ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Donald Trump: ವ್ಯಾಪಾರ ಸಂಘರ್ಷ ನಡುವೆ ಭಾರತದ ಕುರಿತು ಟ್ರಂಪ್‌ ಮಾತು; ಮೋದಿ ನನ್ನ ಉತ್ತಮ ಸ್ನೇಹಿತ ಎಂದು ಬಣ್ಣನೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು "ಶ್ರೇಷ್ಠ ಸ್ನೇಹಿತ' ಹಾಗೂ 'ವೆರಿ ಸ್ಮಾರ್ಟ್ ಮ್ಯಾನ್' ಎಂದು ಹೇಳಿದ್ದಾರೆ. ಶುಕ್ರವಾರ ಶ್ಲಾಘಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅವರು ಉತ್ತಮ ಸ್ನೇಹಿತರು ಮತ್ತು ಎರಡೂ ದೇಶಗಳ ನಡುವಿನ ಸುಂಕದ ಕುರಿತು ಮಾತುಕತೆಗಳು ಯಶಸ್ವಿಯಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

ವ್ಯಾಪಾರ ಸಂಘರ್ಷ ನಡುವೆ ಭಾರತದ ಕುರಿತು ಟ್ರಂಪ್‌ ಮಾತು

Profile Vishakha Bhat Mar 29, 2025 8:54 AM

ವಾಷಿಂಗ್ಟನ್:‌ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು "ಶ್ರೇಷ್ಠ ಸ್ನೇಹಿತ' ಹಾಗೂ 'ವೆರಿ ಸ್ಮಾರ್ಟ್ ಮ್ಯಾನ್' ಎಂದು ಹೇಳಿದ್ದಾರೆ. ಶುಕ್ರವಾರ ಶ್ಲಾಘಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅವರು ಉತ್ತಮ ಸ್ನೇಹಿತರು ಮತ್ತು ಎರಡೂ ದೇಶಗಳ ನಡುವಿನ ಸುಂಕದ ಕುರಿತು ಮಾತುಕತೆಗಳು ಯಶಸ್ವಿಯಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. ಶ್ವೇತಭವನದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಟ್ರಂಪ್, "ಪ್ರಧಾನಿ ಮೋದಿ ಇತ್ತೀಚೆಗೆ ಇಲ್ಲಿಗೆ ಬಂದಿದ್ದರು, ಮತ್ತು ನಾವು ಯಾವಾಗಲೂ ಉತ್ತಮ ಸ್ನೇಹಿತರಾಗಿದ್ದೇವೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಸುಂಕ ವಿಧಿಸುವ ರಾಷ್ಟ್ರಗಳಲ್ಲಿ ಒಂದಾಗಿದೆ, ಅವರು ತುಂಬಾ ಬುದ್ಧಿವಂತರು ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿಯವರು ಇತ್ತೀಚೆಗೆ ಇಲ್ಲಿಗೆ ಆಗಮಿಸಿದ್ದರು. ನಾವು ಸದಾ ಒಳ್ಳೆಯ ಸ್ನೇಹಿತರು. ವಿಶ್ವದಲ್ಲೇ ಅತ್ಯಧಿಕ ಸುಂಕ ವಿಧಿಸುವ ದೇಶಗಳಲ್ಲಿ ಭಾರತವೂ ಒಂದು. ಅವರು ಅತ್ಯಂತ ಜಾಣರು" ಎಂದು ಟ್ರಂಪ್ ಬಣ್ಣಿಸಿದರು. "ಅವರು ಅತ್ಯಂತ ಚತುರ ಹಾಗೂ ನನ್ನ ಒಳ್ಳೆಯ ಸ್ನೇಹಿತ. ನಮ್ಮ ಮಧ್ಯೆ ಉತ್ತಮ ಮಾತುಕತೆ ನಡೆದಿದೆ. ಇದು ಭಾರತ ಹಾಗೂ ನಮ್ಮ ದೇಶದ ನಡುವೆ ಉತ್ತಮ ಬಾಂಧವ್ಯವಿದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಟ್ರಂಪ್‌ ಸಂದರ್ಶನವೊಂದರಲ್ಲಿ ಹೌಡಿ ಮೋದಿ ರ್ಯಾಲಿ ಬಗ್ಗೆ ಮಾತನಾಡಿದ್ದರು. ಆ ಸಮಯದಲ್ಲಿ ಟ್ರಂಪ್ ಭದ್ರತಾ ಶಿಷ್ಟಾಚಾರವನ್ನು ನಿರ್ಲಕ್ಷಿಸಿ ಪ್ರಧಾನಿ ಮೋದಿಯವರೊಂದಿಗೆ ಕ್ರೀಡಾಂಗಣದ ಸುತ್ತು ಹಾಕಿದ್ದರು.ಅವರ ಧೈರ್ಯ ಮತ್ತು ನನ್ನ ಮೇಲಿನ ನಂಬಿಕೆಯಿಂದ ನಾನು ಪ್ರಭಾವಿತನಾದೆ" ಎಂದು ಅವರು ಹೇಳಿದ್ದರು. ಈ ತಿಂಗಳ ಆರಂಭದಲ್ಲಿ, ಡೊನಾಲ್ಡ್ ಟ್ರಂಪ್, ಏಪ್ರಿಲ್ 2ರಿಂದ ಭಾರತ ಸೇರಿದಂತೆ ವಿವಿಧ ದೇಶಗಳ ವಿರುದ್ಧ ಪ್ರತೀಕಾರಾತ್ಮಕ ಸುಂಕವನ್ನು ಹೇರಲು ಅಮೆರಿಕ ಸಿದ್ಧತೆ ನಡೆಸುತ್ತಿದೆ. ಭಾರತದ ವ್ಯಾಪಾರ ನೀತಿಗಳನ್ನು ನಿರಂತರವಾಗಿ ಟ್ರಂಪ್ ಟೀಕಿಸುತ್ತಾ ಬಂದಿದ್ದು, ಭಾರತದ ಆಮದು ಸುಂಕಗಳು ಅತ್ಯಂತ ನ್ಯಾಯಸಮ್ಮತವಲ್ಲದ್ದು ಎಂದು ಹೇಳಿದ್ದರು.

