ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬಡ ಮುಸ್ಲಿಂ ಕುಟುಂಬ ಗಳಿಗೆ ಉಚಿತವಾಗಿ ದಿನಸಿ ಕಿಟ್‌ಗಳ ವಿತರಣೆ

ರಂಜಾನ್ ಹಬ್ಬವು ಮುಸ್ಲಿಂ ಸಮುದಾಯದವರ ಪವಿತ್ರ ಹಬ್ಬವಾಗಿದೆ. ಹಾಗೆಯೇ, ದಾನ, ಧರ್ಮದ ಸಂಕೇತ.ಅದನ್ನು ಯಾವುದೇ ಜಾತಿ, ಧರ್ಮಕ್ಕೆ ಸೀಮಿತ ಮಾಡದೇ, ಮಾನವ ಧರ್ಮ ಒಂದೇ ಎಂಬ ಉದ್ದೇಶದಿಂದ ಕಾಣಬೇಕು. ಯಾರೊಬ್ಬರೂ ಸಹ ಹಸಿವಿನಿಂದ ಬಳಲಬಾರದು ಎಂಬ ಸದುದ್ದೇಶದಿಂದ ಸಾಮಾಜಿಕ ಸೇವೆಗಳ ಮೂಲಕ ಕಾರ್ಯಕ್ರಮ ಆಯೋಜಿಸಲಾಗಿದೆ. ಕೆಲವು ಮಂದಿ ಆರ್ಥಿಕವಾಗಿ ಸದೃಢರಾಗಿರದ ಕುಟುಂಬಗಳಿಗೆ ಹಬ್ಬದ ಆಚರಣೆಗಾಗಿ ದಿನಸಿ ಕಿಟ್ ವಿತರಣೆ ಮಾಡಲಾ ಗಿದೆ

ಸೌಹಾರ್ಧತೆಯ ಬುನಾದಿ ಗಟ್ಟಿಗೊಳಿಸೋಣ :  ಕೆ.ಎಂ ನಾಗರಾಜ್

ನಮ್ಮಲ್ಲಿನ ಸೌಹಾರ್ಧ ತೆಯ ಬುನಾದಿಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕೆಂದ ಬಿಳ್ಳೂರು ಶ್ರೀ ಪ್ರಸನ್ನಾಂಜನೇಯ ಸ್ವಾಮಿ ದೇವಾಲಯ ಟ್ರಸ್ಟ್ನ ಅಧ್ಯಕ್ಷ ಕೆ.ಎಂ ನಾಗರಾಜ್ ತಿಳಿಸಿದರು.

Profile Ashok Nayak Mar 24, 2025 10:11 PM

ಬಾಗೇಪಲ್ಲಿ: ನಮ್ಮ ದೇಶವು ಹಿಂದಿನಿಂದಲೂ ಸೌಹಾರ್ಧತೆಗೆ ಹೆಸರು ವಾಸಿ, ಹಾಗೆಯೇ ಸಹಬಾಳ್ವೆಯಿಂದ ಸರ್ವಧರ್ಮಗಳ ಬಹುತ್ವ ಭಾರತವಾಗಿದ್ದು, ನಮ್ಮಲ್ಲಿನ ಸೌಹಾರ್ಧ ತೆಯ ಬುನಾದಿಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕೆಂದ ಬಿಳ್ಳೂರು ಶ್ರೀ ಪ್ರಸನ್ನಾಂಜನೇಯ ಸ್ವಾಮಿ ದೇವಾಲಯ ಟ್ರಸ್ಟ್ನ ಅಧ್ಯಕ್ಷ ಕೆ.ಎಂ ನಾಗರಾಜ್ ತಿಳಿಸಿದರು.

ರಂಜಾನ್ ಹಬ್ಬದ ಪ್ರಯುಕ್ತ ತಾಲೂಕಿನ ಬಿಳ್ಳೂರು ಗ್ರಾಮದಲ್ಲಿನ ಬಡ ಮುಸ್ಲಿಂ ಕುಟುಂಬ ಗಳಿಗೆ ತಮ್ಮ ಟ್ರಸ್ಟ್ ವತಿಯಿಂದ ಉಚಿತವಾಗಿ ದಿನಸಿ ಕಿಟ್‌ಗಳನ್ನು ವಿತರಿಸಲಾಯಿತು.

ಇದನ್ನೂ ಓದಿ: Chikkaballapur News: ಬಲಿಜ ಕುಲ ಬಾಂಧವರು ಸಂಘಟಿತರಾಗಬೇಕು : ವೆಂಕಟೇಶ್

ಈ ವೇಳೆ ಮಾತನಾಡಿದ ಅವರು, ರಂಜಾನ್ ಹಬ್ಬವು ಮುಸ್ಲಿಂ ಸಮುದಾಯದವರ ಪವಿತ್ರ ಹಬ್ಬವಾಗಿದೆ. ಹಾಗೆಯೇ, ದಾನ, ಧರ್ಮದ ಸಂಕೇತ.ಅದನ್ನು ಯಾವುದೇ ಜಾತಿ, ಧರ್ಮಕ್ಕೆ ಸೀಮಿತ ಮಾಡದೇ, ಮಾನವ ಧರ್ಮ ಒಂದೇ ಎಂಬ ಉದ್ದೇಶದಿಂದ ಕಾಣಬೇಕು. ಯಾರೊಬ್ಬರೂ ಸಹ ಹಸಿವಿನಿಂದ ಬಳಲಬಾರದು ಎಂಬ ಸದುದ್ದೇಶದಿಂದ ಸಾಮಾಜಿಕ ಸೇವೆಗಳ ಮೂಲಕ ಕಾರ್ಯಕ್ರಮ ಆಯೋಜಿಸಲಾಗಿದೆ.ಕೆಲವು ಮಂದಿ ಆರ್ಥಿಕವಾಗಿ ಸದೃಢರಾಗಿರದ ಕುಟುಂಬಗಳಿಗೆ ಹಬ್ಬದ ಆಚರಣೆಗಾಗಿ ದಿನಸಿ ಕಿಟ್ ವಿತರಣೆ ಮಾಡಲಾ ಗಿದೆ ಎಂದು ತಿಳಿಸಿದರು.
ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನಡೆಯುವ ವಿಶೇಷ ಪೂಜಾ ದಿನಗಳಲ್ಲಿ ಯಾವುದೇ ಭೇಧಬಾವವಿಲ್ಲದೆ ಮುಸ್ಲಿಂ ಸಮುದಾಯದವರು ಪಾಲ್ಗೊಂಡು ಪೂಜಾ ಸಾಮಗ್ರಿಗಳೊಂದಿಗೆ ಬಂದು ಪೂಜೆ ಸಲ್ಲಿಸಿ ತಿರ್ಥ ಪ್ರಸಾದ ಸ್ವೀಕರಿಸುವ ಮನೋಭಾವನೆ ಇಲ್ಲಿನ ಮುಸ್ಲಿಂ ಬಾಂಧವರಲ್ಲಿ ಇದೆ ಎಂದರು.

ಈ ಸಂದರ್ಭದಲ್ಲಿ ಯಲ್ಲಂಪಲ್ಲಿ ಸಂಪತ್, ಕೊತ್ತೂರು ಶೀನಪ್ಪ,ರಾಹಮತ್ತುಲ್ಲಾ,ರಫೀಕ್ ಮತ್ತಿತರರು ಇದ್ದರು.