ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

4.5–5.4 ಮಿಲಿಯನ್ ಜನರು ಜಗತ್ತಿನಾದ್ಯಂತ ವಾರ್ಷಿಕವಾಗಿ ಹಾವುಗಳಿಂದ ಸಾವನ್ನಪ್ಪುತ್ತಿದ್ದಾರೆ

ಇನ್ನು, ಹಾವು ಕಡಿತದಿಂದ ಹೆಚ್ಚಾಗಿ ಬಹು-ಅಂಗಾಂಗ ವೈಫಲ್ಯ ಉಂಟುಮಾಡಬಹುದು, ರಕ್ತಸ್ರಾವ, ಪಾರ್ಶ್ವವಾಯು, ಸ್ನಾಯು ನಷ್ಟ, ಹೃದಯಾಘಾತ, ತೀವ್ರವಾದ ಮೂತ್ರಪಿಂಡದ ಸಮಸ್ಯೆ ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗೆ ಹಾದಿ ಮಾಡಿಕೊಡಲಿದೆ. ಕೆಲವು ಪ್ರಕರಣದಲ್ಲಿ ಸಾವು ಸಂಭವಿಸಬಹುದು. ಹೀಗಾಗಿ ಹಾವು ಕಡಿತವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು.

ಹಾವು ಕಡಿತ: ಮುಂಜಾಗೃತೆ ಬಗ್ಗೆ ಬಿಎಸ್‌ವಿ ಮಾರ್ಗಸೂಚಿ ಬಿಡುಗಡೆ

Profile Ashok Nayak Mar 26, 2025 11:41 PM

ಬೆಂಗಳೂರು: ಬೇಸಿಗೆ ಋತುವಿನಲ್ಲಿ ಬಿಸಿಲಿನ ತಾಪ ತಾಳಲಾರದೇ ಹೊರ ಬರುವ ಹಾವು ಗಳು ಮನುಷ್ಯರನ್ನು ಕಚ್ಚುವ ಸಾಧ್ಯತೆ ಹೆಚ್ಚು. ಹೀಗಾಗಿ ಭಾರತ್‌ ಸೀರಮ್ ಮತ್ತು ವ್ಯಾಕ್ಸಿ ನೇಷನ್‌ ಸಂಸ್ಥೆ (ಬಿಎಸ್‌ವಿ) ಯಿಂದ ಹಾವು ಕಡಿತ ಸಂಭವಿಸಿದರೆ ತೆಗೆದುಕೊಳ್ಳಬೇಕಾದ ಮುಂಜಾಗೃತೆ ಹಾಗೂ ಚಿಕಿತ್ಸೆ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ದತ್ತಾಂಶದ ಪ್ರಕಾರ 4.5–5.4 ಮಿಲಿಯನ್ ಜನರು ಜಗತ್ತಿನಾದ್ಯಂತ ವಾರ್ಷಿಕವಾಗಿ ಹಾವುಗಳಿಂದ ಸಾವನ್ನಪ್ಪುತ್ತಿದ್ದಾರೆ. ಅದರಲ್ಲಿ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಹಾವಿನ ಕಡಿತದ ಸಾವುಗಳನ್ನು ಹೊಂದಿದೆ.

ಇನ್ನು, ಹಾವು ಕಡಿತದಿಂದ ಹೆಚ್ಚಾಗಿ ಬಹು-ಅಂಗಾಂಗ ವೈಫಲ್ಯ ಉಂಟುಮಾಡಬಹುದು, ರಕ್ತಸ್ರಾವ, ಪಾರ್ಶ್ವವಾಯು, ಸ್ನಾಯು ನಷ್ಟ, ಹೃದಯಾಘಾತ, ತೀವ್ರವಾದ ಮೂತ್ರಪಿಂಡದ ಸಮಸ್ಯೆ ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗೆ ಹಾದಿ ಮಾಡಿಕೊಡಲಿದೆ. ಕೆಲವು ಪ್ರಕರಣದಲ್ಲಿ ಸಾವು ಸಂಭವಿಸಬಹುದು. ಹೀಗಾಗಿ ಹಾವು ಕಡಿತವನ್ನು ಯಾವುದೇ ಕಾರಣ ಕ್ಕೂ ನಿರ್ಲಕ್ಷಿಸಬಾರದು.

ಇದನ್ನೂ ಓದಿ: Bangalore Palace Land Bill: ಬೆಂಗಳೂರು ಅರಮನೆ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ; ಗೆಜೆಟ್‌ ಅಧಿಸೂಚನೆ ಪ್ರಕಟ

ಹಾವು ಕಡಿತ ತಕ್ಷಣ ಏನು ಮಾಡಬೇಕು?

- ಹಾವು ಕಡಿದ ಕೂಡಲೇ ಗಾಬರಿಯಾಗದೇ, ನಿಮ್ಮ ಚಲನವಲನ ನಿರ್ಭಂದಿಸಿ.

- ಹಾವು ಕಚ್ಚಿದ ಸ್ಥಳದಲ್ಲಿ ಯಾವುದೇ ಆಭರಣ ಅಥವಾ ಬಿಗಿಯಾದ ಬಟ್ಟೆ ಇದ್ದರೆ ಕೂಡಲೇ ತೆಗೆದು ಹಾಕಿ

_ಎದೆ ಭಾಗದಡಿ ಹಾವು ಕಚ್ಚಿದ್ದರೆ, ಆ ವ್ಯಕ್ತಿಯನ್ನು ಮಲಗಿಸಬೇಕು. ವಿಷ ಹರಡುವುದನ್ನು ತಡೆಯಲು ವ್ಯಕ್ತಿಯನ್ನು ಶಾಂತವಾಗಿರಿಸಬೇಕು.

ಗಾಯವನ್ನು ಸ್ವಚ್ಛವಾದ ಬ್ಯಾಂಡೇಜ್‌ನಿಂದ ಮುಚ್ಚಿ ಮತ್ತು ದಾರದಿಂದ ಬಿಗಿಯಾಗಿ ಕಟ್ಟಿ. ಒಂದು ವೇಳೆ ಹಾವು ನಿಮ್ಮ ಕಾಲಿಗೆ ಕಚ್ಚಿದರೆ, ನೀವು ನಿಮ್ಮ ಬೂಟುಗಳನ್ನು ತೆಗೆದು ಸಾಧ್ಯವಾದಷ್ಟು ಬೇಗ ವೈದ್ಯರ ಬಳಿಗೆ ಹೋಗಬೇಕು

ಏನು ಮಾಡಬಾರದು:

-ಯಾವುದೇ ಸ್ವಯಂ ಔಷಧ ಮಾಡಿಕೊಳ್ಳುವುದು ಒಳ್ಳೆಯದಲ್ಲ

-ಹಾವು ಕಚ್ಚಿದ ಗಾಯವನ್ನು ಕತ್ತರಿಸಲು ಪ್ರಯತ್ನಿಸಬೇಡಿ, ವಿಷವನ್ನು ಹೀರಲು ಪ್ರಯತ್ನಿಸಬೇಡಿ,

-ಗಾಯಕ್ಕೆ ಐಸ್ ಹಚ್ಚಬೇಡಿ, ಕೆಫೀನ್ ಅಥವಾ ಆಲ್ಕೋಹಾಲ್ ಇರುವ ಯಾವುದನ್ನೂ ನೀಡಬೇಡಿ,

-ವ್ಯಕ್ತಿಯನ್ನು ಓಡಾಡಲು ಬಿಡಬೇಡಿ, ಕೂಡಲೇ ಆತನನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯಿರಿ.