ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nightclub disaster: ನೈಟ್‌ಕ್ಲಬ್‌ನ ಛಾವಣಿ ಕುಸಿದು ಭಾರೀ ದುರಂತ; 79 ಸಾವು, ಹಲವರಿಗೆ ಗಾಯ

ಡೊಮಿನಿಕನ್ ರಿಪಬ್ಲಿಕ್ ರಾಜಧಾನಿಯಲ್ಲಿ ಮಂಗಳವಾರ ಮುಂಜಾನೆ ನೈಟ್‌ಕ್ಲಬ್‌ನ ಛಾವಣಿ ಕುಸಿದು ಬಿದ್ದು, ಮಾಜಿ ಮೇಜರ್ ಲೀಗ್ ಬೇಸ್‌ಬಾಲ್ ತಾರೆ ಸೇರಿದಂತೆ ಕನಿಷ್ಠ 79 ಜನರು ಮೃತಪಟ್ಟಿದ್ದಾರೆ. ಅವಶೇಷಗಳ ನಡುವೆ ಸಿಲುಕಿಕೊಂಡವರನ್ನು ಹೊರತೆಗೆಯಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಘಟನೆಯಲ್ಲಿ 150 ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ನೈಟ್‌ಕ್ಲಬ್‌ನ ಛಾವಣಿ ಕುಸಿದು ಭಾರೀ ದುರಂತ; 79 ಸಾವು

Profile Vishakha Bhat Apr 9, 2025 9:47 AM

ನ್ಯೂಯಾರ್ಕ್‌: ಡೊಮಿನಿಕನ್ ರಿಪಬ್ಲಿಕ್ ರಾಜಧಾನಿಯಲ್ಲಿ ಮಂಗಳವಾರ ಮುಂಜಾನೆ ನೈಟ್‌ಕ್ಲಬ್‌ನ ಛಾವಣಿ ಕುಸಿದು ಬಿದ್ದು, (Nightclub disaster) ಮಾಜಿ ಮೇಜರ್ ಲೀಗ್ ಬೇಸ್‌ಬಾಲ್ ತಾರೆ ಸೇರಿದಂತೆ ಕನಿಷ್ಠ 79 ಜನರು ಮೃತಪಟ್ಟಿದ್ದಾರೆ. ಅವಶೇಷಗಳ ನಡುವೆ ಸಿಲುಕಿಕೊಂಡವರನ್ನು ಹೊರತೆಗೆಯಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಘಟನೆಯಲ್ಲಿ 150 ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಸ್ಯಾಂಟ್ಯೋ ಡೊಂಮಿಂಗೋದ ನೈಟ್‌ಕ್ಲಬ್‌ನ ಛಾವಣಿ ಕುಸಿದು ಬಿದ್ದಿದ್ದು, ಈ ವೇಳೆ ಕಬ್ಲ್‌ 300 ಕ್ಕೂ ಅಧಿಕ ಮಂದಿ ಇದ್ದರು ಎನ್ನಲಾಗಿದೆ.

ಡೊಮಿನಿಕನ್ ಮೆರೆಂಗ್ಯೂ ಗಾಯಕ ರಬ್ಬಿ ಪೆರೆಜ್ ಅವರು ಈ ವಿಪತ್ತಿನಲ್ಲಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ಡೊಮಿನಿಕನ್ ಮಾಧ್ಯಮಗಳು ನಂತರ ಪೆರೆಜ್ ಮೃತಪಟ್ಟಿದ್ದಾರೆ ಎಂದು ವರದಿ ಮಾಡಿದ್ದವು ಆದರೆ ತುರ್ತು ಕಾರ್ಯಾಚರಣೆ ಕೇಂದ್ರದ ನಿರ್ದೇಶಕ ಜುವಾನ್ ಮ್ಯಾನುಯೆಲ್ ಮೆಂಡೆಜ್, ವಿಧಿವಿಜ್ಞಾನ ತಜ್ಞರು ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. 51 ವರ್ಷದ ನಿವೃತ್ತ MLB ಪಿಚರ್ ಆಕ್ಟೇವಿಯೊ ಡೋಟೆಲ್ ಕೂಡ ಮೃತಪಟ್ಟಿರುವುದು ವರದಿಯಾಗಿದೆ. ಅವರು 2011 ರಲ್ಲಿ ಸೇಂಟ್ ಲೂಯಿಸ್ ಕಾರ್ಡಿನಲ್ಸ್‌ನೊಂದಿಗೆ ವಿಶ್ವ ಸರಣಿಯನ್ನು ಗೆದ್ದಿದ್ದರು. ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಅವಷೇಶಗಳ ಅಡಿಯಲ್ಲಿ ಇನ್ನೂ ಹಲವಾರು ಜನ ಸಿಲುಕಿದ್ದಾರೆ. ಅವರನ್ನು ಹೊರ ತೆಗೆಯುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದ್ದಾರೆ.



ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರತ್ಯಕ್ಷದರ್ಶಿಗಳು ಮಾತನಾಡಿ, ನಾವೆಲ್ಲರೂ ಸಂಗೀತವನ್ನು ಕೇಳುತ್ತಿದ್ದೆವು. ಏಕಾಏಕಿ ಜೋರಾದ ಸದ್ದಾಯಿತು. ಮೊದಲು ನಾನು ಇದನ್ನು ಭೂಕಂಪ ಎಂದು ಭಾವಿಸಿದೆ. ಆಮೇಲೆ ಛಾವಣಿ ಕುಸಿಯುತ್ತಿರುವುದು ಕಂಡು ಬಂದಿತು. ಕೂಡಲೇ ಹೊರಗೆ ಓಡಿ ಬಂದೆ. ಅದೃಷ್ಟವಶಾತ್‌ ಪ್ರಾಣ ಉಳಿಯಿತು ಎಂದು ಅವರು ಹೇಳಿದರು. ಘಟನಾ ಸ್ಥಳಕ್ಕೆ ಅಧ್ಯಕ್ಷ ಅಬಿನಾದರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇಲ್ಲಿ ನಡೆದ ದುರಂತಕ್ಕೆ ನಾವು ಸಂತಾಪ ಸೂಚಿಸುತ್ತೇವೆ. ಆದಷ್ಟು ಬೇಗ ರಕ್ಷಣಾ ಕಾರ್ಯ ನಡೆಸಿ ಎಂದು ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ. ಅವರು ಮೂರು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದರು.

ಈ ಸುದ್ದಿಯನ್ನೂ ಓದಿ: Canadian Plane Fire: ದ.ಕೊರಿಯಾ ಬೆನ್ನಲ್ಲೇ ಕೆನಡಾದಲ್ಲೂ ಭಾರೀ ವಿಮಾನ ದುರಂತ-ಲ್ಯಾಂಡಿಂಗ್‌ ವೇಳೆ ಬೆಂಕಿ!

ಆಸ್ಪತ್ರೆಗಳಲ್ಲಿ ಜನರಿಗೆ ಚಿಕಿತ್ಸೆ ನೀಡುತ್ತಿದ್ದು, ಅಧಿಕಾರಿಗಳು ಡೊಮಿನಿಕನ್ನರು ರಕ್ತದಾನ ಮಾಡುವಂತೆ ಕರೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಐರಿಸ್ ಪೆನಾ ಎಂಬ ಮಹಿಳೆ, ತನ್ನ ಮಗನೊಂದಿಗೆ ಹೇಗೆ ತಪ್ಪಿಸಿಕೊಂಡಳು ಎಂದು ತಿಳಿಸಿದ್ದು, ಮೇಜಿನ ಮೇಲಿದ್ದ ಪಾನೀಯದೊಳಗೆ ಧೂಳು ಧೂಳಿನಂತೆ ಬೀಳಲು ಪ್ರಾರಂಭಿಸಿತು. ನಾವಿದ್ದ ಮೇಜು ಕಲ್ಲು ಬಿದ್ದು ಬಿರುಕು ಬಿಟ್ಟಿತು. ಇದರಿಂದ ತಾವು ಭಯಗೊಂಡು ಹೊರಗೆ ಬಂದಿರುವುದಾಗಿ ತಿಳಿಸಿದ್ದಾಳೆ.