Mahadeva Basarakoda Column: ಬದುಕಲ್ಲಿ ಸಹಜತೆ ಇರಲಿ
ಸೈಕಲ್ ಸವಾರಿ ಮಾಡುತ್ತಿದ್ದ ಉದ್ದೇಶವೇನೆಂದು ಗುರುಗಳು ಪ್ರಶ್ನಿಸಿದರು. ಒಬ್ಬ ಶಿಷ್ಯ ಭಾರವಾದ ಮೂಟೆಯನ್ನು ಹೆಗಲ ಮೇಲೆ ಹೊತ್ತು ತರುವುದು ಕಷ್ಟದ ಕೆಲಸವಲ್ಲವೇ? ಅದಕ್ಕೆ ಸೈಕಲ್ ಸವಾರಿ ಎಂದ. ನಿಜ ನೀನು ತುಂಬ ಜಾಣ, ಮುಂದಾಗುವ ತೊಂದರೆಯನ್ನು ಈಗಲೇ ತಡೆಯಬಲ್ಲ ನಿನ್ನ ಯೋಜನೆ ನಿಜಕ್ಕೂ ಮೆಚ್ಚತಕ್ಕದ್ದೇ
![ಬದುಕಲ್ಲಿ ಸಹಜತೆ ಇರಲಿ](https://cdn-vishwavani-prod.hindverse.com/media/original_images/life_ok.jpg)
![Profile](https://vishwavani.news/static/img/user.png)
ಮಹಾದೇವ ಬಸರಕೋಡ, ಅಮೀನಗಡ
ನಮ್ಮ ಯೋಚನೆಗಳ ಮತ್ತು ನಿರೀಕ್ಷೆಗಳ ಭಾರ ಬದುಕನ್ನು ಚಡಪಡಿಸುವಂತೆ ಮಾಡುತ್ತದೆ. ನಮ್ಮ ಮನಸ್ಸು ನಾಳೆಗಾಗಿ ನೂರೆಂಟು ಯೋಜನೆಗಳನ್ನು ಹುಟ್ಟು ಹಾಕುತ್ತಲೇ ಇರುತ್ತದೆ. ಕೆಲವು ಬಾರಿ ಹಿಂದಿನ ಹೆಜ್ಜೆಗಳಿಂದ ಬಿಡಿಸಿಕೊಳ್ಳಲು ಸಾಧ್ಯವಾಗದೇ ಅಲ್ಲಿಯೇ ಸಿಲುಕುತ್ತದೆ. ಇಂತಹ ನಮ್ಮ ನಡೆ ಯಿಂದಾಗಿ ನಾವು ಸಹಜತೆಯ ತಾಜಾತನವನ್ನು ಅನುಭವಿಸಲು ಸಾಧ್ಯ ವಾಗುವುದೆ ವಿಭಜನೆ ಗಳಲ್ಲಿ ಸಿಲುಕಿ ಹಾಕಿಕೊಂಡು ನಲಗುತ್ತೇವೆ, ಆ ಮೂಲಕ ಸಹಜತೆಯ ಘನತೆಯನ್ನು ದರ್ಶಿಸುವಲ್ಲಿ ಹಿನ್ನಡೆಯನ್ನು ಅನುಭವಿಸುತ್ತೇವೆ. ಒಮ್ಮೆ ಝೆನ್ ಗುರುಗಳೊಬ್ಬರು ದಾರಿ ಯಲ್ಲಿ ತನ್ನ ಕೆಲವು ಶಿಷ್ಯರು ಸೈಕಲ್ ಸವಾರಿ ಮಾಡುತ್ತ ಬರುವುದನ್ನು ಗಮನಿಸಿದರು.
ಅವರೆಲ್ಲರೂ ಸೈಕಲ್ ಸವಾರಿ ಮುಗಿಸಿ ಗುರುಗಳ ಬಳಿ ಬಂದರು. ಸೈಕಲ್ ಸವಾರಿ ಮಾಡುತ್ತಿದ್ದ ಉದ್ದೇಶವೇನೆಂದು ಗುರುಗಳು ಪ್ರಶ್ನಿಸಿದರು. ಒಬ್ಬ ಶಿಷ್ಯ ಭಾರವಾದ ಮೂಟೆಯನ್ನು ಹೆಗಲ ಮೇಲೆ ಹೊತ್ತು ತರುವುದು ಕಷ್ಟದ ಕೆಲಸವಲ್ಲವೇ? ಅದಕ್ಕೆ ಸೈಕಲ್ ಸವಾರಿ ಎಂದ. ನಿಜ ನೀನು ತುಂಬ ಜಾಣ, ಮುಂದಾಗುವ ತೊಂದರೆಯನ್ನು ಈಗಲೇ ತಡೆಯಬಲ್ಲ ನಿನ್ನ ಯೋಜನೆ ನಿಜಕ್ಕೂ ಮೆಚ್ಚತಕ್ಕದ್ದೇ.
