Chikkaballapur News: ಎತ್ತಿನಹೊಳೆ ಯೋಜನೆಗೆ ಬೇಕಾದ ಹಣ ಬಿಡುಗಡೆ ಮಾಡಿದರೆ ನೀರನ್ನು ಪಡೆಯುವ ಅವಕಾಶವಿದೆ: ಗೋವಿಂದರೆಡ್ಡಿ ಒತ್ತಾಯ
ವಾಣಿವಿಲಾಸ ಸಾಗರವನ್ನು ಬ್ಯಾಲೆನ್ಸಿಂಗ್ ರಿಸರ್ವಾಯರ್ ಎಂದು ಘೋಷಿಸಿ, ಎತ್ತಿನ ಹೊಳೆ ನೀರು ಕನಿಷ್ಟ 3 ಜಿಲ್ಲೆಗಳಿಗೆ ಅಂದರೆ ಕೋಲಾರ, ಚಿಕ್ಕಬಳ್ಳಾಪುರ ಹಾಗು ಬೆಂಗಳೂರು ಗ್ರಾಮಾಂ ತರಕ್ಕೆ ಕುಡಿಯುವ ನೀರಿಗಾಗಿ ಉಪಯೋಗಿಸಲು ಪೈಪ್‌ಲೈನ್ ಮೂಲಕ ನಂದಿ ತಪ್ಪಲಿನ 5 ನದಿ ಗಳಾದ ಚಿತ್ರಾವತಿ, ಉತ್ತರಪೆನ್ನಾರ್, ಪಾಪಾಗ್ನಿ, ಅರ್ಕಾವತಿ ಹಾಗು ದಕ್ಷಿಣ ಪೆನ್ನಾರ್ ನದಿಗಳಿಗೆ ಹರಿಸಿ ಪ್ರತ್ಯೇಕ ಜಲಾಶಯದ ಅವಶ್ಯಕತೆ ತಪ್ಪಿಸುವಂತೆ ಸಲಹೆ ನೀಡಿದ್ದಾರೆ.

ಎತ್ತಿನಹೊಳೆ ಯೋಜನೆಗೆ ಬೇಕಾದ ಹಣ ಬಿಡುಗಡೆ ಮಾಡಿದರೆ ನೀರನ್ನು ಪಡೆಯುವ ಅವಕಾಶವಿದೆ ಎಂದು ಗೋವಿಂದರೆಡ್ಡಿ ಸರಕಾರವನ್ನು ಒತ್ತಾಯಿಸಿದರು.

ಚಿಕ್ಕಬಳ್ಳಾಪುರ: ಎತ್ತಿನಹೊಳೆ ಯೋಜನೆಯಿಂದ ಇನ್ನಷ್ಟು ನೀರನ್ನು ಪಡೆಯುವ ಅವಕಾಶವಿದ್ದು, ಈ ಯೋಜನೆಗೆ 5300 ಕೋಟಿ ಅನುದಾನ ಕೂಡಲೇ ಬಿಡುಗಡೆ ಮಾಡಿದರೆ ಜಿಲ್ಲೆಯ ನೀರಾವರಿ ಸಮಸ್ಯೆ ಬಗೆಹರಿಯಲಿದೆ ಎಂದು ಭಾರತೀಯ ರೈತ ಒಕ್ಕೂಟ ರಾಜ್ಯಾ ಧ್ಯಕ್ಷ ಗೋವಿಂದರೆಡ್ಡಿ ಒತ್ತಾಯಿಸಿದ್ದಾರೆ. ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿ ಯಲ್ಲಿ ಮಾತನಾಡಿ, ಎತ್ತಿನಹೊಳೆ ಯೋಜನೆ ಕಾಮಗಾರಿ ಮುಗಿದಿದ್ದು, ಇನ್ನು 5300 ಕೋಟಿ ಅನುದಾನ ಬಿಡುಗಡೆ ಮಾಡಿದರೆ ಜಿಲ್ಲೆಗೆ ನೀರು ಬರಲಿದೆ. ಅಲ್ಲದೆ ಈಗಾಗಲೆ ವಾಣಿವಿಲಾಸ ಸಾಗರ ತುಂಬಿದ್ದು, 90 ವರ್ಷಗಳ ಇತಿಹಾಸದಲ್ಲಿ ಇದು 3ನೇಬಾರಿಗೆ ವಾಣಿ ವಿಳಾಸ ಸಾಗರ ತುಂಬಿದೆ ಎಂದರು.
