BAPS Hindu Temple: ಅಮೆರಿಕಾದಲ್ಲಿ ನಿಲ್ಲುತ್ತಿಲ್ಲ ಹಿಂದೂಗಳ ಮೇಲಿನ ದೌರ್ಜನ್ಯ ; ಕ್ಯಾಲಿಫೋರ್ನಿಯಾದಲ್ಲಿ BAPS ದೇವಾಲಯ ಧ್ವಂಸ
ಕ್ಯಾಲಿಫೋರ್ನಿಯಾದ ಚಿನೋ ಹಿಲ್ಸ್ ನಲ್ಲಿರುವ ಬಿಎಪಿಎಸ್ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ದೇವಾಲಯದ ಗೋಡೆ ಮೇಲೆ ಹಿಂದೂ ವಿರೋಧಿ ಬರಹಗಳನ್ನು ಬರೆಯಾಲಾಗಿದೆ. ಹಿಂದೂ ವಿರೋಧಿ’ ಸಂದೇಶಗಳಲ್ಲಿ ‘ಹಿಂದೂಗಳು ಹಿಂತಿರುಗಿ’ಎಂದು ಕಿಡಿಗೇಡಿಗಳು ಬರೆದಿದ್ದಾರೆ.

ಗೋಡೆ ಮೇಲೆ ಹಿಂದೂ ವಿರೋಧಿ ಬರಹಗಳು

ವಾಷಿಂಗ್ಟನ್: ಕ್ಯಾಲಿಫೋರ್ನಿಯಾದ (California) ಚಿನೋ ಹಿಲ್ಸ್ ನಲ್ಲಿರುವ ಬಿಎಪಿಎಸ್ ಹಿಂದೂ ದೇವಾಲಯವನ್ನು (BAPS Hindu Temple) ಧ್ವಂಸಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ದೇವಾಲಯದ ಗೋಡೆ ಮೇಲೆ ಹಿಂದೂ ವಿರೋಧಿ ಬರಹಗಳನ್ನು ಬರೆಯಾಲಾಗಿದೆ. ಹಿಂದೂ ವಿರೋಧಿ’ ಸಂದೇಶಗಳಲ್ಲಿ ‘ಹಿಂದೂಗಳು ಹಿಂತಿರುಗಿ’ಎಂದು ಕಿಡಿಗೇಡಿಗಳು ಬರೆದಿದ್ದಾರೆ. ಈ ಬಗ್ಗೆ ಬಿಎಪಿಎಸ್‌ನ ಅಧಿಕೃತ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ಹಂಚಿಕೊಂಡಿದ್ದು. ದ್ವೇಷ ಬೇರೂರಲು ಅವರು ಎಂದಿಗೂ ಬಿಡುವುದಿಲ್ಲ ಮತ್ತು ಶಾಂತಿ ಮತ್ತು ಸಹಾನುಭೂತಿ ಮೇಲುಗೈ ಸಾಧಿಸುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.
In the face of another Mandir desecration, this time in Chino Hills, CA, the Hindu community stand steadfast against hate. Together with the community in Chino Hills and Southern California, we will never let hate take root. Our common humanity and faith will ensure that peace…
— BAPS Public Affairs (@BAPS_PubAffairs) March 8, 2025
ಮಾರ್ಚ್ 9, 2025 ರ ಭಾನುವಾರದಂದು, ಅಮೆರಿಕದ ಕ್ಯಾಲಿಫೋರ್ನಿಯಾದ ಚಿನೋ ಹಿಲ್ಸ್‌ನಲ್ಲಿರುವ ಬಿಎಪಿಎಸ್‌ನ ಸ್ವಾಮಿನಾರಾಯಣ ಮಂದಿರದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. . ಈ ದಾಳಿಯ ಸಮಯದಲ್ಲಿ, ದೇವಾಲಯದ ಗೋಡೆಗಳ ಮೇಲೆ ಕೆಲವು ಭಾರತ ವಿರೋಧಿ ಮತ್ತು ಪ್ರಧಾನಿ ಮೋದಿ ವಿರೋಧಿ ಸಂದೇಶಗಳನ್ನು ಬರೆಯಲಾಗಿತ್ತು. ಇಷ್ಟೇ ಅಲ್ಲ, ದೇವಾಲಯದ ಆವರಣವನ್ನು ಅಪವಿತ್ರಗೊಳಿಸುವ ಪ್ರಯತ್ನವೂ ನಡೆಯಿತು. ಅಮೆರಿಕದಲ್ಲಿ ಭಾರತದ ವಿರುದ್ಧ ಹೆಚ್ಚುತ್ತಿರುವ ಪ್ರತಿಭಟನೆಗಳ ಮಧ್ಯೆ ಇದುವರೆಗೆ ದಾಖಲಾದ ಎರಡನೇ ಘಟನೆಯಾಗಿದೆ.
ಈ ಬಗ್ಗೆ ಪೋಸ್ಟ್ ಮಾಡಿರುವ ಬಿಎಪಿಎಸ್ “ಮತ್ತೊಂದು ಮಂದಿರ ಅಪವಿತ್ರೀಕರಣದ ಹಿನ್ನೆಲೆಯಲ್ಲಿ, ಈ ಬಾರಿ ಸಿಎಯ ಚಿನೋ ಹಿಲ್ಸ್ನಲ್ಲಿ, ಹಿಂದೂ ಸಮುದಾಯವು ದ್ವೇಷದ ವಿರುದ್ಧ ದೃಢವಾಗಿ ನಿಂತಿದೆ. ಚಿನೋ ಹಿಲ್ಸ್ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾದ ಸಮುದಾಯದೊಂದಿಗೆ, ನಾವು ಎಂದಿಗೂ ದ್ವೇಷವನ್ನು ಬೇರೂರಲು ಬಿಡುವುದಿಲ್ಲ. ನಮ್ಮ ಸಾಮಾನ್ಯ ಮಾನವೀಯತೆ ಮತ್ತು ನಂಬಿಕೆ ಶಾಂತಿ ಮತ್ತು ಸಹಾನುಭೂತಿ ಮೇಲುಗೈ ಸಾಧಿಸುವುದನ್ನು ಖಚಿತಪಡಿಸುತ್ತದೆ ಎಂದು ಪೋಸ್ಟ್ ಮಾಡಲಾಗಿದೆ.
ಈ ಸುದ್ದಿಯನ್ನೂ ಓದಿ: Tahawwur Rana: ಮುಂಬೈ ಭಯೋತ್ಪಾದಕ ದಾಳಿ ಆರೋಪಿ ತಹವ್ವೂರ್ ರಾಣಾ ಗಡಿಪಾರು ತಡೆಯಾಜ್ಞೆ ಅರ್ಜಿ ತಿರಸ್ಕರಿಸಿದ ಅಮೆರಿಕ ಸುಪ್ರೀಂ ಕೋರ್ಟ್
ಕಳೆದ ವರ್ಷವೂ ಅಮೆರಿಕದಲ್ಲಿ ಹಿಂದೂ ದೇವಾಲಯಗಳಲ್ಲಿ ಧ್ವಂಸ ಘಟನೆಗಳು ವರದಿಯಾಗಿದ್ದವು. ಇದೇ ರೀತಿಯ ಘಟನೆ ಸೆಪ್ಟೆಂಬರ್ 25 ರಂದು ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೋದಲ್ಲಿರುವ ಸ್ವಾಮಿನಾರಾಯಣ ಮಂದಿರವನ್ನು ಧ್ವಂಸಗೊಳಿಸುವ ಪ್ರಯತ್ನ ನಡೆದಿತ್ತು.