ಇದನ್ನೂ ಓದಿ: Turuvekere Prasad Column: ನೀ‘ನ್ಯಾಕೋ’? ನಿನ್ನ ಹಂಗ್ಯಾಕೋ? ನಾಮದ ಬಲವಿದ್ದರೆ ಸಾಕೋ !
ನಾನು ನನ್ನ ಯೌವನಾವಸ್ಥೆಯಲ್ಲಿ ನಿನ್ನಂತೆ ನಡೆದಿದ್ದರೆ ನನಗೆ ಈ ರೀತಿಯ ಗೂನುಬೆನ್ನು ನನಗೆ ಇರುತ್ತಿರಲಿಲ್ಲ ಎಂದರು. ಎರಡನೆಯ ಶಿಷ್ಯ, ನನ್ನ ತಂದೆಯ ದಾರಿಯ ಬದಿಯಲ್ಲಿ ಸುಂದರವಾಗಿ ಬೆಳೆದು ಫಲ-ಪುಷ್ಪ ಹೊತ್ತು ನಿಂತ ಮರಗಳ ಸೌಂದರ್ಯ ಸವಿಯಬೇಕು ಅಂತ ಹೇಳಿದ ನೆನಪು, ಅದಕ್ಕಾಗಿ ನಾನು ಸೈಕಲ್ ಸವಾರಿ ಮಾಡುತ್ತಲೇ ಪ್ರಕೃತಿಯ ಸೌಂದರ್ಯ ಅನುಭವಿಸುತ್ತಿದ್ದೆ.
ನನಗೂ ಅದು ತುಂಬ ಇಷ್ಟವಾದ ಸಂಗತಿ ಎಂದ. ನೀನು ಕೂಡ ತುಂಬ ಜಾಣ, ಸುತ್ತಲಿನ ಸಂಗತಿ ಗಳಲ್ಲಿ ಸಂತಸ ಹುಡುಕುವ ನಿನ್ನ ಗುಣ ನಿಜಕ್ಕೂ ಒಪ್ಪುವಂತಹದ್ದೇ ಎಂದರು. ಮೂರನೆಯ ಶಿಷ್ಯನು ಸೈಕಲ್ ಸವಾರಿ ಮಾಡಲಿಕ್ಕೆಂದೇ ನಾನು ಸೈಕಲ್ ಮೇಲೆ ಸವಾರಿ ಮಾಡಿದೆ ಎಂದ. ತಕ್ಷಣಕ್ಕೆ ಗುರು ಶಿಷ್ಯನ ಕಾಲ ಬಳಿ ಕುಳಿತುಕೊಂಡು ದಯಮಾಡಿ ನನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸು ಎಂದು ವಿನಂತಿಸಿದರು.
