ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Google Employees: ಯಾರಿಗೆ ಸಾಲುತ್ತೆ ಸಂಬಳ ಎಂದ ಗೂಗಲ್‌ ಉದ್ಯೋಗಿಗಳು! ಸ್ಯಾಲರಿ ಎಷ್ಟು ಜಾಸ್ತಿಯಾಗಿದೆ ಗೊತ್ತಾ?

Google Employees: ಗೂಗಲ್‌ ಉದ್ಯೋಗಿಗಳಿಗೆ ಈ ವರ್ಷ ನೀಡಲಾಗಿರುವ ವೇತನ ಹೆಚ್ಚಳದಿಂದ ಅವರು ಅತೃಪ್ತರಾಗಿದ್ದಾರೆ ಎಂದು ಇತ್ತೀಚಿಗೆ ನಡೆದ ಆಲ್-ಹ್ಯಾಂಡ್ಸ್‌ ಸಭೆಯಲ್ಲಿ (ಸರ್ವ ಉದ್ಯೋಗಿಗಳ ಸಭೆ) ಹಲವು ಹೇಳಿಕೊಂಡಿದ್ದಾರೆ. ಕಂಪನಿಯು ಗಮನಾರ್ಹ ಲಾಭವನ್ನು ಪಡೆದರೂ, 2025ಕ್ಕೆ ನೀಡಲಾದ ಪರಿಹಾರ ಪ್ಯಾಕೇಜ್‌ಗಳಲ್ಲಿ ಉದ್ಯೋಗಿಗಳಿಗೆ ಏನೂ ನೀಡಲಾಗಿಲ್ಲ ಎಂದು ಹಲವರು ದೂರಿದ್ದಾರೆ

ಸಂಬಳ ಸಾಲುತ್ತಿಲ್ಲ, ಅಳಲು ತೋಡಿಕೊಂಡ ಗೂಗಲ್ ಉದ್ಯೋಗಿಗಳು!

Profile Sushmitha Jain Mar 28, 2025 3:44 PM

ವಾಷಿಂಗ್ಟನ್: ಗೂಗಲ್‌ ಉದ್ಯೋಗಿ(Google Employees)ಗಳಿಗೆ ಈ ವರ್ಷ ನೀಡಲಾಗಿರುವ ವೇತನ ಹೆಚ್ಚಳ(Salary Hike)ದಿಂದ ಅವರು ಅತೃಪ್ತರಾಗಿದ್ದಾರೆ ಎಂದು ಇತ್ತೀಚಿಗೆ ನಡೆದ ಆಲ್-ಹ್ಯಾಂಡ್ಸ್‌ ಸಭೆ(All-Hands Meeting)ಯಲ್ಲಿ (ಸರ್ವ ಉದ್ಯೋಗಿಗಳ ಸಭೆ) ಹಲವು ಹೇಳಿಕೊಂಡಿದ್ದಾರೆ. ಕಂಪನಿಯು ಗಮನಾರ್ಹ ಲಾಭವನ್ನು ಪಡೆದರೂ, 2025ಕ್ಕೆ ನೀಡಲಾದ ಪರಿಹಾರ ಪ್ಯಾಕೇಜ್‌ಗಳಲ್ಲಿ ಉದ್ಯೋಗಿಗಳಿಗೆ ಏನೂ ನೀಡಲಾಗಿಲ್ಲ ಎಂದು ಹಲವರು ದೂರಿದ್ದಾರೆ ಎಂದು ಬಿಸಿನೆಸ್‌ ಇನ್‌ಸೈಡರ್‌ ವರದಿ ಮಾಡಿದೆ. ಗೂಗಲ್‌ ನಡೆಸುವ ಮಾಸಿಕ TGIF (ಥ್ಯಾಂಕ್ ಗಾಡ್ ಇಟ್ಸ್ ಫ್ರೈಡೇ) ಸಭೆಗಳಲ್ಲಿ ಉದ್ಯೋಗಿಗಳಿಗೆ ಪ್ರಶ್ನೆ ಕೇಳಲು ಮತ್ತು ಅಲ್ಲಿ ಹೆಚ್ಚಾಗಿ ಕೇಳಲಾದ ಪ್ರಶ್ನೆಗಳ ಬಗ್ಗೆ ಮತ ಚಲಾಯಿಸಲು ಅವಕಾಶ ನೀಡಲಾಗುತ್ತದೆ. ಇಂತಹುದೇ ಸಭೆಯಲ್ಲಿ ವೇತನ ಹೆಚ್ಚಳದ ಕುರಿತು ಉದ್ಯೋಗಿಗಳು ಪ್ರಶ್ನೆಗಳನ್ನು ಎತ್ತಿದ್ದಾರೆ.

ಈ ಬಾರಿಯ ಸಭೆಯಲ್ಲಿ ಅತಿ ಹೆಚ್ಚಾಗಿ ಕೇಳಲಾದ ಪ್ರಶ್ನೆಯೆಂದರೆ, “ನಮಗೆ ನೀಡಲಾದ ಅಪ್ಡೇಟೆಡ್‌ ಸ್ಟಾಕ್‌ ಫಂಡ್‌ ಮತ್ತು ಒಟ್ಟಾರೆ ಪರಿಹಾರ ನಿಧಿಯಲ್ಲಿ ಏಕೆ ಇಳಿಕೆಯಾಗಿದೆ” ಎಂಬುದು. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಗೂಗಲ್‌ನ ಪರಿಹಾರ ಪ್ಯಾಕೇಜ್‌ನಲ್ಲಿ ಮೂಲ ವೇತನ, ಈಕ್ವಿಟಿ ರಿವಾರ್ಡ್‌ ಮತ್ತು ಕೆಲವೊಮ್ಮೆ ಬೋನಸ್‌ಗಳು ಸೇರಿರುತ್ತವೆ. ಈ ಪ್ಯಾಕೇಜ್‌ನಲ್ಲಿ ಇಳಿಕೆಯಾಗಿದ್ದು ಹಲವು ಉದ್ಯೋಗಿಗಳಿಗೆ ಕಿರಿಕಿರಿ ಉಂಟು ಮಾಡಿದೆ.

ವರದಿಗಳ ಪ್ರಕಾರ, ಕೆಲವು ಉದ್ಯೋಗಿಗಳಿಗೆ ಅವರ ಮೂಲ ವೇತನದ ಕೇವಲ 3%ದಷ್ಟು ಮಾತ್ರ ವೇತನ ಹೆಚ್ಚಳ ಮಾಡಲಾಗಿದೆ. ಈ ಹಿಂದೆ, ಮೂಲ ವೇತನದ ಹತ್ತು ಶೇಕಡದಷ್ಟು ವೇತನ ಏರಿಕೆ ಮಾಡಲಾಗಿತ್ತು ಎಂದು ಉದ್ಯೋಗಿಗಳು ಹೇಳಿಕೊಂಡಿದ್ದಾರೆ. ಗೂಗಲ್‌ನ ಉಪಾಧ್ಯಕ್ಷರಾಗಿರುವ ಜಾನ್‌ ಕೇಸಿ ಅವರ ಪ್ರಕಾರ, ಬಹುತೇಕ ಉದ್ಯೋಗಿಗಳ ವೇತನವು ವರ್ಷದಿಂದ ವರ್ಷಕ್ಕೆ ಏರಿಕೆ ಕಂಡಿದ್ದು, ತಾಂತ್ರಿಕ ವಿಭಾಗದಲ್ಲಿ ಕೆಳಸ್ಥರದಲ್ಲಿ ಕೆಲಸ ಮಾಡುವ ಉದ್ಯೋಗಿಗಳ ವೇತನ ಏರಿಕೆಯಲ್ಲಿ ವ್ಯತ್ಯಾಸವಾಗಿದೆ.

