Dr M C Sudhakar: ಕೆಲವರು ಸುಲಭವಾಗಿ ಹಣ ಗಳಿಸಲು ಇದನ್ನು ದಂಧೆ ಮಾಡಿಕೊಂಡಿದ್ದಾರೆ
ದುರಾದೃಷ್ಟ ಸಂಗತಿ ಏನೆಂದರೆ ನಮ್ಮ ವಿರೋಧ ಪಕ್ಷದವರು ಅವರ ಸರಕಾರ ಇದ್ದಾಗ, ಅವರ ಸಚಿವ ಸಂಪುಟದಲ್ಲಿದ್ದ ಮಂತ್ರಿಗಳೇ ಕೋರ್ಟಿಗೆ ಹೋಗಿ ಮಾಧ್ಯಮದಲ್ಲಿ ಹನಿ ಟ್ರಾಪ್ ಸಂಬಂಧದ ವಿಡಿಯೋಗಳನ್ನು ಟಿವಿ ಮಾಧ್ಯಮದಲ್ಲಿ, ಸೋಷಿಯಲ್ ಮೀಡಿಯಾ ದಲ್ಲಿ ಅದನ್ನು ಬಿತ್ತರಿಸಬಾರದು ಎಂದು ನಿರ್ಬಂಧಕ ಆದೇಶ ತಂದಿದ್ದಾರೆ

ಚಿಕ್ಕಬಳ್ಳಾಪುರದಲ್ಲಿ ಸಚಿವ ಎಂ.ಸಿ.ಸುಧಾಕರ್ ಮಾತನಾಡಿದರು.

ಚಿಕ್ಕಬಳ್ಳಾಪುರ : ಹನಿಟ್ರಾಪ್ ಚರ್ಚೆ ಇವತ್ತು ನಿನ್ನೆಯದಲ್ಲಿ. ಇದರ ಕಿರುಕುಳ ಉದ್ದಿಮೆ ದಾರರಿಗೂ ಆಗಿದೆ ಸಾಮಾನ್ಯ ಜನರಿಗೂ ಆಗಿದೆ. ಕೆಲವರು ಸುಲಭವಾಗಿ ಹಣ ಗಳಿಸಲು ಇದನ್ನು ದಂಧೆ ಮಾಡಿಕೊಂಡಿದ್ದಾರೆ ಇದನ್ನು ಇಲ್ಲವಾಗಿಸಲು ಬಲವಾದ ಕಾನೂನು ತರಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಮಾಧ್ಯಮದವರು ಹನಿಟ್ರಾಪ್ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿ ಮಾತನಾಡಿದರು.
ವಿಧಾನ ಸಭೆಯಲ್ಲಿ ಹನಿಟ್ರಾಪ್ ಬಗ್ಗೆ ಸಚಿವ ರಾಜಣ್ಣ ಮಾತನಾಡುವಾಗ ನಾನೂ ಜತೆಗಿದ್ದೆ.ಇದು ತನಿಖೆ ಆಗಬೇಕು ಎಂಬ ವಿಚಾರ ಬಿಜೆಪಿಯವರಿಂದ ಚರ್ಚೆಗೆ ಬಂದಾಗ ದೂರು ನೀಡಿದರೆ ಸಮಗ್ರವಾಗಿ ತನಿಖೆ ಮಾಡುವುದಾಗಿ ಗೃಹ ಸಚಿವರು ಹೇಳಿದ್ದಾರೆ. ಇದನ್ನು ಮಾಡದೆ ಚರ್ಚೆಯ ದಿಕ್ಕು ತಪ್ಪಿಸುವ ಕೆಲಸ ಮಾಡಿರುವುದು ಸರಿಯಲ್ಲ ಎಂದರು.
