IPL 2025: ʻಎಂಎಸ್ ಧೋನಿ ನನ್ನ ತಂದೆಯಿದ್ದಂತೆʼ-ಸಿಎಸ್‌ಕೆ ದಿಗ್ಗಜನಿಗೆ ಮತೀಶ ಪತಿರಣ ಗೌರವ!
Matheesha Pathirana pays tribute to MS Dhoni: ಭಾರತ ತಂಡದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ವಿಕೆಟ್ ಕೀಪರ್ ಎಂಎಸ್ ಧೋನಿ ನನ್ನ ತಂದೆಯ ರೀತಿ ಎಂದು ಶ್ರೀಲಂಕಾ ಹಾಗೂ ಸಿಎಸ್‌ಕೆ ಯುವ ವೇಗಿ ಮತೀಶ ಪತಿರಣ ಗುಣಗಾಣ ಮಾಡಿದ್ದಾರೆ. ಎಂಎಸ್ ಧೋನಿ ಹಾಗೂ ಪತಿರಣ ಇಬ್ಬರೂ ಪ್ರಸ್ತುತ ನಡೆಯುತ್ತಿರುವ 2025ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಪರ ಆಡುತ್ತಿದ್ದಾರೆ.

ಎಂಎಸ್ ಧೋನಿಗೆ ಗೌರವ ಅರ್ಪಿಸಿದ ಮತೀಶ ಪತಿರಣ.

ನವದೆಹಲಿ: ಭಾರತ ತಂಡದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ವಿಕೆಟ್ ಕೀಪರ್ ಎಂಎಸ್ ಧೋನಿಗೆ (MS Dhoni) ಶ್ರೀಲಂಕಾ ಹಾಗೂ ಸಿಎಸ್‌ಕೆ ಯುವ ವೇಗಿ ಮತೀಶ ಪತಿರಣ(Matheesha Pathirana ಗೌರವಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಎಂಎಸ್ ಧೋನಿ ನನ್ನ ತಂದೆ ಇದ್ದಂತೆ ಎಂದು ಹೇಳಿಕೊಂಡಿದ್ದಾರೆ. 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ವೇಳೆ ಆಡಮ್ ಮಿಲ್ನೆ ಅವರು ಗಾಯಕ್ಕೆ ತುತ್ತಾದ ಬಳಿಕ ಅವರ ಸ್ಥಾನಕ್ಕೆ ಬಂದಿದ್ದ ಮತೀಶ ಪತಿರಣ,. ಅಂದಿನಿಂದ ಇಲ್ಲಿಯವರೆಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದಾರೆ ಹಾಗೂ ಎಂಎಸ್ ಧೋನಿ ಅವರ ಜೊತೆ ಅತ್ಯುತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಸದ್ಯ ನಡೆಯುತ್ತಿರುವ 2025ರ ಐಪಿಎಲ್ ಟೂರ್ನಿಯಲ್ಲಿ ಎಂಎಸ್ ಧೋನಿ ಹಾಸಗೂ ಮತೀಶ ಪತಿರಣ ಚೆನ್ನೈ ತಂಡದಲ್ಲಿ ಆಡುತ್ತಿದ್ದಾರೆ.
ಚೆನ್ನೈ ಫ್ರಾಂಚೈಸಿ ತನ್ನ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಮಾತನಾಡಿದ ಮತೀಶ ಪತಿರಣ, ಎಂಎಸ್ ಧೋನಿಗೆ ದೊಡ್ಡ ಗೌರವವನ್ನು ಅರ್ಪಿಸಿದ್ದಾರೆ. ಗೌರವ, ಸ್ವಾತಂತ್ರ ಹಾಗೂ ತಾಳ್ಮೆಯಿಂದ ಎಂಎಸ್ ಧೋನಿ ನನಗೆ ಮಾರ್ಗದರ್ಶನವನ್ನು ನೀಡಿದ್ದಾರೆ. ಎಂಎಸ್ ಧೋನಿ ನನ್ನ ಪಾಲಿಗೆ ತಂದೆ ಇದ್ದಂತೆ ಎಂದು ಸಿಎಸ್‌ಕೆ ವೇಗಿ ಬಣ್ಣಿಸಿದ್ದಾರೆ. ತಮ್ಮ ಕುಟುಂಬವನ್ನು ನೋಡಿಕೊಳ್ಳುವ ರೀತಿ ನಮ್ಮನ್ನು ನೋಡಿಕೊಳ್ಳುತ್ತಾರೆ ಎಂದು ಸಿಎಸ್‌ಕೆ ವೇಗಿ ತಿಳಿಸಿದ್ದಾರೆ.
