ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಯುಗಾದಿ ಹೊಸ್ತಿಲಲ್ಲ ಮತ್ತೆ ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮಕ್ಕೆ  ಪ್ರದೀಪ್ ಚಾಲನೆ

ತಾಲೂಕಿನ ಕಮ್ಮಗುಟ್ಟಹಳ್ಳಿ ಪಂಚಾಯತಿಯ ಬೋಡಿ ನಾರಾಯಣಹಳ್ಳಿ, ದಿನ್ನಹಳ್ಳಿ, ಮುದ್ದಲ ಹಳ್ಳಿ, ಮಾದನಾಯಕಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕ ಪ್ರದೀಪ್ ಈಶ್ವರ್ ಗ್ರಾಮದ ನಡುವೆ ಪಂಚಾಯಿತಿ ಕಟ್ಟೆಯಲ್ಲಿ ಕುಳಿತು ಜನರಿಂದಲೇ ಕಷ್ಟಗಳನ್ನು ಆಲಿಸಿ ಪರಿಹಾರ ಕಾಣಿಸಿದರು.

ಎಂದಿನಂತೆ ತೆಲುಗನ್ನಡದಲ್ಲಿ ಕಷ್ಟ ವಿಚಾರಿಸಿದ ಶಾಸಕ

ಚಿಕ್ಕಬಳ್ಳಾಪುರ ತಾಲೂಕಿನ ಕಮ್ಮಗುಟ್ಟಹಳ್ಳಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಕೈಗೊಂಡಿದ್ದ ಸಭೆಯಲ್ಲಿ ಶಾಸಕ ಪ್ರದೀಪ್ ಈಶ್ವರ್ ಜನರೊಂದಿಗೆ ಚರ್ಚಿಸಿದರು.

Profile Ashok Nayak Mar 29, 2025 11:03 AM

ಜನರ ಕಷ್ಟಗಳಿಗೆ ಸ್ಪಂದಿಸಲು ಅಧಿಕಾರಿಗಳಿಗೆ ತಾಕೀತು

ಚಿಕ್ಕಬಳ್ಳಾಪುರ: ನಮ್ಮೂರಿಗೆ ನಮ್ಮ ಶಾಸಕ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಜನರ ಸಮಸ್ಯೆಗಳಿಗೆ ಧನಿಯಾಗುತ್ತಿರುವ ಶಾಸಕ ಪ್ರದೀಪ್ ಈಶ್ವರ್ ಜನತೆಯ ಪಾಲಿಗೆ ಆಪದ್ಭಾಂದವರಾಗಿದ್ದಾರೆ ಎಂದರೆ ಉತ್ಪ್ರೇಕ್ಷೆಯಾಗಲಾರದು. ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಮಾತ್ರ ಪ್ರಾರಂಭವಾಗಿರುವ ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮ ೧೪೦ ಗ್ರಾಮಗಳನ್ನು ಪೂರ್ಣಗೊಳಿಸಿದ್ದು,ಇವರ ಭೇಟಿಕೊಟ್ಟ ಗ್ರಾಮಗಳ ಜನತೆಯಲ್ಲಿ ಧನ್ಯತಯ ಭಾವ ಮೂಡಿರುವುದು ಸುಳ್ಳಲ್ಲ. 26 ಇಲಾಖೆಗಳ ಅಧಿಕಾರಿಗಳು ಒಂದು ಗ್ರಾಮಕ್ಕೆ ಏಕಕಾಲದಲ್ಲಿ ಭೇಟಿ ನೀಡುವುದು ಅಪರೂಪದಲ್ಲಿ ಅಪರೂಪವಾಗಿದೆ. ಗ್ರಾಮೀಣ ಜನ ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಶಾಸಕರನ್ನು ಹುಡುಕಿಕೊಂಡು ತಾಲೂಕು ಕೇಂದ್ರಗಳಿಗೆ ಬರುವ ಸಂಪ್ರದಾಯಕ್ಕೆ ತಿಲಾಂಜಲಿಯಿಟ್ಟ ಏಕೈಕ ಶಾಸಕ ಪ್ರದೀಪ್ ಈಶ್ವರ್ ಆಗಿದ್ದಾರೆ. ಅವರಿದ್ದಲ್ಲಿಗೇ ತೆರಳಿ ಸ್ಥಳದಲ್ಲಿಯೇ ಕಷ್ಟಗಳಗೆ ಪರಿಹಾರ ಕಾಣಿಸುತ್ತಿರುವ ಪರಿ ನಿಜಕ್ಕೂ ಕಲ್ಯಾಣ ರಾಜ್ಯದ ಕಲ್ಪನೆಯನ್ನು ಕಣ್ಣ ಮುಂದೆ ತರುತ್ತಿದೆ.

