ರಿಟೈರ್ ಔಟ್ ಪಡೆಯುವಂತೆ ತಿಲಕ್ ವರ್ಮಾಗೆ ಕರೆ ನೀಡಲು ಕಾರಣ ತಿಳಿಸಿದ ಮಹೇಲಾ ಜಯವರ್ದನೆ!
Mahela Jayawardene on Tilak Verma retires out: ಲಖನೌ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 12 ರನ್‌ಗಳಿಂದ ಸೋಲು ಅನುಭವಿಸಿತು. ಆದರೆ, ಈ ಪಂದ್ಯದ ಮುಂಬೈ ಇಂಡಿಯನ್ಸ್ ಇನಿಂಗ್ಸ್‌ನಲ್ಲಿ ತಿಲಕ್ ವರ್ಮಾ ರಿಟೈರ್ ಔಟ್ ಕರೆಯ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ. ಈ ಬಗ್ಗೆ ಮುಂಬೈ ಇಂಡಿಯನ್ಸ್ ಹೆಡ್ ಕೋಚ್ ಮಹೇಳಾ ಜಯವರ್ಧನೆ ಸ್ಪಷ್ಟನೆ ನೀಡಿದ್ದಾರೆ.

ತಿಲಕ್ ವರ್ಮಾರ ರಿಟೈರ್ ಔಟ್ ಬಗ್ಗೆ ಮಹೇಲಾ ಜಯವರ್ದನೆ ಪ್ರತಿಕ್ರಿಯೆ.

ಲಖನೌ: ಲಖನೌ ಸೂಪರ್ ಜಯಂಟ್ಸ್ (LSG) ವಿರುದ್ಧದ ಪಂದ್ಯದಲ್ಲಿ ಬ್ಯಾಟ್ ಮಾಡುತ್ತಿದ್ದ ಮುಂಬೈ ಇಂಡಿಯನ್ಸ್ (MI) ಬ್ಯಾಟ್ಸ್‌ಮನ್ ತಿಲಕ್ ವರ್ಮಾ (Tilak Verma) ಅವರು ನಿರ್ಣಾಯಕ ಹಂತದಲ್ಲಿ ಹಠಾತ್ ರಿಟೈರ್ ಔಟ್ ಆಗುವ ಮೂಲಕ ಪೆವಿಲಿಯನ್‌ಗೆ ಮರಳಿದರು. ಈ ಘಟನೆಯಿಂದ ಮಾಜಿ ಕ್ರಿಕೆಟಿಗರು ಸೇರಿದಂತೆ ಅಭಿಮಾನಿಗಳಿಗೆ ಅಚ್ಚರಿ ಉಂಟಾಗಿತ್ತು ಹಾಗೂ ಮುಂಬೈ ಟೀಮ್ ಮ್ಯಾನೇಜ್‌ಮೆಂಟ್‌ನ ನಿರ್ಧಾರವನ್ನು ಟೀಕಿಸಲಾಗಿತ್ತು. ಲಖನೌ ವಿರುದ್ಧದ ಪಂದ್ಯದ ಬಳಿಕ ಮುಂಬೈ ಇಂಡಿಯನ್ಸ್ ಹೆಡ್ ಕೋಚ್ ಮಹೇಲಾ ಜಯವರ್ಧನೆಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಅಂದ ಹಾಗೆ ಈ ಪಂದ್ಯದಲ್ಲಿ ಕೊನೆಯ ಓವರ್‌ವರೆಗೂ ಕಠಿಣ ಹೋರಾಟ ನಡೆಸಿದ್ದ ಮುಂಬೈ ಇಂಡಿಯನ್ಸ್ ತಂಡ ಕೇವಲ 12 ರನ್‌ಗಳಿಂದ ಲಖನೌ ಸೂಪರ್ ಜಯಂಟ್ಸ್ ವಿರುದ್ದ ಸೋಲು ಅನುಭವಿಸಿತ್ತು.
ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ಎಲ್‌ಎಸ್ಜಿ ನೀಡಿದ್ದ 204 ರನ್ ಗುರಿ ಹಿಂಬಾಲಿಸಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ವಿಲ್ ಜ್ಯಾಕ್ಸ್ ಹಾಗೂ ರಿಯಾನ್ ರಿಕೆಲ್ಟನ್ ವೈಫಲ್ಯ ಅನುಭವಿಸಿದರು. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ (67 ರನ್), ನಮನ್ ಧೀರ್ (47) ಅವರು ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಮುಂಬೈ ತಂಡದ ಗೆಲುವಿನ ಕನಸನ್ನು ಉಳಿಸಿದ್ದರು. ತಿಲಕ್ ವರ್ಮಾ 23 ಎಸೆತಗಳಲ್ಲಿ 25 ರನ್‌ಗಳನ್ನು ಗಳಿಸಿದ್ದರು. ಆದರೆ, ಅವರು ಅಷ್ಟೊಂದು ಪರಿಣಾಮಕಾರಿಯಾಗಿ ಕಾಣಲಿಲ್ಲ. ಈ ಹಿನ್ನೆಲೆಯಲ್ಲಿ ಕೊನೆಯ ಹಂತದಲ್ಲಿ ತಿಲಕ್ ವರ್ಮಾ ಅವರನ್ನು ರಿಟೈರ್ ಔಟ್ ತೆಗೆದುಕೊಳ್ಳುವಂತೆ ಮುಂಬೈ ಇಂಡಿಯನ್ಸ್ ಟೀಮ್ ಮ್ಯಾನೇಜ್‌ಮೆಂಟ್ ನಿರ್ಧಾರವನ್ನು ತೆಗೆದುಕೊಂಡಿತು. ಆದರೂ ಅಂತಿಮವಾಗಿ ಮುಂಬೈ 12 ರನ್‌ಗಳಿಂದ ಸೋಲು ಅನುಭವಿಸಿತು.
IPL 2025: ತಲೆಬುಡ ಇಲ್ಲದ ಪಾಂಡ್ಯ ನಿರ್ಧಾರಕ್ಕೆ ರೊಚ್ಚಿಗೆದ್ದ ಆಕಾಶ್ ಅಂಬಾನಿ
ತಿಲಕ್ ವರ್ಮಾ ರಿಟೈರ್ ಔಟ್ ಆಗಿದ್ದೇಕೆ?
ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹೇಲಾ ಜಯವರ್ಧನೆಗೆ ಸುದ್ದಿಗಾರರು ತಿಲಕ್ ವರ್ಮಾ ಅವರನ್ನು ರಿಟೈರ್ ಔಟ್ ತೆಗೆದುಕೊಳ್ಳುವಂತೆ ಕರೆ ನೀಡಿದ್ದೇಕೆಂದು ಪ್ರಶ್ನೆಯನ್ನು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ತಿಲಕ್ ವರ್ಮಾ ಆಕ್ರಮಣಕಾರಿಯಾಗಿ ಆಡಲು ಸಾಕಷ್ಟು ಪ್ರಯತ್ನಿಸಿದ್ದರು. ಆದರೆ, ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಹಾಗಾಗಿ ಈ ನಿರ್ಧಾರವನ್ನು ತೆಗೆದುಕೊಂಡೆವು. ಅಂದ ಹಾಗೆ ಮುಂದಿನ ಪಂದ್ಯಗಳಲ್ಲಿ ಯುವ ಬ್ಯಾಟ್ಸ್‌ಮನ್ ಕಮ್‌ಬ್ಯಾಕ್ ಮಾಡಲಿದ್ದಾರೆಂಬ ಭರವಸೆ ಇದೆ ಎಂದು ಅವರು ಮುಂಬೈ ಹೆಡ್ ಕೋಚ್ ಹೇಳಿದ್ದಾರೆ.
