ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

ENG vs AFG: ಜೋ ರೂಟ್‌ಗೆ 24 ರನ್‌, ಜೋಫ್ರಾ ಆರ್ಚರ್‌ಗೆ 20 ರನ್‌ ಬಾರಿಸಿದ ಆಫ್ಘನ್‌ ಬ್ಯಾಟರ್ಸ್‌!

ಪ್ರಸ್ತುತ ನಡೆಯುತ್ತಿರುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಎಂಟನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ ತಂಡದ ಆಲ್‌ರೌಂಡರ್ ಮೊಹಮ್ಮದ್ ನಬಿ ಸಂಚಲನ ಮೂಡಿಸಿದರು. ಜೋ ರೂಟ್ ಅವರ 47ನೇ ಓವರ್‌ನ ಮೊದಲ ಮೂರು ಎಸೆತಗಳಲ್ಲಿ 2 ಸಿಕ್ಸರ್‌ಗಳು ಮತ್ತು ಒಂದು ಬೌಂಡರಿ ಬಾರಿಸಿದರು.

ಜೋ ರೂಟ್‌ಗೆ ಬೆವರಿಳಿಸಿದ ನಬಿ, ಆರ್ಚರ್‌ಗೆ ಬೆಂಡೆತ್ತಿದ ಝದ್ರಾನ್‌!

ಮೊಹಮ್ಮದ್‌ ನಬಿ, ಇಬ್ರಾಹಿಂ ಝದ್ರಾನ್‌

Profile Ramesh Kote Feb 26, 2025 7:47 PM

ಲಾಹೋರ್‌: ಪ್ರಸ್ತುತ ನಡೆಯುತ್ತಿರುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಎಂಟನೇ ಪಂದ್ಯದಲ್ಲಿ ಅಫ್ಘಾನಿಸ್ತಾನದ ಬ್ಯಾಟ್ಸ್‌ಮನ್‌ಗಳು ತೀವ್ರ ಸಂಚಲನ ಮೂಡಿಸಿದ್ದಾರೆ. ವಿಶೇಷವಾಗಿ ಇಬ್ರಾಹಿಂ ಝದ್ರಾನ್‌ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ 177 ರನ್‌ಗಳನ್ನು ಸಿಡಿಸಿ ಹಲವು ದಾಖಲೆಗಳನ್ನು ಪುಡಿ-ಪುಡಿ ಮಾಡಿದರು. ಕೊನೆಯ ಹಂತದಲ್ಲಿ ಇವರ ಜೊತೆ ಸೇರಿದ್ದ ಆಲ್‌ರೌಂಡರ್‌ ಮೊಹಮ್ಮದ್ ನಬಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಪಂದ್ಯದ ಗತಿಯನ್ನು ಬದಲಾಯಿಸಿದರು.

ಇವರು ಆಡಿದ್ದ ಕೇವಲ 24 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ ಎರಡು ಬೌಂಡರಿಗಳೊಂದಿಗೆ 40 ರನ್‌ಗಳನ್ನು ಚಚ್ಚಿದರು. ಅಷ್ಟೇ ಅಲ್ಲದೆ ಡೆತ್‌ ಓವರ್‌ಗಳಲ್ಲಿ ಮೊಹಮ್ಮದ್‌ ನಬಿ, ಇಂಗ್ಲೆಂಡ್‌ನ ಜೋ ರೂಟ್ ಅವರ ಬೌಲಿಂಗ್‌ನಲ್ಲಿ ಅಬ್ಬರಿಸಿದ್ದರು. ಪಂದ್ಯದ 47ನೇ ಓವರ್ ಎಸೆಯಲು ಬಂದ ಜೋ ರೂಟ್‌ಗೆ ಮೊಹಮ್ಮದ್‌ ನಬಿ ಮತ್ತು ಇಬ್ರಾಹಿಂ ಝದ್ರಾನ್‌ ಸ್ಪೋಟಕ ಬ್ಯಾಟಿಂಗ್‌ ಮೂಲಕ ಚಳಿ ಬಿಡಿಸಿದರು.

ENG vs AFG: ಇಂಗ್ಲೆಂಡ್‌ ವಿರುದ್ದ 177 ರನ್‌ ಸಿಡಿಸಿ ಹಲವು ದಾಖಲೆಗಳನ್ನು ಮುರಿದ ಇಬ್ರಾಹಿಂ ಝದ್ರಾನ್‌!

