Anklet Fashion: ಘಲ್ ಎನ್ನುವ ಬೆಳ್ಳಿ ಕಾಲ್ಗೆಜ್ಜೆಯ ಸ್ಥಾನ ಬದಲಿಸಿದ ಫಂಕಿ ಆಂಕ್ಲೆಟ್
ಘಲ್ ಎನ್ನುವ ಬೆಳ್ಳಿ ಕಾಲ್ಗೆಜ್ಜೆಯ ಜಾಗಕ್ಕೆ ಇದೀಗ ಫಂಕಿ ಲುಕ್ ನೀಡುವ ಆಂಕ್ಲೆಟ್‌ಗಳು ಬಂದಿವೆ. ಜೆನ್ ಜಿ ಹುಡುಗಿಯರ ಪಾದಗಳನ್ನು ಸಿಂಗರಿಸುತ್ತಿವೆ. ಯಾವ್ಯಾವ ಡಿಸೈನ್‌ನವು ಟ್ರೆಂಡಿಯಾಗಿವೆ? ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಚಿತ್ರಕೃಪೆ: ಪಿಕ್ಸೆಲ್

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಘಲ್ ಎನ್ನುವ ಬೆಳ್ಳಿ ಕಾಲ್ಗೆಜ್ಜೆಯ ಜಾಗಕ್ಕೆ ಇದೀಗ ಫಂಕಿ ಆಂಕ್ಲೆಟ್‌ಗಳು (Anklet Fashion) ಎಂಟ್ರಿ ನೀಡಿವೆ. ಜೆನ್ ಜಿ ಹುಡುಗಿಯರ ಪಾದಗಳನ್ನು ಅಲಂಕರಿಸಿ, ಫಂಕಿ ಲುಕ್ ನೀಡುತ್ತಿವೆ. ಬಗೆಬಗೆಯ ಕಲರ್‌ಫುಲ್ ಹಾಗೂ ಕಪ್ಪು ದಾರಕ್ಕೆ ಪೊಣಿಸಿದ ಬೀಡ್ಸ್, ಗೆಜ್ಜೆ, ಕಲರ್ ಮಣಿಗಳ ದಾರ, ಜತೆಗೆ ಹೆಣೆದ ಕರಿಮಣಿಯ ಜಡೆಯಂತಹ ಡಿಸೈನ್, ಮೆಟಲ್ ಚೈನ್‌ಗೆ ಫಂಕಿ ಡಿಸೈನ್‌ನ ಪೆಂಡೆಂಟ್‌ನಂತಹ ಮಿನಿ ಹ್ಯಾಂಗಿಂಗ್ಸ್, ಬ್ಲಾಕ್, ವೈಟ್ ಮೆಟಲ್‌ನ ಲೇಯರ್ ಚೈನ್ಸ್, ಗೋಲ್ಡ್ ಬೀಡ್ಸ್ ಅಥವಾ ಗೋಲ್ಡನ್ ಶೇಡ್ಸ್ ಮೆಟಲ್‌ನ ಚೈನ್. ಸಿಂಗಲ್, ಡಬ್ಬಲ್ ಅಥವಾ ಮಲ್ಟಿ ಲೇಯರ್‌ನ ಬೀಡ್ಸ್ ಆಂಕ್ಲೆಟ್, ಕಾಲಿಗೆ ಸುತ್ತಿದಂತೆ ಕಾಣುವ ಕರಿ ದಾರದ ಅಬ್ಸ್ಟ್ರಾಕ್ಟ್ ಡಿಸೈನ್ ಇಲ್ಲವೇ ಜೆಮೆಟ್ರಿಕಲ್ ವಿನ್ಯಾಸದ ಮಿನಿ ಪೆಂಡೆಂಟ್ಸ್‌ನ ಆಂಕ್ಲೆಟ್ ಹೀಗೆ ನಾನಾ ಬಗೆಯವು ಟ್ರೆಂಡಿಯಾಗಿವೆ ಎನ್ನುತ್ತಾರೆ ಮಾರಾಟಗಾರಾದ ಜಾವಿದ್.

ಫಂಕಿ ಲುಕ್ ಗ್ಯಾರಂಟಿ
ಇನ್ನು, ಊಹೆಗೂ ಮೀರಿದ ನಾನಾ ಬಗೆಯ ಫಂಕಿ ಆಂಕ್ಲೆಟ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಇವಕ್ಕೆ ಇಂತಹ ಡಿಸೈನ್‌ಗಳು ಎಂಬ ಟ್ಯಾಗ್ ಲೈನ್ ಇಲ್ಲ. ಡಿಸೈನರ್‌ಗಳ ಕೈಗಳಲ್ಲಿ ತಯಾರಾದ ನಂತರ ಹೆಸರು ಪಡೆಯುತ್ತವೆ. ಅವುಗಳ ಡಿಸೈನ್‌ನ ಆಧಾರದ ಮೇಲೆ ಬೆಲೆ ಕೂಡ ನಿಗಧಿಯಾಗಿರುತ್ತವೆ ಎನ್ನುತ್ತಾರೆ ಫಂಕಿ ಜ್ಯುವೆಲ್ ಡಿಸೈನರ್ ರಾಜ್. ಅವರ ಪ್ರಕಾರ, ಇವು ವೆಸ್ಟರ್ನ್ ಔಟ್‌ಫಿಟ್ಸ್‌ಗೆ ಇವು ಪರ್ಫೆಕ್ಟ್ ಮ್ಯಾಚ್ ಆಗುತ್ತವೆ ಎನ್ನುತ್ತಾರೆ.
ಈ ಸುದ್ದಿಯನ್ನೂ ಓದಿ | Hun Hairstyle 2025: ಜೆನ್ ಜಿ ಹುಡುಗಿಯರನ್ನು ಸವಾರಿ ಮಾಡುತ್ತಿರುವ ಫಂಕಿ ಹನ್ ಹೇರ್ ಸ್ಟೈಲ್

ಫಂಕಿ ಆಂಕ್ಲೆಟ್ ಸ್ಟೈಲಿಂಗ್
* ಸಿಂಪಲ್ ಸಿಂಗಲ್ ಆಂಕ್ಲೆಟ್ ಫ್ಯಾಷನ್‌ನಲ್ಲಿದೆ.
* ವೆಸ್ಟರ್ನ್ ಔಟ್‌ಫಿಟ್‌ಗೆ ಮ್ಯಾಚ್ ಆಗುತ್ತವೆ.
* ಸ್ಕಿನ್ ಅಲರ್ಜಿಯಾದಲ್ಲಿ ಆವಾಯ್ಡ್ ಮಾಡಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)