Virat Kohli: ಈ ಬಾರಿಯ ಐಪಿಎಲ್‌ನಲ್ಲಿ 5 ಪ್ರಮುಖ ದಾಖಲೆ ಮೇಲೆ ಕಣ್ಣಿಟ್ಟ ಕೊಹ್ಲಿ
KKR vs RCB: ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಇಂದು ನಡೆಯಲಿರುವ ಉದ್ಘಾಟನ ಪಂದ್ಯದಲ್ಲಿ ಆರ್‌ಸಿಬಿ(KKR vs RCB) ಕೆಕೆಆರ್ ತಂಡವನ್ನು ಎದುರಿಸಲಿದೆ. 2008 ರ ನಂತರ ಮೊದಲ ಬಾರಿಗೆ ಐಪಿಎಲ್‌ನ ಮೊದಲ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ.


ಕೋಲ್ಕತಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ(Virat Kohli), ಐಪಿಎಲ್ 2025(IPL 2025) ರಲ್ಲಿ ಹಲವು ಬೃಹತ್ ಮೈಲಿಗಲ್ಲುಗಳನ್ನು ಸಾಧಿಸುವತ್ತ ಗಮನ ಹರಿಸಿದ್ದಾರೆ. ಕೊಹ್ಲಿ ಈಗಾಗಲೇ ಲೀಗ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದು, ಅವರ ಹೆಸರಿನಲ್ಲಿ 8,004 ರನ್‌ಗಳಿವೆ. ಐಪಿಎಲ್ 18 ನೇ ಸೀಸನ್‌ಗೆ ಕಾಲಿಡುತ್ತಿದ್ದಂತೆ ಅವರು ಇನ್ನೂ ಕೆಲವು ದಾಖಲೆಗಳನ್ನು ಸಾಧಿಸುವತ್ತ ಸನಿಹದಲ್ಲಿದ್ದಾರೆ. ಕೊಹ್ಲಿ ನಿರ್ಮಿಸಬಹುದಾದ ಪ್ರಮುಖ ದಾಖಲೆಗಳ ಪಟ್ಟಿ ಹೀಗಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಇಂದು ನಡೆಯಲಿರುವ ಉದ್ಘಾಟನ ಪಂದ್ಯದಲ್ಲಿ ಆರ್‌ಸಿಬಿ(KKR vs RCB) ಕೆಕೆಆರ್ ತಂಡವನ್ನು ಎದುರಿಸಲಿದೆ. 2008 ರ ನಂತರ ಮೊದಲ ಬಾರಿಗೆ ಐಪಿಎಲ್‌ನ ಮೊದಲ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ.
400ನೇ ಟಿ20 ಪಂದ್ಯ
ಈಡನ್ ಗಾರ್ಡನ್ಸ್‌ನಲ್ಲಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಮೈದಾನಕ್ಕಿಳಿಯುತ್ತಿದ್ದಂತೆ ಅವರು ಟಿ20 ಕ್ರಿಕೆಟ್‌ನಲ್ಲಿ ತಮ್ಮ 400ನೇ ಪಂದ್ಯಗಳ ಮೃಲುಗಲ್ಲು ತಲುಪಿದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ರೋಹಿತ್ ಶರ್ಮಾ (448) ಮತ್ತು ದಿನೇಶ್ ಕಾರ್ತಿಕ್ (412) ಮೊದಲಿಬ್ಬರು.
13 ಸಾವಿರ ರನ್
ಕೊಹ್ಲಿ ಟಿ20ಯಲ್ಲಿ ಮತ್ತೊಂದು ಬೃಹತ್ ದಾಖಲೆಯ ಮೇಲೆ ಕಣ್ಣಿಟ್ಟಿದ್ದಾರೆ. 114 ರನ್ ಬಾರಿಸಿದರೆ, ಟಿ20ಯಲ್ಲಿ 13000 ರನ್ ಗಳಿಸಿದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆ ನಿರ್ಮಿಸಲಿದ್ದಾರೆ. ಪ್ರಸ್ತುತ ಕೊಹ್ಲಿ 399 ಪಂದ್ಯಗಳಲ್ಲಿ 12,886 ರನ್‌ಗಳನ್ನು ಗಳಿಸಿದ್ದಾರೆ.
ಇದನ್ನೂ ಓದಿ IPL 2025: ಲಕ್ನೋ ತಂಡ ಸೇರಲಿದ್ದಾರೆ ಶಾರ್ದೂಲ್ ಠಾಕೂರ್
ಐವತ್ತು ಪ್ಲಸ್ ಸ್ಕೋರ್‌ಗಳು
ಕಳೆದ ಆವೃತ್ತಿಯಲ್ಲಿ ಅತ್ಯಧಿಕ ರನ್ ಬಾರಿಸಿ ಆರೆಂಜ್ ಕ್ಯಾಪ್ ಪಡೆದಿದ್ದ ಕೊಹ್ಲಿ ಈ ಬಾರಿ 4 ಐವತ್ತು ಪ್ಲಸ್ ಸ್ಕೋರ್‌ಗಳನ್ನು ದಾಖಲಿಸಿದರೆ, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಐವತ್ತು ಪ್ಲಸ್ ಸ್ಕೋರ್‌ಗಳನ್ನು ಗಳಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ. ಪ್ರಸ್ತುತ, ಕೊಹ್ಲಿ 63 ಐವತ್ತು ಪ್ಲಸ್ ಸ್ಕೋರ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಡೇವಿಡ್ ವಾರ್ನರ್ ಅಗ್ರಸ್ಥಾನದಲ್ಲಿದ್ದಾರೆ. ಅವರು 66 ಬಾರಿ 50 ಪ್ಲಸ್ ಸ್ಕೋರ್‌ಗಳನ್ನು ಬಾರಿಸಿದ್ದಾರೆ.
He was always ready, but you can tell he has been preparing for this, more. 💪#PlayBold #ನಮ್ಮRCB #IPL2025 pic.twitter.com/mttReCvLfI
— Royal Challengers Bengaluru (@RCBTweets) March 22, 2025
ಸಿಕ್ಸರ್ ದಾಖಲೆ
ಕೊಹ್ಲಿಗೆ ಐಪಿಎಲ್‌ನಲ್ಲಿ 300 ಸಿಕ್ಸರ್‌ಗಳನ್ನು ತಲುಪಲು ಇನ್ನೂ 28 ಸಿಕ್ಸರ್‌ಗಳ ಅಗತ್ಯವಿದೆ. ಅವರು ಪ್ರಸ್ತುತ 272 ಸಿಕ್ಸರ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಐಪಿಎಲ್ ವೃತ್ತಿಜೀವನದಲ್ಲಿ 357 ಸಿಕ್ಸರ್‌ಗಳನ್ನು ಗಳಿಸಿರುವ ಕ್ರಿಸ್ ಗೇಲ್ ಮಾತ್ರ 300 ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಹೊಂದಿದ್ದಾರೆ. ರೋಹಿತ್ ಶರ್ಮಾ 280 ಸಿಕ್ಸರ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.