ಇದನ್ನೂ ಓದಿ: Chikkaballapur News: ಬಲಿಜ ಕುಲ ಬಾಂಧವರು ಸಂಘಟಿತರಾಗಬೇಕು : ವೆಂಕಟೇಶ್
ದುರಾದೃಷ್ಟ ಸಂಗತಿ ಏನೆಂದರೆ ನಮ್ಮ ವಿರೋಧ ಪಕ್ಷದವರು ಅವರ ಸರಕಾರ ಇದ್ದಾಗ, ಅವರ ಸಚಿವ ಸಂಪುಟದಲ್ಲಿದ್ದ ಮಂತ್ರಿಗಳೇ ಕೋರ್ಟಿಗೆ ಹೋಗಿ ಮಾಧ್ಯಮದಲ್ಲಿ ಹನಿ ಟ್ರಾಫ್ ಸಂಬಂಧದ ವಿಡಿಯೋಗಳನ್ನು ಟಿವಿ ಮಾಧ್ಯಮದಲ್ಲಿ, ಸೋಷಿಯಲ್ ಮೀಡಿಯಾ ದಲ್ಲಿ ಅದನ್ನು ಬಿತ್ತರಿಸಬಾರದು ಎಂದು ನಿರ್ಬಂಧಕ ಆದೇಶ ತಂದಿದ್ದಾರೆ. ಇವತ್ತು ಸಿಬಿಐ ಸಿಬಿಐ ಎಂದು ಕೂಗಾಡುವವರು ಬಹುಶಃ ಆವತ್ತು ಏಕೆ ಮಾಡಲಿಲ್ಲ? ಎಂದು ಪ್ರಶ್ನಿಸಿದ ಸಚಿವರು ಯತ್ನಾಳ್ ಹೇಳುವಂತೆ ಬಿಜೆಪಿ ಪಕ್ಷದ ಮುಖಂಡರೇ ಹನಿಟ್ರಾಪ್ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ರೀತಿ ಏನಾದರೂ ಆಗಿದ್ದರೆ ತನಿಖೆ ಆಗಲಿ ಮತ್ತು ಇದಕ್ಕೊಂದು ಕಾನೂನು ಬರಬೇಕು. ಸಾಮಾನ್ಯ ಜನರು ಮರ್ಯಾದೆ ಹೋಗುತ್ತೆ ಎಂದು ಆತ್ಮಹತ್ಯೆ ಮಾಡಿಕೊಳ್ಳುವುದು ತಪ್ಪಬೇಕು ಎಂದರು.
ಹುನ್ನಾರ
ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಗೆ ನಮ್ಮ ವಿರೋಧವಿದೆ. ಏಕೆಂದರೆ ಈ ದೇಶ ದಲ್ಲಿ ಜನಸಂಖ್ಯೆ ನಿಯಂತ್ರಣದ ಬಗ್ಗೆ ದಕ್ಷಿಣ ರಾಜ್ಯಗಳ ಜನತೆ ತಿಳಿವಳಿಕೆ ಪಡೆದು ಒಂದು ಎರಡು ಮಕ್ಕಳಿಗೆ ಸ್ವಯಂ ನಿಯಂತ್ರಣ ಹೇರಿಕೊಂಡು ಜನಸಂಖ್ಯೆ ಸ್ಪೋಟ ವಾಗದಂತೆ ನೋಡಿಕೊಂಡಿದ್ದಾರೆ.ಆದರೆ ಉತ್ತರ ಭಾರತದ ರಾಜ್ಯಗಳಲ್ಲಿ ಈ ನಿಯಮ ಜಾರಿಯಾಗಿಯೇ ಇಲ್ಲ.ಅಲ್ಲಿ ಜನಸಂಖ್ಯೆ ಬೆಳೆಯುತ್ತಲೇ ಇದೆ.ಇದು ಒಂದು ಹುನ್ನಾರದಂತೆ ಬೆಳೆಯುತ್ತಿದೆ ಎಂಬುದು ಜನರ ಭಾವನೆ.ಈಗ ಹೊಸದಾಗಿ ಸಂಖ್ಯಾ ಸಮೀಕ್ಷೆ ಮಾಡಿದರೆ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಲಿದೆ.ಈ ಮೂಲಕ ಲೋಕಸಭಾ ಸ್ಥಾನಗಳನ್ನು ಹೆಚ್ಚು ಮಾಡಿ ಕೊಂಡು ಅಧಿಕಾರ ಉಳಿಸಿಕೊಳ್ಳವ ಹುನ್ನಾರವನ್ನು ಮೋದಿ ಮತತು ಅವರ ಸರಕಾರ ಮಾಡತ್ತಿದೆ ಎಂಬುದು ದಕ್ಷಿಣ ಭಾರತದ ರಾಜ್ಯಗಳ ಅಭಿಪ್ರಾಯವಾಗಿದೆ ಎಂದರು.
