Global Peace Summit: ದುಬೈನಲ್ಲಿ ಜಾಗತಿಕ ಶೃಂಗಸಭೆ: ಬಾಬಾ ರಾಮ್‌ದೇವ್ ಭಾಗಿ!
ನ್ಯಾಯ, ಪ್ರೀತಿ ಮತ್ತು ಶಾಂತಿಯನ್ನು ಸ್ಥಾಪಿಸುವ ಉದ್ದೇಶದೊಂದಿಗೆ ವಿಶ್ವದ ಬೃಹತ್ ಶೃಂಗಸಭೆ ದುಬೈನಲ್ಲಿ ಏಪ್ರಿಲ್ 12 ಮತ್ತು 13ರಂದು ನಡೆಯಲಿದೆ. ಜಗತ್ತಿನೆಲ್ಲೆಡೆಯಿಂದ 2,800ಕ್ಕೂ ಹೆಚ್ಚು ಶಾಂತಿ ತತ್ವ ಪ್ರತಿಪಾದಕರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಅವರ ಸಮ್ಮುಖದಲ್ಲಿ “ಐ ಆಮ್ ಪೀಸ್ ಕೀಪರ್ ಮೂವ್‌ಮೆಂಟ್” ಎಲ್ಲರ ಗಮನ ಸೆಳೆಯಲಿದೆ. ನೊಬೆಲ್ ಪ್ರಶಸ್ತಿ ಪುರಸ್ಕೃತರು, ಜಾಗತಿಕ ಚಿಂತಕರು, ಉದ್ಯಮಿಗಳು, ಸಾಂಸ್ಕೃತಿಕ ಗಣ್ಯರು, ಕ್ರೀಡಾ ಕ್ಷೇತ್ರದ ದಿಗ್ಗಜರು, ಶಾಂತಿ ಮತ್ತು ನ್ಯಾಯದ ಪ್ರತಿಪಾದಕರು ಸೇರಿದಂತೆ 72 ಭಾಷಣಕಾರರು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
![Baba Ramdev](https://cdn-vishwavani-prod.hindverse.com/media/images/Baba_Ramdev.max-1280x720.jpg)
![Profile](https://vishwavani.news/static/img/user.png)
ದುಬೈ: ನ್ಯಾಯ, ಪ್ರೀತಿ ಮತ್ತು ಶಾಂತಿಯನ್ನು ಸ್ಥಾಪಿಸುವ ಉದ್ದೇಶದೊಂದಿಗೆ ವಿಶ್ವದ ಬೃಹತ್ ಶೃಂಗಸಭೆ(Global Peace Summit) ದುಬೈನಲ್ಲಿ(Dubai) ಏಪ್ರಿಲ್ 12 ಮತ್ತು 13ರಂದು ನಡೆಯಲಿದೆ. ಜಗತ್ತಿನೆಲ್ಲೆಡೆಯಿಂದ 2,800ಕ್ಕೂ ಹೆಚ್ಚು ಶಾಂತಿ ತತ್ವ ಪ್ರತಿಪಾದಕರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಅವರೆಲ್ಲರ ಸಮ್ಮುಖದಲ್ಲಿ “ಐ ಆಮ್ ಪೀಸ್ ಕೀಪರ್ ಮೂವ್‌ಮೆಂಟ್” ಗಮನ ಸೆಳೆಯಲಿದೆ. ಯೋಗ ಗುರು ಬಾಬಾ ರಾಮ್‌ದೇವ್, ನೊಬೆಲ್ ಪ್ರಶಸ್ತಿ ಪುರಸ್ಕೃತರು, ಜಾಗತಿಕ ಚಿಂತಕರು, ಉದ್ಯಮಿಗಳು, ಸಾಂಸ್ಕೃತಿಕ ಗಣ್ಯರು, ಕ್ರೀಡಾ ಕ್ಷೇತ್ರದ ದಿಗ್ಗಜರು, ಶಾಂತಿ ಮತ್ತು ನ್ಯಾಯದ ಪ್ರತಿಪಾದಕರು ಸೇರಿದಂತೆ 72 ಭಾಷಣಕಾರರು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ದುಬೈನಲ್ಲಿ ನಡೆಯುತ್ತಿರುವ ಈ ಶೃಂಗಸಭೆಯಲ್ಲಿ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದ್ದು, ಪ್ರಭಾವಿ ವ್ಯಕ್ತಿಗಳು ಈ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಏಪ್ರಿಲ್ ತಿಂಗಳಿನಲ್ಲಿ ನಡೆಯಲಿರುವ ಶೃಂಗಸಭೆಗೆ ಭಾರೀ ತಯಾರಿ ನಡೆಯುತ್ತಿದೆ. ಕಾನೂನು ತಜ್ಞರು, ಲೇಖಕರು, ಸಾಮಾಜಿಕ ಕಾರ್ಯಕರ್ತರು, ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ, ಯೋಗ ಗುರು ಬಾಬಾ ರಾಮದೇವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಯುಎಇ ಸಂಪುಟ ಸದಸ್ಯ ಶೇಖ್ ನಹಯಾನ್ ಮಬಾರಕ್ ಅಲ್ ನಹಯಾನ್ ಕೂಡ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
#Dubai is preparing to host the inaugural Global Justice, Love & Peace Summit on April 12-13, 2025, at the Dubai Exhibition Centre, Expo City.
— All India Radio News (@airnewsalerts) February 4, 2025
The event, organized by the 'I am Peacekeeper Movement', will bring together 2,800 peacekeepers and 72 distinguished speakers,… pic.twitter.com/Cf77xcBn2F
ಐ ಆಮ್ ಪೀಸ್ ಕೀಪರ್ ಮೂವ್ಮೆಂಟ್‌ನ ಅಧ್ಯಕ್ಷ ಡಾ.ಹುಜೈಫಾ ಖೊರಾಕಿವಾಲಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಂತಿಧೂತರು ಮತ್ತು ದಾರ್ಶನಿಕರನ್ನು ಒಂದೇ ವೇದಿಕೆಯಲ್ಲಿ ಸೇರಿಸಲಾಗುತ್ತಿದೆ. 28 ಶಾಂತಿ ರತ್ನಗಳು ಎಂಬ ಧ್ಯೇಯದಡಿ ಈ ಸಭೆ ನಡೆಯಲಿದೆ. ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು 2025 ಅನ್ನು ಸಮುದಾಯ ವರ್ಷವೆಂದು ಘೋಷಿಸಿದ ಹಿನ್ನೆಲೆಯಲ್ಲಿ ದುಬೈನಲ್ಲಿ ಶೃಂಗಸಭೆ ನಡೆಸಲಾಗುತ್ತಿದೆ ಎಂದರು.
ಪ್ರಶಸ್ತಿಗಳ ಪ್ರದಾನ
ನ್ಯಾಯ, ಸಮಾನತೆ, ಶಾಂತಿ ಸ್ಥಾಪನೆಗಾಗಿ ಶ್ರಮಿಸಿದ ಮತ್ತು ಅಸಾಧಾರಣ ಕೊಡುಗೆ ನೀಡಿದ 28 ಪ್ರಸಿದ್ಧ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗೌರವಿಸಿ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಗಳು ಮೂರು ಪ್ರಮುಖ ವಿಭಾಗಗಳನ್ನು ಒಳಗೊಂಡಿವೆ.
