ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mufti Shah Mir Shootout : ಕುಲಭೂಷಣ್ ಜಾಧವ್ ಕಿಡ್ನ್ಯಾಪ್‌ಗೆ ಸಹಕರಿಸಿದ್ದ ಪಾಕ್‌ ಉಗ್ರ ಅಪರಿಚಿತರ ಗುಂಡೇಟಿಗೆ ಬಲಿ

ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್ ಅವರನ್ನು ಇರಾನ್‌ನಿಂದ ಅಪಹರಿಸಲು ಪಾಕಿಸ್ತಾನದ ಐಎಸ್‌ಐಗೆ ಸಹಾಯ ಮಾಡಿದ ಆರೋಪ ಹೊತ್ತಿದ್ದ ಉಗ್ರ ಮುಫ್ತಿ ಶಾ ಮಿರ್‌ನನ್ನು ಬಲೂಚಿಸ್ತಾನದ ಟರ್ಬತ್‌ನಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ.

ಕುಲಭೂಷಣ್ ಜಾಧವ್ ಕಿಡ್ನ್ಯಾಪ್‌ ಮಾಡಿಲು ಸಹಾಯ ಮಾಡಲು ಪಾಕ್‌ ಉಗ್ರ ಸಾವು

ಮುಫ್ತಿ ಶಾ ಮಿರ್‌

Profile Vishakha Bhat Mar 9, 2025 10:12 AM

ಬಲೂಚಿಸ್ತಾನ: ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್ (Kulbhushan Jadhav) ಅವರನ್ನು ಇರಾನ್‌ನಿಂದ ಅಪಹರಿಸಲು ಪಾಕಿಸ್ತಾನದ ಐಎಸ್‌ಐಗೆ ಸಹಾಯ ಮಾಡಿದ ಆರೋಪ ಹೊತ್ತಿದ್ದ ಮುಫ್ತಿ ಶಾ ಮಿರ್‌ನನ್ನು ( Mufti Shah Mir Shootout) ಬಲೂಚಿಸ್ತಾನದ ಟರ್ಬತ್‌ನಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ತಿಳಿದು ಬಂದಿದೆ. ಮುಫ್ತಿ ಶಾ ಮಿರ್ ಬಲೂಚಿಸ್ತಾನದ ಪ್ರಮುಖ ಧಾರ್ಮಿಕ ಮುಖಂಡನಾಗಿದ್ದು, ಆತನ ಹತ್ಯೆಗೆ ಎರಡು ಬಾರಿ ಪ್ರಯತ್ನಿಸಲಾಗಿತ್ತು ಎಂದು ತಿಳಿದು ಬಂದಿದೆ. ಮುಫ್ತಿ ಶಾ ಮಿರ್ ರಾತ್ರಿಯ ಪ್ರಾರ್ಥನೆ ಮುಗಿಸಿ ಟರ್ಬತ್‌ನಲ್ಲಿರುವ ಸ್ಥಳೀಯ ಮಸೀದಿಯಿಂದ ಹೊರಡುವಾಗ ಮೋಟಾರ್ ಸೈಕಲ್‌ಗಳಲ್ಲಿ ಬಂದೂಕುಧಾರಿಗಳು ಅವರ ಮೇಲೆ ಹೊಂಚು ಹಾಕಿ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಲವು ಬಾರಿ ಗುಂಡು ಹಾರಿಸಲಾಗಿದ್ದು, ಶುಕ್ರವಾರ ಆಸ್ಪತ್ರೆಯಲ್ಲಿ ಆತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ವಿದ್ವಾಂಸನ ಸೋಗಿನಲ್ಲಿದ್ದ ಮುಫ್ತಿ ಶಾ ಮಿರ್ ಮಾನವ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ. ಜತೆಗೆ ಇಸ್ಲಾಮಿಕ್ ಮೂಲಭೂತವಾದಿ ರಾಜಕೀಯ ಪಕ್ಷವಾದ ಜಮಿಯತ್ ಉಲೇಮಾ-ಇ-ಇಸ್ಲಾಂನ ಸದಸ್ಯನಾಗಿದ್ದ. ಕಳೆದ ವರ್ಷ ಮಿರ್ ಮೇಲೆ ಎರಡು ಬಾರಿ ಹತ್ಯೆ ದಾಳಿ ನಡೆದಿತ್ತು. ಆಗ ಅದೃಷ್ಟವಶಾತ್‌ ಪ್ರಣಾಪಾಯದಿಂದ ಪಾರಾಗಿದ್ದ. ಮುಫ್ತಿಯಲ್ಲಿ ಕೃತ್ಯ ಎಸಗುತ್ತಿದ್ದ ಈತ ಐಎಸ್‌ಐ ನೇತೃತ್ವದ ಡೆತ್ ಸ್ಕ್ವಾಡ್‌ಗಳೊಂದಿಗೆ ಸಂಪರ್ಕ ಹೊಂದಿದ್ದ. ಬಲೂಚಿಸ್ತಾನದ ಹಲವಾರು ಯುವಕರ ಅಪಹರಣ ಮತ್ತು ವಿವಿಧ ಕಾನೂನುಬಾಹಿರ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಬಲೂಚಿಸ್ತಾನದಲ್ಲಿ ಧಾರ್ಮಿಕ ಉಗ್ರವಾದವನ್ನು ಹರಡುವಲ್ಲಿಯೂ ಸಹ ತೊಡಗಿಸಿಕೊಂಡಿದ್ದ ಎಂದು ವರದಿಯಾಗಿದೆ.

