ಮಣ್ಣು ಮತ್ತು ನೀರು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ : ಉಪ ಕೃಷಿ ನಿರ್ದೇಶಕ ದೀಪಶ್ರೀ
ಚಿಕ್ಕಬಳ್ಳಾಪುರ ತಾಲ್ಲೂಕಿನ ಗೊಲ್ಲಹಳ್ಳಿ, ಮಂಡಿಕಲ್ ಮತ್ತು ಅಡ್ಡಗಲ್ ಗ್ರಾಮ ಪಂಚಾಯಿತಿಯಲ್ಲಿ ಮಾತ್ರ ಈ ಯೋಜನೆಯನ್ನು ಅನು ಷ್ಠಾನ ಮಾಡಲಾಗುತ್ತಿದೆ. ಮಣ್ಣು ಮತ್ತು ನೀರು ಸಂರಕ್ಷಣೆ ಕಾಮಗಾರಿಗಳ ಜೊತೆಗೆ ರೈತರ ಉಪ ಕಸುಬುಗಳಾದ ಹೈನುಗಾರಿಕೆಯನ್ನು , ಮೀನುಗಾರಿಕೆ, ಸಮಗ್ರ ಕೃಷಿ ಪದ್ದತಿಗಳನ್ನು ಅಳವಡಿಸಿ ಕೊಳ್ಳಲು ತಿಳಿಸಲಾಗುತ್ತಿದೆ
![Yatre](https://cdn-vishwavani-prod.hindverse.com/media/images/Yatre.max-1280x720.jpg)
![Profile](https://vishwavani.news/static/img/user.png)
ಚಿಕ್ಕಬಳ್ಳಾಪುರ: ಮುಂದಿನ ಪೀಳಿಗೆಗೋಸ್ಕರ ಮಣ್ಣು ಮತ್ತು ನೀರು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಮಂಡಿಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಸ್ವಾಮಿ ತಿಳಿಸಿದರು. ತಾಲ್ಲೂಕಿನ ಗುಡಿಸಿಹಳ್ಳಿ ಮತ್ತು ದರಬೂರು ಗ್ರಾಮಗಳಲ್ಲಿ ಕೃಷಿ ಇಲಾಖೆ ಹಮ್ಮಿ ಕೊಂಡಿದ್ದ ಜಲಾನಯನ ಯಾತ್ರೆಯನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಿ ಕಾರ್ಯಕ್ರಮ ಉದ್ಘಾಟಿಸಿ ಉಪ ಕೃಷಿ ನಿರ್ದೇಶಕಿ ದೀಪಶ್ರೀ ಮಾತನಾಡಿದರು. ಉಪ ಕೃಷಿ ನಿರ್ದೇಶಕ ಶ್ರೀಮತಿ ದೀಪಶ್ರೀ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಮೂರು ವರ್ಷಗಳಲ್ಲಿ ಈ ಭಾಗದಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ.
ಈ ಯೋಜನೆಯಲ್ಲಿ ಮಣ್ಣು ಮತ್ತು ನೀರು ಸಂರಕ್ಷಿಸಲು ವಿವಿಧ ನಾಲಾಬದು, ಗೋಕಟ್ಟೆ, ಕಂದಕದೊಂದಿಗೆ ಬದು, ತೋಟಗಾರಿಕೆ ಹಾಗೂ ಅರಣ್ಯೀಕರಣ ಕಾಮಗಾರಿಗಳನ್ನು ಅನುಷ್ಠಾನ ಮಾಡಿ ರೈತರಿಗೆ ಅರಿವು ಮೂಡಿಸಲಾಗಿದೆ ಎಂದರು.