ಲಾ ಅವಾರ್ಡ್ಸ್
- - ಚಾಂಪಿಯನ್ ಜಡ್ಜ್ ಆಫ್ ಜಡ್ಜಸ್
- - ಎಕ್ಸಲೆನ್ಸ್ ಇನ್ ಹ್ಯೂಮನ್ ರೈಟ್ಸ್ ಅಡ್ವಕಸಿ
- - ಜೆಂಡರ್ ಇಕ್ವಾಲಿಟಿ ಚಾಂಪಿಯನ್
- - ವರ್ಲ್ಡ್ ವುಮನ್-ಇನ್-ಲಾ
- - ಎಕ್ಸೆಪ್ಷನಲ್ ಪಬ್ಲಿಕ್ ಸರ್ವಿಸ್ ಇನ್ ಲಾ
- - ಔಟ್‌ಸ್ಟ್ಯಾಂಡಿಂಗ್ ಪ್ರೊ ಬೋನೊ ಸರ್ವಿಸ್ ಇನ್ ಲಾ
- - ಗ್ಲೋಬಲ್ ಇನ್ನೋವೇಟಿವ್ ಲೀಗಲ್ ಪ್ರಾಕ್ಟಿಸ್
ಲವ್ ಅವಾರ್ಡ್ಸ್
- - ಲವ್ ತೈ ನೇಬರ್‌ಹುಡ್ ಅವಾರ್ಡ್
- - ಲವ್ ತೈ ಪ್ಲಾನೆಟ್ ಅವಾರ್ಡ್
- - ವರ್ಲ್ಡ್ ಅನಿಮಲ್ ಲವರ್ ಅವಾರ್ಡ್
- - ವರ್ಲ್ಡ್ ಡಿಸಎಬಿಲಿಟೀಸ್ ಸಮಾರಿಟಾನ್ ಅವಾರ್ಡ್
- - ಗ್ಲೋಬಲ್ ಗ್ರೇಟ್ ಪ್ಲೇಸ್ ಟು ವರ್ಕ್ ಚಾಂಪಿಯನ್ ಅವಾರ್ಡ್
- - ಇಂಟರ್‌ನ್ಯಾಷನಲ್ ಫೀಡಿಂಗ್-ದಿ-ಪೂರ್ ಅವಾರ್ಡ್
- - ವರ್ಲ್ಡ್’ಸ್ ಹ್ಯಾಪಿಯೆಸ್ಟ್ ಕಂಟ್ರಿ ಅವಾರ್ಡ್
ಪೀಸ್ ಅವಾರ್ಡ್ಸ್
- - ವರ್ಲ್ಡ್ ಪೀಸ್ ಆರ್ಗನೈಸೇಶನ್ ಅವಾರ್ಡ್
- - ಇಂಟರ್‌ಫೇತ್ ಡೈಲಾಗ್ ಚಾಂಪಿಯನ್
- - ಗ್ಲೋಬಲ್ ಟ್ರಾವೆಲರ್ ವಿಥ್ ಎ ಪರ್ಪಸ್
- - ಗ್ಲೋಬಲ್ ನಾನ್-ವೈಲೆನ್ಸ್ ಅವಾರ್ಡ್
- - ಪೀಸ್ ಟೆಕ್ ಇನೊವೇಟರ್ ಅವಾರ್ಡ್
- - ಲೈವ್ಲಿಹುಡ್ ಎನ್ಹಾನ್ಸರ್ ಅವಾರ್ಡ್
- - ಡೀಪ್ ಫರ್ಗಿವ್ನೆಸ್ ಅವಾರ್ಡ್
ಈ ಸುದ್ದಿಯನ್ನೂ ಓದಿ:Narendra Modi: ಕಾಂಗ್ರೆಸ್‌ನಿಂದ ಅಂಬೇಡ್ಕರ್‌ಗೆ ಅವಮಾನ: ಸದನದಲ್ಲಿ ಗುಡುಗಿದ ಮೋದಿ
ಎರಡು ದಿನಗಳು ಈ ಸಭೆ ನಡೆಯಲಿದ್ದು,ಮಹತ್ವದ ಬೆಳವಣಿಗೆಗಳಿಗೆ ಇದು ನಾಂದಿ ಹಾಡಲಿದೆ.