Fraud Case: ಡೇಟಿಂಗ್ ಆ್ಯಪ್ ಮೂಲಕ ಪರಿಚಯ; ನೋಯ್ಡಾ ವ್ಯಕ್ತಿಗೆ 6.5 ಕೋಟಿ ರೂ ಪಂಗನಾಮ
ವ್ಯಕ್ತಿಯೊಬ್ಬ ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ಮಹಿಳೆಯನ್ನು ನಂಬಿ ಕೋಟ್ಯಾಂತರ ರೂ. ಕಳೆದು ಕೊಂಡ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ನೋಯ್ಡಾದ ದಲ್ಜಿತ್ ಸಿಂಗ್ ತನ್ನ ಹೆಂಡತಿಗೆ ವಿಚ್ಛೇದನ ನೀಡಿ ದೂರವಾಗಿದ್ದ. ಮತ್ತೆ ತನ್ನ ಪ್ರೀತಿಯನ್ನು ಡೇಟಿಂಗ್ ಆ್ಯಪ್ ಮೂಲಕ ಹುಡುಕಲು ಹೊರಟಿದ್ದ. ಕಳೆದ ವರ್ಷ ಮಹಿಳೆಯೊಬ್ಬಳು ಆತನಿಗೆ ಅಲ್ಲಿ ಮಹಿಳೆಯೊಬ್ಬಳ ಪರಿಚಯವಾಗಿದೆ.


ನೋಯ್ಡಾ: ಇತ್ತೀಚಿನ ದಿನಗಳಲ್ಲಿ ಡೇಟಿಂಗ್ ಆ್ಯಪ್‌ಗಳ ಮೂಲಕ ಜನರು ಮೋಸ (Fraud Case) ಹೋಗುತ್ತಿರುವುದು ಹೆಚ್ಚಾಗುತ್ತಿದೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಕುರುಡು ಪ್ರೀತಿಗೆ ಬಿದ್ದು ಕೋಟ್ಯಾಂತರ ರೂ ಕಳೆದು ಕೊಂಡಿದ್ದಾನೆ. ನೋಯ್ಡಾದ ದಲ್ಜಿತ್ ಸಿಂಗ್ ತನ್ನ ಹೆಂಡತಿಗೆ ವಿಚ್ಛೇದನ ನೀಡಿ ದೂರವಾಗಿದ್ದ. ಮತ್ತೆ ತನ್ನ ಪ್ರೀತಿಯನ್ನು ಡೇಟಿಂಗ್ ಆ್ಯಪ್ ಮೂಲಕ ಹುಡುಕಲು ಹೊರಟಿದ್ದ. ಕಳೆದ ವರ್ಷ ಮಹಿಳೆಯೊಬ್ಬಳು ಆತನಿಗೆ ಅಲ್ಲಿ ಮಹಿಳೆಯೊಬ್ಬಳ ಪರಿಚಯವಾಗಿದೆ. ಆಕೆಯೊಂದಿಗೆ ದಲ್ಜಿತ್ ಸಿಂಗ್ ಮಾತನಾಡಲು ಪ್ರಾರಂಭಿಸಿದ್ದ. ಆಕೆ ಆತನಿಗೆ ಕೆಲ ಹೂಡಿಕೆಗಳ ಬಗ್ಗೆ ಮಾಹಿತಿ ನೀಡಿದ್ದಳು.
ಕಳೆದ ಡಿಸೆಂಬರ್‌ನಲ್ಲಿ , ಹೈದರಾಬಾದ್‌ನವರೆಂದು ಹೇಳಿಕೊಂಡ ಅನಿತಾ ಎಂಬ ಮಹಿಳೆ ಆತನಿಗೆ ಪರಿಚಯವಾಗಿದ್ದಳು. ಅವರಿಬ್ಬರ ನಡುವೆ ಪ್ರತಿದಿನವೂ ಮಾತುಕತೆ ನಡೆಯುತ್ತಿತ್ತು. ಸಿಂಗ್ ಅವರ ವಿಶ್ವಾಸವನ್ನು ಗೆದ್ದ ನಂತರ, ಅನಿತಾ ವ್ಯಾಪಾರದ ಮೂಲಕ ಭಾರಿ ಲಾಭ ಗಳಿಸುವ ಮಾಹಿತಿಯನ್ನು ಹಂಚಿಕೊಂಡಿದ್ದಳು. ಆಕೆಯ ಮಾತನ್ನು ನಂಬಿ ಸಿಂಗ್, ಮೊದಲ ವೆಬ್‌ಸೈಟ್‌ನಲ್ಲಿ 3.2 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದ್ದಾನೆ. ಕೆಲವೇ ಗಂಟೆಗಳಲ್ಲಿ 24,000 ರೂ.ಗಳನ್ನು ಗಳಿಸಿದ್ದ. ಲಾಭವನ್ನು ನೋಡಿದ ಮೇಲೆ ಆತ ಮತ್ತಷ್ಟು ನಂಬಿದ್ದ. ನಂತರ ಅವನು ತನ್ನ ಜೀವಮಾನದ ಉಳಿತಾಯದ ಸುಮಾರು 4.5 ಕೋಟಿ ರೂ.ಗಳನ್ನು ಹೂಡಿಕೆ ಮಾಡಿದ್ದಾನೆ. ಅನಿತಾಳ ಸಲಹೆಯ ಮೇರೆಗೆ, ಆತ ಎರಡು ಕೋಟಿ ಸಾಲ ಪಡೆದುಕೊಂಡು ಹೂಡಿಕೆ ಮಾಡಿದ್ದ. ಭಿನ್ನ ವಹಿವಾಟುಗಳ ಮೂಲಕ ಒಟ್ಟು 6.5 ಕೋಟಿ ರೂ.ಗಳನ್ನು 25 ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Self Harming: ಪ್ರೀತಿಸಿ ಸಿಐಎಸ್ಎಫ್ ಮಹಿಳಾ ಅಧಿಕಾರಿ ಮೋಸ; ಮಂಗಳೂರಿನ ಲಾಡ್ಜ್‌ನಲ್ಲಿ ಉತ್ತರ ಪ್ರದೇಶದ ವ್ಯಕ್ತಿ ಆತ್ಮಹತ್ಯೆ
ಸಿಂಗ್ ತಾನು ಹೂಡಿಕೆ ಮಾಡಿದ್ದ ಹಣವನ್ನು ಕೆಲ ತಿಂಗಳ ನಂತರ ಹಿಂಪಡೆಯಲು ಪ್ರಯತ್ನಿಸಿದ್ದ. ಆದರೆ ಕಂಪನಿ ನಾಪತ್ತೆಯಾಗಿದೆ. ಸಿಂಗ್ ಅವರಿಗೆ ಅನುಮಾನ ಬಂದು ನೋಯ್ಡಾ ಸೆಕ್ಟರ್ -36 ರಲ್ಲಿರುವ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ತನಿಖೆ ನಡೆಸಿದಾಗ, ಅನಿತಾ ಡೇಟಿಂಗ್ ಆ್ಯಪ್ ಪ್ರೊಫೈಲ್ ನಕಲಿ ಎಂದು ತಿಳಿದುಬಂದಿದೆ. ಪೊಲೀಸರು ಈಗ ಹಣವನ್ನು ವರ್ಗಾಯಿಸಲಾದ ಖಾತೆಗಳ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ.