Godambi Kaka: ಹಾಸ್ಯ ಕಲಾವಿದ, ಸೋಶಿಯಲ್ ಮೀಡಿಯಾ ಸ್ಟಾರ್ ಗೋಡಂಬಿ ಕಾಕಾ ಇನ್ನಿಲ್ಲ
Godambi Kaka: ಬಾಗೇವಾಡಿ ಸಮೀಪದ ನಾಗೂರ ಗ್ರಾಮದ ರಂಗಭೂಮಿ ಕಲಾವಿದನಾಗಿದ್ದ ಬಸಲಿಂಗಯ್ಯ ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ʼಗೊಡಂಬಿ ಕಾಕಾʼ ಎಂಬ ಹೆಸರಿನಿಂದಲೇ ಚಿರಪರಿಚಿತನಾಗಿದ್ದರು. ಯೂಟ್ಯೂಬ್‌ನಲ್ಲಿ ಒಂದು ಲಕ್ಷಕ್ಕೂ ಅಧಿಕ ಪಾಲೋವರ್ಸ, ಇನ್ಸ್ಟಾಗ್ರಾಂನಲ್ಲಿ ಎರಡು ಲಕ್ಷ ಪಾಲೋವರ್ಸ ಹೊಂದಿರುವ ಗೊಡಂಬಿ ಕಾಕಾನ ಕಾಮಿಡಿ ವಿಡಿಯೋಗಳು 1 ಕೋಟಿಗೂ ಅಧಿಕ ವೀಕ್ಷಣೆ ಕಂಡಿವೆ


ಬಸವನಬಾಗೇವಾಡಿ: ಸೋಶಿಯಲ್ ಮೀಡಿಯಾದಲ್ಲಿ ತನ್ನ ಕಾಮಿಡಿ ಝಲಕ್‌ಗಳ ಮೂಲಕ ಕಚಗುಳಿ ಇಡುತ್ತಿದ್ದ 'ಗೋಡಂಬಿ ಕಾಕಾ' ಬಾರದ ಲೋಕಕ್ಕೆ ತೆರಳಿದ್ದಾರೆ. ಬಸವನ ಬಾಗೇವಾಡಿ ಸಮೀಪದ ನಾಗೂರ ಗ್ರಾಮದ ಯೂಟ್ಯೂಬ್ ಕಲಾವಿದ ಬಸಲಿಂಗಯ್ಯ ಹಿರೇಮಠ (ಗೊಡಂಬಿ ಕಾಕಾ) ಅಕಾಲಿಕ ಮರಣ ಹೊಂದಿದ್ದಾರೆ. ಮೂಲತಃ ರಂಗಭೂಮಿ ಕಲಾವಿದನಾಗಿದ್ದ ಬಸಲಿಂಗಯ್ಯ ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ʼಗೊಡಂಬಿ ಕಾಕಾʼ ಎಂಬ ಹೆಸರಿನಿಂದಲೇ ಚಿರಪರಿಚಿತನಾಗಿದ್ದರು.
ಯೂಟ್ಯೂಬ್‌ನಲ್ಲಿ ಒಂದು ಲಕ್ಷಕ್ಕೂ ಅಧಿಕ ಪಾಲೋವರ್ಸ, ಇನ್ಸ್ಟಾಗ್ರಾಂನಲ್ಲಿ ಎರಡು ಲಕ್ಷ ಪಾಲೋವರ್ಸ ಹೊಂದಿರುವ ಗೊಡಂಬಿ ಕಾಕಾನ ಕಾಮಿಡಿ ವಿಡಿಯೋಗಳು 1 ಕೋಟಿಗೂ ಅಧಿಕ ವೀಕ್ಷಣೆ ಕಂಡಿವೆ, ಅಲ್ಲದೇ ಇವರು ಸಾಮಾಜಿಕ ಜಾಲತಾಣದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದರು.
ಸದ್ಯ ಅಕಾಲಿಕ ಮರಣ ಹೊಂದಿರುವ ಗೊಡಂಬಿ ಕಾಕಾ ಹೆಂಡತಿ ಮಗ, ಮಗಳು ಸೇರಿದಂತೆ ಅಪಾರ ಅಭಿಮಾನಿ ಬಳಗವನ್ನ ಅಗಲಿದ್ದಾರೆ.
ಈ ಸುದ್ದಿಯನ್ನೂ ಓದಿ | Viral Video: ವಿಮಾನದಲ್ಲಿ ಬೆತ್ತಲೆಯಾದ ಮಹಿಳಾ ಗಗನಯಾತ್ರಿ; ಏನಿದು ವಿಚಿತ್ರ ಘಟನೆ?
ಬಸಲಿಂಗಯ್ಯ ಚೆನ್ನಬಸಯ್ಯ ಹಿರೇಮಠ ಮೂಲತಃ ರಂಗಭೂಮಿ ಕಲಾವಿದರು. 19 ವಯಸ್ಸಿನಲ್ಲಿ ಬಣ್ಣ ಹಚ್ಚಿದ ಇವರು 40 ವರ್ಷಗಳ ಕಾಲ ರಂಗಭೂಮಿ ಕಲಾವಿದರಾಗಿ ಬಯಲಾಟಗಳಲ್ಲಿ ನಟಿಸುವ ಮೂಲಕ ಕಲಾಪ್ರೇಮಿಗಳನ್ನು ರಂಜಿಸಿದ್ದರು. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಮನೆ ಮಾತಾಗಿರುವ ಪಾರಿಜಾತ ನಾಟಕದಲ್ಲಿ ಇವರ ಪಾತ್ರ ಜನಪ್ರಿಯವಾಗಿತ್ತು. ಆದರೆ 2019ರ ಬಳಿಕ ಕೋವಿಡ್ ಹಾಗೂ ವೃದ್ಧಾಪ್ಯಕ್ಕೆ ಸಿಲುಕಿದ್ದ ಬಸಲಿಂಗಯ್ಯರಿಗೆ ಸಂಕಷ್ಟ ಎದುರಾಗಿತ್ತು. ಬಳಿಕ ರಂಗಭೂಮಿಯಿಂದ ಹೊಟ್ಟೆ ತುಂಬಲ್ಲ ಎಂದು ಅರಿತು ಸಣ್ಣ ಪುಟ್ಟ ಕಾಮಿಡಿ ವಿಡಿಯೋಗಳನ್ನು ಮಾಡೋದಕ್ಕೆ ಶುರು ಮಾಡಿದ್ದರು. ಈ ಮೂಲಕ ಕಳೆದ ಮೂರ್ನಾಲ್ಕು ವರ್ಷದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ಧಿಗೆ ಬಂದಿದ್ದರು.