IPL 2025: ಲಕ್ನೋ ತಂಡ ಸೇರಲಿದ್ದಾರೆ ಶಾರ್ದೂಲ್ ಠಾಕೂರ್
Shardul Thakur: ಆಕಾಶ್ ದೀಪ್, ಆವೇಶ್ ಖಾನ್ ಮತ್ತು ಮಯಾಂಕ್ ಯಾದವ್ ಮುಂತಾದ ವೇಗಿಗಳು ಲಕ್ನೋ ತಂಡಕ್ಕೆ ಇನ್ನಷ್ಟೇ ಸೇರ್ಪಡೆಯಾಗಬೇಕಾಗಿದೆ. ಆಕಾಶ್ ದೀಪ್ ಮತ್ತು ಮಯಾಂಕ್ ಅವರು ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಚೇತರಿಸುತ್ತಿದ್ದರೆ, ಆವೇಶ್ ಮಂಡಿ ಗಾಯದಿಂದ ಚೇತರಿಸಿದ ಬಳಿಕ ತಂಡದ ಸಂಪರ್ಕಕ್ಕೆ ಇನ್ನೂ ಬಂದಿಲ್ಲ.


ಲಕ್ನೋ: ಆಲ್‌ರೌಂಡರ್ ಶಾರ್ದೂಲ್ ಠಾಕೂರ್(Shardul Thakur) ಅವರು ಲಕ್ನೋ ಸೂಪರ್ ಜಯಂಟ್ಸ್ (Lucknow Super Giants)ನೊಂದಿಗೆ ಐಪಿಎಲ್(IPL 2025) ಗುತ್ತಿಗೆಗೆ ಸಹಿ ಹಾಕಲು ಸಜ್ಜಾಗಿದ್ದಾರೆ. ಗಾಯಗೊಂಡಿರುವ ಮುಹ್ಸಿನ್ ಖಾನ್(Mohsin Khan) ಅವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ತಂಡ ಸೇರಲಿದ್ದಾರೆ ಎನ್ನಲಾಗಿದೆ. ಕಳೆದ ವರ್ಷ ನಡೆದಿದ್ದ ಮೆಹಾ ಹಾರಾಜಿನಲ್ಲಿ ಶಾರ್ದೂಲ್ ಅನ್ ಸೋಲ್ಡ್ ಆಗಿದ್ದರು. ಲಕ್ನೋ ಸೂಪರ್ ಜಯಂಟ್ಸ್‌ನ 2025 ಋತುವಿನ ಸಿದ್ಧತೆಗಳು ಆರಂಭಗೊಂಡಂದಿನಿಂದಲೇ ಠಾಕೂರ್ ತಂಡದೊಂದಿಗಿದ್ದಾರೆ. ಅವರು ತಂಡಕ್ಕೆ ಸೇರ್ಪಡೆಯಾಗಿರುವ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಾಗಿದೆ. ಆದರೆ, ತಂಡದ ನಿರ್ಧಾರದ ಬಗ್ಗೆ ಠಾಕೂರ್‌ಗೆ ತಿಳಿಸಲಾಗಿದೆ ಎನ್ನುವುದು ತಿಳಿದುಬಂದಿದೆ.
ತಂಡದ ಪ್ರಮುಖ ವೇಗದ ಬೌಲರ್‌ಗಳ ಅನುಪಸ್ಥಿತಿಯಲ್ಲಿ, ಶಾರ್ದೂಲ್ ತಂಡದ ವೇಗದ ಬೌಲಿಂಗ್ ಘಟಕದ ಮುಂದಾಳತ್ವ ವಹಿಸಲಿದ್ದಾರೆ. ಅವರೀಗ ತಂಡದಲ್ಲಿರುವ ಅತ್ಯಂತ ಅನುಭವಿ ಬೌಲರ್ ಆಗಿದ್ದಾರೆ. ಮುಹ್ಸಿನ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ, ಕಳೆದ 3 ತಿಂಗಳಿನಲ್ಲಿ ಯಾವುದೇ ಮಟ್ಟದ ಕ್ರಿಕೆಟ್‌ನಲ್ಲಿದ ಆಡಲು ಅವರಿಗೆ ಸಾಧ್ಯವಾಗಿಲ್ಲ. ಬಳಿಕ, ಅವರು ಎಲ್‌ಎಸ್‌ಜಿಯ ನೆಟ್ ಅಭ್ಯಾಸದ ವೇಳೆ ಬೌಲಿಂಗ್ ಅಭ್ಯಾಸ ನಡೆಸಿದಾಗ ಕಾಲಿನ ಮೀನಖಂಡದ ಗಾಯಕ್ಕೊಳಗಾದರು.
ಆಕಾಶ್ ದೀಪ್, ಆವೇಶ್ ಖಾನ್ ಮತ್ತು ಮಯಾಂಕ್ ಯಾದವ್ ಮುಂತಾದ ವೇಗಿಗಳು ಲಕ್ನೋ ತಂಡಕ್ಕೆ ಇನ್ನಷ್ಟೇ ಸೇರ್ಪಡೆಯಾಗಬೇಕಾಗಿದೆ. ಆಕಾಶ್ ದೀಪ್ ಮತ್ತು ಮಯಾಂಕ್ ಅವರು ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಚೇತರಿಸುತ್ತಿದ್ದರೆ, ಆವೇಶ್ ಮಂಡಿ ಗಾಯದಿಂದ ಚೇತರಿಸಿದ ಬಳಿಕ ತಂಡದ ಸಂಪರ್ಕಕ್ಕೆ ಇನ್ನೂ ಬಂದಿಲ್ಲ.
ಇದನ್ನೂ ಓದಿ IPL 2025: ಐಪಿಎಲ್ ಉದ್ಘಾಟನ ಸಮಾರಂಭ ಎಷ್ಟು ಗಂಟೆಗೆ ಆರಂಭ?
ಲಕ್ನೋ ತಂಡ
ನಿಕೋಲಸ್ ಪೂರನ್, ಮಯಾಂಕ್ ಯಾದವ್, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಆಯುಷ್ ಬದೋನಿ, ರಿಷಭ್ ಪಂತ್, ಆವೇಶ್ ಖಾನ್, ಡೇವಿಡ್ ಮಿಲ್ಲರ್, ಮಿಚೆಲ್ ಮಾರ್ಷ್, ಏಡನ್ ಮಾರ್ಕ್ರಮ್, ಅಬ್ದುಲ್ ಸಮದ್, ಆರ್ಯನ್ ಜುಯಲ್. ಆಕಾಶ್ದೀಪ್ , ಶಾಬಾಜ್ ಅಹ್ಮದ್ , ಹಿಮ್ಮತ್ ಸಿಂಗ್, ಎಂ. ಸಿದ್ಧಾರ್ಥ್, ದಿಗ್ವೇಷ್ ಸಿಂಗ್, ಆಕಾಶ್ ಸಿಂಗ್, ಶಮರ್ ಜೋಸೆಫ್, ಪ್ರಿನ್ಸ್ ಯಾದವ್, ಯುವರಾಜ್ ಚೌಧರಿ, ರಾಜ್ಯವರ್ಧನ್ ಹಂಗರ್ಗೆಕರ್, ಅರ್ಷಿನ್ ಕುಲಕರ್ಣಿ, ಮ್ಯಾಥ್ಯೂ ಬ್ರಿಟ್ಜ್ಕೆ.