Meta: ಮಾಹಿತಿ ಸೋರಿಕೆ ಆರೋಪ; ಟೆಕ್ ಸಂಸ್ಥೆ ಮೆಟಾದಿಂದ 20 ಉದ್ಯೋಗಿಗಳ ವಜಾ
ಮೆಟಾ ಕಂಪನಿ ಗುರುವಾರ ತನ್ನ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಅವರು ತಮ್ಮ ಕಂಪನಿಯ 20 ಉದ್ಯೋಗಿಗಳನ್ನು ವಜಾಗೊಳಿಸಿದ್ದಾರೆ. ತನಿಖೆ ಇನ್ನೂ ಮುಂದುವರಿದಿದ್ದು, ಇನ್ನೂ ಹೆಚ್ಚಿನ ಜನರನ್ನು ಕೆಲಸದಿಂದ ವಜಾ ಮಾಡುತ್ತೇವೆ ಎಂದು ಮೆಟಾ ತಿಳಿಸಿದೆ. ಜುಕರ್‌ಬರ್ಗ್ ಅವರೊಂದಿಗಿನ ಸಭೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

Mark Zuckerberg

ವಾಷಿಂಗ್ಟನ್: ಸಾಮಾಜಿಕ ಮಾಧ್ಯಮ ದೈತ್ಯ ಮೆಟಾ (Meta) ಕಂಪನಿ ಗುರುವಾರ ತನ್ನ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಅವರು ತಮ್ಮ ಕಂಪನಿಯ 20 ಉದ್ಯೋಗಿಗಳನ್ನು ವಜಾಗೊಳಿಸಿದ್ದಾರೆ. ಮಾಧ್ಯಮಗಳಿಗೆ ಮಾಹಿತಿ ಸೋರಿಕೆ ಮಾಡಿದ್ದಕ್ಕಾಗಿ 20 ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂದು ಮೆಟಾ ಮಾಹಿತಿ ನೀಡಿದೆ. ಉದ್ಯೋಗಿಗಳು ಕಂಪನಿಗೆ ಸೇರಿದಾಗ ನಾವು ಅವರಿಗೆ ಹೇಳುತ್ತೇವೆ ಮತ್ತು ಆಂತರಿಕ ಮಾಹಿತಿಯನ್ನು ಸೋರಿಕೆ ಮಾಡುವುದು ನಮ್ಮ ನೀತಿಗಳಿಗೆ ವಿರುದ್ಧವಾಗಿದೆ. ನಿಯತಕಾಲಿಕವಾಗಿ ಜ್ಞಾಪನೆಗಳನ್ನು ನೀಡುತ್ತಿರುತ್ತೇವೆ ಆದರೂ ನಿಯಮ ಉಲ್ಲಂಘಿಸಿದರೆ ಅಂತವರನ್ನು ಕೆಲಸದಿಂದ ವಜಾ ಮಾಡಲಾಗುತ್ತದೆ ಎಂದು ಮೆಟಾ ವಕ್ತಾರರು ತಿಳಿಸಿದ್ದಾರೆ.
ನಾವು ಇತ್ತೀಚೆಗೆ ನಡೆಸಿದ ತನಿಖೆಯಲ್ಲಿ ಕಂಪನಿಯ ಹೊರಗೆ ಗೌಪ್ಯ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ಸುಮಾರು 20 ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ತನಿಖೆ ಇನ್ನೂ ಮುಂದುವರಿದಿದ್ದು, ಇನ್ನೂ ಹೆಚ್ಚಿನ ಜನರನ್ನು ಕೆಲಸದಿಂದ ವಜಾ ಮಾಡುತ್ತೇವೆ. ಇಂತಹ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಒಂದು ವೇಳೆ ಮಾಹಿತಿ ಸೋರಿಕೆ ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದೆ. ಜುಕರ್‌ಬರ್ಗ್ ಅವರೊಂದಿಗಿನ ಸಭೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಮೆಟಾ ನಿಖರವಾಗಿ ಏನು ಸೋರಿಕೆಯಾಗಿದೆ ಅಥವಾ ಯಾರು ಭಾಗಿಯಾಗಿದ್ದಾರೆಂದು ಹೇಳಿಲ್ಲ. ಮೆಟಾ ಈಗಾಗಲೇ ಕೆಲಸದ ವಿಷಯದಲ್ಲಿ ಹಲವಾರು ಬದಲಾವಣೆ ತಂದಿದ್ದು, ಮೆಟಾ ಉದ್ಯೋಗಿಗಳಿಗೆ ಇದು ಕಠಿಣ ಸಮಯವಾಗಿದೆ. ಈ ಹಿಂದೆ ಕೂಡಾ ಹಲವು ಬಾರಿ ಮೆಟಾದ ದತ್ತಾಂಶಗಳು ಸೋರಿಕೆಯಾಗಿದ್ದವು. ಸದ್ಯ ಮೆಟಾ ಕಂಪನಿಯಲ್ಲಿ 72, ಸಾವಿರ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಕೋವಿಡ್ 19 ಸಂದರ್ಭದಲ್ಲಿ ಮೆಟಾ ದೊಡ್ಡ ಮಟ್ಟದಲ್ಲಿ ಉದ್ಯೋಗ ಕಡಿತ ಮಾಡಿತ್ತು.
ಈ ಸುದ್ದಿಯನ್ನೂ ಓದಿ: Server Outrage: ವಾಟ್ಸಾಪ್, ಇನ್‌ಸ್ಟಾ, ಫೇಸ್‌ಬುಕ್ ಸರ್ವರ್ ಡೌನ್- ಕ್ಷಮೆಯಾಚಿಸಿದ ಮೆಟಾ
ಮೊದಲು ಟ್ರಂಪ್ ಅವರ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದ, ಜುಕರ್‌ಬರ್ಗ್ ಇದೀಗ ಟ್ರಂಪ್ ಅಧ್ಯಕ್ಷ ಸ್ಥಾನ ವಹಿಸಿಕೊಂಡ ನಂತರ ಉತ್ತಮ ಸಂಬಂಧವನ್ನು ಹೊಂದಿದ್ದಾರೆ.ಈ ಹಿಂದೆ ಕೆಲವು ಬಾರಿ ಟ್ರಂಪ್ ಜೊತೆ ಔತಣ ಕೂಟದಲ್ಲಿ ಭಾಗವಹಿಸಿದ್ದರು.