"ನಾವು ವಿಕೆಟ್‌ಗಳನ್ನು ಕಳೆದುಕೊಂಡಾಗ ತಿಲಕ್ ವರ್ಮಾ ಅತ್ಯುತ್ತಮ ಬ್ಯಾಟ್ ಮಾಡಿದ್ದರು ಹಾಗೂ ಸೂರ್ಯಕುಮಾರ್ ಜೊತೆ ಕೂಡ ಜೊತೆಯಾಟವನ್ನು ಆಡಿದ್ದರು. ಅವರು ದೊಡ್ಡ ಹೊಡೆತಗಳನ್ನು ಆಡಲು ಸಾಕಷ್ಟು ಪ್ರಯತ್ನ ನಡೆಸಿದ್ದರು ಆದರೆ, ಅದು ಸಾಧ್ಯವಾಗಿರಲಿಲ್ಲ. ಕೊನೆಯ ಕೆಲ ಓವರ್‌ಗಳ ತನಕ ನಾವು ಕಾದಿದ್ದೆವು. ಆದರೂ ಅವರ ಹಾದಿಯಲ್ಲಿ ಶಾಟ್ಸ್ ಮೂಡಿಬಂದಿರಲಿಲ್ಲ. ಆ ಸನ್ನಿವೇಶದಲ್ಲಿ ತಿಲಕ್ ವೈಫಲ್ಯ ಅನುಭವಿಸಿದ್ದರು. ಹಾಗಾಗಿ ಹೊಸ ಆಟಗಾರ ಕ್ರೀಸ್‌ನಲ್ಲಿ ಇರಬೇಕೆಂದು ನಾವು ಬಯಸಿದ್ದೆವು. ತಿಲಕ್ ವರ್ಮಾ ರಿಟೈರ್ ಔಟ್ ಸಂಪೂರ್ಣವಾಗಿ ತಂತ್ರಗಾರಿಕೆಯ ನಿರ್ಧಾರವಾಗಿದೆ," ಎಂದು ಮುಂಬೈ ಇಂಡಿಯನ್ಸ್ ಹೆಡ್ ಕೋಚ್ ಮಹೇಲಾ ಜಯವರ್ಧನೆ ಸ್ಪಷ್ಟನೆ ನೀಡಿದ್ದಾರೆ.
A collection of Reactions on Tilak Verma retired out
— ICT Fan (@Delphy06) April 4, 2025
A thread 🧵
"It was obvious that we needed some hits and he was not getting... in cricket,I think the decision speaks for itself why we did it," Hardik Pandya said after the defeat.pic.twitter.com/VCmqhfeHXD
"ಇದು ಸಂಪೂರ್ಣವಾಗಿ ರಣ ತಂತ್ರವಾಗಿದೆ. ನಾವು ಒಬ್ಬ ವ್ಯಕ್ತಿಯನ್ನು ತೆಗೆದು ಮತ್ತೊಬ್ಬ ವ್ಯಕ್ತಿಯನ್ನು ಒಳಗೆ ತರುತ್ತಿದ್ದೇವೆ. ಅದರ ಬಗ್ಗೆ ಹೆಚ್ಚು ಓದಬೇಡಿ - ಕೇವಲ ಪಂದ್ಯ ಆಧಾರಿತ ನಿರ್ಧಾರ," ಎಂದು ಜಯವರ್ಧನೆ ತಿಳಿಸಿದ್ದಾರೆ.
ಮುಂಬೈ ಇಂಡಿಯನ್ಸ್‌ಗೆ 12 ರನ್ ಸೋಲು
ಲಖನೌ ಸೂಪರ್ ಜಯಂಟ್ಸ್ ನೀಡಿದ್ದ 204 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಮುಂಬೈ ಇಂಡಿಯನ್ಸ್ ತಂಡ, ಕೊನೆಯ ಓವರ್‌ವರೆಗೂ ಕಠಿಣ ಹೋರಾಟ ನಡೆಸಿದ ಹೊರತಾಗಿಯೂ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 191 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಕೇವಲ 12 ರನ್‌ಗಳಿಂದ ಸೋಲು ಅನುಭವಿಸಿತು. ಆ ಮೂಲಕ ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಮೂರನೇ ಸೋಲು ಅನುಭವಿಸಿತು. ಲಖನೌ ಸೂಪರ್ ಜಯಂಟ್ಸ್ ತಂಡಕ್ಕೆ ಇದು ಎರಡನೇ ಜಯ. ಮುಂಬೈ ಪರ ಸೂರ್ಯಕುಮಾರ್ ಯಾದವ್, ನಮನ್ ಧೀರ್ ಹಾಗೂ ಹಾರ್ದಿಕ್ ಪಾಂಡ್ಯ ಕಠಿಣ ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಯ ಎರಡು ಓವರ್‌ಗಳಲ್ಲಿ ಶಾರ್ದುಲ್ ಠಾಕೂರ್ ಹಾಗೂ ಆವೇಶ ಖಾನ್ ಮುಂಬೈ ನಾಯಕನನ್ನು ಕಟ್ಟಿ ಹಾಕಿದ್ದರು.