ಈ ಸುದ್ದಿಯನ್ನೂ ಓದಿ: Donald Trump: ಭಾರತಕ್ಕೆ ಎಂಟ್ರಿ ಕೊಡಲು ಟೆಸ್ಲಾ ಸಿದ್ಧತೆ; ಎಲಾನ್‌ ಮಸ್ಕ್‌ ನಿರ್ಧಾರ ಅನ್ಯಾಯ ಎಂದ ಡೊನಾಲ್ಡ್‌ ಟ್ರಂಪ್‌

ಭಾರತದ ಜೊತೆ ನನಗೆ ಒಳ್ಳೆಯ ಸಂಬಂಧ ಇದೆ. ಆದರೆ ಏಕೈಕ ಸಮಸ್ಯೆಯೆಂದರೆ, ಅದು ವಿಶ್ವದಲ್ಲೇ ಅತ್ಯಧಿಕ ಸುಂಕ ವಿಧಿಸುವ ದೇಶ. ಸುಸ್ಥಿರತೆಯನ್ನು ಕಾಪಾಡುವ ಸಲುವಾಗಿ ಸುಂಕವನ್ನು ಭಾರತ ಕಡಿಮೆ ಮಾಡುತ್ತದೆ ಎಂಬ ನಿರೀಕ್ಷೆ ನನಗಿದೆ. ಏಪ್ರಿಲ್ 2ರಂದು ನಮ್ಮ ಮೇಲೆ ಅವರು ವಿಧಿಸುವಷ್ಟೇ ಸುಂಕವನ್ನು ನಾವೂ ಹೇರಲಿದ್ದೇವೆ" ಎಂದು ಈ ಮೊದಲು ಹೇಳಿಕೆ ನೀಡಿದ್ದರು.