ಸತತ ಮೂರು ಎಸೆತಗಳಲ್ಲಿ ಕ್ರಮವಾಗಿ ಎರಡು ಸಿಕ್ಸರ್‌ ಹಾಗೂ ಬೌಂಡರಿ ಬಾರಿಸಿದ ನಬಿ, ನಾಲ್ಕನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡು ಇಬ್ರಾಹಿಂ ಝದ್ರಾನ್‌ಗೆ ಸ್ಟ್ರೈಕ್ ಬಿಟ್ಟು ಕೊಟ್ಟರು. ಅಫ್ಘಾನಿಸ್ತಾನ ಪರ ಶತಕ ಗಳಿಸಿದ ಇಬ್ರಾಹಿಂ ಝದ್ರಾನ್‌ ಕೂಡ ಜೋ ರೂಟ್ ವಿರುದ್ಧ 5ನೇ ಎಸೆತದಲ್ಲಿ ಬೌಂಡರಿ ಹಾಗೂ ಕೊನೆಯ ಎಸೆತದಲ್ಲಿ 2 ರನ್‌ಗಳನ್ನು ಪಡೆದರು.

ಇಬ್ರಾಹಿಂ ಝದ್ರಾನ್‌ ಬಳಿಕ ಮೊಹಮ್ಮದ್‌ ನಬಿ ಕೂಡ ನಿರ್ಣಾಯಕ ರನ್‌ಗಳನ್ನು ಸಿಡಿಸಿದರು. ಡೆತ್‌ ಓವರ್‌ಗಳಲ್ಲಿ ನಬಿ ಆಟದ ಬಲದಿಂದ ಅಫ್ಘಾನಿಸ್ತಾನ ತಂಡ, ತನ್ನ ಪಾಲಿನ 50 ಓವರ್‌ಗಳಿಗೆ 7 ವಿಕೆಟ್‌ ನಷ್ಟಕ್ಕೆ325 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಇಂಗ್ಲೆಂಡ್‌ ತಂಡಕ್ಕೆ 326 ರನ್‌ಗಳ ಬೃಹತ್ ಗುರಿಯನ್ನು ನೀಡಲಾಯಿತು.



ದಾಖಲೆಯ ಇನಿಂಗ್ಸ್‌ ಆಡಿಸಿದ ಇಬ್ರಾಹಿಂ ಝದ್ರಾನ್‌

ಅಫ್ಘಾನಿಸ್ತಾನ ತಂಡ ಪರ ಇನಿಂಗ್ಸ್‌ನವೊಂದಕ್ಕೂ ಎಲ್ಲರ ಗಮನ ಸೆಳೆದಿದ್ದು, ಇಬ್ರಾಹಿಂ ಝದ್ರಾನ್‌ರ ಅಬ್ಬರದ ಬ್ಯಾಟಿಂಗ್‌. ಅವರು ಆಡಿದ 146 ಎಸೆತಗಳಲ್ಲಿ 12 ಬೌಂಡರಿ ಮತ್ತು 6 ಸಿಕ್ಸರ್‌ಗಳೊಂದಿಗೆ ದಾಖಲೆಯ 177 ರನ್ ಗಳಿಸಿದರು. ಇದು ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಇತಿಹಾಸದಲ್ಲಿಯೇ ಅತ್ಯಂತ ಗರಿಷ್ಠ ಮೊತ್ತ ಇದಾಯಿತು. ಆ ಮೂಲಕ ಇಂಗ್ಲೆಂಡ್‌ನ ಬೆನ್ ಡಕೆಟ್ ಅವರ 165 ರನ್‌ಗಳ ದಾಖಲೆಯನ್ನು ಮುರಿದರು.



ಜೋಫ್ರಾ ಆರ್ಚರ್‌ಗೆ 20 ರನ್‌ ಸಿಡಿಸಿದ ಇಬ್ರಾಹಿಂ ಝದ್ರಾನ್‌

ವಿಶ್ವದ ಶ್ರೇಷ್ಠ ವೇಗಿಗಳಲ್ಲಿ ಒಬ್ಬರಾಗಿರುವ ಜೋಫ್ರಾ ಆರ್ಚರ್‌ ಅವರ ಬೌಲಿಂಗ್‌ಗೆ ಸಿಕ್ಸರ್‌ ಹಾಗೂ ಬೌಂಡರಿಗಳನ್ನು ನಿರಂತರವಾಗಿ ಸಿಡಿಸುವುದು ಕಷ್ಟ ಸಾಧ್ಯ. ಹೀಗಿರುವಾಗ ಇಬ್ರಾಹಿಂ ಝದ್ರಾನ್‌ ಮುಲಾಜಿಲ್ಲದೆ ಜೋಫ್ರಾ ಆರ್ಚರ್‌ಗೆ ಬೌಂಡರಿ-ಸಿಕ್ಸರ್‌ಗಳನ್ನು ಬಾರಿಸಿದರು. ಪಂದ್ಯದ 44ನೇ ಓವರ್‌ನಲ್ಲಿ ಆರ್ಚರ್‌ಗೆ ಆಫ್ಘನ್‌ ಬ್ಯಾಟರ್‌, ಒಂದು ಸಿಕ್ಸರ್‌ ಹಾಗೂ ಮೂರು ಬೌಂಡರಿಗಳು ಸೇರಿದಂತೆ ಒಟ್ಟು 20 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಇಂಗ್ಲೆಂಡ್‌ ವೇಗಿಗೆ ನಡುಕು ಉಂಟು ಮಾಡಿದರು.