ಅನುದಾನ ತಾರತಮ್ಯ
ಕೇಂದ್ರ ಸರಕಾರವು ಹೆಚ್ಚು ತೆರಿಗೆ ಪಾವತಿಸುವ ದಕ್ಷಿಣ ರಾಜ್ಯಗಳ ಸಂಪನ್ಮೂಲವನ್ನು ಜನಸಂಖ್ಯೆ ಹೆಚ್ಚಳ ಇರುವ ಉತ್ತರದ ರಾಜ್ಯಗಳಿಗೆ ನೀಡುವ ಮೂಲಕ ನಮಗೆ ವಂಚನೆ ಮಾಡಲಾಗುತ್ತಿದೆ.ಇದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸರಿಯಾಗಿ ಹೇಳಿದ್ದಾರೆ.ಉತ್ತರ ಭಾರತದ ರಾಜ್ಯಗಳ ಜನನಂಖ್ಯೆ ಜಾಸ್ತಿ ಇದೆ ಎಂದು ಹಣಕಾಸು ಆಯೋಗದವರು ಹೇಳುತ್ತಾರೆ.ಇದು ಎಷ್ಟರ ಮಟ್ಟಿಗೆ ಸರಿ. ಜನಸಂಖ್ಯೆ ನಿಯಂತ್ರ ಣ ಮಾಡಿ ಎಂದು ಒಂದು ಕಡೆ ನೀವೇ ಹೇಳುತ್ತೀರಿ, ಮತ್ತೊಂದೆಡೆ ಅಭಿವೃದ್ಧಿಗೆ ಹಣಕಾಸು ಕೊಡುವ ಸಂದರ್ಭದಲ್ಲಿ ಇದೇ ಜನಸಂಖ್ಯೆ ಹೆಚ್ಚಳದ ಆಧಾರದಲ್ಲಿ ಕೊಡು ತ್ತೀರಿ ಎನ್ನುವುದು ಯಾವ ರೀತಿ ನ್ಯಾಯ ಎಂದು ಕಿಡಿ ಕಾರಿದರು.
ಅಜೆಂಡಾ??
ಬಿಜೆಪಿಯವರಿಗೆ ಯಾವ ಯಾವ ಚುನಾವಣೆಯಲ್ಲಿ ಏನೇನು ಅಜೆಂಡಾ ತರಬೇಕು ಎಂಬು ದು ಚೆನ್ನಾಗಿ ಗೊತ್ತಿದೆ. ವ್ಯವವಸ್ಥಿತವಾಗಿ ಚುನಾವಣೆ ಸಮಯದಲ್ಲಿ ಯಾವ ಯಾವ ವಿಚಾರಗಳನ್ನು ತಂದು ಜನರನ್ನು ಭಾವನಾತ್ಮಕವಾಗಿ ಮುಳುಗಿಸಿ ಅವರ ಗಮನ ಬೇರೆಡೆ ತಿರುಗಿಸುತ್ತಾರೆ.ನಿಜವಾಗಿ ಜನರು ಅನುಭವಿಸುತ್ತಿರುವ ಹಣದುಬ್ಬರ, ಆಡಳಿತ ವೈಫಲ್ಯ ವನ್ನು ಮರೆಮಾಚಿ ಚುನಾವಣೆಯ ಲಾಭ ಮಾಡಿಕೊಳ್ಳುವುದು ಗೊತ್ತಿದೆ. ಇದನ್ನು ಬಿಟ್ಟು ಉತ್ತರದ ರಾಜ್ಯಗಳ ಕ್ಷೇತ್ರಗಳು ಹೆಚ್ಚಿದಂತೆ ದಕ್ಷಿಣ ರಾಜ್ಯಗಳ ಲೋಕಸಭಾ ಸ್ಥಾನಗಳೂ ಹೆಚ್ಚುವಂತೆ ಮಾಡುತ್ತೇವೆ ಎಂಬ ಬಗ್ಗೆ ಖಾತರಿ ನೀಡಬೇಕು.ಅದಕ್ಕಾಗಿ ನಾವು ವಿರೋಧ ಮಾಡುತ್ತಿದ್ದೇವೆ ಎಂದರು.