Viral Video: ಬಿರು ಬೇಸಿಗೆಗೆ ಮಡಕೆಯ ನೀರು ಕೂಲ್ ಕೂಲ್ ಆಗಿರಬೇಕೆ...?ಈ ಟಿಪ್ಸ್ ಟ್ರೈ ಮಾಡಿ!
Viral Video: ಬೇಸಿಗೆಯಲ್ಲಿ ತಂಪಾದ ನೀರನ್ನು ಕುಡಿಯಲು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಕೆಲವರು ಮನೆಯಲ್ಲಿ ಫ್ರಿಜ್ ಇದ್ದರೂ ಮಡಕೆ ನೀರನ್ನು ಇಷ್ಟಪಡುತ್ತಾರೆ. ಮಡಕೆ ನೀರು ತಂಪಾದರೂ ಫ್ರಿಜ್‌ನಷ್ಟು ತಂಪಿರಲಲ್ಲ. ಫ್ರಿಜ್‍ನಲ್ಲಿರುವಂತೆ ಮಡಕೆಯ ನೀರು ತಂಪಾಗಿರಲು ಈ ಟ್ರಿಕ್ಸ್ ಫಾಲೋ ಮಾಡಿ. ಈ ಟ್ರಿಕ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.


ಬೇಸಿಗೆ ಶುರುವಾಗಿದೆ. ಹೊರಗಡೆ ಬಿಸಿಲಿನ ತಾಪಾಗಿ. ಹಾಗಾಗಿ ಎಲ್ಲರೂ ನೀರನ್ನು ಕುಡಿಯುವಾಗ ಫ್ರಿಜ್‍ನಲ್ಲಿಟ್ಟ ತಂಪಾದ ನೀರನ್ನು ಕುಡಿಯಲು ಬಯಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಫ್ರಿಜ್ ನೀರಿಗಿಂತಲೂ ಮಡಕೆ ನೀರನ್ನು ಹೆಚ್ಚಿವರು ಇಷ್ಟಪಡುತ್ತಾರೆ. ಹೀಗಿರುವಾಗ ಫ್ರಿಜ್ ನೀರಿನಷ್ಟೇ ಮಡಕೆ ನೀರನ್ನು ಹೇಗೆ ತಂಪಾಗಿಡಬೇಕೆಂಬುದಕ್ಕೆ ಇಲ್ಲಿದೆ ಸಿಂಪಲ್ ಟಿಪ್ಟ್. ಇದಕ್ಕೆ ಸಂಬಂಧಿಸಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಫ್ರಿಜ್ ಇಲ್ಲದೇ ನೀರನ್ನು ಹೇಗೆ ತಂಪಾಗಿಡಬಹುದು ಎಂಬುದನ್ನು ತಿಳಿಸಿಕೊಡಲಾಗಿದೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದು ವೈರಲ್(Viral Video) ಆಗಿದೆ.
ವೈರಲ್ ಆದ ವಿಡಿಯೊದಲ್ಲಿ ಮಣ್ಣಿನ ಮಡಕೆ ಬಳಸಿ ನೀರನ್ನು ತಂಪಾಗಿಡಲು ಸರಳ ಮತ್ತು ಪರಿಣಾಮಕಾರಿ ಮಾರ್ಗವನ್ನು ಬಹಿರಂಗಪಡಿಸಿದೆ. ಈ ಟ್ರಿಕ್‍ನಲ್ಲಿ ನಿಮ್ಮ ಮಣ್ಣಿನ ಮಡಿಕೆಯನ್ನು ನೈಸರ್ಗಿಕ ಫ್ರಿಜ್ ಆಗಿ ಪರಿವರ್ತಿಸಲಾಗಿದೆ. ಮಣ್ಣಿನ ಮಡಕೆಯಲ್ಲಿ ನೀರನ್ನು ತಂಪಾಗಿಡಲು ವಿನೆಗರ್, ಅಡುಗೆ ಸೋಡಾ ಮತ್ತು ಉಪ್ಪು ಬೇಕು. ಈ ಪ್ರತಿಯೊಂದು ಪದಾರ್ಥಗಳನ್ನು ಒಂದು ಚಮಚವನ್ನು ತೆಗೆದುಕೊಂಡು, ಅದನ್ನು ನೀರಿನೊಂದಿಗೆ ಬೆರೆಸಿ ಮತ್ತು ಈ ದ್ರಾವಣದಿಂದ ಮಡಕೆಯನ್ನು ಚೆನ್ನಾಗಿ ಉಜ್ಜಿಕೊಳ್ಳಿ. ನಂತರ ಚೆನ್ನಾಗಿ ತೊಳೆಯಿರಿ. ಇದರಲ್ಲಿಟ್ಟ ನೀರು ತಂಪಾಗಿರುತ್ತದೆ. ಕುಡಿಯುವಾಗ ಪ್ರಿಜ್‍ನಲ್ಲಿಟ್ಟ ನೀರಿನಂತೆ ಭಾಸವಾಗುತ್ತದೆ ಮತ್ತು ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು.
