ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBMP Parking tax: ಬೆಂಗಳೂರಿಗರೇ ಇನ್ನೊಂದು ಬೆಲೆ ಏರಿಕೆಗೆ ಸಿದ್ಧರಾಗಿ! ಪಾರ್ಕಿಂಗ್‌ ಇನ್ನು ದುಬಾರಿ

ಅಧಿಸೂಚನೆಯ ಪ್ರಕಾರ, ವಸತಿ ಉದ್ದೇಶದ ಕನಿಷ್ಠ 150 ಚದರ ಅಡಿ ಪಾರ್ಕಿಂಗ್ ಸ್ಥಳಕ್ಕೆ ವಾರ್ಷಿಕ 600 ರೂಪಾಯಿ ಪಾರ್ಕಿಂಗ್ ತೆರಿಗೆ(ಆರಂಭಿಕ ದರ) (ಚದರ ಅಡಿಗೆ 2 ರೂ.) ವಿಧಿಸಲು ನಿರ್ಧರಿಸಲಾಗಿದೆ. ವಾಣಿಜ್ಯ ಅಥವಾ ವಸತಿಯೇತರ ಉದ್ದೇಶದ ಕನಿಷ್ಠ 150 ಚದರ ಅಡಿ ಪಾರ್ಕಿಂಗ್ ಸ್ಥಳಕ್ಕೆ ವಾರ್ಷಿಕ 1,125 ರೂ. ಪಾರ್ಕಿಂಗ್ ತೆರಿಗೆ(ಆರಂಭಿಕ ದರ) (ಚದರ ಅಡಿಗೆ 3 ರೂ.) ಸಂಗ್ರಹಿಸಲು ಬಿಬಿಎಂಪಿ ಮುಂದಾಗಿದೆ.

ಬೆಂಗಳೂರಿಗರಿಗೆ ಸದ್ಯದಲ್ಲೇ ಇನ್ನೊಂದು ಶಾಕ್‌, ಪಾರ್ಕಿಂಗ್‌ ಇನ್ನು ದುಬಾರಿ

ಸಾಂದರ್ಭಿಕ ಚಿತ್ರ

ಹರೀಶ್‌ ಕೇರ ಹರೀಶ್‌ ಕೇರ Apr 2, 2025 8:01 AM

ಬೆಂಗಳೂರು: ಹಾಲು, ವಿದ್ಯುತ್, ಮೆಟ್ರೋ, ಡೀಸೆಲ್ ದರ ಏರಿಕೆಯಿಂದ (Price hike) ತತ್ತರಿಸಿರುವ ಜನತೆಗೆ ರಾಜ್ಯ ಸರ್ಕಾರ ಮತ್ತೊಂದು ಶಾಕ್ ನೀಡಲು ಮುಂದಾಗಿದೆ. ವಸತಿ ಮತ್ತು ವಸತಿಯೇತರ ಪ್ರದೇಶಗಳ ಪಾರ್ಕಿಂಗ್ ಸ್ಥಳಗಳ ಆಸ್ತಿ ತೆರಿಗೆ (Parking tax) ಪರಿಷ್ಕರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮಂಗಳವಾರ ಕರಡು ಅಧಿಸೂಚನೆ (draft proposal) ಹೊರಡಿಸಿದೆ. ಈ ಅಧಿಸೂಚನೆ ಪ್ರಕಟವಾದ ಏಳು ದಿನಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದೆ.

ಅಧಿಸೂಚನೆಯ ಪ್ರಕಾರ, ವಸತಿ ಉದ್ದೇಶದ ಕನಿಷ್ಠ 150 ಚದರ ಅಡಿ ಪಾರ್ಕಿಂಗ್ ಸ್ಥಳಕ್ಕೆ ವಾರ್ಷಿಕ 600 ರೂಪಾಯಿ ಪಾರ್ಕಿಂಗ್ ತೆರಿಗೆ(ಆರಂಭಿಕ ದರ) (ಚದರ ಅಡಿಗೆ 2 ರೂ.) ವಿಧಿಸಲು ನಿರ್ಧರಿಸಲಾಗಿದೆ. ವಾಣಿಜ್ಯ ಅಥವಾ ವಸತಿಯೇತರ ಉದ್ದೇಶದ ಕನಿಷ್ಠ 150 ಚದರ ಅಡಿ ಪಾರ್ಕಿಂಗ್ ಸ್ಥಳಕ್ಕೆ ವಾರ್ಷಿಕ 1,125 ರೂ. ಪಾರ್ಕಿಂಗ್ ತೆರಿಗೆ(ಆರಂಭಿಕ ದರ) (ಚದರ ಅಡಿಗೆ 3 ರೂ.) ಸಂಗ್ರಹಿಸಲು ಬಿಬಿಎಂಪಿ ಮುಂದಾಗಿದೆ.