“ತಮ್ಮ ಕೆಲಸದಿಂದಾಗಿ ಉತ್ತಮ ಪ್ರಭಾವ ಬೀರಿದ ಉದ್ಯೋಗಿಗಳಿಗೆ ಉತ್ತಮವಾದ ಪ್ಯಾಕೇಜ್‌ ನೀಡಲಾಗಿದೆ. ಹೆಚ್ಚಿನ ಕಾರ್ಯಕ್ಷಮತೆ ಪ್ರದರ್ಶಿಸುವವರಿಗೆ ಸಿಕ್ಕಿರುವ ಪ್ರತಿಫಲವು ಉತ್ತಮವಾಗಿದೆ” ಎಂದು ಕೇಸಿ ಹೇಳಿದ್ದಾರೆ.

ಈ ಸುದ್ದಿಯನ್ನು ಓದಿ; Viral Video: ಸಾರಾಯಿ ಶೀಶೆಗಾಗಿ ಸರದಿಯಲ್ಲಿ ಕಾದು ನಿಂತ ಜನರು; ಏನಿದು ಫ್ರೀ ಆಫರ್‌?

ಕಾರ್ಯದಕ್ಷತೆಯನ್ನು ಬಯಸಲಿರುವ ಗೂಗಲ್:

ಕಳೆದ ವರ್ಷ ಡಿಸೆಂಬರ್‌ನಲ್ಲಿ, ತನ್ನ ಕಾರ್ಯ ದಕ್ಷತೆಯನ್ನು ಹೆಚ್ಚಿಸುವ ದೀರ್ಘಾವಧಿಯ ಯೋಜನೆಯ ಭಾಗವಾಗಿ ಗೂಗಲ್‌ ತನ್ನ ವ್ಯವಸ್ಥಾಪನಾ ವಿಭಾಗದ ಶೇ. ಹತ್ತರಷ್ಟು ಉದ್ಯೋಗಿಗಳನ್ನು ವಜಾಗೊಳಿಸುವ ನಿರ್ಧಾರ ಕೈಗೊಂಡಿತ್ತು. ಈ ಯೋಜನೆಯು 2022ರಲ್ಲಿಯೇ ಆರಂಭವಾಗಿತ್ತು.

ಆ ಸಂದರ್ಭದಲ್ಲಿ ಎಲ್ಲ ಉದ್ಯೋಗಿಗಳಿಗೆ ಮುಕ್ತ ಪತ್ರ ಬರೆದಿದ್ದ ಗೂಗಲ್‌ ಸಿಇಒ ಸುಂದರ್‌ ಪಿಚೈ, ಈ ನಿರ್ಧಾರದ ಹಿಂದಿನ ಸಂಪೂರ್ಣ ಜವಾಬ್ದಾರಿಯನ್ನು ತಮ್ಮ ಮೇಲೆ ಹೊತ್ತುಕೊಂಡಿದ್ದರು. ಈ ಪತ್ರದಲ್ಲಿ ಗೂಗಲ್‌ನ ಕಾರ್ಪೊರೇಟ್ ಸಂಸ್ಕೃತಿಯ ರೂಪಾಂತರ ಮತ್ತು ಅದರ "ಗೂಗ್ಲಿನೆಸ್" ಅನ್ನು ಮರು ವ್ಯಾಖ್ಯಾನಿಸುವ ಅಗತ್ಯತೆಯ ಬಗ್ಗೆಯೂ ವಿವರಿಸಿದ್ದರು.

“ಗೂಗ್ಲಿನೆಸ್‌” ಎಂದರೆ, ಅನೇಕ ವಿಷಯಗಳನ್ನು ಒಳಗೊಂಡಿರುವ ಒಂದು ಅಸ್ಪಷ್ಟ ಪದವಾಗಿದ್ದು, ಇದು ಮುಂಬರುವ ನೇಮಕಾತಿಗಳಲ್ಲಿ ಗೂಗಲ್‌ ಯಾವ ರೀತಿಯ ಅಭ್ಯರ್ಥಿಗಳನ್ನು ಅನ್ವೇಷಿಸಲಿದೆ ಎಂಬುದನ್ನು ಸುಂದರ್ ಪಿಚೈ ಉದ್ಯೋಗಿಗಳೊಂದಿಗೆ ಹಂಚಿಕೊಂಡಿದ್ದರು.