ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MS Dhoni: ಧೋನಿ ಬ್ಯಾಟಿಂಗ್‌ ಕ್ರಮಾಂಕದ ಬಗ್ಗೆ ಶಾಕಿಂಗ್ ಮಾಹಿತಿ ನೀಡಿದ ಕೋಚ್ ಫ್ಲೆಮಿಂಗ್

IPL 2025: ಧೋನಿ ಕೀಪಿಂಗ್‌ ಜತೆಗೆ 10 ಓವರ್‌ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ. ಆಯಾ ದಿನದ ಪರಿಸ್ಥಿತಿಗೆ ಅನುಗುಣವಾಗಿ ಧೋನಿ ತಮ್ಮ ಕ್ರಮಾಂಕದ ಕುರಿತು ನಿರ್ಣಯಿಸುತ್ತಾರೆ. ಅವರು ಶ್ರೇಷ್ಠ ಆಟಗಾರ. ಅದರಲ್ಲಿ ಎಂದಿಗೂ ಅನುಮಾನವಿಲ್ಲ ಎಂದು ಫ್ಲೆಮಿಂಗ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಧೋನಿ ಬ್ಯಾಟಿಂಗ್‌ ಬಗ್ಗೆ ಶಾಕಿಂಗ್ ಮಾಹಿತಿ ನೀಡಿದ ಕೋಚ್ ಫ್ಲೆಮಿಂಗ್

Profile Abhilash BC Mar 31, 2025 5:59 PM

ಮುಂಬಯಿ: ಹಾಲಿ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಡಿದ ಮೂರು ಪಂದ್ಯಗಳ ಪೈಕಿ ಎರಡು ಪಂದ್ಯಗಳನ್ನು ಸೋತಿದೆ. ತಂಡದ ಸೋಲಿಗೆ ಮಹೇಂದ್ರ ಸಿಂಗ್‌ ಧೋನಿಯ ಬ್ಯಾಟಿಂಗ್‌ ಕ್ರಮಾಂಕವೇ ಮುಖ್ಯ ಕಾರಣ ಎಂದು ಸ್ವತಃ ಚೆನ್ನೈ ಅಭಿಮಾನಿಗಳೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಧೋನಿ ಬ್ಯಾಟಿಂಗ್‌ ಕ್ರಮಾಂಕದ ಬಗ್ಗೆ ತಂಡದ ಕೋಚ್‌ ಸ್ಟೀಫನ್ ಫ್ಲೆಮಿಂಗ್ ಸ್ಪಷ್ಟನೆ ನೀಡಿದ್ದು ಧೋನಿ ಮ್ಯಾಚ್‌ ಫಿನಿಶರ್ ಅಲ್ಲ ಎಂದಿದ್ದಾರೆ.

ಕಳೆದ ವಾರ ಚೆನ್ನೈಯಲ್ಲಿ ನಡೆದಿದ್ದ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ತಂಡ ಸಂಕಷ್ಟದಲ್ಲಿದ್ದಾಗಲೂ ಧೋನಿ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಧೋನಿಯ ಈ ನಿರ್ಧಾರಕ್ಕೆ ವ್ಯಾಪಕ ಟೀಕೆ ಎದುರಾಗಿತ್ತು. ಭಾನುವಾರ ನಡೆದಿದ್ದ ರಾಜಸ್ಥಾನ್‌ ಎದುರಿನ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದರು.

ಪಂದ್ಯ ಮುಕ್ತಾಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೋಚ್ ಸ್ಟೀಫನ್ ಫ್ಲೆಮಿಂಗ್, 'ನಾನು ಕಳೆದ ವರ್ಷವೇ ಹೇಳಿದ್ದೆ, ಧೋನಿ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದಾರೆ ಎಂದು. ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರ. ಅವರು ಯಾವ ಕ್ರಮಾಂಕದಲ್ಲಿ ಆಡಬೇಕು ಎಂಬುದನ್ನು ಅವರೇ ನಿರ್ಧರಿಸುತ್ತಾರೆ. ಅವರ ದೇಹ ಪರಿಸ್ಥಿತಿ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿದೆ' ಎಂದು ಹೇಳಿದರು.



ಇದನ್ನೂ ಓದಿ IPL 2025: ಪಂದ್ಯ ಗೆದ್ದರೂ ದಂಡಕ್ಕೆ ಗುರಿಯಾದ ರಾಜಸ್ಥಾನ್‌ ನಾಯಕ

'ಧೋನಿ ಕೀಪಿಂಗ್‌ ಜತೆಗೆ 10 ಓವರ್‌ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ. ಆಯಾ ದಿನದ ಪರಿಸ್ಥಿತಿಗೆ ಅನುಗುಣವಾಗಿ ಧೋನಿ ತಮ್ಮ ಕ್ರಮಾಂಕದ ಕುರಿತು ನಿರ್ಣಯಿಸುತ್ತಾರೆ. ಅವರು ಶ್ರೇಷ್ಠ ಆಟಗಾರ. ಅದರಲ್ಲಿ ಎಂದಿಗೂ ಅನುಮಾನವಿಲ್ಲ ಎಂದು ಫ್ಲೆಮಿಂಗ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.