Kash Patel: ಭಗವದ್ಗೀತೆಯ ಮೇಲೆ ಕೈಯಿಟ್ಟು ಎಫ್‌ಬಿಐ ನಿರ್ದೇಶಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಕಾಶ್ ಪಟೇಲ್ ; ವಿಡಿಯೋ ಇದೆ
ಭಾರತೀಯ ಮೂಲದ ಕಾಶ್ ಪಟೇಲ್ ಅವರು ಶುಕ್ರವಾರ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ನ ಒಂಬತ್ತನೇ ನಿರ್ದೇಶಕರಾಗಿ ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಮಾಣ ವಚನದ ಸಂದರ್ಭದಲ್ಲಿ ಭಗವದ್ಗೀತೆಯ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದರು.

ಪ್ರಮಾಣ ವಚನ ಸ್ವೀಕರಿಸಿದ ಕಾಶ್ ಪಟೇಲ್

ವಾಷಿಂಗ್ಟನ್: ಭಾರತೀಯ ಮೂಲದ ಕಾಶ್ ಪಟೇಲ್ (Kash Patel) ಅವರು ಶುಕ್ರವಾರ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ನ ಒಂಬತ್ತನೇ ನಿರ್ದೇಶಕರಾಗಿ ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಮಾಣ ವಚನದ ಸಂದರ್ಭದಲ್ಲಿ ಭಗವದ್ಗೀತೆಯ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪಟೇಲ್ ಅವರ ಗೆಳತಿ ಹಾಗೂ ಕುಟುಂಬಸ್ಥರು ಭಾಗಿಯಾಗಿದ್ದರು. ಕ್ರಿಸ್ಟೋಫರ್ ವ್ರೇ ಅವರ ನಂತರ ಒಂಬತ್ತನೇ ಎಫ್‌ಬಿಐ ನಿರ್ದೇಶಕರಾಗಿ ಕಾಶ್ ಪಟೇಲ್ ಅವರನ್ನು ಅಮೆರಿಕದ ಸೆನೆಟ್ ಆಯ್ಕೆ ಮಾಡಿದ ನಂತರ ಕಾಶ್ ಪಟೇಲ್ ಅವರು ಐಸೆನ್‌ಹೋವರ್ ಕಾರ್ಯನಿರ್ವಾಹಕ ಕಚೇರಿ ಕಟ್ಟಡದಲ್ಲಿ ಯುಎಸ್ ಅಟಾರ್ನಿ ಜನರಲ್ ಪಾಮ್ ಬೊಂಡಿ ಅವರಿಂದ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
#WATCH | Washington | Kash Patel takes oath on the Bhagavad Gita, as the 9th Director of the Federal Bureau of Investigation (FBI).
— ANI (@ANI) February 21, 2025
Source: US Network Pool via Reuters pic.twitter.com/c5Jr0ul1Jm
ಪ್ರಮಾಣವಚನ ಸ್ವೀಕರಿಸಿದ ನಂತರ ಮಾತನಾಡಿದ ಪಟೇಲ್ ನಾನು ಅಮೆರಿಕದ ಕನಸಿನೊಂದಿಗೆ ಜೀವಿಸುತ್ತಿದ್ದೇನೆ. ಅಮೆರಿಕದ ಕನಸು ಸತ್ತಿದೆ ಎಂದು ಭಾವಿಸುವ ಯಾರಾದರೂ ಇದ್ದರೆ ಇಲ್ಲಿ ಒಮ್ಮೆ ನೋಡಿ. ನೀವು ಭೂಮಿಯ ಮೇಲಿನ ಶ್ರೇಷ್ಠ ರಾಷ್ಟ್ರದ ಕಾನೂನು ಜಾರಿ ಸಂಸ್ಥೆಯನ್ನು ಮುನ್ನಡೆಸಲಿರುವ ಮೊದಲ ತಲೆಮಾರಿನ ಭಾರತೀಯರೊಂದಿಗೆ ಮಾತನಾಡುತ್ತಿದ್ದೀರಿ. ಅದು ಬೇರೆಲ್ಲಿಯೂ ಸಂಭವಿಸಲು ಸಾಧ್ಯವಿಲ್ಲ ಎಂದು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಬಳಿಕ ಮಾತನ್ನು ಮುಂದುವರಿಸಿ ಎಫ್‌ಬಿಐನಲ್ಲಿ ತಮ್ಮ ಜವಾಬ್ದಾರಿಯನ್ನು ಬದ್ಧತೆಯಿಂದ ನಿರ್ವಹಿಸಿಕೊಂಡು ಹೋಗುವುದಾಗಿ ಭರವಸೆ ನೀಡಿದ್ದಾರೆ.
ಕಾಶ್ ಪಟೇಲ್ ಅವರ ಪ್ರಮಾಣ ವಚನ ಸಮಾರಂಭದ ನಂತರ ಮಾತನಾಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾಶ್ ಕಠಿಣ ಮತ್ತು ಬಲವಾದ ವ್ಯಕ್ತಿ. ತಮ್ಮದೇ ಆದ ಉತ್ತಮ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಅವರು ಎಫ್‌ಬಿಐ ನಿರ್ದೇಶಕರಾಗಿ ಸಮರ್ಥವಾಗಿ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Kash Patel: ಅಮೆರಿಕನ್ಸ್‌ಗೆ ತೊಂದ್ರೆ ಕೊಟ್ರೆ ಯಾವ ಗ್ರಹದಲ್ಲಿದ್ರೂ ಹುಡುಕಿ ಹೊಡಿತೀವಿ- FBI ಮಖ್ಯಸ್ಥರಾಗುತ್ತಿದ್ದಂತೆ ಕಾಶ್ ಪಟೇಲ್ ಖಡಕ್ ಎಚ್ಚರಿಕೆ
ಅಮೆರಿಕದ ತನಿಖಾ ಸಂಸ್ಥೆ ಫೆಡರಲ್ ಬ್ಯುರೋ ಆಫ್ ಇನ್‌ವೆಸ್ಟಿಗೇಷನ್ ನಿರ್ದೇಶಕರಾಗಿ ಭಾರತೀಯ ಮೂಲದ ಕಾಶ್ ಪಟೇಲ್ ನೇಮಕಗೊಂಡಿದ್ದರು. ಸೆನೆಟ್‌ನಲ್ಲಿ ನಿರ್ದೇಶಕರ ಪ್ರಕ್ರಿಯೆಗೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಪಟೇಲ್ ಅವರ ನಾಮನಿರ್ದೇಶನದ ಪರವಾಗಿ 51 ಮತಗಳು ಬಂದರೆ, ವಿರೋಧವಾಗಿ 49 ಮತಗಳು ಚಲಾವಣೆಯಾಗಿದ್ದವು. ಕ್ರಿಸ್ಟೋಫರ್ ವ್ರೇ ಅವರ ನಂತರ ಕಾಶ್ ಪಟೇಲ್ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ. ಟ್ರಂಪ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಇವರು 2017 ರಲ್ಲಿ ಹೌಸ್ ಇಂಟೆಲಿಜೆನ್ಸ್ ಕಮಿಟಿಗೆ ಭಯೋತ್ಪಾದನಾ ನಿಗ್ರಹದ ಹಿರಿಯ ವಕೀಲರಾಗಿ ನೇಮಕಗೊಂಡಿದ್ದಾರೆ. 2016 ರ ಚುನಾವಣೆಯಲ್ಲಿ ರಷ್ಯಾದ ಹಸ್ತಕ್ಷೇಪದ ಬಗ್ಗೆ ರಿಪಬ್ಲಿಕನ್ ನೇತೃತ್ವದ ತನಿಖೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.