ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ambati Rayudu Trolls: ಆರ್‌ಸಿಬಿ ಅಭಿಮಾನಿಗಳಿಂದ ಟ್ರೋಲ್‌ ಆದ ರಾಯುಡು

RCB vs CSK: 50 ರನ್‌ಗಳ ಸೋಲು ಚೆಪಾಕ್‌ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ರನ್‌ ಆಧಾರದಲ್ಲಿ ಎದುರಾದ ಅತಿದೊಡ್ಡ ಸೋಲು. 2019ರಲ್ಲಿ ಮುಂಬೈ ವಿರುದ್ಧ 46 ರನ್‌ಗಳಿಂದ ಸೋತಿದ್ದು ಈ ಹಿಂದಿನ ದಾಖಲೆ ಎನಿಸಿತ್ತು.

ರಾಯುಡುಗೆ ಟ್ರೋಲ್‌ಗಳ ಮೂಲಕ ಬಿಸಿ ಮುಟ್ಟಿಸಿದ ಆರ್‌ಸಿಬಿ ಅಭಿಮಾನಿಗಳು

Profile Abhilash BC Mar 29, 2025 10:21 AM

ಬೆಂಗಳೂರು: ಚೆನ್ನೈ ಸೂಪರ್‌ ಕಿಂಗ್ಸ್‌(CSK vs RCB) ವಿರುದ್ಧದ ಪಂದ್ಯಕ್ಕೂ ಮುನ್ನ ಆರ್‌ಸಿಬಿ ತಂಡವನ್ನು ಅಪಹಾಸ್ಯ ಮಾಡಿದ್ದ ಚೆನ್ನೈಯ ಮಾಜಿ ಆಟಗಾರ ಅಂಬಾಟಿ ರಾಯುಡುಗೆ ಆರ್‌ಸಿಬಿ ಅಭಿಮಾನಿಗಳು(Bengaluru Fans) ತಕ್ಕ ಪಾಠ ಕಲಿಸಿದ್ದಾರೆ. ಚೆನ್ನೈ ತಂಡ ಸೋಲುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ರಾಯುಡು(Ambati Rayudu Trolls, ) ಅವರನ್ನು ಸಿಕ್ಕಾಪಟ್ಟಿ ಟ್ರೋಲ್‌ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ. ಸದ್ಯ ರಾಯುಡು ಕುರಿತ ಟ್ರೋಲ್‌ ಮತ್ತು ಮೀಮ್ಸ್‌ಗಳು ಭಾರೀ ವೈರಲ್‌ ಆಗಿತ್ತಿದೆ.

ಪಂದ್ಯಕ್ಕೂ ಮುನ್ನ ಮಾಜಿ ಆಟಗಾರ ಬದ್ರಿನಾಥ್(S.Badrinath) ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ರಾಯುಡು ಜತೆ ಪಂದ್ಯದ ಬಗ್ಗೆ ಚರ್ಚೆ ನಡೆಸಿದ್ದರು. ಈ ವೇಳೆ ಬದ್ರಿನಾಥ್ ಅವರು ಆರ್‌ಸಿಬಿ ಈ ಬಾರಿ ಬಲಿಷ್ಠವಾಗಿದೆ ಕಪ್‌ ಗೆಲ್ಲುವ ಅವಕಾಶ ಇದೆಯೇ ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಜೋರಾಗಿ ನಕ್ಕ ರಾಯುಡು, ಪ್ರತಿ ಬಾರಿ ಐಪಿಎಲ್‌ ವೇಳೆ ನಾವು ನಗುತ್ತಿದ್ದೇವೆ ಎಂದರೆ ಅದು ಆರ್‌ಸಿಬಿಯಿಂದ ಇನ್ನಷ್ಟು ವರ್ಷ ನಗಬೇಕಿದೆ. ಸಿಎಸ್‌ಕೆ ಇರುವಾಗ ಈ ಬಾರಿಯಂತು ಕಪ್‌ ಗೆಲ್ಲಲ್ಲ ಎಂದು ಮತ್ತೆ ಮತ್ತೆ ನಗುತ್ತಾ ಆರ್‌ಸಿಬಿಯನ್ನು ಅಪಹಾಸ್ಯ ಮಾಡಿದ್ದರು.



ಅದಾಗಲೇ ಚೆನ್ನೈ ವಿರುದ್ಧ ಆರ್‌ಸಿಬಿ ಗೆದ್ದರೆ ರಾಯುಡು ಟ್ರೋಲ್‌ ಆಗುವುದು ನಿಶ್ಚಿತ ಎನ್ನಲಾಗಿತ್ತು. ಅದರಂತೆ ಇದೀಗ ರಾಯುಡು ಟ್ರೋಲ್‌ ಆಗಿದ್ದಾರೆ. ಸೋಲು ಕಂಡ ಚೆನ್ನೈ 7ನೇ ಸ್ಥಾನಕ್ಕೆ ಕುಸಿದಿದೆ. ಆರ್‌ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಚೆನ್ನೈ 4ನೇ ಸ್ಥಾನದಲ್ಲಿತ್ತು.



50 ರನ್‌ಗಳ ಸೋಲು ಚೆಪಾಕ್‌ ಕ್ರೀಡಾಂಗಣದಲ್ಲಿ ಸಿಎಸ್‌ಕೆಗೆ ರನ್‌ ಆಧಾರದಲ್ಲಿ ಎದುರಾದ ಅತಿದೊಡ್ಡ ಸೋಲು. 2019ರಲ್ಲಿ ಮುಂಬೈ ವಿರುದ್ಧ 46 ರನ್‌ಗಳಿಂದ ಸೋತಿದ್ದು ಈ ಹಿಂದಿನ ದಾಖಲೆ ಎನಿಸಿತ್ತು.



ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ ನಾಯಕ ರಜತ್‌ ಪಾಟಿದಾರ್‌ ಅವರ ಅರ್ಧ ಶತಕ ಮತ್ತು ಫಿಲ್‌ ಸಾಲ್ಟ್, ಟಿಮ್‌ ಡೇವಿಡ್‌ ಅವರ ಬಿರುಸಿನ ಬ್ಯಾಟಿಂಗ್‌ ನೆರವಿನಿಂದ 7 ವಿಕೆಟಿಗೆ 196 ರನ್‌ ಪೇರಿಸಿತು. ಗುರಿ ಬೆನ್ನಟ್ಟಿದ ಚೆನ್ನೈ ತಂಡ ನಾಟಕೀಯ ಕುಸಿತದೊಂದಿಗೆ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 146 ರನ್ ಮಾತ್ರ ಗಳಿಸಲು ಶಕ್ತವಾಗಿ ಸೋಲು ಕಂಡಿತು. ಇದು ಚೆನ್ನೈಗೆ ತವರಿನಲ್ಲಿ 17 ವರ್ಷಗಳ ಬಳಿಕ ಆರ್‌ಸಿಬಿ ವಿರುದ್ಧ ಎದುರಾದ 2ನೇ ಸೋಲು.

ಇದನ್ನೂ ಓದಿ MS Dhoni: ಆರ್‌ಸಿಬಿ ವಿರುದ್ಧ ಸೋತರೂ ದಾಖಲೆ ಬರೆದ ಧೋನಿ