ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ತವರಿನ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್​ ಕೂಟದಲ್ಲಿ ಕಣಕ್ಕಿಳಿಯಲು ನೀರಜ್‌ ಚೋಪ್ರಾ ಸಜ್ಜು

Neeraj Chopra: ನೀರಜ್‌ ಚೋಪ್ರಾ ಈ ಕ್ರೀಡಾಕೂಟದ ಸಂಘಟನಾ ಸಮಿತಿಯಲ್ಲಿದ್ದಾರೆ. ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್ ಮತ್ತು ಭಾರತ ಅಥ್ಲೆಟಿಕ್ಸ್‌ ಫೆಡರೇಷನ್ (ಎಎಫ್‌ಐ) ಜೊತೆಗೆ ಕೈಜೋಡಿಸಿರುವ ಅವರು ಈ ಕೂಟವನ್ನು ಭಾರತಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಮೇ 24ಕ್ಕೆ ಪಂಚಕುಲದಲ್ಲಿ ನೀರಜ್​ ಚೋಪ್ರಾ ಸ್ಪರ್ಧೆ

Profile Abhilash BC Apr 5, 2025 12:23 PM

ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ ಬಳಿಕ ಸುದೀರ್ಘ ವಿಶ್ರಾಂತಿಯಲ್ಲಿದ್ದ ಅವಳಿ ಒಲಿಂಪಿಕ್‌ ಪದಕ ವಿಜೇತ ನೀರಜ್‌ ಚೋಪ್ರಾ(Neeraj Chopra) ಅವರು ಮೊಟ್ಟಮೊದಲ ಬಾರಿಗೆ ತವರು ನೆಲದಲ್ಲೇ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್​ ಕೂಟವೊಂದರಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಪಂಚಕುಲದಲ್ಲಿ ಮೇ 24ರಂದು ನಡೆಯುವ ವಿಶ್ವ ಜಾವೆಲಿನ್ ಥ್ರೋ ಕೂಟದಲ್ಲಿ ಪ್ರಮುಖ ವಿದೇಶಿ ಜಾವೆಲಿನ್​ ಥ್ರೋ ತಾರೆಯರ ಎದುರು ತವರಿನ ಪ್ರೇಕ್ಷಕರ ಬೆಂಬಲದೊಂದಿಗೆ ಸ್ಪರ್ಧಿಸಲಿದ್ದಾರೆ. ಚೋಪ್ರಾ, 2012 ರಿಂದ 2015ರವರೆಗೆ ಪಂಚಕುಲದ ಇದೇ ಕ್ರೀಡಾಂಗಣದಲ್ಲಿ ತರಬೇತಿ ಪಡೆದಿದ್ದರು. ಹೀಗಾಗಿ ಅವರ ಮೇಲೆ ಭಾರೀ ನಿರೀಕ್ಷೆ ಇಡಲಾಗಿದೆ.

ಪಂಚಕುಲಾದ ತಾವೂ ದೇವಿಲಾಲ್ ಕ್ರೀಡಾಂಗಣದಲ್ಲಿ ನಡೆಯುವ ‘ನೀರಜ್ ಚೋಪ್ರಾ ಕ್ಲಾಸಿಕ್’ ಹೆಸರಿನ ಈ ಕೂಟಕ್ಕೆ ವಿಶ್ವ ಅಥ್ಲೆಟಿಕ್ಸ್‌ನಿಂದ ‘ಎ’ ಕೆಟಗರಿ ಸ್ಥಾನಮಾನ ದೊರಕಿದೆ. ಆದರೆ, ಈ ಕೂಟವನ್ನು ವಿಶ್ವ ಅಥ್ಲೆಟಿಕ್ಸ್‌ ವೆಬ್‌ಸೈಟ್‌ನಲ್ಲಿ ತನ್ನ ಕಾಂಟಿನೆಂಟಲ್ ಪ್ರವಾಸದ ಭಾಗವಾಗಿ ಸೇರಿಸಿಲ್ಲ. ಈ ಕೂಟ ಸಂಘಟಿಸುವಲ್ಲಿ ನೀರಜ್ ಚೋಪ್ರಾ ವಹಿಸಿದ ಪಾತ್ರದಿಂದ ಅವರ ಹೆಸರನ್ನೇ ಇಡಲಾಗಿದೆ.

ಚೋಪ್ರಾ ಈ ಕ್ರೀಡಾಕೂಟದ ಸಂಘಟನಾ ಸಮಿತಿಯಲ್ಲಿದ್ದಾರೆ. ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್ ಮತ್ತು ಭಾರತ ಅಥ್ಲೆಟಿಕ್ಸ್‌ ಫೆಡರೇಷನ್ (ಎಎಫ್‌ಐ) ಜೊತೆಗೆ ಕೈಜೋಡಿಸಿರುವ ಅವರು ಈ ಕೂಟವನ್ನು ಭಾರತಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಇದನ್ನೂ ಓದಿ Neeraj Chopra: ವಿಶ್ವ ಅಥ್ಲೆಟಿಕ್ ಮ್ಯೂಸಿಯಂ ಸೇರಿದ ನೀರಜ್‌ ಚೋಪ್ರಾ ಒಲಿಂಪಿಕ್ಸ್‌ ಜೆರ್ಸಿ

ಈ ಟೂರ್ನಿಗೂ ಮುನ್ನ ಚೋಪ್ರಾ, ಮೇ 16 ರಂದು ದೋಹಾದಲ್ಲಿ ನಡೆಯುವ ಡೈಮಂಡ್ ಲೀಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಮೂರು ಬಾರಿಯ ಒಲಿಂಪಿಕ್ ಚಾಂಪಿಯನ್ ಹಾಗೂ ವಿಶ್ವದಾಖಲೆ ವೀರ ಯಾನ್‌ ಝೆಲೆಝ್ನಿ ಅವರ ತರಬೇತಿಯಲ್ಲಿ ನೀರಜ್‌ ಮೊದಲ ಬಾರಿಗೆ ಆಡುತ್ತಿರುವ ಪ್ರಮುಖ ಟೂರ್ನಿ ಇದಾಗಿದೆ. ಚೋಪ್ರಾ ಅವರು ತಮ್ಮ ಗೆಳತಿ ಹಿಮಾನಿ ಮೋರ್ ಅವರನ್ನು ಜನವರಿ 17 ರಂದು ವಿವಾಹವಾಗಿದ್ದರು.