Chikkaballapur News: ಓಣಿ ತೆರವು ಗೊಳಿಸುವ ವಿಚಾರಕ್ಕೆ ರೈತರ ಹಾಗೂ ಅಧಿಕಾರಿಗಳ ಮಧ್ಯೆ ಜಟಾಪಟಿ
ಓಣಿ ಗುರುತಿಸಿ ತೆರವುಗೊಳಿಸುವ ವಿಚಾರಕ್ಕೆ ರೈತರ ಹಾಗೂ ಸರ್ವೆಯರ್ ಮತ್ತೆ ಜಟಾಪಟಿ ನಡೆದು ಕೊನೆಗೆ ಪೊಲೀಸ್ ಸೂಕ್ತ ಬಂದೋಬಸ್ತ್ ನಲ್ಲಿ ತೆರವುಗೊಳಿಸಿದ ಘಟನೆ ಚಿಂತಾಮಣಿ ತಾಲ್ಲೂಕಿನ ಅಂಬಾಜಿದುರ್ಗ ಹೋಬಳಿ ಉಪ್ಪರಪೇಟೆ ಗ್ರಾಮ ಪಂಚಾ ಯತಿ ವ್ಯಾಪ್ತಿಯ ರಾಯ ಪಲ್ಲಿ ಗ್ರಾಮದಲ್ಲಿ ನಡೆದಿದೆ

ಓಣಿ ಗುರುತಿಸಿ ತೆರವುಗೊಳಿಸುವ ವಿಚಾರಕ್ಕೆ ರೈತರ ಹಾಗೂ ಸರ್ವೆಯರ್ ಮತ್ತೆ ಜಟಾಪಟಿ ನಡೆದು ಕೊನೆಗೆ ಪೊಲೀಸ್ ಸೂಕ್ತ ಬಂದೋಬಸ್ತ್ ನಲ್ಲಿ ತೆರವುಗೊಳಿಸಿದ ಘಟನೆ ಚಿಂತಾಮಣಿ ತಾಲ್ಲೂಕಿನ ಅಂಬಾಜಿದುರ್ಗ ಹೋಬಳಿ ಉಪ್ಪರಪೇಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಯಪಲ್ಲಿ ಗ್ರಾಮದಲ್ಲಿ ನಡೆದಿದೆ.

ಚಿಂತಾಮಣಿ: ಓಣಿ ಗುರುತಿಸಿ ತೆರವುಗೊಳಿಸುವ ವಿಚಾರಕ್ಕೆ ರೈತರ ಹಾಗೂ ಸರ್ವೆಯರ್ ಮತ್ತೆ ಜಟಾಪಟಿ ನಡೆದು ಕೊನೆಗೆ ಪೊಲೀಸ್ ಸೂಕ್ತ ಬಂದೋಬಸ್ತ್ ನಲ್ಲಿ ತೆರವುಗೊಳಿಸಿದ ಘಟನೆ ಚಿಂತಾಮಣಿ ತಾಲ್ಲೂಕಿನ ಅಂಬಾಜಿದುರ್ಗ ಹೋಬಳಿ ಉಪ್ಪರಪೇಟೆ ಗ್ರಾಮ ಪಂಚಾ ಯತಿ ವ್ಯಾಪ್ತಿಯ ರಾಯಪಲ್ಲಿ ಗ್ರಾಮದಲ್ಲಿ ನಡೆದಿದೆ. ಸುಮಾರು ವರ್ಷಗಳಿಂದ ಜಮೀನು ಗಳ ಮುಖಾಂತರ ಹಾದು ಹೋಗುವ ಒಣಿ ಮುಚ್ಚಿ ಹೋಗಿದ್ದು ಹಿಂದಿನ ಕಾಲದಲ್ಲಿ ಆ ಓಣಿಯಿಂದ ಜಾನುವಾರುಗಳು ಹೋಗುತ್ತಿದ್ದವು, ಅದಲ್ಲದೆ ಒಣಿಯಲ್ಲಿ ಬೆಟ್ಟದಿಂದ ಮಳೆ ನೀರು ಹರಿದು ಹೋಗುತ್ತಿದ್ದು ಸದರಿ ನೀರಿನಿಂದ ರೈತರಿಗೆ ಉಪಯೋಗವಾಗುತ್ತಿತ್ತು.
ಇದನ್ನೂ ಓದಿ: Chikkaballapur News: ಕ್ಷಯ ರೋಗ ನಿಯಂತ್ರಣದಲ್ಲಿ ರಾಜ್ಯಕ್ಕೆ ಚಿಕ್ಕಬಳ್ಳಾಪುರ ಪ್ರಥಮ: ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ
ಸದರಿ ಗ್ರಾಮದ ರೈತರದ ಶಿವಾನಂದ ರೆಡ್ಡಿ,ಆಂಜನೇಯರೆಡ್ಡಿ, ಮತ್ತಿತರರು ಓಣಿ ಗುರುತಿಸಿ ಕೊಡುವಂತೆ ತಾಲ್ಲೂಕು ದಂಡಾಧಿಕಾರಿಗಳಿಗೆ ಲಿಖಿತ ಮೂಲಕ ಮನವಿ ಸಲ್ಲಿಸಿದ್ದರು. ಅದರಂತೆ ಇತ್ತೀಚೆಗೆ ಭೂ ಮಾಪನ ಇಲಾಖೆ ಸರ್ವೇಯರ್ ಖಾದರ್ ಸಾಬ್,ಗ್ರಾಮ ಆಡಳಿತ ಅಧಿಕಾರಿ ಸುಪ್ರಿಯ, ಗ್ರಾಮ ಸಹಾಯಕರಾದ ನಾರಾಯಣಸ್ವಾಮಿ,ಸರ್ವೆ ಕಾರ್ಯ ನಡೆಸಿ ಓಣಿ ಗುರುತಿಸಿ ಜೆಸಿಬಿ ಮುಖಾಂತರ ಕೆಲ ದೂರ ಒತ್ತುವರಿ ತೆರವುಗೊಳಿಸಿ ವಾಪಸ್ ಆಗಿ ದ್ದರು.
ಆದರೆ ಆ ಸಂದರ್ಭದಲ್ಲಿ ರೈತರು ಒತ್ತುವರಿಯನ್ನು ತೆರವುಗೊಳಿಸಲು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಇಂದು ಮತ್ತೆ ಪುನಃ ಅದೇ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಲು ಮುಂದಾದಾಗ ರೈತರ ಹಾಗೂ ಸರ್ವೆಯರ್ ನಡುವೆ ಜಟಾಪಟಿ ನಡೆಯಿತು.
ಅದಕ್ಕೆ ಜಗ್ಗದ ಅಧಿಕಾರಿಗಳು ಪೋಲಿಸ್ ನ ಸೂಕ್ತ ಬಂದೋಬಸ್ತ್ ಪಡೆದುಕೊಂಡು ಓಣಿ ಒತ್ತುವರಿಯಾಗಿದ್ದನ್ನು ತೆರವುಗೊಳಿಸಿ ಸ್ಥಳೀಯ ಗ್ರಾಮ ಪಂಚಾಯತಿಗೆ ಹಸ್ತಾಂತರಿಸಿದರು.