#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Bigg Boss Kannada 11: ದೊಡ್ಮನೆಯಿಂದ ಹೊರಬಿದ್ದ ರಜತ್‌; ಉಳಿದಿಬ್ಬರಲ್ಲಿ ಚಾಂಪಿಯನ್‌ ಯಾರು?

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಫಿನಾಲೆ ವೇದಿಕೆಯಿಂದ ಇದೀಗ ರಜತ್ ಕಿಶನ್ ಹೊರ ಬಂದಿದ್ದಾರೆ. ಸದ್ಯ ಕೊನೆಯ ಹಂತದಲ್ಲಿ ತ್ರಿವಿಕ್ರಮ್ ಮತ್ತು ಹನುಮಂತ ಉಳಿದಿದ್ದು, ಚಾಂಪಿಯನ್‌ ಯಾರಾಗ್ತಾರೆ ಎನ್ನುವ ಕುತೂಹಲ ಮೂಡಿದೆ.

ದೊಡ್ಮನೆಯಿಂದ ಹೊರಬಿದ್ದ ರಜತ್‌

ರಜತ್‌ ಕಿಶನ್‌

Profile Ramesh B Jan 26, 2025 11:25 PM

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಕನ್ನಡ ಸೀಸನ್‌ 11 (Bigg Boss Kannada 11)ರ ಫಿನಾಲೆ ವೇದಿಕೆಯಿಂದ ಇದೀಗ ರಜತ್ ಕಿಶನ್ (Rajath Kishan) ಹೊರ ಬಂದಿದ್ದಾರೆ. ಈ ಮೂಲಕ ಅವರ ಕಪ್‌ ಗೆಲ್ಲುವ ಕನಸು ನುಚ್ಚು ನೂರಾಗಿದೆ. ಫಿನಾಲೆ ಹಂತ ತಲುಪಿದ್ದ 6 ಸ್ಪರ್ಧಿಗಳ ಪೈಕಿ ಶನಿವಾರ ಭವ್ಯಾ ಗೌಡ ಹೊರ ಬಿದ್ದಿದ್ದರು. ಭಾನುವಾರ ಮೊದಲು ಉಗ್ರಂ ಮಂಜು ಬಳಿಕ ಮೋಕ್ಷಿತಾ ಪೈ ಔಟ್‌ ಆಗಿದ್ದರು. ಇದೀಗ 3ನೇ ಸ್ಪರ್ಧಿಯಾಗಿ ರಜತ್ ಕಿಶನ್ ಹೊರ ನಡೆದಿದ್ದಾರೆ. ಸದ್ಯ ಕೊನೆಯ ಹಂತದಲ್ಲಿ ತ್ರಿವಿಕ್ರಮ್ ಮತ್ತು ಹನುಮಂತ ಉಳಿದಿದ್ದು, ಚಾಂಪಿಯನ್‌ ಯಾರಾಗ್ತಾರೆ ಎನ್ನುವ ಕುತೂಹಲ ಮೂಡಿದೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 11ಕ್ಕೆ ವೈಲ್ಡ್‌ ಕಾರ್ಡ್‌ ಸ್ಪರ್ಧಿಯಾಗಿ ರಜತ್‌ ಕಿಶನ್ ಆಲಿಯಾಸ್‌ ಬುಜ್ಜಿ ಎಂಟ್ರಿ ಕೊಟ್ಟಿದ್ದರು. ಬಿಗ್‌ ಬಾಸ್‌ ಆಟಕ್ಕೆ ಹೊಸ ತಿರುವು ನೀಡುವ ಸ್ಟ್ರಾಂಗ್‌ ಕಂಟೆಸ್ಟಂಟ್‌ ಎನಿಸಿಕೊಂಡಿದ್ದ ರಜತ್‌ ನಿರೀಕ್ಷೆಯಂತೆಯೇ ಬಿಗ್‌ ಬಾಸ್‌ ಮನೆಯಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಗಲಾಟೆ ಸೃಷ್ಟಿಸಿ ದೊಡ್ಮನೆಯಲ್ಲಿ ಕಾವು ಹೆಚ್ಚಿಸಿದ್ದರು.



ರಜತ್‌ ಬಿಗ್‌ ಬಾಸ್‌ ಮನೆಯಲ್ಲಿ ಹಲ್‌ಚಲ್‌ ಎಬ್ಬಿಸಿ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದ್ದರು. ಇವರ ಖಡಕ್‌ ಆಟಕ್ಕೆ ಮನೆಮಂದಿ ಸುಸ್ತಾಗಿ ಹೋಗಿದ್ದಲ್ಲದೇ, ಕೆಲವರು ಅವರ ಪದ ಬಳಕೆಯಿಂದ ಕೆಂಡಾಮಂಡಲವಾಗಿದ್ದರು. ಆದರೆ ಅದೆಲ್ಲವನ್ನೂ ಮೀರಿ ರಜತ್‌ ಫೈನಲಿಸ್ಟ್‌ ಆಗಿ ಫಿನಾಲೆ ತಲುಪಿದ್ದರು. ಮನೆಗೆ ಕಾಲಿಟ್ಟ ಒಂದೇರಡೇ ದಿನದಲ್ಲಿ ರಜತ್‌ ಹಾಗೂ ಗೋಲ್ಡ್‌ ಸುರೇಶ್‌ ಮಧ್ಯೆ ಜಗಳ ನಡೆದಿತ್ತು. ರಜತ್‌ ನಡವಳಿಕೆಗೆ ಸುರೇಶ್‌ ಬೇಸತ್ತು ಹೋಗಿದ್ದರು. ಇದಲ್ಲದೇ ಇವರ ಪದ ಬಳಕೆಯನ್ನು ಮೋಕ್ಷಿತಾ, ಹನುಮಂತ, ಶೋಭಾ ಶೆಟ್ಟಿ ತೀವ್ರವಾಗಿ ವಿರೋಧಿಸಿದ್ದರು.

ಈ ಸುದ್ದಿಯನ್ನೂ ಓದಿ: BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

ಇನ್ನು ರಜತ್‌ 2013ರಲ್ಲಿ ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಮೂಲಕ ಟಿವಿ ವೀಕ್ಷಕರಿಗೆ ಪರಿಚಯವಾದರು. ಆ ಬಳಿಕ ಅನೇಕ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿ ಜನರ ಮನ ಗೆದ್ದರು. ರಜತ್‌ ಈಗಾಗಲೇ ಹಲವು ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದಾರೆ. ಸುಮಾರು 4 ರಿಯಾಲಿಟಿ ಶೋಗಳ ರನ್ನರ್‌ ಅಪ್‌ ಆಗಿದ್ದಾರೆ. ರಜತ್‌ ಕಬಡ್ಡಿ ಆಟಗಾರನಾಗಿದ್ದಾರೆ. ಸೂಪರ್ ಕಬಡ್ಡಿ ಕ್ರೀಡೆಯಲ್ಲಿ ಆಟಗಾರನಾಗಿ ಸ್ಪರ್ಧಿಸಿದ್ದರು. ಈ ಬಾರಿ ವೈಲ್ಡ್‌ ಕಾರ್ಡ್‌ ಮೂಲಕ ಬಿಗ್‌ ಬಾಸ್‌ ಮನೆಗೆ ಎಂಟ್ರಿ ನೀಡಿದ್ದರು.