ಸೀತಾ ನದಿಯ ಮಡಿಲು ಶುಭ್ರಗೊಳಿಸುವ ʼಪಾವನ ಸೀತಾʼ ಅಭಿಯಾನ
ಪರಿಸರ ಸ್ವಚ್ಛತೆ, ಸೀತಾ ನದಿಗೆ ಕಸ ಎಸೆಯದಂತೆ ಸ್ಥಳಿಯರು ಹಾಗೂ ಪ್ರವಾಸಿಗರ ಮನ ಒಲಿಸುವುದು, ಇತರ ನದಿಗಳ ಸ್ವಚ್ಛತಾ ಕಾರ್ಯಕ್ಕೂ ಆಯಾಯ ನದಿ ದಡದ ಊರುಗಳ ಜನತೆಗೆ ಈ ಮೂಲಕ ಪ್ರೇರಣೆಯಾಗುವುದು ಈ ಕಾರ್ಯದ ಹಿಂದಿನ ಉದ್ದೇಶವಾಗಿದೆ ಎಂದು ಆಯೋಜಕರಲ್ಲಿ ಒಬ್ಬರಾದ ವಸಂತ ಗಿಳಿಯಾರು ತಿಳಿಸಿದ್ದಾರೆ.