ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕೊಹ್ಲಿ or ರೋಹಿತ್‌ ಅಲ್ಲವೇ ಅಲ್ಲ! ತಮ್ಮ ಕನಸಿನ ತಂಡಕ್ಕೆ ನಾಲ್ವರು ದಿಗ್ಗಜರನ್ನು ಆರಿಸಿದ ಎಂಎಸ್‌ ಧೋನಿ!

MS Dhoniʼs All-Time Dream Team: ಭಾರತ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ಸಾರ್ವಕಾಲಿಕ ಕನಸಿನ ತಂಡದಲ್ಲಿ ನಾಲ್ವರು ಭಾರತೀಯ ದಿಗ್ಗಜರಿಗೆ ಅವಕಾಶವನ್ನು ನೀಡಿದ್ದಾರೆ. ಆದರೆ, ಟೀಮ್‌ ಇಂಡಿಯಾದ ಹಾಲಿ ಸ್ಟಾರ್‌ಗಳಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮ ಅವರನ್ನು ಕಡೆಗಣಿಸಿದ್ದಾರೆ.

ತಮ್ಮ ಕನಸಿನ ತಂಡದಲ್ಲಿ ನಾಲ್ವರು ದಿಗ್ಗಜರಿಗೆ ಸ್ಥಾನ ನೀಡಿದ ಎಂಎಸ್‌ ಧೋನಿ!

ತಮ್ಮ ಸಾರ್ವಕಾಲಿಕ ತಂಡಕ್ಕೆ ನಾಲ್ವರು ದಿಗ್ಗಜರನ್ನು ಆರಿಸಿದ ಎಂಎಸ್‌ ಧೋನಿ.

Profile Ramesh Kote Apr 7, 2025 5:54 PM

ನವದೆಹಲಿ: ಭಾರತೀಯ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ನಾಯಕ ಹಾಗೂ ವಿಕೆಟ್‌ ಕೀಪರ್‌ ಎಂಎಸ್‌ ಧೋನಿ (MS Dhoni) ಅವರು ತಮ್ಮ ಸಾರ್ವಕಾಲಿಕ ಕನಸಿನ ತಂಡಕ್ಕೆ ನಾಲ್ವರು ದಿಗ್ಗಜರನ್ನು ಆರಿಸಿದ್ದಾರೆ. ಆದರೆ, ಟೀಮ್‌ ಇಂಡಿಯಾದ (Indian Cricket Team) ಈಗಿನ ಸ್ಟಾರ್‌ ಆಟಗಾರರಾದ ವಿರಾಟ್‌ ಕೊಹ್ಲಿ(Virat Kohli) ಹಾಗೂ ರೋಹಿತ್‌ ಶರ್ಮಾ ಅವರನ್ನು ಕಡೆಗಣಿಸಿದ್ದಾರೆ. ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದಲ್ಲಿ ಎಂಎಸ್‌ ಧೋನಿ, ಹಲವು ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಜೊತೆ ಆಡಿದ್ದಾರೆ. ಸೌರವ್‌ ಗಂಗೂಲಿ, ರಾಹುಲ್‌ ದ್ರಾವಿಡ್‌, ಸಚಿನ್‌ ತೆಂಡೂಲ್ಕರ್‌, ವೀರೇಂದ್ರ ಸೆಹ್ವಾಗ್‌, ಅನಿಲ್‌ ಕುಂಬ್ಳೆ, ಹರ್ಭಜನ್‌ ಸಿಂಗ್‌ ಸೇರಿದಂತೆ ಭಾರತೀಯ ಕ್ರಿಕೆಟ್‌ನ ದಂತಕತೆಗಳ ಜೊತೆ ಎಂಎಸ್‌ ಧೋನಿ ಡ್ರೆಸ್ಸಿಂಗ್‌ ರೂಂ ಅನ್ನು ಹಂಚಿಕೊಂಡಿದ್ದಾರೆ. ಆಧುನಿಕ ಕ್ರಿಕೆಟ್‌ ದಿಗ್ಗಜರಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರ ಜತೆ ಕೂಡ ಧೋನಿ ಕ್ರಿಕೆಟ್‌ ಆಡಿದ್ದಾರೆ.

