ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MS Dhoni: ಆರ್‌ಸಿಬಿ ವಿರುದ್ಧ ಸೋತರೂ ದಾಖಲೆ ಬರೆದ ಧೋನಿ

RCB vs CSK: ಬ್ಯಾಟಿಂಗ್‌ ಮಾತ್ರವಲ್ಲದೆ ಕೀಪಿಂಗ್‌ನಲ್ಲಿಯೂ ಮಿಂಚಿದ ಧೋನಿ ಫಿಲ್‌ ಸಾಲ್ಟ್‌ ಅವರನ್ನು ಕೇವಲ 0.16 ಸೆಕೆಂಡ್‌ಗಳಲ್ಲಿ ಸ್ಟಂಪಿಂಗ್‌ ಮಾಡುವ ಮೂಲಕ ನಿಬ್ಬೆರಗಾಗಿಸಿದರು. ಇದನ್ನೂ ಮುನ್ನ ಮುಂಬೈ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್‌ ಅವರನ್ನು 0.12 ಸೆಕೆಂಡ್‌ಗಳಲ್ಲಿ ಸ್ಟಂಪಿಂಗ್‌ ಮಾಡಿದ್ದರು.

ಆರ್‌ಸಿಬಿ ವಿರುದ್ಧ ಸೋತರೂ ದಾಖಲೆ ಬರೆದ ಧೋನಿ

Profile Abhilash BC Mar 29, 2025 8:51 AM

ಚೆನ್ನೈ: ಶುಕ್ರವಾರ ನಡೆದ ಐಪಿಎಲ್‌(IPL 2025) ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಆರ್‌ಸಿಬಿ(RCB vs CSK) ವಿರುದ್ಧ 50 ರನ್‌ ಅಂತರದ ಸೋಲು ಕಂಡಿತು. ಚೆನ್ನೈ ಸೋತರೂ ಕೂಡ ಮಹೇಂದ್ರ ಸಿಂಗ್‌ ಧೋನಿ(MS Dhoni) ದಾಖಲೆಯೊಂದನ್ನು ಬರೆದರು. ಕೆಳ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್‌ ನಡೆಸಿದ ಧೋನಿ 16 ಎಸೆತಗಳಲ್ಲಿ ಅಜೇಯ 30 ರನ್‌ ಬಾರಿಸಿದರು.

ಧೋನಿ 30 ರನ್‌ ಬಾರಿಸುವ ಮೂಲಕ ಚೆನ್ನೈ ಪರ ಅತ್ಯಧಿಕ ರನ್‌ ಗಳಿಸಿ ಮೊದಲ ಆಟಗಾರ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಸುರೇಶ್‌ ರೈನಾ(4687) ಹೆಸರಿನಲ್ಲಿತ್ತು. ಇದೀಗ ಧೋನಿ ಚೆನ್ನೈ ಪರ 204 ಇನಿಂಗ್ಸ್‌ ಆಡಿ 4699* ರನ್‌ ಬಾರಿಸುವ ಮೂಲಕ ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.

ಬ್ಯಾಟಿಂಗ್‌ ಮಾತ್ರವಲ್ಲದೆ ಕೀಪಿಂಗ್‌ನಲ್ಲಿಯೂ ಮಿಂಚಿದ ಧೋನಿ ಫಿಲ್‌ ಸಾಲ್ಟ್‌ ಅವರನ್ನು ಕೇವಲ 0.16 ಸೆಕೆಂಡ್‌ಗಳಲ್ಲಿ ಸ್ಟಂಪಿಂಗ್‌ ಮಾಡುವ ಮೂಲಕ ನಿಬ್ಬೆರಗಾಗಿಸಿದರು. ಇದನ್ನೂ ಮುನ್ನ ಮುಂಬೈ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್‌ ಅವರನ್ನು 0.12 ಸೆಕೆಂಡ್‌ಗಳಲ್ಲಿ ಸ್ಟಂಪಿಂಗ್‌ ಮಾಡಿದ್ದರು.

ಚೆನ್ನೈ ಪರ ಅತ್ಯಧಿಕ ರನ್‌ ಬಾರಿಸಿದ ಆಟಗಾರರು

ಎಂ.ಎಸ್‌ ಧೋನಿ- 4699 ರನ್‌

ಸುರೇಶ್‌ ರೈನಾ- 4687 ರನ್‌

ಫಾಫ್‌ ಡು ಪ್ಲೆಸಿಸ್‌- 2721 ರನ್‌

ಋತುರಾಜ್‌ ಗಾಯಕ್ವಾಡ್‌- 2433 ರನ್‌

ರವೀಂದ್ರ ಜಡೇಜಾ-1939 ರನ್‌

ಇದನ್ನೂ ಓದಿ RCB vs CSK: 17 ವರ್ಷಗಳ ಬಳಿಕ ಚೆಪಾಕ್‌ನಲ್ಲಿ ಚೆನ್ನೈ ವಿರುದ್ಧ ಗೆದ್ದು ಇತಿಹಾಸ ಬರೆದ ಆರ್‌ಸಿಬಿ!



ಪಂದ್ಯದ ಬಗ್ಗೆ ಹೇಳುವುದಾದರೆ, ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ ನಾಯಕ ರಜತ್‌ ಪಾಟಿದಾರ್‌ ಅವರ ಅರ್ಧ ಶತಕ ಮತ್ತು ಫಿಲ್‌ ಸಾಲ್ಟ್, ಟಿಮ್‌ ಡೇವಿಡ್‌ ಅವರ ಬಿರುಸಿನ ಬ್ಯಾಟಿಂಗ್‌ ನೆರವಿನಿಂದ 7 ವಿಕೆಟಿಗೆ 196 ರನ್‌ ಪೇರಿಸಿತು. ಗುರಿ ಬೆನ್ನಟ್ಟಿದ ಚೆನ್ನೈ ತಂಡ ನಾಟಕೀಯ ಕುಸಿತದೊಂದಿಗೆ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 146 ರನ್ ಮಾತ್ರ ಗಳಿಸಲು ಶಕ್ತವಾಗಿ ಸೋಲು ಕಂಡಿತು. ಇದು ಚೆನ್ನೈಗೆ ತವರಿನಲ್ಲಿ 17 ವರ್ಷಗಳ ಬಳಿಕ ಆರ್‌ಸಿಬಿ ವಿರುದ್ಧ ಎದುರಾದ 2ನೇ ಸೋಲು.