ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Mysore News: ಮಾಧ್ಯಮ ಕ್ಷೇತ್ರದಲ್ಲಿ ಅನೇಕ ಅವಕಾಶ ಮತ್ತು ಸಾಧ್ಯತೆಗಳಿವೆ: ಪ್ರೊ.ಎನ್.ಕೆ.ಲೋಕನಾಥ್

ಮೀಡಿಯಾ ಹಬ್ಬ 2025 ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿದ ಅವರು ವಿದ್ಯೆ, ವಸ್ತುನಿಷ್ಠತೆ ,ನಿರಂತರ ಶ್ರಮ, ಸದೃಢ ಮನಸ್ಥಿತಿ, ಈ ಅಂಶ ಗಳನ್ನು ಪತ್ರಿಕೋದ್ಯಮ ಮತ್ತು ಸಂವಹನದ ವಿದ್ಯಾರ್ಥಿಗಳು ಅಳವಡಿಸಿ ಕೊಂಡರೆ ಭವಿಷ್ಯದಲ್ಲಿ ಉತ್ತಮ ಪತ್ರಕರ್ತರಾಗುತ್ತಾರೆ ಎಂದರು

ನಿಜವಾದ ಪತ್ರಕರ್ತರಾದವರು ಚೆನ್ನಾಗಿ ಓದಬೇಕು

Profile Ashok Nayak Feb 27, 2025 2:25 PM

ಮೈಸೂರು: ಇಂದಿಗೆ ಮಾಧ್ಯಮ ಕ್ಷೇತ್ರದಲ್ಲಿ ಅನೇಕ ಅವಕಾಶ ಮತ್ತು ಸಾಧ್ಯತೆಗಳಿವೆ. ಕರ್ತವ್ಯನಿಷ್ಠೆ ಕೆಲಸದ ಬದುಕಿಗೆ ಅಗತ್ಯವೆಂಬುದನ್ನು ಅರಿತು ಕೆಲಸ ಮಾಡಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಎನ್.ಕೆ.ಲೋಕನಾಥ್ ಹೇಳಿ ದರು. ನಗರದ ಮಾನಸಗಂಗೋತ್ರಿ ಮಾನವಿಕ ಸಭಾಂಗಣದಲ್ಲಿ ವಾರ್ತಾ ಮತ್ತು ಸಾರ್ವ ಜನಿಕ ಸಂಪರ್ಕ ಇಲಾಖೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯದ ಸಹಭಾಗಿತ್ವದಲ್ಲಿ ಗುರುವಾರ ಏರ್ಪಡಿಸಿದ್ದ ಏನ್ ಸಮಾಚಾರ ! ಮೀಡಿಯಾ ಹಬ್ಬ 2025 ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿದ ಅವರು ವಿದ್ಯೆ, ವಸ್ತುನಿಷ್ಠತೆ ,ನಿರಂತರ ಶ್ರಮ, ಸದೃಢ ಮನಸ್ಥಿತಿ, ಈ ಅಂಶ ಗಳನ್ನು ಪತ್ರಿಕೋದ್ಯಮ ಮತ್ತು ಸಂವಹನದ ವಿದ್ಯಾರ್ಥಿಗಳು ಅಳವಡಿಸಿ ಕೊಂಡರೆ ಭವಿಷ್ಯದಲ್ಲಿ ಉತ್ತಮ ಪತ್ರಕರ್ತರಾಗುತ್ತಾರೆ ಎಂದರು.