ಹಿರಿಯ ಅಧಿಕಾರಿಗಳ ಪ್ರಕಾರ, ಈ ಕ್ರಮದಿಂದ ಪಾಲಿಕೆಗೆ ಗರಿಷ್ಠ 50 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಬರಲಿದೆ. ಆದರೆ ಎಲ್ಲಾ ಪಾರ್ಕಿಂಗ್ ಪ್ರದೇಶದ ಸ್ಲಾಟ್‌ಗಳನ್ನು ತೆರಿಗೆ ವ್ಯಾಪ್ತಿಗೆ ತರುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಹಿಂದೆ ಪಾರ್ಕಿಂಗ್ ಪ್ರದೇಶಗಳ ತೆರಿಗೆ ದರಗಳು ವಲಯವಾರು ಲೆಕ್ಕಾಚಾರವನ್ನು ಆಧರಿಸಿದ್ದವು ಮತ್ತು ಇದು ಅಸಮಾನತೆಗೆ ಕಾರಣವಾಗಿ ಪಾರ್ಕಿಂಗ್ ಸ್ಥಳಗಳ ಮೇಲೆ ಸುಮಾರು ಶೇ. 50 ರಷ್ಟು ತೆರಿಗೆ ಪಾವತಿಸಬೇಕಾಗಿತ್ತು. ಈಗ ಏಕರೂಪ ಮತ್ತು ಪ್ರಮಾಣೀಕೃತ ವ್ಯವಸ್ಥೆಯನ್ನು ತರಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಸ್ತುತ ನಿಯಮದ ಪ್ರಕಾರ, ವಲಯಗಳ ಆಧಾರದ ಮೇಲೆ ವಾಹನ ಪಾರ್ಕಿಂಗ್ ಸ್ಥಳಕ್ಕೆ ತೆರಿಗೆ ವಿಧಿಸಲಾಗುತ್ತಿದ್ದು, ವಲಯ ಎ ಯಲ್ಲಿ ವಾರ್ಷಿಕವಾಗಿ 1,875 ರೂಪಾಯಿ ತೆರಿಗೆ ಇದ್ದರೆ, ವಲಯ ಎಫ್‌ನಲ್ಲಿ 750 ರೂಪಾಯಿ ಇತ್ತು. ಆದರೆ, ಮಾಲ್‌ಗಳಿಗೆ ಇದು ತುಂಬಾ ಹೆಚ್ಚಿತ್ತು. ಮಾಲ್‌ಗಳು ಪ್ರತಿ ವಾಹನ ನಿಲುಗಡೆಗೆ 8 ರೂಪಾಯಿ ತೆರಿಗೆ ಕಟ್ಟುತ್ತಿದ್ದವು. ಈಗ ಅದು 3 ರೂಪಾಯಿಗೆ ಇಳಿಯುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಬಿಎಂಪಿಯ ಉನ್ನತ ಕಂದಾಯ ಅಧಿಕಾರಿಗಳ ಪ್ರಕಾರ, ಪಾರ್ಕಿಂಗ್ ಪ್ರದೇಶಗಳಿಗೆ ಏಕರೂಪ ಮತ್ತು ಪ್ರಮಾಣೀಕೃತ ತೆರಿಗೆ ವ್ಯವಸ್ಥೆಯನ್ನು ತರಬೇಕಾಗಿರುವುದರಿಂದ, ವಸತಿಯೇತರ ಪ್ರದೇಶಗಳಲ್ಲಿ ಪಾರ್ಕಿಂಗ್ ಸ್ಥಳಗಳಿಗೆ ಪ್ರತಿ ಚದರ ಅಡಿಗೆ 13 ರೂ.ಗಳ ಹಿಂದಿನ ದರವನ್ನು ಪರಿಷ್ಕರಿಸಬೇಕಾಗಿದೆ. ಈ ವ್ಯವಸ್ಥೆಯು ಏಕರೂಪತೆಯನ್ನು ತರುತ್ತದೆ ಮತ್ತು ದೀರ್ಘಾವಧಿಯಲ್ಲಿ, ಇದು ಪಾಲಿಕೆ ಹಾಗೂ ಆಸ್ತಿ ಮಾಲೀಕರಿಗೆ ಸಹಾಯ ಮಾಡುತ್ತದೆ ಎಂದಿದ್ದಾರೆ.

ಇದನ್ನೂ ಓದಿ: BBMP Budget 2025: ಬಿಬಿಎಂಪಿ ಬಜೆಟ್‌; ರಾಜಧಾನಿಯಲ್ಲಿನ್ನು ಕಸಕ್ಕೂ ಕರಭಾರ!