ಈ ಸುದ್ದಿಯನ್ನೂ ಓದಿ: ಪಾಕಿಸ್ತಾನ ಮಿಲಿಟರಿ ಕ್ಯಾಂಪ್‌ ಮೇಲೆ ಆತ್ಮಾಹುತಿ ಬಾಂಬ್‌ ದಾಳಿ; ಕನಿಷ್ಠ 9 ಸಾವು

2016ರ ಮಾರ್ಚ್‌ನಲ್ಲಿ ಜೈಶ್ ಅಲ್-ಅದ್ಲ್‌ನ ಮುಲ್ಲಾ ಒಮರ್ ಇರಾನಿ ನೇತೃತ್ವದ ಗುಂಪು ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್ ಅವರನ್ನು ಇರಾನ್-ಪಾಕಿಸ್ತಾನ ಗಡಿಯಿಂದ ಅಪಹರಿಸಿತ್ತು. ಮುಫ್ತಿ ಶಾ ಮಿರ್ ಸೇರಿದಂತೆ ಹಲವು ಮಧ್ಯವರ್ತಿಗಳ ಮೂಲಕ ಪಾಕಿಸ್ತಾನ ಸೇನೆಗೆ ಹಸ್ತಾಂತರಿಸಲಾಗಿತ್ತು. ಇರಾನ್ ನಲ್ಲಿ ವ್ಯಾಪಾರ ನಡೆಸುತ್ತಿದ್ದ ಕುಲಭೂಷಣ್ ಜಾಧವ್ ಅವರನ್ನು ಅಪಹರಿಸಿ ಅವರನ್ನು ಬಂಧಿಸಲಾಗಿತ್ತು. 2017ರ ಏಪ್ರಿಲ್‌ನಲ್ಲಿ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯವು ಜಾಧವ್ ಅವರಿಗೆ ಗೂಢಚರ್ಯೆ ಮತ್ತು ವಿಧ್ವಂಸಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಮರಣದಂಡನೆ ವಿಧಿಸಿತು. ಈ ತೀರ್ಪನ್ನು ಭಾರತ ಖಂಡಿಸಿತ್ತು. ಮರಣದಂಡನೆಯನ್ನು ಅಂತಾರಾಷ್ಟ್ರೀಯ ನ್ಯಾಯಾಲಯ ತಡೆಹಿಡಿದಿದೆ. ದೋಷಾರೋಪಣೆ ಪ್ರಕ್ರಿಯೆಯನ್ನು ಪರಿಶೀಲಿಸುವಂತೆ ಮತ್ತು ಭಾರತಕ್ಕೆ ಕಾನ್ಸುಲರ್ ಪ್ರವೇಶವನ್ನು ನೀಡುವಂತೆ ಪಾಕಿಸ್ತಾನ ಸರ್ಕಾರಕ್ಕೆ ಸೂಚಿಸಿದೆ.