Physical Assault: ಯುವತಿಯನ್ನು ಅಪಹರಿಸಿ 22 ಮಂದಿಯಿಂದ ಅತ್ಯಾಚಾರ; ಉತ್ತರ ಪ್ರದೇಶದಲ್ಲೊಂದು ಅಮಾನುಷ ಘಟನೆ
ಉತ್ತರ ಪ್ರದೇಶದ ವಾರಣಾಸಿಯಲ್ಲಿ 19 ವರ್ಷದ ಯುವತಿಯನ್ನು ಅಪಹರಿಸಿ ಒಂದು ವಾರಗಳ ಕಾಲ ಆಕೆಯನ್ನು ಬಂಧನದಲ್ಲಿರಿಸಿಕೊಂಡು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಬೆಳಕಿಗೆ ಬಂದಿದೆ. 22 ಜನರು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ತಿಳಿದು ಬಂದಿದೆ.


ಲಖನೌ: ಉತ್ತರ ಪ್ರದೇಶದ ವಾರಣಾಸಿಯಲ್ಲಿ 19 ವರ್ಷದ ಯುವತಿಯನ್ನು ಅಪಹರಿಸಿ ಒಂದು ವಾರಗಳ ಕಾಲ ಆಕೆಯನ್ನು ಬಂಧನದಲ್ಲಿರಿಸಿಕೊಂಡು ಸಾಮೂಹಿಕ ಅತ್ಯಾಚಾರ (Physical Assault) ನಡೆಸಿದ ಘಟನೆ ಬೆಳಕಿಗೆ ಬಂದಿದೆ. 22 ಜನರು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ತಿಳಿದು ಬಂದಿದೆ. ಅತ್ಯಾಚಾರ ನಡೆಸಿದ ಆರೋಪಿಗಳ ಪೈಕಿ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಉತ್ತರ ವಾರಣಾಸಿಯ ಲಾಲ್‌ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಲಾಲ್‌ಪುರ ಪ್ರದೇಶದ ನಿವಾಸಿಯಾದ ಯುವತಿಯನ್ನು ಮಾರ್ಚ್ 29 ರಂದು ಅಪಹರಣ ಮಾಡಲಾಗಿತ್ತು.
ಆಕೆ ತನ್ನ ಸ್ನೇಹಿತನ ಮನೆಗೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಹೊರಟಿದ್ದಳು. ಆದರೆ ಆಕೆಯ ಸ್ನೇಹಿತನ ಮನೆಗೂ ಹೋಗಿಲ್ಲ, ಮನೆಗೂ ಮರಳಿಲ್ಲ. ಇದರಿಂದ ಆಕೆಯ ಪಾಲಕರು ಏಪ್ರಿಲ್ 4 ರಂದು ಪೊಲೀಸರಿಗೆ ದೂರು ನೀಡಿದ್ದರು. ಯುವತಿಯನ್ನು ಅಪಹರಿಸಿದ ದುಷ್ಕರ್ಮಿಗಳು ಮಾದಕ ದ್ರವ್ಯ ನೀಡಿದ್ದರು ಎಂದು ತಿಳಿದು ಬಂದಿದೆ. ಆಕೆಯನ್ನು ಆರೋಪಿಗಳ ಮನೆಗೆ ಕರೆದುಕೊಂಡು ಹೋಗಿದ್ದರು. ಆಕೆಯನ್ನು ಒಂದು ವಾರಗಳ ಕಾಲ ಬಂಧನದಲ್ಲಿಟ್ಟು, ನಿರಂತರವಗಿ ಅತ್ಯಾಚಾರ ನಡೆಸಿದ್ದರು.
ಸಂತ್ರಸ್ತೆ ಘಟನೆಯ ಬಗ್ಗೆ ತನ್ನ ತಂದೆಯ ಬಳಿ ಹೇಳಿಕೊಂಡಿದ್ದಾಳೆ. ನಂತರ ಅವರು ಪೊಲೀಸರಿಗೆ ದೂರು ನೀಡಿದರು. ದೂರಿನಲ್ಲಿ 22 ಜನರು ಅತ್ಯಾಚಾರ ನಡೆಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತರಲ್ಲಿ ಕೆಲವರು ಹುಕುಲ್‌ಗಂಜ್ ಮತ್ತು ಲಲ್ಲಾಪುರ ಪ್ರದೇಶಗಳವರಾಗಿದ್ದು, ಅದೇ ರಾತ್ರಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳೀಯ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿ ಚಂದ್ರಕಾಂತ್ ಮೀನಾ, ಸಂತ್ರಸ್ತೆಯಾಗಲಿ ಅಥವಾ ಆಕೆಯ ಕುಟುಂಬವಾಗಲಿ ಆರಂಭದಲ್ಲಿ ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿರಲಿಲ್ಲ. "ಅತ್ಯಾಚಾರ ದೂರು ಏಪ್ರಿಲ್ 6 ರಂದು ಮಾತ್ರ ದಾಖಲಾಗಿದೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Physical Abuse: ಬೆಂಗಳೂರಿನಲ್ಲಿ ಮತ್ತೆ ಕಾಮುಕರ ಅಟ್ಟಹಾಸ, ಅಣ್ಣನಿಗೆ ಹಲ್ಲೆ ಮಾಡಿ ಯುವತಿಯ ಸಾಮೂಹಿಕ ಅತ್ಯಾಚಾರ
ಇತ್ತೀಚೆಗೆ ಭಾವನೇ ಸುಪಾರಿ ಕೊಟ್ಟು ನಾದಿನಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿಸಿ, ಕೊಲೆ ಮಾಡಿರುವ ಭೀಕರ ಘಟನೆಯೊಂದು ಉತ್ತರ ಪ್ರದೇಶದ ಮುಜಫರ್ ನಗರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಬ್ಬರು ಸುಪಾರಿ ಹಂತಕರ ಜೊತೆ ಸೇರಿಕೊಂಡು ಭಾವನೇ ನಾದಿನಿಯ ಮೇಲೆ ಅತ್ಯಾಚಾರ ಎಸಗಿದ್ದು, ನಂತರ ಕೊಲೆ ಮಾಡಿದ್ದಾನೆ. ಸಾಕ್ಷ್ಯ ನಾಶಗೊಳಿಸಲು ಮೃತದೇಹಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾನೆ ಎಂದು ತಿಳಿದು ಬಂದಿದೆ. ಆರೋಪಿಯನ್ನು ಆಶೀಷ್ ಕುಮಾರ್ ಎಂದು ಗುರುತಿಸಲಾಗಿದ್ದು, ಹಂತಕರಾದ ಶುಭಂ ಮತ್ತು ದೀಪಕ್ ಅವರು ತಲೆಮರೆಸಿಕೊಂಡಿದ್ದಾರೆ.