ಜನಾಕ್ರೋಶಕ್ಕೆ ಮೂಲವಾಗದಿರಲಿ
ಹತ್ತಾರು ಪಕ್ಷಗಳನ್ನು ಒಳಗೊಂಡ ‘ಖಿಚಡಿ ಸರಕಾರ’ವನ್ನು ಕೇಂದ್ರದಲ್ಲಿ ನಿಭಾಯಿಸಬೇಕಾಗಿ ಬಂದಾಗ ವಾಜಪೇಯಿಯವರಂಥ ಮುತ್ಸದ್ದಿಯೇ ಇದ್ದಬದ್ದ ಬುದ್ಧಿಯನ್ನೆಲ್ಲಾ ಖರ್ಚು ಮಾಡ ಬೇಕಾಗಿ ಬಂದಿದ್ದು ಜಗಜ್ಜಾಹೀರು ಸಂಗತಿ.
ಸಂಪಾದಕೀಯ
ಸ್ವಂತಬಲದ ಮೇಲೆ ಅಧಿಕಾರಕ್ಕೆ ಬರಲಾಗದ ರಾಜಕೀಯ ಪಕ್ಷಗಳು ‘ಬಾಹ್ಯ ಬೆಂಬಲದ’ ಸರಕಾರ ವನ್ನೋ ಅಥವಾ ‘ಸಹಭಾಗಿತ್ವದ’ ಸಮ್ಮಿಶ್ರ ಸರಕಾರವನ್ನೋ ರಚಿಸುವಂಥ ಪರಿಸ್ಥಿತಿ ಉದ್ಭವಿಸಿದರೆ ಅದು ಕಷ್ಟ ಕಷ್ಟ!
ಹತ್ತಾರು ಪಕ್ಷಗಳನ್ನು ಒಳಗೊಂಡ ‘ಖಿಚಡಿ ಸರಕಾರ’ವನ್ನು ಕೇಂದ್ರದಲ್ಲಿ ನಿಭಾಯಿಸಬೇಕಾಗಿ ಬಂದಾಗ ವಾಜಪೇಯಿಯವರಂಥ ಮುತ್ಸದ್ದಿಯೇ ಇದ್ದಬದ್ದ ಬುದ್ಧಿಯನ್ನೆಲ್ಲಾ ಖರ್ಚು ಮಾಡ ಬೇಕಾಗಿ ಬಂದಿದ್ದು ಜಗಜ್ಜಾಹೀರು ಸಂಗತಿ. ಹಾಗೆಯೇ, ಕೆಲ ರಾಜ್ಯಗಳಲ್ಲಿ ಕಾಲಾನುಕಾಲಕ್ಕೆ ಅಸ್ತಿತ್ವಕ್ಕೆ ಬಂದ ಸಮ್ಮಿಶ್ರ ಸರಕಾರಗಳು, ಅವುಗಳ ಪಾಲುದಾರರ ಸ್ವಾರ್ಥ ಹಿತಾಸಕ್ತಿಯಿಂದಲೋ, ಒಳಜಗಳಗಳಿಂದಲೋ ಜನರ ಅಸಮಾಧಾನಕ್ಕೆ ಗುರಿಯಾಗಿದ್ದಿದೆ.
ಇದನ್ನೂ ಓದಿ: Vishwavani Editorial: ಮೈಯೆಲ್ಲಾ ಕಣ್ಣಾಗಿರಬೇಕು
ಮಹಾರಾಷ್ಟ್ರದ ‘ಮಹಾಯುತಿ ಮೈತ್ರಿ ಸರಕಾರ’ವೂ ಇದೇ ಪರಿಸ್ಥಿತಿಗೆ ಸಾಕ್ಷಿಯಾಗಲಿದೆಯಾ ಎನಿಸು ತ್ತಿರುವುದು ಸುಳ್ಳಲ್ಲ. ಹಿಂದಿನ ಶಿಂಧೆ ಸರಕಾರದ ಕೆಲ ನಿರ್ಧಾರಗಳನ್ನು ರದ್ದು ಗೊಳಿಸಿ ತನಿಖೆಗೆ ಆದೇಶಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸರ ನಡೆಗೆ ಶಿವಸೇನೆ ಕೆರಳಿದೆಯಂತೆ. ಹೀಗಾಗಿ ಸದರಿ ಮಿತ್ರಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಹೊಗೆಯಾಡಲು ಶುರುಮಾಡಿದೆ ಎಂಬುದು ಲಭ್ಯಸುದ್ದಿ.
ಇದನ್ನು ಆದಷ್ಟು ಬೇಗ ತಹಬಂದಿಗೆ ತಂದುಕೊಳ್ಳದಿದ್ದಲ್ಲಿ, ಯಾರೋ ಕೆಲವರ ಸ್ವಾರ್ಥ ಲಾಲಸೆ ಯಿಂದಾಗಿ ಜನರು ಒಂದಿಡೀ ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತೇ ರೋಸತ್ತು ಹೋಗುವ ಸಂದರ್ಭ ಸೃಷ್ಟಿಯಾಗಬಹುದು. ಮೂರ‍್ನಾಲ್ಕು ಮಂದಿಯ ಮನೆಯನ್ನೇ ನಿಭಾಯಿಸುವುದು ಸುಲಭವಲ್ಲ ದಿರುವಾಗ, ಸರಕಾರದಂಥ ಬೃಹತ್ ವ್ಯವಸ್ಥೆಯನ್ನು ನಿರ್ವಹಿಸುವುದು ಹುಡುಗಾಟದ ಮಾತಲ್ಲ ಎಂಬುದೇನೋ ನಿಜ.
ಆದರೆ, ಅದನ್ನೇ ನೆಪ ವಾಗಿಟ್ಟುಕೊಂಡು ಜನಕಲ್ಯಾಣ ಮತ್ತು ಅಭಿವೃದ್ಧಿಯ ಚಟುವಟಿಕೆಗಳನ್ನು ನಿರ್ಲಕ್ಷಿಸಿದರೆ, ಅದು ಜನಾಕ್ರೋಶಕ್ಕೆ ಕಾರಣವಾಗಬಹುದು. ಸಂಬಂಧಪಟ್ಟವರು ಇದನ್ನು ಇನ್ನಾ ದರೂ ಅರಿಯಲಿ.