ನಿಜವಾಗಿಯೂ ಪ್ರಕೃತಿಯಲ್ಲಿ ಅತ್ಯಂತ ಸಹಜವಾಗಿ, ಸರಳವಾಗಿ, ಸುಂದರವಾಗಿ ತನ್ನಷ್ಟಕ್ಕೆ ತಾನು ಘಟಿಸುತ್ತಲೇ ಹೋಗುತ್ತದೆ. ಹೂವು ನಿಧಾನವಾಗಿ ತನ್ನ ಮೊಗ್ಗಿನ ಸೆರೆಯಿಂದ ಬಿಡಿಸಿಕೊಂಡು, ನಗು ನಗುತ್ತಾ ಸುತ್ತಲೂ ಸೌಗಂಧ ಸೂಸಿ ಸಂಜೆ ಭುವಿಗೆ ಸೇರಿ ಬಿಡುತ್ತದೆ. ರೈತನೊಬ್ಬ ತನ್ನ ಜಮೀನಿನಲ್ಲಿ ಬೀಜವನ್ನು ಬಿತ್ತಿ ಅದು ಯಾವಾಗ ಮೊಳಕೆಯೊಡೆಯುತ್ತದೆ ಎನ್ನುವ ಚಡಪಡಿಕೆಯಲ್ಲಿ ಬೀಜದ ಮೇಲಿನ ಮಣ್ಣನ್ನು ಮತ್ತೆ ಮತ್ತೆ ತಗೆದು ನೋಿದರೆ ಅದೆಂದೂ ಮೊಳಕೆಯೊಡೆಯುವುದೇ ಇಲ್ಲ, ಬೀಜದ ಶಕ್ತಿಯೆಲ್ಲವೂ ಹಾಳಾಗಿ ಹೋಗುತ್ತದೆ. ನಾವು ಅನಗತ್ಯ ಸಂಗತಿಗಳಿಂದ ಒಂದಷ್ಟು ದೂರ ಸರಿದು ಸುಮ್ಮನೆ ಸಾಗುತ್ತ ಹೋಗಬೇಕು, ಅದು ಬದುಕಿಗೊಂದು ಘನತೆಯನ್ನು ತಂದು ಕೊಡುತ್ತದೆ
ನಮ್ಮ ಯೋಚನೆಗಳ ಮತ್ತು ನಿರೀಕ್ಷೆಗಳ ಭಾರ ಬದುಕನ್ನು ಚಡಪಡಿಸುವಂತೆ ಮಾಡುತ್ತದೆ. ನಮ್ಮ ಮನಸ್ಸು ನಾಳೆಗಾಗಿ ನೂರೆಂಟು ಯೋಜನೆಗಳನ್ನು ಹುಟ್ಟು ಹಾಕುತ್ತಲೇ ಇರುತ್ತದೆ. ಕೆಲವು ಬಾರಿ ಹಿಂದಿನ ಹೆಜ್ಜೆಗಳಿಂದ ಬಿಡಿಸಿಕೊಳ್ಳಲು ಸಾಧ್ಯವಾಗದೇ ಅಲ್ಲಿಯೇ ಸಿಲುಕುತ್ತದೆ. ಇಂತಹ ನಮ್ಮ ನಡೆ ಯಿಂದಾಗಿ ನಾವು ಸಹಜತೆಯ ತಾಜಾತನವನ್ನು ಅನುಭವಿಸಲು ಸಾಧ್ಯವಾಗುವುದೆ ವಿಭಜನೆಗಳಲ್ಲಿ ಸಿಲುಕಿ ಹಾಕಿಕೊಂಡು ನಲಗುತ್ತೇವೆ, ಆ ಮೂಲಕ ಸಹಜತೆಯ ಘನತೆಯನ್ನು ದರ್ಶಿಸುವಲ್ಲಿ ಹಿನ್ನಡೆ ಯನ್ನು ಅನುಭವಿಸುತ್ತೇವೆ.
ಒಮ್ಮೆ ಝೆನ್ ಗುರುಗಳೊಬ್ಬರು ದಾರಿಯಲ್ಲಿ ತನ್ನ ಕೆಲವು ಶಿಷ್ಯರು ಸೈಕಲ್ ಸವಾರಿ ಮಾಡುತ್ತ ಬರುವುದನ್ನು ಗಮನಿಸಿದರು. ಅವರೆಲ್ಲರೂ ಸೈಕಲ್ ಸವಾರಿ ಮುಗಿಸಿ ಗುರುಗಳ ಬಳಿ ಬಂದರು. ಸೈಕಲ್ ಸವಾರಿ ಮಾಡುತ್ತಿದ್ದ ಉದ್ದೇಶವೇನೆಂದು ಗುರುಗಳು ಪ್ರಶ್ನಿಸಿದರು. ಒಬ್ಬ ಶಿಷ್ಯ ಭಾರವಾದ ಮೂಟೆಯನ್ನು ಹೆಗಲ ಮೇಲೆ ಹೊತ್ತು ತರುವುದು ಕಷ್ಟದ ಕೆಲಸವಲ್ಲವೇ? ಅದಕ್ಕೆ ಸೈಕಲ್ ಸವಾರಿ ಎಂದ.