ಎಂಎಸ್ ಧೋನಿ ನನ್ನ ತಂದೆಯಂತೆ: ಪತಿರಣ
"ಎಂಎಸ್ ಧೋನಿ ನನಗೆ ತಂದೆಯಿದ್ದಂತೆ, ಏಕೆಂದರೆ ನಾನು ಸಿಎಸ್‌ಕೆ ತಂಡದಲ್ಲಿದ್ದಾಗ ಅವರು ನನಗೆ ಬೆಂಬಲ, ಸಲಹೆ ಹಾಗೂ ಮಾರ್ಗದರ್ಶನವನ್ನು ನೀಡಿದ್ದಾರೆ. ನನ್ನ ಮನೆಯಲ್ಲಿ ತಂದೆ ಏನು ಮಾಡುತ್ತಾರೆ, ಅದೇ ರೀತಿ ಎಂಎಸ್ ಧೋನಿ ನನಗೆ ಮಾಡಿದ್ದಾರೆ. ಈ ಕಾರಣದಿಂದಲೇ ಎಂಎಸ್ ಧೋನಿಯನ್ನು ನಾನು ಕ್ರಿಕೆಟ್ ತಂದೆ ಎಂದು ಕರೆಯುತ್ತೇನೆ," ಎಂದು ಮತೀಶ ಪತಿರಣ ಹೇಳಿದ್ದಾರೆ.
"ಮಾಲಿ ಎಂಬುದು ನನಗೆ ತುಂಬಾ ಪರಿಚಿತವಾಗಿದೆ, ಏಕೆಂದರೆ ನಾವು ಶ್ರೀಲಂಕಾದಲ್ಲಿದ್ದಾಗ ಕಿರಿಯ ಸಹೋದರನನ್ನು ಈ ರೀತಿ ಕರೆಯುತ್ತೇವೆ. ಹಾಗಾಗಿ ಇಂಥಾ ದೊಡ್ಡ ದಿಗ್ಗಜ ನನ್ನನ್ನು ಕರೆಯವುದು ನಿಜಕ್ಕೂ ಅದ್ಭುತವಾಗಿದೆ. ಇದು ತುಂಬಾ ಒಳ್ಳೆಯದು, ಇದು ತುಂಬಾ ಒಳ್ಳೆಯದು," ಎಂದು ಚೆನ್ನೈ ಸೂಪರ್ ಕಿಂಗ್ಸ್ ವೇಗಿ ತಿಳಿಸಿದ್ದಾರೆ.
Mahi and Mathee!