ಇದನ್ನೂ ಓದಿ: Chikkaballapur News: 3ನೇ ಬಾರಿ ಸರ್ವೆ ಮಾಡಲು ಫೀಲ್ಡಿಗೆ ಇಳಿದ ಅಧಿಕಾರಿಗಳು
ವಾಣಿವಿಲಾಸ ಸಾಗರವನ್ನು ಬ್ಯಾಲೆನ್ಸಿಂಗ್ ರಿಸರ್ವಾಯರ್ ಎಂದು ಘೋಷಿಸಿ, ಎತ್ತಿನ ಹೊಳೆ ನೀರು ಕನಿಷ್ಟ 3 ಜಿಲ್ಲೆಗಳಿಗೆ ಅಂದರೆ ಕೋಲಾರ, ಚಿಕ್ಕಬಳ್ಳಾಪುರ ಹಾಗು ಬೆಂಗ ಳೂರು ಗ್ರಾಮಾಂತರಕ್ಕೆ ಕುಡಿಯುವ ನೀರಿಗಾಗಿ ಉಪಯೋಗಿಸಲು ಪೈಪ್‌ಲೈನ್ ಮೂಲಕ ನಂದಿ ತಪ್ಪಲಿನ 5 ನದಿಗಳಾದ ಚಿತ್ರಾವತಿ, ಉತ್ತರಪೆನ್ನಾರ್, ಪಾಪಾಗ್ನಿ, ಅರ್ಕಾವತಿ ಹಾಗು ದಕ್ಷಿಣ ಪೆನ್ನಾರ್ ನದಿಗಳಿಗೆ ಹರಿಸಿ ಪ್ರತ್ಯೇಕ ಜಲಾಶಯದ ಅವಶ್ಯಕತೆ ತಪ್ಪಿಸುವಂತೆ ಅವರು ಸಲಹೆ ನೀಡಿದ್ದಾರೆ.
ನೀರಾವರಿ ತಜ್ಞ ಪ್ರೊ.ಪಿ.ನರಸಿಂಹಪ್ಪ ಮಾತನಾಡಿ, ಸಹಕಾರ ಸಂಘಗಳಿಗೆ ಬಲ ನೀಡಿ, ಪ್ರತಿ ಗ್ರಾಮ ಪಂಚಾಯತಿಯಲ್ಲಿ ಅನುಷ್ಟಾನಕ್ಕೆ ತಂದು, 10 ಲಕ್ಷದ ವರೆಗೆ ಸಾಲ ವಾರ್ಷಿಕ ಶೇ.೩ರ ಬಡ್ಡಿಯಂತೆ ರೈತರಿಗೆ ವಿತರಿಸಬೇಕು. ಎಲ್ಲಾ ಜಿಲ್ಲೆಗಳಿಗೆ ನೀರಾವರಿ ಬೆಳೆಗಳಿಗೆ ವಿಮೆ ಕಂತನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಆಯಾ ರಾಜ್ಯಸರ್ಕಾರಗಳೇ ಪಾವತಿ ಮಾಡುತ್ತಿದ್ದು, ರಾಜ್ಯ ಸರ್ಕಾರವೂ ವಿಮಾ ಕಂತು ಪಾವತಿ ಮಾಡುವ ಮೂಲಕ ರೈತರಿಗೆ ನೆರವಾಗಬೇಕು ಎಂದು ಒತ್ತಾಯಿಸಿದರು.