಸಿಕ್ಸರ್‌ ಮತ್ತು ಬೌಂಡರಿ ಬಾರಿಸಿ ದೊಡ್ಡ ಸ್ಕೋಪ್‌ ಪಡೆಯುತ್ತಿದ್ದಾರೆ. ಇದರಿಂದ ತಂಡಕ್ಕೇನು ಲಾಭವಿಲ್ಲ ಎಂದಿದ್ದಾರೆ.

9ನೇ ಕ್ರಮಾಂಕದಲ್ಲಿ ಆಡಿದ ಧೋನಿ ವಿರುದ್ಧ ಭಾರೀ ಟೀಕೆ

Profile Abhilash BC Mar 29, 2025 10:58 AM

ಚೆನ್ನೈ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ವಿರುದ್ಧ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ (CSK) ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ(MS Dhoni) ಅವರು 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದದ್ದು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಜತೆಗೆ ಧೋನಿಯನ್ನು ಹಲವುರು ಟ್ರೋಲ್‌ ಕೂಡ ಮಾಡಿದ್ದಾರೆ.

ಚೆನ್ನೈನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನ ಪಡೆದ ಆರ್‌ಸಿಬಿ ನಾಯಕ ರಜತ್‌ ಪಾಟಿದಾರ್‌ ಅವರ ಅರ್ಧ ಶತಕ ಮತ್ತು ಕೆಲ ಕ್ರಮಾಂಕದಲ್ಲಿ ಟಿಮ್‌ ಡೇವಿಡ್‌ ಅವರ ಬಿರುಸಿನ ಬ್ಯಾಟಿಂಗ್‌ ನೆರವಿನಿಂದ 7 ವಿಕೆಟಿಗೆ 196 ರನ್‌ ಪೇರಿಸಿತು. ಜವಾಬಿತ್ತ ಚೆನ್ನೈ ಆರಂಭಿಕ ಆಘಾತಕ್ಕೆ ಒಳಗಾಗಿ 52 ರನ್‌ ಗಳಿಸುವಷ್ಟರಲ್ಲೇ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಅಂತಿಮವಾಗಿ 8 ವಿಕೆಟ್ ನಷ್ಟಕ್ಕೆ 146 ರನ್ ಮಾತ್ರ ಗಳಿಸಲು ಶಕ್ತವಾಗಿ ಸೋಲು ಕಂಡಿತು.



6ನೇ ವಿಕೆಟ್‌ ಉರುಳಿದಾಗ, ಸಿಎಸ್‌ಕೆ ಗೆಲುವಿಗೆ 7.1 ಓವರ್‌ಗಳಲ್ಲಿ 117 ರನ್ ಬೇಕಿತ್ತು. ಆದರೆ ಆಗಲೂ, ಧೋನಿ ಕ್ರೀಸ್‌ಗಿಳಿಯಲಿಲ್ಲ. ಅವರ ಬದಲು, ಬೌಲಿಂಗ್ ಆಲ್‌ರೌಂಡರ್‌ ಆರ್‌.ಅಶ್ವಿನ್‌ ಬಂದರು ಪ್ರತಿ ಓವರ್‌ಗೆ 16ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ರನ್‌ ಬೇಕಿದ್ದಾಗಲೂ ಧೋನಿ ಡಗೌಟ್‌ನಲ್ಲೇ ಉಳಿದದ್ದು, ಕ್ರಿಕೆಟ್‌ ಪ್ರಿಯರ ಅಚ್ಚರಿಗೆ ಕಾರಣವಾಗಿದೆ. ಸ್ವತಃ ಚೆನ್ನೈ ಅಭಿಮಾನಿಗಳೇ ಧೋನಿ ನಿವೃತ್ತಿ ಹೊಂದುವುದು ಸೂಕ್ತ ಎಂದು ಹೇಳಿದ್ದಾರೆ.

ಇದನ್ನೂ ಓದಿ IPL 2025 Points Table: ಆರ್‌ಸಿಬಿ ಅಗ್ರಸ್ಥಾನ ಸುಭದ್ರ; 7ನೇ ಸ್ಥಾನಕ್ಕೆ ಕುಸಿದ ಚೆನ್ನೈ



ಪಂದ್ಯದ ಬಳಿಕ ಮಾತನಾಡಿದ ಚೆನ್ನೈ ಅಭಿಮಾನಿಯೊಬ್ಬರು, ಕ್ರಿಕೆಟ್‌ನಿಂದ ನಿವೃತ್ತಿಯಾದ ಆಟಗಾರರೆಲ್ಲ ಚೆನ್ನೈ ತಂಡದಲ್ಲಿದ್ದಾರೆ. ಅದರಲ್ಲೂ ಧೋನಿ ತಂಡ ಸಂಕಷ್ಟದಲ್ಲಿದ್ದರೂ ಕೂಡ 10 ಎಸೆತಗಳು ಬಾಕಿ ಇರುವಾಗ ಬ್ಯಾಟಿಂಗ್‌ಗೆ ಬಂದು ಸಿನೆಮಾ ಶೈಲಿಯಲ್ಲಿ ಒಂದೆರಡು ಸಿಕ್ಸರ್‌ ಮತ್ತು ಬೌಂಡರಿ ಬಾರಿಸಿ ದೊಡ್ಡ ಸ್ಕೋಪ್‌ ಪಡೆಯುತ್ತಿದ್ದಾರೆ. ಇದರಿಂದ ತಂಡಕ್ಕೇನು ಲಾಭವಿಲ್ಲ. ಅವರು ಮುಂದಿನ ಆವೃತ್ತಿಗೆ ನಿವೃತ್ತಿ ಘೋಷಿಸಿದರೆ ಉತ್ತಮ ಎಂದಿದ್ದಾರೆ.

ಪಂದ್ಯದಲ್ಲಿ ಧೋನಿ 16 ಎಸೆತಗಳಲ್ಲಿ ಅಜೇಯ 30 ರನ್‌ ಬಾರಿಸಿದ್ದರು. ಧೋನಿ 30 ರನ್‌ ಬಾರಿಸುವ ಮೂಲಕ ಚೆನ್ನೈ ಪರ ಅತ್ಯಧಿಕ ರನ್‌ ಗಳಿಸಿ ಮೊದಲ ಆಟಗಾರ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಸುರೇಶ್‌ ರೈನಾ(4687) ಹೆಸರಿನಲ್ಲಿತ್ತು. ಇದೀಗ ಧೋನಿ ಚೆನ್ನೈ ಪರ 204 ಇನಿಂಗ್ಸ್‌ ಆಡಿ 4699* ರನ್‌ ಬಾರಿಸುವ ಮೂಲಕ ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.