— Chennai Super Kings (@ChennaiIPL) April 4, 2025
Making us feel the bond! 🥹💛
Watch #TheMakingOf Matheesha Pathirana Out now
🔗 - https://t.co/3AmfTzCSmx
#WhistlePodu #Yellove🦁💛 pic.twitter.com/E0Sj4JjGGu
ಎಂಎಸ್ ಧೋನಿ ಬಗ್ಗೆ ಪತಿರಣ ತಾಯಿ ಪ್ರತಿಕ್ರಿಯೆ
ಶ್ರೀಲಂಕಾ ದಿಗ್ಗಜ ಲಸಿತ್ ಮಾಲಿಂಗ ಅವರ ಶೈಲಿಗೆ ಹೋಲುವ ರೀತಿ ಮತೀಶ ಪತಿರಣ ಬೌಲ್ ಮಾಡುತ್ತಾರೆ. ಈ ಕಾರಣದಿಂದ ಎಂಎಸ್ ಧೋನಿ, ಮತೀಶ ಪತಿರಣ ಅವರನ್ನು ಮಾಲಿ ಎಂದು ಕರೆಯುತ್ತಾರೆ. ಎಂಎಸ್ ಧೋನಿ ಅಡಿಯಲ್ಲಿ ಐಪಿಎಲ್ ಟೂರ್ನಿಯಲ್ಲಿ ಸಾಕಷ್ಟು ಸುಧಾರಣೆ ಕಂಡಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಐಪಿಎಲ್ ಟೂರ್ನಿಯಲ್ಲಿ ಆಡುವ ಸಂದರ್ಭದಲ್ಲಿ ಎಂಎಸ್ ಧೋನಿ ನನ್ನ ಪುತ್ರನ ಜೊತೆ ಆಡುವುದರಿಂದ ನಮಗೆ ಯಾವುದೇ ಚಿಂತೆ ಇಲ್ಲ. ತಮ್ಮ ಪುತ್ರನನ್ನು ಎಂಎಸ್ ಧೋನಿ ನೋಡಿಕೊಳ್ಳುತ್ತಾರೆಂದು ಪತಿರಣ ಪೋಷಕರು ಭಾವಿಸಿದ್ದಾರೆ.
"ಎಂಎಸ್ ಧೋನಿ ಬಗ್ಗೆ ಪದಗಳಿಲ್ಲ. ಅವರು ನಿಜವಾಗಿಯೂ ದೇವರು. ಮತೀಶ ತನ್ನ ತಂದೆಗೆ ಯಾವ ರೀತಿ ಗೌರವವನ್ನು ನೀಡುತ್ತಾರೆ, ಅದೇ ರೀತಿಯ ಗೌರವನ್ನು ಎಂಎಸ್ ಧೋನಿಗೆ ನೀಡುತ್ತಾರೆ," ಎಂದು ಮತೀಶ ಪತಿರಣ ತಾಯಿ ಅನೂರಾ ಪತಿರಣ ಹೇಳಿದ್ದಾರೆ.
IPL 2025: ಆರ್‌ಸಿಬಿ, ಸಿಎಸ್‌ಕೆ ಅಲ್ಲವೇ ಅಲ್ಲ! ತಮ್ಮ ನೆಚ್ಚಿನ ಐಪಿಎಲ್ ತಂಡವನ್ನು ಆರಿಸಿದ ಇರ್ಫಾನ್ ಪಠಾಣ್!
ಕಳೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮತೀಶ ಪತಿರಣ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿ 14 ವಿಕೆಟ್‌ಗಳನ್ನು ಕಬಳಿಸಿದ್ದರು. ಅದರಂತೆ 2025ರ ಐಪಿಎಲ್ ಟೂರ್ನಿಗೂ ಕೂಡ ಪತಿರಣ ಅವರನ್ನು ಚೆನ್ನೈ ಫ್ರಾಂಚೈಸಿ ಉಳಿಸಿಕೊಂಡಿತ್ತು. ಪ್ರಸಕ್ತ ಆವೃತ್ತಿಯಲ್ಲಿ ಆಡಿದ ಎರಡು ಪಂದ್ಯಗಳಿಂದ ಪತಿರಣ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಮಾರಕ ವೇಗ ಹಾಗೂ ಯಾರ್ಕರ್ ಕೌಶಲ ಹೊಂದಿರುವ ಪತಿರಣ ಸಿಎಸ್‌ಕೆ ಯೋಜನೆಗೆ ಪ್ರಮುಖ ಅಸ್ತ್ರವಾಗಿದ್ದಾರೆ. ಏಪ್ರಿಲ್ 4 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೂ ತನ್ನ ಮುಂದಿನ ಪಂದ್ಯವನ್ನು ಆಡಲಿದೆ.