ಇದರ ವಿಡಿಯೊ ಇಲ್ಲಿದೆ ನೋಡಿ...
ಮಡಕೆಯನ್ನು ಇವುಗಳನ್ನು ಬಳಸಿ ಯಾಕೆ ತೊಳೆಯಬೇಕೆಂದರೆ ಮಡಕೆ ಸಣ್ಣ ಸಣ್ಣ ರಂಧ್ರಗಳನ್ನು ಹೊಂದಿದ್ದು, ಅದು ಕಾಲಾನಂತರದಲ್ಲಿ ಮುಚ್ಚಿ ಹೋಗಬಹುದು. ಇದರಿಂದ ಅದರ ತಂಪಾಗಿಸುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಈ ಶುಚಿಗೊಳಿಸುವ ವಿಧಾನವು ಆ ರಂಧ್ರಗಳನ್ನು ತೆರೆಯಲು ಸಹಾಯ ಮಾಡುತ್ತದೆ. ಇದರಿಂದ ಮಡಕೆಯು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಈ ಪ್ರಕ್ರಿಯೆಯು ನೀರನ್ನು ಸಾಮಾನ್ಯಕ್ಕಿಂತ ನಾಲ್ಕು ಪಟ್ಟು ತಂಪಾಗಿಸುತ್ತದೆ.
ಈ ವಿಡಿಯೊವನ್ನು ಸುಮಾರು 13 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಈ ವೈರಲ್ ಮಟ್ಕಾ ಹ್ಯಾಕ್ ಬಗ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ಅನೇಕರು ಈ ಕಲ್ಪನೆಯನ್ನು "ಅದ್ಭುತ" ಎಂದು ಕರೆದರೆ, ಇತರರು ಇದನ್ನು "ಸಮಯ ವ್ಯರ್ಥ" ಎಂದು ತಳ್ಳಿಹಾಕಿದ್ದಾರೆ. ಒಬ್ಬ ವ್ಯಕ್ತಿಯು ವ್ಯಂಗ್ಯವಾಗಿ, " ಸರ್, ನಾನು ನಿಮ್ಮ ವಿಧಾನವನ್ನು ಪ್ರಯತ್ನಿಸಿದೆ. ಮತ್ತು ಈಗ ನನ್ನ ಮಡಿಕೆಯೊಳಗೆ ಮಂಜುಗಡ್ಡೆ ರೂಪುಗೊಳ್ಳುತ್ತಿದೆ. ನಾನು ಈಗ ಏನು ಮಾಡಬೇಕು?” ಎಂದು ಕೇಳಿದ್ದಾನೆ.ಮತ್ತೊಬ್ಬರು, “ ನಾನು ಮಡಿಕೆಗೆ ನೀರನ್ನು ಸುರಿದು ಫ್ರಿಜ್ ನಲ್ಲಿಟ್ಟಿದ್ದೇನೆ” ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಬೆಡ್‍ರೂಂಗೇ ನುಗ್ಗಿದ ಹಸು ಮತ್ತು ಗೂಳಿ- ವಿಡಿಯೊ ಫುಲ್ ವೈರಲ್
ಇನ್ನೊಬ್ಬರು ಈ ಬಗ್ಗೆ ಸಲಹೆಗಳನ್ನು ನೀಡಿ, "ಕ್ಷಾರೀಯತೆಯನ್ನು ತೆಗೆದುಹಾಕಲು ನಿಮ್ಮ ಮಡಿಕೆಯನ್ನು ನಿಯಮಿತವಾಗಿ ತೊಳೆಯಿರಿ. ಇದನ್ನು ನೇರ ಸೂರ್ಯನ ಬೆಳಕು ಮತ್ತು ಶಾಖದಿಂದ ದೂರವಿರುವ ಉತ್ತಮ ಗಾಳಿಯಾಡುವ ಪ್ರದೇಶದಲ್ಲಿ ಇರಿಸಿ. ಇದನ್ನು ಕಿಚನ್ ಕೌಂಟರ್ ಅಥವಾ ರೆಫ್ರಿಜರೇಟರ್ ಬಳಿ ಇಡುವುದನ್ನು ತಪ್ಪಿಸಿ. ಅದನ್ನು ಸ್ವಚ್ಛವಾಗಿರಿಸಿಕೊಳ್ಳಿ, ಮತ್ತು ನಿಮ್ಮ ನೀರು ತಂಪಾಗಿರುತ್ತದೆ." ಎಂದಿದ್ದಾರೆ.