ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

GT vs SRH: ʻಅರಗಿಸಿಕೊಳ್ಳಲು ಇನ್ನೂ ಆಗುತ್ತಿಲ್ಲʼ-ಮೊಹಮ್ಮದ್‌ ಸಿರಾಜ್‌ ಹೀಗೆನ್ನಲು ಕಾರಣವೇನು?

Mohammed Siraj on his bowling Comeback: ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಮಾರಕ ಬೌಲಿಂಗ್‌ ದಾಳಿ ನಡೆಸಿದ ಗುಜರಾತ್‌ ಟೈಟನ್ಸ್‌ ತಂಡದ ವೇಗಿ ಮೊಹಮ್ಮದ್‌ ಸಿರಾಜ್‌ 4 ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ಗುಜರಾತ್‌ ಗೆಲುವಿಗೆ ನೆರವಾದರು. ಪಂದ್ಯದ ಬಳಿಕ ತಮ್ಮ ಬೌಲಿಂಗ್‌ ಕಮ್‌ಬ್ಯಾಕ್‌ ಬಗ್ಗೆ ಸಿರಾಜ್‌ ಪ್ರತಿಕ್ರಿಯಿಸಿದ್ದಾರೆ.

ʻನನ್ನಿಂದ ಇನ್ನೂ ಅರಗಿಸಿಕೊಳ್ಳಲು ಆಗುತ್ತಿಲ್ಲʼ-ಸಿರಾಜ್‌ ಹೀಗೆನ್ನಲು ಕಾರಣ!

ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡ ಬಗ್ಗೆ ಮೊಹಮ್ಮದ್‌ ಸಿರಾಜ್‌ ಪ್ರತಿಕ್ರಿಯೆ.

Profile Ramesh Kote Apr 7, 2025 4:36 PM

ಹೈದರಾಬಾದ್‌: ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡ ಬಳಿಕ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ಕಮ್‌ಬ್ಯಾಕ್‌ ಮಾಡಲು ತಾವು ಅನುಸರಿಸಿದ ಹಾದಿಯ ಬಗ್ಗೆ ಗುಜರಾತ್‌ ಟೈಟನ್ಸ್‌ (Gujarat Titans) ವೇಗಿ ಮೊಹಮ್ಮದ್‌ ಸಿರಾಜ್‌ (Mohammed Siraj) ಪ್ರತಿಕ್ರಿಯಿಸಿದ್ದಾರೆ. ಕಳೆದ ಚಾಂಪಿಯನ್ಸ್‌ ಟ್ರೋಫಿ ಭಾರತ ತಂಡದಲ್ಲಿ ಸಿರಾಜ್‌ ಅವರನ್ನು ಕೈ ಬಿಟ್ಟಿದ್ದ ಬಿಸಿಸಿಐ, ಐವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕೆ ಇಳಿದಿತ್ತು. ಅದಂತೆ ರೋಹಿತ್‌ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಚಾಂಪಿಯನ್‌ ಆಗಿತ್ತು. ಆರ್‌ಸಿಬಿ ತಂಡದಿಂದ ಹೊರಬಂದು ಗುಜರಾತ್‌ ಟೈಟನ್ಸ್‌ ಪರ ಆಡುತ್ತಿರುವ ಸಿರಾಜ್‌ ಉತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರುತ್ತಿದ್ದಾರೆ.

ಭಾನುವಾರ ಹೈದರಾಬಾದ್‌ನ ರಾಜೀವ್‌ ಗಾಂಧಿ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಮೊಹಮ್ಮದ್‌ ಸಿರಾಜ್‌ ಸಿಂಹ ಸ್ವಪ್ನವಾಗಿದ್ದರು. ಇವರು ಬೌಲ್‌ ಮಾಡಿದ್ದ 4 ಓವರ್‌ಗಳಲ್ಲಿ ಕೇವಲ 17 ರನ್‌ ನೀಡಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ತಮ್ಮ ಐಪಿಎಲ್‌ ವೃತ್ತಿ ಜೀವನದಲ್ಲಿ 100 ವಿಕೆಟ್‌ಗಳನ್ನು ಪೂರ್ಣಗೊಳಿಸಿದ್ದರು. ಆ ಮೂಲಕ ಗುಜರಾತ್‌ ಟೈಟನ್ಸ್‌ ತಂಡದ 7 ವಿಕೆಟ್‌ಗಳ ಗೆಲುವಿಗೆ ಸಿರಾಜ್‌ ನೆರವಾಗಿದ್ದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

IPL 2025 Points Table: ಗೆಲುವಿನೊಂದಿಗೆ ದ್ವಿತೀಯ ಸ್ಥಾನಕ್ಕೇರಿದ ಗುಜರಾತ್‌

ಪಂದ್ಯದ ಗೆಲುವಿನ ಬಳಿಕ ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಮೊಹಮ್ಮದ್‌ ಸಿರಾಜ್‌, ಭಾರತ ತಂಡದಲ್ಲಿ ಅವಕಾಶ ಕಳೆದುಕೊಂಡಿದ್ದನ್ನು ನಾನು ಸ್ವೀಕರಿಸಲಿಲ್ಲ ಹಾಗೂ ಕ್ರಿಕೆಟ್‌ ನನ್ನ ಪಾಲಿಗೆ ಇನ್ನೂ ಮುಗಿದಿಲ್ಲ ಎಂದು ನನಗೆ ಹೇಳಿಕೊಂಡಿದ್ದೆ ಎಂದು ಹೇಳಿದ್ದಾರೆ. ನಾನು ಯಾವ ತಪ್ಪು ಮಾಡಿದೆ ಎಂದು ನನಗೆ ಗೊತ್ತಿಲ್ಲ ಆದರೆ, ನನಗೆ ಸಿಕ್ಕ ವಿದಾಂದಲ್ಲಿ ಮನಸ್ಥಿತಿ ಹಾಗೂ ಫಿಟ್‌ನೆಸ್‌ ಕಡೆಗೆ ಹೆಚ್ಚು ಕೆಲಸ ಮಾಡಿದ್ದೇನೆಂದು ತಿಳಿಸಿದ್ದಾರೆ.



"ಭಾರತ ತಂಡದಿಂದ ನನ್ನನ್ನು ಕೈ ಬಿಟ್ಟಿದ್ದನ್ನು ಅರಗಿಸಿಕೊಳ್ಳಲು ನನ್ನಿಂದ ಸಾಧ್ಯವಾಗಿರಲಿಲ್ಲ. ನನ್ನ ಕ್ರಿಕೆಟ್‌ ವೃತ್ತಿ ಜೀವನ ಇನ್ನೂ ಮುಗಿದಿಲ್ಲ ಎಂದು ನನಗೆ ನಾನೇ ಹೇಳಿಕೊಂಡಿದ್ದೆ. ನನ್ನಿಂದ ಸಾಧ್ಯವಾಗುವ ಸಂಗತಿಗಳನ್ನು ನಿಯಂತ್ರಿಸಲು ನಾನು ಪ್ರಯತ್ನಿಸಿದೆ. ನನ್ನ ಮೈಂಡ್‌ಸೆಟ್‌ ಹಾಗೂ ಫಿಟ್‌ನೆಸ್‌ ಮೇಲೆ ಹೆಚ್ಚಿನ ಕೆಲಸವನ್ನು ಮಾಡಿದ್ದೇನೆ. ನಾನು ಸ್ಥಿರ ಪ್ರದರ್ಶನವನ್ನು ತೋರುತ್ತಿದ್ದೆ ಆದರೂ ನಾನು ಏನು ತಪ್ಪು ಮಾಡಿದ್ದೇನೆಂದು ನನಗೆ ಗೊತ್ತಿಲ್ಲ. ಈಗ ನಾನು ನನ್ನ ಬೌಲಿಂಗ್‌ ಅನ್ನು ಆನಂದಿಸುತ್ತಿದ್ದೇನೆ," ಎಂದು ಮೊಹಮ್ಮದ್‌ ಸಿರಾಜ್‌ ಹೇಳಿದ್ದಾರೆ.

IPL 2025: ಚೆನ್ನೈ ಸೂಪರ್‌ ಕಿಂಗ್ಸ್‌ನ ಹ್ಯಾಟ್ರಿಕ್‌ ಸೋಲಿಗೆ ಕಾರಣ ತಿಳಿಸಿದ ಋತುರಾಜ್‌ ಗಾಯಕ್ವಾಡ್‌!

"ಒಬ್ಬ ವೃತ್ತಿ ಪರ ಆಟಗಾರನಾಗಿ ಭಾರತ ತಂಡಕ್ಕೆ ನಿಯಮಿತವಾಗಿ ಆಡುತ್ತಿದ್ದಾಗ ಹಠಾತ್‌ ಕೈ ಬಿಟ್ಟಾಗ ನಿಮ್ಮ ಮನಸಿನಲ್ಲಿ ಕೆಲವು ಅನುಮಾನಗಳು ಮೂಡುವುದು ಸಹಜ. ಆದರೆ ಐಪಿಎಲ್‌ ಟೂರ್ನಿಗೆ ತಯಾರಿ ನಡೆಸುವ ಕಡೆಗೆ ನನ್ನ ಮನಸನ್ನು ಸಜ್ಜುಗೊಳಿಸಿಕೊಂಡಿದ್ದೆ ಹಾಗೂ ಈ ಟೂರ್ನಿಯಲ್ಲಿ ಆಡಲು ಎದುರು ನೋಡುತ್ತಿದ್ದೆ,"ಎಂದು ಗುಜರಾತ್‌ ಟೈಟನ್ಸ್‌ ವೇಗಿ ತಿಳಿಸಿದ್ದಾರೆ.

ತವರಿನಲ್ಲಿ ಉತ್ತಮ ಪ್ರದರ್ಶನ ತೋರುವುದು ವಿಭಿನ್ನ ಭಾವನೆಯನ್ನು ಮೂಡಿಸುತ್ತದೆ: ಸಿರಾಜ್‌

ಮೊಹಮ್ಮದ್‌ ಸಿರಾಜ್‌ ಅವರದು ಮೂಲ ಹೈದರಾಬಾದ್‌. ಹಾಗಾಗಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ದದ ಪಂದ್ಯವನ್ನು ವೀಕ್ಷಿಸಲು ಸಿರಾಜ್‌ ಅವರ ಕುಟುಂಬ ಕ್ರೀಡಾಂಗಣಕ್ಕೆ ಆಗಮಿಸಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕುಟುಂಬದ ಅನುಪಸ್ಥಿತಿಯಲ್ಲಿ ಉತ್ತಮ ಪ್ರದರ್ಶನ ತೋರಲು ನನ್ನಲ್ಲಿ ವಿಭಿನ್ನ ವಿಶ್ವಾಸವಿತ್ತು ಎಂದು ಹೇಳಿದ್ದಾರೆ.

"ನನ್ನ ತವರು ಅಂಗಣದಲ್ಲಿ ಉತ್ತಮ ಪ್ರದರ್ಶನ ತೋರುವುದು ವಿಭಿನ್ನ ಭಾವನೆಯನ್ನು ನೀಡುತ್ತದೆ. ನಮ್ಮ ಕುಟುಂಬದ ಸದಸ್ಯರು ಕುಳಿತಿದ್ದರಿಂದ ನನಗೆ ವಿಭಿನ್ನ ವಿಶ್ವಾಸ ಮೂಡುತ್ತಿತ್ತು," ಎಂದು ಮೊಹಮ್ಮದ್‌ ಸಿರಾಜ್‌ ತಿಳಿಸಿದ್ದಾರೆ.