ಇದನ್ನೂ ಓದಿ: Chikkaballapur News: ಅರ್ಥಪೂರ್ಣವಾಗಿ ಡಾ.ಬಾಬು ಜಗಜೀವನ್ ರಾಂ ಹಾಗೂ ಡಾ.ಬಿ.ಅರ್.ಅಂಬೇಡ್ಕರ್ ಜಯಂತಿ  ಆಚರಣೆ : ತಹಸೀಲ್ದಾರ್ ಮನೀಷಾ ಮಹೇಶ್ ಎನ್ ಪತ್ರಿ

ಉಗಾದಿ ಹಬ್ಬದ ಹೊಸ್ತಿಲಲ್ಲಿ ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳ ನೌಕರರ ಗೈರು ಹಾಜರಿಯಿಂದ ಸರಕಾರಿ ಕಚೇರಿಗಳು ಬಣಗುಟ್ಟುತ್ತಿದ್ದರೆ, ಇದಕ್ಕೆ ವ್ಯತಿರಿಕ್ತವಾಗಿ ತಹಶೀ ಲ್ದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ತಾಲೂಕು ಆರೋಗ್ಯಾಧಿ ಕಾರಿ, ತಾಲೂಕು ಸರ್ವೆ ಅಧಿಕಾರಿ, ಕೃಷಿ ಅಧಿಕಾರಿ, ಪೊಲೀಸ್ ಅಧಿಕಾರಿ, ಕೆಇಬಿ,ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿ, ಅರಣ್ಯ ಇಲಾಖೆ ಹೀಗೆ ಜನಸಾಮಾನ್ಯರ ಕಷ್ಟಗಳಿಗೆ ನೆರವಾಗಬಲ್ಲ ಅಧಿಕಾರಿಗಳ ದಂಡಿನೊಂದಿಗ ಬೆಳ್ಳಂಬೆಳಿಗ್ಗೆ ಹಳ್ಳಿಗಳಿಗೆ ಭೇಟಿ ನೀಡುತ್ತಿರುವುದು ಸಾಮಾನ್ಯ ಸಂಗತಿಯಲ್ಲ.ಯಾರು ಏನೇ ಹೇಳಿದರೂ ಜನರ ಕಷ್ಟಗಳಿಗೆ ಸ್ಪಂಧಿಸುವ ಗುಣವಿರುವ ನಾಯಕರಿಂದ ಮಾತ್ರ ಇಂತಹ ಕೆಲಸ ಮಾಡಲು ಸಾಧ್ಯ ಎನ್ನುವುದು ಹಳ್ಳಿಗರ ಮಾತಾಗಿದೆ.

ಶುಕ್ರವಾರ ತಾಲೂಕಿನ ಕಮ್ಮಗುಟ್ಟಹಳ್ಳಿ ಪಂಚಾಯತಿಯ ಬೋಡಿ ನಾರಾಯಣಹಳ್ಳಿ, ದಿನ್ನಹಳ್ಳಿ,ಮುದ್ದಲಹಳ್ಳಿ, ಮಾದನಾಯಕಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕ ಪ್ರದೀಪ್ ಈಶ್ವರ್ ಗ್ರಾಮದ ನಡುವೆ ಪಂಚಾಯಿತಿ ಕಟ್ಟೆಯಲ್ಲಿ ಕುಳಿತು ಜನರಿಂದಲೇ ಕಷ್ಟಗಳನ್ನು ಆಲಿಸಿ ಪರಿಹಾರ ಕಾಣಿಸಿದರು.

ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಟೀಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ ಮುನ್ನಡೆದಾಗ ಮಾತ್ರ ಗುರಿ ಸಾಧಿಸಲು ಸಾಧ್ಯ. ನಾನು ಇದೇ ಹಾದಿಯಲ್ಲಿ ನಡೆಯುವ ವ್ಯಕ್ತಿ ಎಂದು ಶಾಸಕ ಪ್ರದಿಪ್ ಈಶ್ವರ್ ಅಯ್ಯರ್ ತಿಳಿಸಿದರು.

ನನ್ನ ಕಾರ್ಯವೈಖರಿ ಸಹಿಸದೆ ಎದುರಾಳಿಗಳು ಸದಾ ಏನೇ ಮಾಡಿದರೂ ಟೀಕಿಸುತ್ತಿರು ತ್ತಾರೆ. ಇದರ ಬಗ್ಗೆ ಯೋಚಿಸಿಕೊಂಡು ಕುಳಿತುಕೊಳ್ಳುವುದರಿಂದ ಏನನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ತೆಗಳುವವರ ಮಾತಿಗೆ ಕಿವುಡರಾಗಬೇಕು. ಕೇವಲ ಗುರಿಯ ಕಡೆಗೆ ಗಮನಹರಿಸಿ, ಪ್ರಾಮಾಣಿಕ ಶ್ರಮದ ಮೂಲಕ ಸಾಧನೆ ತೋರಬೇಕು. ಇದುವೇ ಉದ್ಧಾರ ಮಾರ್ಗ ಎಂದರು.

ಕ್ಷೇತ್ರದಲ್ಲಿನ ಪ್ರತಿ ವಾರ್ಡ್ ಹಾಗೂ ಗ್ರಾಮಗಳಿಗೆ ತೆರಳಿ ನೇರವಾಗಿ ಜನರ ಅಹವಾಲು ಗಳನ್ನು ಆಲಿಸಲಾಗುತ್ತಿದೆ. ಹಾಗೆಯೇ ರಸ್ತೆ, ಚರಂಡಿ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವುದರ ಜತೆಗೆ ಮೂಲ ಸೌಕರ್ಯಗಳನ್ನು ಒದಗಿಸಲಾಗು ತ್ತಿದೆ ಎಂದು ತಿಳಿಸಿದರು.

ಅಭಿವೃದ್ಧಿ ಕೊಡುಗೆ ಹಾಗೂ ಸಾಧನೆಗಳ ಬಗ್ಗೆ ಈಗಾಗಲೇ ರಿಪೋರ್ಟ್ ಕಾರ್ಡ್ ಬಿಡುಗಡೆ ಗೊಳಿಸಲಾಗಿದೆ. ಅಂಕಿ ಅಂಶಗಳ ಸಹಿತ ದಾಖಲೆಯನ್ನು ಮುಂದಿಡಲಾಗಿದೆ. ಅಮ್ಮ ಆಂಬ್ಯುಲೆನ್ಸ್ ನಿಂದ ಅನೇಕ ರೋಗಿಗಳ ಜೀವ ಉಳಿದಿದೆ, ಶೈಕ್ಷಣಿಕ ಪ್ರೋತ್ಸಾಹಕ್ಕಾಗಿ ವಿತರಣೆಯ ವಿದ್ಯಾರ್ಥಿ ವೇತನ, ಬಡ ಮತ್ತು ಮಧ್ಯಮ ವರ್ಗದ ಜನರಿಗಾಗಿ ವಿಶೇಷ ಸವಲತ್ತುಗಳು ದೊರಕಿಸಿಕೊಟ್ಟಿರುವುದು ಎಲ್ಲರಿಗೂ ತಿಳಿದಿದೆ. ಮುಂಬರುವ ದಿನಗಳಲ್ಲಿ ಜನರೇ ಎಲ್ಲವನ್ನೂ ನಿರ್ಧರಿಸುತ್ತಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾ.ಪಂ.ಇಒ ಎನ್.ಆರ್.ಮಂಜುನಾಥ್,ತಹಶೀಲ್ದಾರ್ ಅನಿಲ್, ಸಹಾ ಯಕ ಕೃಷಿ ಅಧಿಕಾರಿ ಮುನಿರಾಜು, ತಾಲೂಕು ಆರೋಗ್ಯ ಅಧಿಕಾರಿ ಡಾ.ಮಂಜುಳ, ಮುಖಂಡರಾದ ಮೋಹನ್, ಹರೀಶ್,ಮಂಡಿಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್, ಮುಖಂಡರಾದ ಉಮೇಶ್, ವಿನಯ್ ಬಂಗಾರಿ, ಶಂಕರ್, ಎಸ್.ಪಿ.ಶ್ರೀನಿವಾಸ್, ಅರವಿಂದ್ ಮತ್ತಿತರರು ಇದ್ದರು.

ಸ್ಥಳಿಯರ ಅಹವಾಲು
ಕಮ್ಮಗುಟ್ಟಹಳ್ಳಿ ಪಂಚಾಯಿತಿ ಮುದ್ದಲಹಳ್ಳಿ ಗ್ರಾಮದಲ್ಲಿನ ಆಲದ ಮರ ರಸ್ತೆಗೆ ಅಡ್ಡ ಲಾಗಿ ಇದ್ದು ಯಾವುದೇ ಕ್ಷಣದಲ್ಲಿ ಬೀಳುವ ಅಪಾಯವಿದೆ ಎಂಬ ಆತಂಕದ ಬಗ್ಗೆ ಮಹಿಳೆ ಯರು ಶಾಸಕರಿಗೆ ತಿಳಿಸಿ ತೆರವಿಗೆ ಮನವಿ ಮಾಡಿದರು.ಸ್ಪಂಧಿಸಿದ ಶಾಸಕರು ಅರಣ್ಯ ಇಲಾಖೆ ಅಧಿಕಾರಿಗೆ ತಿಳಿಸಿ ತೆರವು ಮಾಡಲು ಸೂಚಿಸಿದರು.ಇದೇ ಗ್ರಾಮದಲ್ಲಿ ಸಾರಿಗೆ ಸಂಸ್ಥೆಯ ಬಸ್ ಬಾರದ ಹಿನ್ನೆಲೆಯಲ್ಲಿ ಕಿ.ಮೀ.ಗಟ್ಟಲೇ ಪ್ರತಿನಿತ್ಯ ಓಡಾಬೇಕಾಗಿದೆ. ಕುಡಿಯುವ ನೀರಿನ ಶುದ್ದೀಕರಣ ಘಟಕ ಇಲ್ಲದಿರುವುದರಿಂದ ಅಶುದ್ದವಾದ ನೀರನ್ನು ಸೇವಿಸುವಂತಾಗಿದೆ. ಗ್ರಾಮದಲ್ಲಿನ ಹದಗೆಟ್ಟ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಸ್ಥಳಿಯರು ಸಮಸ್ಯೆಗಳನ್ನು ಹೇಳಿಕೊಂಡರು. 4 ತಿಂಗಳ ಅವಧಿಯಲ್ಲಿ ನೀರಿನ ಘಟಕ ಸ್ಥಾಪನೆ, ಬಸ್ ಸೌಕರ್ಯ ಮತ್ತು ರಸ್ತೆ ಕಾಮಗಾರಿಗೆ ಚಾಲನೆ, ಸ್ಮಶಾನ ತೆರವು ಮಾಡುವ ಬಗ್ಗೆ ಶಾಸಕರು  ಗ್ರಾಮಸ್ಥರಿಗೆ ಅಭಯ ನೀಡಿದರು.

ನಗರಸಭೆಗೆ ಆಡಳಿತಾಧಿಕಾರಿ
ಪಕ್ಷದ ವಿಪ್ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ೬ ಸದಸ್ಯರು ಅನರ್ಹಗೊಂಡಿದ್ದಾರೆ. ಈಗ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ೭ ದಿನಗಳ ತಾತ್ಕಾಲಿಕ ತಡೆಯಾಜ್ಞೆ ಸಿಕ್ಕಿದೆ. ಇದು ತೆರವುಗೊಳ್ಳುತ್ತದೆ. ಅನರ್ಹತೆಯಿಂದ ಬಹುಮತ ಕಳೆದುಕೊಂಡು ನಗರಸಭೆಯಲ್ಲಿ ಆಡಳಿ ತಾಧಿಕಾರಿ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ಶಾಸಕ ಪ್ರದಿಪ್ ಈಶ್ವರ್ ಭವಿಷ್ಯ ನುಡಿದರು.