ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

IND vs NZ: ಸಿಕ್ಸರ್‌ಗಳ ವಿಶ್ವ ದಾಖಲೆ ಬರೆಯುವ ಸನಿಹದಲ್ಲಿ ರೋಹಿತ್‌ ಶರ್ಮಾ!

Rohit Sharma need 11 sixes: ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ನೂತನ ಮೈಲುಗಲ್ಲು ಸ್ಥಾಪಿಸಿವ ಸನಿಹದಲ್ಲಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಳ್ಳಲು ರೋಹಿತ್‌ ಶರ್ಮಾಗೆ ಕೇವಲ 11 ಸಿಕ್ಸರ್‌ಗಳ ಅಗತ್ಯವಿದೆ.

ಶಾಹಿದ್‌ ಅಫ್ರಿದಿ ದಾಖಲೆ ಮುರಿಯಲು ರೋಹಿತ್‌ ಶರ್ಮಾಗೆ 11 ಸಿಕ್ಸರ್‌ ಅಗತ್ಯ!

ಸಿಕ್ಸರ್‌ ದಾಖಲೆ ಸನಿಹದಲ್ಲಿ ರೋಹಿತ್‌ ಶರ್ಮಾ.

Profile Ramesh Kote Feb 26, 2025 2:08 PM

ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡ ತನ್ನ ಆರಂಭಿಕ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ. ಇದೀಗ ಭಾರತ ತಂಡ, ಮಾರ್ಚ್‌ 2 ರಂದು ದುಬೈ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಕಾದಾಟ ನಡೆಸಲಿದೆ. ಅಂದ ಹಾಗೆ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಅವರು ಸಿಕ್ಸರ್‌ಗಳ ವಿಶೇಷ ದಾಖಲೆಯ ಸನಿಹದಲ್ಲಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ಉತ್ತಮ ಆರಂಭ ಪಡೆದಿದ್ದರ ಹೊರತಾಗಿಯೂ ರೋಹಿತ್‌ ಶರ್ಮಾ ಅವುಗಳನ್ನು ದೊಡ್ಡ ಇನಿಂಗ್ಸ್‌ಗಳಿಗೆ ಪರಿವರ್ತಿಸುವಲ್ಲಿ ವಿಫಲರಾಗಿದ್ದರು.

ಸ್ನಾಯು ಸೆಳೆತದ ಗಾಯದಿಂದ ಗುಣಮುಖರಾಗುತ್ತಿರುವ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ, ನ್ಯೂಜಿಲೆಂಡ್‌ ವಿರುದ್ಧ ದೀರ್ಘಾವಧಿ ಬ್ಯಾಟ್‌ ಮಾಡಿದರೆ ರನ್‌ ಹೊಳೆ ಹರಿಸಬಹುದು. ಅಲ್ಲದೆ ಅವರು ಏಕದಿನ ಕ್ರಿಕೆಟ್‌ನಲ್ಲಿ ದೊಡ್ಡ ದಾಖಲೆಯ ಸನಿಹದಲ್ಲಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್‌ ಶರ್ಮಾ 339 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇನ್ನು 11 ಸಿಕ್ಸರ್‌ಗಳನ್ನು ಸಿಡಿಸಿದರೆ, ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 350 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ ಬರೆಯಲಿದ್ದಾರೆ.

IND vs PAK: 20 ರನ್‌ಗೆ ಔಟಾದರೂ ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ರೋಹಿತ್‌ ಶರ್ಮಾ!