ರಾಜ್‌ ಶಮಾನಿ ಅವರ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ ಎಂಎಸ್‌ ಧೋನಿಗೆ ತಮ್ಮ ಸಾರ್ವಕಾಲಿಕ ಕನಸಿನ ತಂಡದ ಅಗ್ರ ಕ್ರಮಾಂಕಕ್ಕೆ ವೀರೇಂದ್ರ ಸೆಹ್ವಾಗ್‌, ಸಚಿನ್‌ ತೆಂಡೂಲ್ಕರ್‌ ಹಾಗೂ ಸೌರವ್‌ ಗಂಗೂಲಿ ಅವರನ್ನು ಆಯ್ಕೆ ಮಾಡುತ್ತೇನೆಂದು ಹೇಳಿದ್ದಾರೆ. ಯಾರಾದರೂ ಅವರನ್ನು ನೋಡಿದರೆ, ಇಬರಿಗೆ ಅತ್ಯುತ್ತಮ ಬೇರೆ ಆಟಗಾರರು ಇಲ್ಲ ಎಂಬ ಭಾವನೆ ಮೂಡುತ್ತದೆ ಎಂದು ತಿಳಿಸಿದ್ದಾರೆ.

DC vs CSK: ಎಂಎಸ್‌ ಧೋನಿಯ ಐಪಿಎಲ್‌ ನಿವೃತ್ತಿ ಬಗ್ಗೆ ಸ್ಪಷ್ಟನೆ ನೀಡಿದ ಸ್ಟೀಫನ್‌ ಫ್ಲೆಮಿಂಗ್‌!

"ನಾನು ಭಾರತದ ಆಟಗಾರರನ್ನು ಆಯ್ಕೆ ಮಾಡುತ್ತೇನೆ ಹಾಗೂ ಇನಿಂಗ್ಸ್‌ ಆರಂಭಿಸಲು ವೀರು ಪಾ (ವೀರೇಂದ್ರ ಸೆಹ್ವಾಗ್‌) ಅವರನ್ನು ಆರಿಸುತ್ತೇನೆ. ಹಾಗಾಗಿ ವೀರು ಪಾ, ಸಚಿನ್‌, ದಾದಾ (ಸೌರವ್‌ ಗಂಗೂಲಿ). ಏಕೆಂದರೆ, ಈ ಎಲ್ಲರೂ ತಮ್ಮ ವೃತ್ತಿ ಜೀವನದಲ್ಲಿ ಶ್ರೇಷ್ಠ ಲಯದಲ್ಲಿ ದಿನಗಳನ್ನು ಸುಮ್ಮನೆ ಊಹಿಸಿಕೊಳ್ಳಿ. ಅವರು ಆಡುವುದನ್ನು ನೋಡಿದಾಗ, ಅವರಿಗಿಂತ ಯಾರೂ ಉತ್ತಮವಾಗಿ ಆಡುವುದಿಲ್ಲ ಎಂಬ ಭಾವನೆ ನಿಮ್ಮಲ್ಲಿ ಮೂಡುತ್ತದೆ. ಆದರೆ, ಕ್ರಿಕೆಟ್‌ ಏರಿಳಿಗಳನ್ನು ಹೊಂದಿದೆ. ಹಾಗಾಗಿ ಆಟಗಾರರನ್ನು ಆಯ್ಕೆ ಮಾಡುವುದು ಕಷ್ಟ, ಆದರೆ ಈ ಆಟಗಾರರ ಪ್ರದರ್ಶನವನ್ನು ನೋಡಿಕೊಂಡು ನಾನು ಬೆಳೆದಿದ್ದೇನೆ," ಎಂದು ಎಂಎಸ್‌ ಧೋನಿ ತಿಳಿಸಿದ್ದಾರೆ.

ಯುವರಾಜ್‌ ಸಿಂಗ್‌ರನ್ನು ಆರಿಸಿದ ಎಂಎಸ್‌ ಧೋನಿ

ತಮ್ಮ ಕನಸಿನ ತಂಡದ ಬ್ಯಾಟಿಂಗ್‌ ಕ್ರಮಾಂಕಕ್ಕೆ ಯುವರಾಜ್‌ ಸಿಂಗ್‌ ಅವರನ್ನು ಎಂಎಸ್‌ ಧೋನಿ ಆಯ್ಕೆ ಮಾಡಿದ್ದಾರೆ ಹಾಗೂ ಒಂದು ಓವರ್‌ಗೆ ಸಿಡಿಸಿದ್ದ ಆರು ಸಿಕ್ಸರ್‌ಗಳನ್ನು ಇದೇ ವೇಳೆ ಮಾಜಿ ನಾಯಕ ಸ್ಮರಿಸಿಕೊಂಡಿದ್ದಾರೆ. ನಂತರ ತನ್ನ ತಂಡಕ್ಕೆ ಇನ್ನುಳಿದ ಆಟಗಾರರನ್ನು ಆಯ್ಕೆ ಮಾಡಲು ಎಂಎಸ್‌ಡಿ ನಿರಾಕರಿಸಿದರು ಹಾಗೂ ಭಾರತದ ಪರ ಆಡಿದ ಪ್ರತಿಯೊಬ್ಬರ ಆಟವನ್ನು ಆನಂದಿಸುತ್ತೇನೆಂದು ತಿಳಿಸಿದ್ದಾರೆ.

IPL 2025: ಚೆನ್ನೈ ಸೂಪರ್‌ ಕಿಂಗ್ಸ್‌ನ ಹ್ಯಾಟ್ರಿಕ್‌ ಸೋಲಿಗೆ ಕಾರಣ ತಿಳಿಸಿದ ಋತುರಾಜ್‌ ಗಾಯಕ್ವಾಡ್‌!

"ಯವರಾಜ್‌ ಸಿಂಗ್‌ ಅವರು ಸಿಕ್ಸರ್‌ಗಳನ್ನು ಸಿಡಿಸುತ್ತಿದ್ದಾಗ, ನೀವು ಬೇರೆ ಯಾರ ಆಟವನ್ನು ನೋಡಲು ಬಯಸುವುದಿಲ್ಲ. ಇಲ್ಲಿನ ಸಂಗತಿ ಏನೆಂದರೆ, ಬೇರೆ ಆಟಗಾರರನ್ನು ನಾನು ಏಕೆ ಆಯ್ಕೆ ಮಾಡಬೇಕು? ಪ್ರತಿಯೊಬ್ಬರ ಆಟವನ್ನು ಏಕೆ ಆನಂದಿಸಬಾರದು?ಅವರೆಲ್ಲರೂ ಭಾರತ ತಂಡಕ್ಕೆ ಕೊಡುಗೆಯನ್ನು ನೀಡಿದ್ದಾರೆ. ನಾವು ಎಲ್ಲರೂ ಒಟ್ಟಾಗಿ ಆಡುವಾಗ ಹಲವು ಟೂರ್ನಿಗಳನ್ನು ಗೆದ್ದಿದ್ದೇವೆ,"ಎಂದು ಸಿಎಸ್‌ಕೆ ಮಾಜಿ ನಾಯಕ ಹೇಳಿದ್ದಾರೆ.

2025ರ ಐಪಿಎಲ್‌ ಆಡುತ್ತಿರುವ ಎಂಎಸ್‌ ಧೋನಿ

ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಎಂಎಸ್‌ ಧೋನಿ ಆಡುತ್ತಿದ್ದಾರೆ. ಆದರೆ, ಆಡಿದ ನಾಲ್ಕು ಪಂದ್ಯಗಳ ಪೈಕಿ ಸಿಎಸ್‌ಕೆ ಕೇವಲ ಒಂದು ಪಂದ್ಯವನ್ನು ಗೆದ್ದು, ಇನ್ನುಳಿದ ಮೂರೂ ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಆ ಮೂಲಕ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ.