Waqf bill: ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ಮತಗಳೆಷ್ಟು ಬೇಕು? ಯಾವ ಪಕ್ಷಗಳಿಂದ ಬೆಂಬಲ? ಯಾರಿಂದ ವಿರೋಧ? ಇಲ್ಲಿದೆ ಡಿಟೇಲ್ಸ್
Waqf bill: 1995 ರ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡುವುದು ಮತ್ತು 1923 ರ ಮುಸಲ್ಮಾನ್ ವಕ್ಫ್ ಕಾಯ್ದೆಯನ್ನು ರದ್ದುಗೊಳಿಸುವುದು ಬಿಜೆಪಿಯ ಸೈದ್ಧಾಂತಿಕ ಕಾರ್ಯಸೂಚಿಯ ಭಾಗವಾಗಿದೆ. ಇದು ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದು ಮತ್ತು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ನಡೆಯಷ್ಟೇ ಸೂಕ್ಷ್ಮವಾದ ಮತ್ತು ಕೋಲಾಹಲವನ್ನೇ ಸೃಷ್ಟಿಸಿರುವ ಸಂಗತಿಯಾಗಿದೆ. ಹಾಗಿದ್ದರೆ ವಕ್ಫ್ ತಿದ್ದುಪಡಿ ಮಸೂದೆಗೆ ವಿವಿಧ ಪಕ್ಷಗಳ ಪರ-ವಿರೋಧ ಹೇಗಿದೆ?


ನವದೆಹಲಿ: ವಕ್ಫ್ ಮಸೂದೆ ಮಂಡನೆಗೆ(Waqf bill) ಕ್ಷಣಗಣನೆ ಶುರುವಾಗಿದೆ. ಇತ್ತ ವಕ್ಫ್ ಮಸೂದೆ ಮಂಡನೆಗೆ ಕೇಂದ್ರ ಕೇಂದ್ರ ಸರ್ಕಾರ ಸಕಲ ರೀತಿಯ ತಯಾರಿ ನಡೆಸುತ್ತಿದ್ದಂತೆ ಮತ್ತೊಂದೆಡೆ ಮೋದಿ ಸರ್ಕಾರವನ್ನು ಕಟ್ಟಿ ಹಾಕಲು ವಿರೋಧ ಪಕ್ಷಗಳು ರಣತಂತ್ರ ರೂಪಿಸಿ ಸಂಸತ್‌ನಲ್ಲಿ ಕೋಲಾಹಲ ಸೃಷ್ಟಿಗೆ ಸಜ್ಜಾಗಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದು ಮತ್ತು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ನಡೆಯಷ್ಟೇ ಸೂಕ್ಷ್ಮವಾದ ಮತ್ತು ಕೋಲಾಹಲವನ್ನೇ ಸೃಷ್ಟಿಸಿರುವ ಸಂಗತಿಯಾಗಿರುವ ವಕ್ಫ್ ತಿದ್ದುಪಡಿ ಮಸೂದೆಗೆ ವಿವಿಧ ಪಕ್ಷಗಳ ಪರ-ವಿರೋಧ ನಡೆ ಹೇಗಿದೆ ಎಂಬ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಮಸೂದೆ ಅಂಗೀಕಾರಕ್ಕೆ 272 ಮತಗಳ ಅಗತ್ಯ
ಸಂಸತ್‌ನಲ್ಲಿ ಒಂದು ಮಸೂದೆ ಅಂಗೀಕರಿಸಲು ಅದಕ್ಕೆ 272 ಮತಗಳ ಅಗತ್ಯವಿದೆ. ಲೋಕಸಭೆಯಲ್ಲಿ ಈಗಾಗಲೇ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ 293 ಸ್ಪಷ್ಟ ಬಹುಮತ ಹೊಂದಿದೆ. ಎನ್‌ಡಿಎ ಮೈತ್ರಿಕೂಟದಲ್ಲಿರುವ ಸಂಸದರಲ್ಲಿ ಬಿಜೆಪಿ 240 ಸದಸ್ಯರನ್ನು ಹೊಂದಿದ್ದು, ಮಿತ್ರಪಕ್ಷಗಳಿಗೆ ಬೆಂಬಲ ಸಿಗುವ ವಿಶ್ವಾಸ ಹೊಂದಿದೆ. ಮಿತ್ರಪಕ್ಷಗಳಾದ ತೆಲುಗು ದೇಶಂ ಪಕ್ಷ (ಟಿಡಿಪಿ)ದಿಂದ 16, ಜೆಡಿಯು ಪಕ್ಷದಿಂದ 12, ಶಿವಸೇನೆಯಿಂದ 7, ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ದಿಂದ 5, ಮತ್ತು ಆರ್‌ಎಲ್‌ಡಿ, ಜೆಡಿಎಸ್, ಜೆಎಸ್‌ಪಿ, ಇತರ 7 ಪಕ್ಷಗಳಿಂದ ತಲಾ ಇಬ್ಬರು ಸದಸ್ಯರನ್ನು ಹೊಂದಿದೆ. ಮತ್ತೊಂದೆಡೆ ನಿತೀಶ್ ಕುಮಾರ್ ಅವರ ಜೆಡಿಯು ಕೂಡ ಮಸೂದೆಗೆ ತನ್ನ ಬೆಂಬಲವನ್ನು ಸೂಚಿಸಿದೆ.
ಈ ಸುದ್ದಿಯನ್ನೂ ಓದಿ: Waqf amendment bill: ವಕ್ಫ್ ಕದನಕ್ಕೆ ಕೆಲವೇ ಕ್ಷಣದಲ್ಲಿ ರಣಕಹಳೆ; ತೀವ್ರ ವಿರೋಧಕ್ಕೆ INDI ಬಣ ಸಜ್ಜು
ವಕ್ಫ್ ಮಸೂದೆಗೆ ಯಾವ ಪಕ್ಷಗಳಿಂದ ವಿರೋಧ?
ಇನ್ನು ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟ ವಕ್ಫ್ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಇದು ಅಸಂವಿಧಾನಿಕ ಮತ್ತು ಮುಸ್ಲಿಂ ಸಮುದಾಯದ ಹಿತಾಸಕ್ತಿಗಳಿಗೆ ಹಾನಿಕಾರಕ ಎಂದು ಖಂಡತುಂಡವಾಗಿ ಸರ್ಕಾರದ ನಡೆಯನ್ನು ವಿರೋಧಿಸಿವೆ. ಹಾಗಾದರೆ ಮಸೂದೆಗೆ ಯಾವ ಪಕ್ಷಗಳಿಂದ ವಿರೋಧ ವ್ಯಕ್ತವಾಗಿದೆ ಮತ್ತು ಅವುಗಳ ಸಂಖ್ಯಾ ಬಲ ಎಷ್ಟು ಎಂಬುದನ್ನು ನೋಡೋಣ. ಲೋಕಸಭೆಯಲ್ಲಿ ಕಾಂಗ್ರೆಸ್, 99 ಸ್ಥಾನಗಳನ್ನು ಹೊಂದಿದ್ದು, ಸಮಾಜವಾದಿ ಪಕ್ಷ – 37, ಟಿಎಂಸಿ – 28, ಡಿಎಂಕೆ – 22, ಶಿವಸೇನೆ (ಯುಬಿಟಿ) – 9, ಎನ್‌ಸಿಪಿ-ಎಸ್‌ಪಿ – 8, ಸಿಪಿಐಎಂ – 4, ಆರ್‌ಜೆಡಿ – 4, ಎಎಪಿ – 3, ಜೆಎಂಎಂ – 3, ಐಯುಎಂಎಲ್ – 3, ಮತ್ತು ಜೆಕೆ ನ್ಯಾಷನಲ್ ಕಾನ್ಫರೆನ್ಸ್ – 2, ಮತ್ತು ಇತರ 13 ಸ್ಥಾನಗಳನ್ನು ಹೊಂದಿದೆ. ಇನ್ನು ಇಂಡಿ ಬಣದಲ್ಲಿಲ್ಲದಿದ್ದರೂ ಎಐಎಂಐಎಂನ ಏಕೈಕ ಸಂಸದ ಅಸಾದುದ್ದೀನ್ ಓವೈಸಿ ಕೂಡ ಮಸೂದೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಒಟ್ಟು 236 ಸ್ಥಾನಗಳನ್ನು ಹೊಂದಿದೆ.
ವೈಎಸ್‌ಆರ್‌ಸಿಪಿ (4 ಸಂಸದರು) ಮತ್ತು ಶಿರೋಮಣಿ ಅಕಾಲಿ ದಳ (1 ಸಂಸದ) ಇನ್ನು ತಮ್ಮ ನಿಲುವನ್ನು ಸ್ಪಷ್ಟಪಡಿಸಿಲ್ಲ.