ಶಾಹಿದ್‌ ಅಫ್ರಿದಿ ದಾಖಲೆಯ ಸನಿಹದಲ್ಲಿ ಹಿಟ್‌ಮ್ಯಾನ್‌

ಇನ್ನು ತಮ್ಮ 350 ಸಿಕ್ಸರ್‌ಗಳ ಜೊತೆಗೆ ಹೆಚ್ಚುವರಿಯಾಗಿ ಎರಡು ಸಿಕ್ಸರ್‌ ಬಾರಿಸಿದರೆ, ಪಾಕಿಸ್ತಾನ ತಂಡದ ಮಾಜಿ ನಾಯಕ ಶಾಹಿದ್‌ ಅಫ್ರಿದಿ (351 ಸಿಕ್ಸರ್‌ಗಳು) ಅವರ ಸಿಕ್ಸರ್‌ಗಳ ದಾಖಲೆಯನ್ನು ರೋಹಿತ್‌ ಶರ್ಮಾ ಮುರಿಯಬಹುದು. ಆ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಳ್ಳಲಿದ್ದಾರೆ ರೋಹಿತ್‌ ಶರ್ಮಾ ಶರ್ಮಾ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಬ್ಯಾಟ್ಸ್‌ಮನ್‌ ಎಂಬ ದಾಖಲೆ ಈಗಾಗಲೇ ರೋಹಿತ್‌ ಶರ್ಮಾ (632 ಸಿಕ್ಸರ್‌) ಅವರ ಹೆಸರಿನಲ್ಲಿದೆ.

ಅತಿ ಹೆಚ್ಚು ಒಡಿಐ ಸಿಕ್ಸರ್‌ ಬಾರಿಸಿದ ಬ್ಯಾಟರ್ಸ್‌

ಶಾಹಿದ್‌ ಅಫ್ರಿದಿ: 351 ಸಿಕ್ಸರ್‌(369 ಇನಿಂಗ್ಸ್‌ಗಳು, 398 ಪಂದ್ಯಗಳು)

ರೋಹಿತ್‌ ಶರ್ಮಾ: 339 ಸಿಕ್ಸರ್‌ (262 ಇನಿಂಗ್ಸ್‌, 270 ಪಂದ್ಯಗಳು)

ಕ್ರಿಸ್‌ ಗೇಲ್‌: 331 ಸಿಕ್ಸರ್‌ (294 ಇನಿಂಗ್ಸ್‌, 301 ಪಂದ್ಯಗಳು)

ಸನತ್‌ ಜಯಸೂರ್ಯ: 270 ಸಿಕ್ಸರ್‌ (433 ಇನಿಂಗ್ಸ್‌ಗಳು, 445 ಪಂದ್ಯಗಳು)

ಎಂಎಸ್‌ ಧೋನಿ: 229 ಸಿಕ್ಸರ್‌ಗಳು (297 ಇನಿಂಗ್ಸ್‌, 350 ಪಂದ್ಯಗಳು)

IND vs NZ: ರೋಹಿತ್‌ ಶರ್ಮಾ ಔಟ್‌? ಕಿವೀಸ್‌ ಪಂದ್ಯಕ್ಕೆ ಭಾರತ ತಂಡದಲ್ಲಿ 2 ಬದಲಾವಣೆ ನಿರೀಕ್ಷೆ!

11000 ರನ್‌ ಪೂರ್ಣಗೊಳಿಸಿದ್ದ ಹಿಟ್‌ಮ್ಯಾನ್‌

ರೋಹಿತ್‌ ಶರ್ಮಾ ಇತ್ತೀಚೆಗೆ ಏಕದಿನ ಕ್ರಿಕೆಟ್‌ನಲ್ಲಿ 11000 ರನ್‌ಗಳನ್ನು ಪೂರ್ಣಗೊಳಿಸಿದ್ದರು. ಆ ಮೂಲಕ ವೇಗವಾಗಿ 11 ಸಾವಿರ ಏಕದಿನ ರನ್‌ಗಳನ್ನು ಪೂರ್ಣಗೊಳಿಸಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದರು. 261ನೇ ಇನಿಂಗ್ಸ್‌ನಲ್ಲಿ ರೋಹಿತ್‌ ಶರ್ಮಾ ಈ ಸಾಧನೆ ಮಾಡಿದ್ದರು. ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರು 222 ಇನಿಂಗ್ಸ್‌ಗಳಿಂದ 11000 ರನ್‌ಗಳನ್ನು ಪೂರ್ಣಗೊಳಿಸಿದ್ದರು. ಆ ಮೂಲಕ ಸಚಿನ್‌ ಎರಡನೇ ಬ್ಯಾಟ್ಸ್‌ಮನ್‌ ಆಗಿದ್ದಾರೆ.