ಇದನ್ನೂ ಓದಿ: Chikkaballapur News: ಚಿಂತಾಮಣಿಯ ಅತಿಥಿ ಉಪನ್ಯಾಸಕ ಎಂ.ನರಸಿಂಹಪ್ಪ ಸಾವು: ಜಿಲ್ಲಾ ಸಂಘ ತೀವ್ರ ಸಂತಾಪ
ಸಹಾಯಕ ಕೃಷಿ ನಿರ್ದೇಶಕ ಮುನಿರಾಜು ಮಾತನಾಡಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಗೊಲ್ಲಹಳ್ಳಿ, ಮಂಡಿಕಲ್ ಮತ್ತು ಅಡ್ಡಗಲ್ ಗ್ರಾಮ ಪಂಚಾಯಿತಿಯಲ್ಲಿ ಮಾತ್ರ ಈ ಯೋಜನೆಯನ್ನು ಅನು ಷ್ಠಾನ ಮಾಡಲಾಗುತ್ತಿದೆ. ಮಣ್ಣು ಮತ್ತು ನೀರು ಸಂರಕ್ಷಣೆ ಕಾಮಗಾರಿಗಳ ಜೊತೆಗೆ ರೈತರ ಉಪ ಕಸುಬುಗಳಾದ ಹೈನುಗಾರಿಕೆಯನ್ನು , ಮೀನುಗಾರಿಕೆ, ಸಮಗ್ರ ಕೃಷಿ ಪದ್ದತಿಗಳನ್ನು ಅಳವಡಿಸಿ ಕೊಳ್ಳಲು ತಿಳಿಸಲಾಗುತ್ತಿದೆ. ಈಗಾಗಲೇ ಇಲ್ಲಿ ಮೇವು ಕತ್ತರಿಸುವ ಯಂತ್ರ, ಹಾಲು ಕರೆಯುವ ಯಂತ್ರ, ರಬ್ಬರ್ ನೆಲಹಾಸು, ಜೇನು ಪೆಟ್ಟಿಗೆ ಹಾಗೂ ಸ್ವಸಹಾಯ ಸಂಘಗಳಿಗೆ ಸುತ್ತುನಿಧಿಯಾಗಿ ಅನುದಾನವನ್ನು ನೀಡಿ ಕೌಶಲ್ಯ ಅಭಿವೃದ್ದಿ ತರಬೇತಿಗಳಾದ ಟೈಲರಿಂಗ್ ಹಾಗೂ ಬ್ಯೂಟಿ ಪಾರ್ಲರ್‌ಗಳನ್ನು ನೀಡಿ ಅವರಿಗೆ ಕೆಲಸ ನಿರ್ವಹಿಸಲು ವಿವಿಧ ಗಾರ್ಮೆಂಟ್ಸ್ಗಳಲ್ಲಿ ಕಾರ್ಯನಿ ರ್ವಹಿಸಲು ಅನುವು ಮಾಡಿಕೊಡಲಾಗುತ್ತಿದೆ ಎಂದರು.
ಪ್ರಗತಿ ಪರ ರೈತ ಮಾಪುಲ್ಲಾಚಾರ್ ಮಾತನಾಡಿ, ನಾವು ಈ ಯೋಜನೆಯಲ್ಲಿ ಈಗಾಗಲೇ ಗೋಕಟ್ಟೆ, ತೋಗಾರಿಕೆ ಗಿಡ ಹಾಗೂ ಅರಣ್ಯ ಗಿಡಗಳನ್ನು ಪಡೆದು ನಾಟಿ ಮಾಡಲಾಗಿದೆ ಎಂದು ಎಲ್ಲರೂ ಇಂತಹ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ನಮ್ಮ ಮುಂದಿನ ಪೀಳಿಗೆಗೆ ಶುದ್ದವಾದ ನೀರು ಮತ್ತು ಶುದ್ದವಾದ ಗಾಳಿ ನೀಡಬೇಕೆಂದು ಕರೆ ಕೊಟ್ಟರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ತರಬೇತಿ ಸಂಯೋಜಕ ಶ್ರೀ ಈಶ್ವರಯ್ಯ ಜಲ ಮತ್ತು ಭೂಮಿ ಸಂರಕ್ಷಣೆ ಬಗ್ಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ನಂತರ ರಸ ಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದ ಶಾಲಾಮಕ್ಕಳಿಗೆ, ಪ್ರಗತಿ ಪರ ರೈತರಿಗೆ , ರೈತ ಉತ್ಪಾದಕ ಸಂಸ್ಥೆ, ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ, ಸಮಗ್ರ ಕೃಷಿ ಪದ್ದತಿ ಅಳವಡಿಸಿರುವ ರೈತರಿಗೆ, ಮಾರ್ಗದರ್ಶಕ ಸ್ವಯಂ ಸೇವಾ ಸಂಸ್ಥೆರವರಿಗೆ ಸನ್ಮಾನಿಸಲಾಯಿತು. ಭೂಮಿ ತಾಯಿಯ ಹೆಸರಿಲ್ಲಿ ಸಸಿಗಳನ್ನು ನೆಡಲಾಯಿತು. ಹಾಗೆಯೇ ಶ್ರಮದಾನವನ್ನು ಕೈಗೊಂಡು ಜಲಾನಯನ ಕಿರು ಚಿತ್ರ ವನ್ನು ವೀಕ್ಷಿಸಲಾಯಿತು.
ಗ್ರಾಮ ಪಂಚಾಯಿತಿ ಆಭಿವೃದ್ದಿ ಅಧಿಕಾರಿಗಳಾದ ಶ್ರೀ ಶಿವಾನಂದ, ಉಪಾಧ್ಯಕ್ಷರು, ಸದಸ್ಯರು , ಸ್ವಸಹಾಯ ಸಂಘಗಳ ಸದಸ್ಯರು, ಬಳಕೆದಾರರ ಸಂಘಗಳ ಸದಸ್ಯರು, ಜಲಾನಯನ ಸಮಿತಿ ಸದಸ್ಯರು, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.