ನಿಜ ನೀನು ತುಂಬ ಜಾಣ, ಮುಂದಾಗುವ ತೊಂದರೆಯನ್ನು ಈಗಲೇ ತಡೆಯಬಲ್ಲ ನಿನ್ನ ಯೋಜನೆ ನಿಜಕ್ಕೂ ಮೆಚ್ಚತಕ್ಕದ್ದೇ. ನಾನು ನನ್ನ ಯೌವನಾವಸ್ಥೆಯಲ್ಲಿ ನಿನ್ನಂತೆ ನಡೆದಿದ್ದರೆ ನನಗೆ ಈ ರೀತಿಯ ಗೂನುಬೆನ್ನು ನನಗೆ ಇರುತ್ತಿರಲಿಲ್ಲ ಎಂದರು. ಎರಡನೆಯ ಶಿಷ್ಯ, ನನ್ನ ತಂದೆಯ ದಾರಿ ಯ ಬದಿಯಲ್ಲಿ ಸುಂದರವಾಗಿ ಬೆಳೆದು ಫಲ-ಪುಷ್ಪ ಹೊತ್ತು ನಿಂತ ಮರಗಳ ಸೌಂದರ್ಯ ಸವಿಯಬೇಕು ಅಂತ ಹೇಳಿದ ನೆನಪು, ಅದಕ್ಕಾಗಿ ನಾನು ಸೈಕಲ್ ಸವಾರಿ ಮಾಡುತ್ತಲೇ ಪ್ರಕೃತಿಯ ಸೌಂದರ್ಯ ಅನುಭವಿಸುತ್ತಿದ್ದೆ.
ನನಗೂ ಅದು ತುಂಬ ಇಷ್ಟವಾದ ಸಂಗತಿ ಎಂದ. ನೀನು ಕೂಡ ತುಂಬ ಜಾಣ, ಸುತ್ತಲಿನ ಸಂಗತಿ ಗಳಲ್ಲಿ ಸಂತಸ ಹುಡುಕುವ ನಿನ್ನ ಗುಣ ನಿಜಕ್ಕೂ ಒಪ್ಪುವಂತಹದ್ದೇ ಎಂದರು. ಮೂರನೆಯ ಶಿಷ್ಯನು ಸೈಕಲ್ ಸವಾರಿ ಮಾಡಲಿಕ್ಕೆಂದೇ ನಾನು ಸೈಕಲ್ ಮೇಲೆ ಸವಾರಿ ಮಾಡಿದೆ ಎಂದ. ತಕ್ಷಣಕ್ಕೆ ಗುರು ಶಿಷ್ಯನ ಕಾಲ ಬಳಿ ಕುಳಿತುಕೊಂಡು ದಯಮಾಡಿ ನನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸು ಎಂದು ವಿನಂತಿಸಿದರು.
ನಿಜವಾಗಿಯೂ ಪ್ರಕೃತಿಯಲ್ಲಿ ಅತ್ಯಂತ ಸಹಜವಾಗಿ, ಸರಳವಾಗಿ, ಸುಂದರವಾಗಿ ತನ್ನಷ್ಟಕ್ಕೆ ತಾನು ಘಟಿಸುತ್ತಲೇ ಹೋಗುತ್ತದೆ. ಹೂವು ನಿಧಾನವಾಗಿ ತನ್ನ ಮೊಗ್ಗಿನ ಸೆರೆಯಿಂದ ಬಿಡಿಸಿಕೊಂಡು, ನಗು ನಗುತ್ತಾ ಸುತ್ತಲೂ ಸೌಗಂಧ ಸೂಸಿ ಸಂಜೆ ಭುವಿಗೆ ಸೇರಿ ಬಿಡುತ್ತದೆ. ರೈತನೊಬ್ಬ ತನ್ನ ಜಮೀನಿನಲ್ಲಿ ಬೀಜವನ್ನು ಬಿತ್ತಿ ಅದು ಯಾವಾಗ ಮೊಳಕೆಯೊಡೆಯುತ್ತದೆ ಎನ್ನುವ ಚಡಪಡಿಕೆಯಲ್ಲಿ ಬೀಜದ ಮೇಲಿನ ಮಣ್ಣನ್ನು ಮತ್ತೆ ಮತ್ತೆ ತಗೆದು ನೋಡಿದರೆ ಅದೆಂದೂ ಮೊಳಕೆಯೊಡೆಯುವುದೇ ಇಲ್ಲ, ಬೀಜದ ಶಕ್ತಿಯೆಲ್ಲವೂ ಹಾಳಾಗಿ ಹೋಗುತ್ತದೆ.
ನಾವು ಅನಗತ್ಯ ಸಂಗತಿಗಳಿಂದ ಒಂದಷ್ಟು ದೂರ ಸರಿದು ಸುಮ್ಮನೆ ಸಾಗುತ್ತ ಹೋಗಬೇಕು, ಅದು ಬದುಕಿಗೊಂದು ಘನತೆಯನ್ನು ತಂದು ಕೊಡುತ್ತದೆ.