ಇದನ್ನೂ ಓದಿ: Mysore News: ಮೈಸೂರು ಮಹಾರಾಣಿ ಕಾಲೇಜಿನ ಗೋಡೆ ಕುಸಿದು ಓರ್ವ ಸಾವು

ಇತ್ತೀಚಿನ ದಿನಗಳಲ್ಲಿ ಪತ್ರಿಕೋದ್ಯಮ ಸಾಕಷ್ಟು ಬದಲಾಗಿದೆ. ಒಂದೇ ವಿಚಾರದ ಬಗ್ಗೆ ಚರ್ಚಿಸುತ್ತಿದ್ದಾರೆ. ಇಂದಿನ ತಂತ್ರಜ್ಞಾನದ ದಿನಗಳಲ್ಲಿ ಡಿಜಿಟಲ್ ಬಳಸಿಕೊಳ್ಳುತ್ತಾರೆ. ಮಕ್ಕಳಿಗೆ ಹೆಚ್ಚು ಓದು ಹವ್ಯಾಸವಿಲ್ಲ. ನಿಜವಾದ ಪತ್ರಕರ್ತರಾದವರು ಚೆನ್ನಾಗಿ ಓದ ಬೇಕು. ನೀವು ಬರೆದ ಲೇಖನದ ಬಗ್ಗೆ ವಾತನಾಡಬೇಕು. ಸುದ್ದಿುಂಲ್ಲಿ ನಿಖರತೆ ವಸ್ತು ನಿಷ್ಠೆ ಪ್ರಾಮಾಣಿಕತೆ ಇರಬೇಕು ಎಂದು ಹೇಳಿದರು.

Mys 281

ಸತ್ಯಕ್ಕಿಂತ ಸುಳ್ಳು ತುಂಬಾ ವೈರಲ್ ಆಗುತ್ತಿದೆ. ಪತ್ರಿಕೋದ್ಯಮದ ಭವಿಷ್ಯ ನಿಮ್ಮ ಕೈಯ ಲ್ಲಿದೆ. ಉತ್ತಮ ಪತ್ರಕರ್ತರು ಆಗಬೇಕು ಎಂದರೆ ಒಂದು ವಿಷಯವನ್ನು ಹೊಸ ತನದಿಂದ ವಿಶ್ಲೇಷಣೆ ವಾಡಬೇಕು. ಆಳವಾದ ಅಧ್ಯಯನ ಬಹಳ ಮುಖ್ಯವಾಗಿದ್ದು ಸತ್ಯ ಎಂಬು ದನ್ನು ಅರಿತುಕೊಂಡು ಪತ್ರಕರ್ತರಾಗುವ ಜೊತೆ ಸಮಾಜವನ್ನು ತಿದ್ದುವ ಕೆಲಸ ವಾಗ ಎಂದು ತಿಳಿಸಿದರು.

ಡಿಜಿಟಲ್ ಯುಗದಲ್ಲಿ ಸುದ್ದಿ ಬಹಳ ಬೇಗ ಸಿಗುತ್ತದೆ. ಇಂದಿನ ದಿನದಲ್ಲಿ ಮಕ್ಕಳಲ್ಲಿ ದಿನದಲ್ಲಿ ಪತ್ರಿಕೆಗಳನ್ನು ಒದುವ ಹವ್ಯಾಸದಿಂದ ದೂರ ಉಳಿದಿದ್ದಾರೆ. ಹಾಗಾಗಿ ಸಾಧ್ಯ ವಾದಷ್ಟು ಓದುವ ಹವ್ಯಾಸ ಬೆಳವಣೆಗೆುಂನ್ನು ರೂ ಢಿಸಿಕೊಳ್ಳಬೇಕಾಗಿದೆ. ಮಾನಸ ಗಂಗೋತ್ರಿಯ ವಿದ್ಯಾರ್ಥಿಗಳು ಉತ್ತಮವಾದ ಪತ್ರಕರ್ತರಾಗಿದ್ದಾರೆ. ಡಿಜಿಟಲ್ ಯುಗದಲ್ಲಿ ಸುದ್ದಿಗಳನ್ನು ವಸ್ತುನಿಷ್ಠೆಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಎನ್.ಡಿ.ಟಿ.ವಿ. ಮಾಜಿ ಕಾರ್ಯನಿರ್ವಾಹಕ ಸಂಪಾದಕರಾದ ಮಾಯಾ ಶರ್ಮಾ ಅವರು ಮಾತನಾಡಿ ವಾಹಿತಿ ಪ್ರಮುಖ ಶಕ್ತಿಯಾಗಿ ಪಾತ್ರವಹಿಸುತ್ತದೆ. ಇಂದು ಅನೇಕ ಚಾಲೆಂಜ್ ಎದುರಿಸಬೇಕು. ಪ್ರೆಸ್ ರ್ಯಾಂಕಿಂಗ್ ಕಡಿಮೆ ಆಗುತ್ತಿದೆ ಎಂದು ಭಾವಿಸಬಾರದು. ಮೀಡಿಯಾ ಇಂದು ಒನ್ ಸೈಡ್ ಆಗುತ್ತದೆ ಅದರೆ ನೀವು ಎಥಿಕಲ್ ವ್ಯಾಲ್ಯೂ ಇರಬೇಕು. ನಿರಂತರ ಕಲಿಕೆ ಮತ್ತು ಅಭ್ಯಾಸದಿಂದ ತಜ್ಞತೆ ಲಭಿಸುತ್ತದೆ ಎಂದು ಹೇಳಿದರು.

ಬದಲಾವಣೆಗೆ ವೇಗವಾಗಿ ಒಗ್ಗಿಕೊಳ್ಳುವ ಕ್ಷಮತೆ ಬೆಳೆಸಿಕೊಳ್ಳಬೇಕು, ಮಾಧ್ಯಮ ಕಲಿಕಾ ರ್ಥಿಗಳು ಮೊದಲು ಗುರಿ ತಲುಪಲು ವಮಾನಸಿಕವಾಗಿ ತಯಾರಾಗಿರಬೇಕು. ಆತ್ಮ ಸಂತೃಪ್ತಿ ನೀಡುವಂತಹ ವೃತ್ತಿ ಪ್ರಾಮಾಣಿಕತೆ ಸರಳತೆ ಇರಬೇಕು. ಫೇಕ್ ನ್ಯೂಸ್ ಬಗ್ಗೆ ಅರಿತುಕೊಳ್ಳಬೇಕು. ವಾಟ್ಸ್ ಅಪ್ ಯೂನಿವರ್ಸಿಟಿಯಿಂದ ಸುಳ್ಳು ಮಾಹಿತಿ ಹರಡುತ್ತಿದೆ. ಎಐ, ಸಾಮಾಜಿಕ ಜಾಲತಾಣದಿಂದ ಒಳಿತು ಇದೆ. ಕೆಡಕು ಇದೆ. ಅದನ್ನು ಉತ್ತಮವಾಗಿ ಬಳಸಿಕೊಳ್ಳಿ ಎಂದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಆಯಾಷಾ ಖಾನಂ ಮಾತನಾಡಿ, ಕರ್ನಾಟಕ ಸರ್ಕಾರದ ಮುಖ್ಯ ಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಎಲ್ಲಾ ಕ್ಷೇತ್ರದ ಬಗ್ಗೆ ಆಲೋಚಿಸುತ್ತಾರೆ. ಅದರಂತೆ ಮಾಧ್ಯಮ ಕ್ಷೇತ್ರದ ಬಗ್ಗೆ ಉತ್ತಮ ಆಲೋಚನೆ ಇರುವುದರಿಂದ ಮಿಡಿಯಾ ಹಬ್ಬ ಆಚರಿಸುತ್ತಿದ್ದೇವೆ. ಇಂದು ಪತ್ರಿಕೋದ್ಯಮದ ಬಗ್ಗೆ ನಂಬಿಕೆ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಯುವ ಪತ್ರಕರ್ತರು ಅದನ್ನು ಬದಲಿಸ ಬೇಕು. ಅಕಾಡೆಮಿಮತ್ತು ಮಾಧ್ಯಮ ನಡುವೇ ಸೇತುವೆ ಇರಬೇಕು. ಇದರ ಮೂಲಕ ಉತ್ತಮ ವಿಷಯಗಳ ಬಗ್ಗೆ ಚರ್ಚೆ ಆಗಬೇಕು. ಕಲ್ಯಾಣ ಕರ್ನಾಟಕದ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯುವ ಪತ್ರಕರ್ತಕರು ಕ್ಯಾಂಪಸ್ ನಲ್ಲಿ ಇರುವಾಗ ಎಂಜಾಯ್ ಮಾಡಿ. ಅದರೆ, ಹೊರಗೆ ಹೋದಾಗ ಪ್ರಶ್ನಿಸುವ ಮುನ್ನ ಅದರ ಬಗ್ಗೆ ತಿಳಿದು ಕೊಳ್ಳಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಧ್ಯಮ ಅಕಾಡೆಮಿಯ ರಿಜಿಸ್ಟ್ರಾರ್ ಸಹನಾ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ.ಎನ್.ಮಮತಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಟಿ.ಕೆ. ಹರೀಶ್ ಹಾಗೂ ಮತ್ತಿತರರು ಇದ್ದರು.