MUDA: ಸೇವಾಸಂಸ್ಥೆ ಮುಡಾ ವಾಣಿಜ್ಯ ಕೇಂದ್ರವಾಗಬಾರದು : ಸಂದೇಶ್ ಸ್ವಾಮಿ
ರೈತರಿಂದ ಜಮೀನುಗಳನ್ನು ಸ್ವಾಧೀನ ಪಡಿಸಿಕೊಂಡು ಬಡಾವಣೆ ರಚಿಸಿ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಆಶಾಕಿರಣವಾಗಬೇಕಾಗಿದ್ದ ಮುಡಾ ಕಳೆದ ಎರಡು ದಶಕದಲ್ಲಿ ಒಂದೇ ಒಂದು ಎಕರೆ ಜಮೀನನ್ನು ಸ್ವಾಧೀನ ಪಡೆದಿಲ್ಲ. ನಂತರ 50:50 ಅನುಪಾತದಲ್ಲಿ ರೈತರ ಜಮೀನು ಪಡೆದು ಬಡಾವಣೆ ನಿರ್ಮಿಸುವ ನಿಯಮ ಜಾರಿಗೊಳಿಸಿದರು ಸಹ, ಅದು ಈವರೆಗೆ ಕಾರ್ಯಗತವಾಗಿಲ್ಲ


ಮೈಸೂರು: ನಾಲ್ವಡಿ ಕೃಷ್ಣರಾಜ ಒಡೆಯರ ಆಶಯದಂತೆ ಮುಡಾ ಸೇವಾಸಂಸ್ಥೆ ಯಾಗಿರಬೇಕೆ ಹೊರತು, ವಾಣಿಜ್ಯ ಕೇಂದ್ರವಾಗಬಾರದು ಎಂದು ಮಾಜಿ ಮಹಾಪೌರ ಸಂದೇಶ ಸ್ವಾಮಿ ತಿಳಿಸಿದರು. ಮುಡಾ ಮಂಡಿಸಿರುವ 2025-26ನೇ ಸಾಲಿನ ಆಯವ್ಯಯ ಕುರಿತು ಪ್ರತಿಕ್ರಿಯೆ ವ್ಯಕ್ತ ಪಡಿಸಿರುವ ಅವರು, ಕಳೆದ ಎರಡು ದಶಕಗಳಲ್ಲಿ ಒಂದೇ ಒಂದು ಬಡಾವಣೆಯನ್ನು ರಚಿಸದೆ ನಿವೇಶಾನಾಕಾಂಕ್ಷಿಗಳಿಗೆ ವಂಚನೆ ಮಾಡುತ್ತಿದೆ ಎಂದರು.
ಅಂದಿನ ಸಿಐಟಿಬಿಯನ್ನು ಸ್ಥಾಪಿಸಿದ ಮೂಲ ಉದ್ದೇಶ, ಯಾರು ಸ್ವಂತ ಸೂರು ಹೊಂದಿಲ್ಲ ಅಂತಹವರಿಗೆ ಬಡಾವಣೆಗಳನ್ನು ರಚಿಸಿ ಕೈಗೆಟುಕುವ ದರದಲ್ಲಿ ನಿವೇಶನಗಳನ್ನು ಕಲ್ಪಿಸು ವುದಾಗಿದೆ. ಅಲ್ಲದೆ ಮೂಲ ಸೌರ್ಕಯಗಳನ್ನು ನೀಡಿ ನಗರವನ್ನು ಯೋಜನಾ ಬದ್ಧವಾಗಿ ನಿರ್ಮಿಸುವುದಾಗಿತ್ತು. ಆದರೆ ಆ ಆಶಯಗಳನ್ನು ಬದಗೊತ್ತಿ ನಿಯಮ ಬಾಹಿರ ಹಾಗೂ ಕಾಯ್ದೆಗೆ ವಿರುದ್ಧವಾದ ಕಾರ್ಯಗಳನ್ನು ಮಾಡುವಲ್ಲಿ ಮಾತ್ರವೇ ಅದು ತೊಡಗಿಸಿಕೊಂಡಿ ರುವುದು ದುರಂತ ಸಂಗತಿ. ನಗರಾಭಿವೃದ್ಧಿ ಇಲಾಖೆ ಈ ಬಗ್ಗೆ ಗಮನ ಹರಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: MUDA Scam: ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಪತ್ನಿಗೆ ರಿಲೀಫ್; ಇಡಿ ಸಮನ್ಸ್ ರದ್ದುಗೊಳಿಸಿದ ಹೈಕೋರ್ಟ್
ರೈತರಿಂದ ಜಮೀನುಗಳನ್ನು ಸ್ವಾಧೀನ ಪಡಿಸಿಕೊಂಡು ಬಡಾವಣೆ ರಚಿಸಿ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಆಶಾಕಿರಣವಾಗಬೇಕಾಗಿದ್ದ ಮುಡಾ ಕಳೆದ ಎರಡು ದಶಕದಲ್ಲಿ ಒಂದೇ ಒಂದು ಎಕರೆ ಜಮೀನನ್ನು ಸ್ವಾಧೀನ ಪಡೆದಿಲ್ಲ. ನಂತರ 50:50 ಅನುಪಾತದಲ್ಲಿ ರೈತರ ಜಮೀನು ಪಡೆದು ಬಡಾವಣೆ ನಿರ್ಮಿಸುವ ನಿಯಮ ಜಾರಿಗೊಳಿಸಿದರು ಸಹ, ಅದು ಈವರೆಗೆ ಕಾರ್ಯಗತವಾಗಿಲ್ಲ. ಬದಲಾಗಿ ಹಳೇ ಪ್ರಕರಣಗಳನ್ನು ಮುಂದಿಟ್ಟುಕೊಂಡು 50:50 ಅನುಪಾತದಡಿ ಮುಡಾ ತನ್ನ ಸ್ವಾಧೀನದಲ್ಲಿದ್ದ ನಿವೇಶನಗಳನ್ನು ಹಂಚಿಕೆ ಮಾಡಿ ನಿಜವಾದ ಫಲಾನುಭವಿಗಳಿಗೆ ವಂಚಿಸಿದೆ. ಹಾಗೂ ಇಂದು ಬಹುಕೋಟಿ ಹಗರಣಕ್ಕೆ ಸಿಲುಕಿರುವುದು ಮೈಸೂರಿನ ಕಳಂಕಕ್ಕೂ ಕಾರಣವಾಗಿದೆ ಎಂದರು.
ಅನೇಕ ವರ್ಷಗಳಿಂದ ಮುಡಾ ನೂರಾರು ಖಾಸಗಿ ಬಡಾವಣೆಗಳಿಗೆ ಅನುಮೋದನೆ ನೀಡವ ಕೆಲಸದಲ್ಲಿ ಅತೀವ ಆಸಕ್ತಿ ವಹಿಸಿ ಒಂದು ರೀತಿ ರಿಯಲ್ ಎಸ್ಟೇಟ್ ಏಜೆಂಟರಂತೆ ವರ್ತಿಸು ತ್ತಿದೆ. ಇನ್ನೂ ಖಾಸಗಿ ಬಡಾವಣೆಗಳಿಗೆ ನೀರು, ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಅಭಿವೃದ್ಧಿದಾರರಿಂದ ಕೋಟ್ಯಂತರ ರೂ ಶುಲ್ಕ ವಸೂಲಿ ಮಾಡಿದೆ. ಆದರೂ ಹಲವು ಖಾಸಗಿ ಬಡಾವಣೆಗಳಿಗೆ ಮೂಲ ಸೌಕರ್ಯ ಕಲ್ಪಿಸದ ಕಾರಣ ನಿವೇಶನದಾರರು ಹಣ ಕಟ್ಟಿ ಸ್ವಂತ ಮನೆ ಕಟ್ಟಿಕೊಂಡು ವಾಸಕ್ಕೆ ಹೋಗಲಾರದೆ ಅತಂತ್ರ ಸ್ಥಿತಿ ಅನುಭವಿಸುತ್ತಿದ್ದಾರೆ. ಮುಡಾ ರಚಿಸಿರುವ ಕೆಲವು ಬಡಾವಣೆಗಳಿಗೆ ಇನ್ಯಾವ ಮೂಲ ಸೌಕರ್ಯ ಕಲ್ಪಿಸಿಲ್ಲ. ಆದ್ದರಿಂದ ಜನರು ಅಧಿಕಾರಿಗಳಿಗೆ ಹಿಡಿಶಾಪ ಹಾಕುವಂತಾಗಿದೆ ಎಂದು ತಿಳಿಸಿದರು.
ಮೈಸೂರಿಗೆ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಅವರ ವಾಸಕ್ಕೆ ನಗರದ ಹೊರಗೆ ಉಪ ನಗರಗಳ ನಿರ್ಮಾಣ ಮಾಡಬೇಕಿತ್ತು. ಗುಂಪುಮನೆ ನಿರ್ಮಿಸುವುದಾಗಿ ಹೇಳಿದ್ದ ಮುಡಾ ಈ ಸಾಲಿನ ಬಜೆಟ್ ನಲ್ಲಿ ಆ ಯೋಜನೆಯು ಮಹತ್ವ ಪಡೆದಿಲ್ಲ. ವಾಣಿಜ್ಯ ಕಟ್ಟಡಗಳ ನಿರ್ಮಾಣದ ಪ್ರಸ್ತಾವನೆಯನ್ನು ನೋಡಿದರೆ, ಮೂಲೆ ಮತ್ತು ಮಧ್ಯಂತರ ನಿವೇಶನ ಗಳನ್ನು ಹರಾಜು ಹಾಕಿ ಸಿಬ್ಬಂದಿ ವೇತನ ಮತ್ತಿತರ ವೆಚ್ಚ ಭರಿಸಿಕೊಳ್ಳುತ್ತಿತ್ತೋ ಅದೇ ರೀತಿ ಮುಡಾ ಆದಾಯಕ್ಕಾಗಿ ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕೆ ಆಸಕ್ತಿ ವಹಿಸಿ ದಂತಿದೆ. ಸೇವಾ ಸಂಸ್ಥೆಯಾಗಿ ಕೆಲಸ ಮಾಡಬೇಕಾಗಿದ್ದ ಮುಡಾ ವ್ಯವಹಾರ ಕೇಂದ್ರವಾಗು ತ್ತಿದೆ.
ಅಧಿಕೃತವಾಗಿ ವಾಣಿಜ್ಯ ಕೇಂದ್ರವಾಗಿ ಬದಲಾಗುವುದು ಸೂಕ್ತ. 1992ರಿಂದ ನಿವೇಶನ ಬಯಸಿ ೮೦ ಸಾವಿರಕ್ಕೂ ಅಧಿಕ ಮಂದಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಅವರೆಲ್ಲಾ ನಿವೇಶನ ಹೊಂದಲು ಇನ್ನು ಎಷ್ಟು ವರ್ಷ ಕಾಯಬೇಕು? ಮೂಲ ಆಶಯದಂತೆ ಪ್ರಾಧಿ ಕಾರ ಕಾರ್ಯ ನಿರ್ವಹಿಸಲು ಸಾಧ್ಯವಾಗದಿದ್ದರೆ ಮುಡಾ ಮುಚ್ಚುವುದೇ ವಾಸಿ. ಇದೇ ರೀತಿ ಬಡಾವಣೆಗಳನ್ನು ರಚಿಸದೆ ಮೂಲ ಉದ್ದೇಶ ಮರೆತರೆ ಮುಡಾ ಮುಚ್ಚಬೇಕಾದೀತು ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಇನ್ನಾದರೂ ಮುಡಾ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳು ಮತ್ತು ಆಯುಕ್ತರು ಪ್ರಾಧಿ ಕಾರದ ಅಭಿವೃದ್ಧಿಗೆ ಹಾಗೂ ಜನಸಾಮಾನ್ಯರ ಸೇವೆಗೆ ಯೋಜನೆಗಳನ್ನು ರೂಪಿಸಲಿ ಎಂದು ಸಂದೇಶ್ ಸ್ವಾಮಿ ಆಗ್ರಹಿಸಿದ್ದಾರು.