ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದೇಶ ವಿದೇಶಗಳು ಬೆಂಗಳೂರಿನತ್ತ ತಿರುಗಿ ನೋಡಲು ಕೆಂಪೇಗೌಡರು ಕಾರಣ : ಶ್ರೀ ಮಂಗಳಾನಂದನಾಥ ಸ್ವಾಮೀಜಿ

ಕೆಂಪೇಗೌಡರು ಕೇವಲ ಒಕ್ಕಲಿಗರ ನಾಯಕರಾಗಿರಲಿಲ್ಲವೆಂದು ಅವರು ಕೈಗೊಂಡ ಆಡಳಿತ ಕ್ರಮ ಗಳಿಂದ ಎಲ್ಲರಿಗೂ ತಿಳಿಯುತ್ತದೆ. ಶತಶತಮಾನಗಳು ಕಳೆದರೂ ನಾಡಿನ ಜನರು ಮೆಲುಕು ಹಾಕುವ ರೀತಿಯಲ್ಲಿ ಕೆಂಪೇಗೌಡರು ಸುಮಾರು 48 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದರು.ಅವರ ಆಡಳಿತ ಮತ್ತು ದೂರದೃಷ್ಟಿ ಇಂದಿನ ಆಡಳಿತ ವ್ಯವಸ್ಥೆಗೆ ಮಾದರಿಯಾಗಿದೆ

ಚಿಂತಾಮಣಿಯಲ್ಲಿ ಕರ್ನಾಟಕ ಕೆಂಪೇಗೌಡ ಒಕ್ಕಲಿಗರ ಸಂಘಕ್ಕೆ ಚಾಲನೆ ನೀಡಿ ಹೇಳಿಕೆ

Profile Ashok Nayak Mar 23, 2025 10:10 PM

ಚಿಂತಾಮಣಿ: ರಾಜಧಾನಿ ಬೆಂಗಳೂರು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಕಾರಣ ಬೆಂಗಳೂರನ್ನು ಕಟ್ಟಿದ ನಾಡಪ್ರಭು ಕೆಂಪೇಗೌಡರಾಗಿದ್ದಾರೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಶ್ರೀ ಮಂಗಳಾನAದನಾಥ ಸ್ವಾಮೀಜಿ ಹೇಳಿದರು. ಚಿಂತಾಮಣಿ ತಾಲ್ಲೂಕಿನ ಬೂರಗಮಾಕಲಹಳ್ಳಿ ಶ್ರೀಸೀತಾರಾಮ ಕಲ್ಯಾಣ ಮಂಟಪದಲ್ಲಿ ಭಾನುವಾರ ನೂತನ ವಾಗಿ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ಕೆಂಪೇಗೌಡ ಒಕ್ಕಲಿಗರ ಸಂಘದ ಉದ್ಘಾ ಟನಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.

ಇದನ್ನೂ ಓದಿ: Chikkaballapur(Chinthamani) News: ಮರುಗಮಲ್ಲ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಗುರುವಂದನಾ ಕಾರ್ಯಕ್ರಮ

ಕೆಂಪೇಗೌಡರು ಕೇವಲ ಒಕ್ಕಲಿಗರ ನಾಯಕರಾಗಿರಲಿಲ್ಲವೆಂದು ಅವರು ಕೈಗೊಂಡ ಆಡಳಿತ ಕ್ರಮಗಳಿಂದ ಎಲ್ಲರಿಗೂ ತಿಳಿಯುತ್ತದೆ. ಶತಶತಮಾನಗಳು ಕಳೆದರೂ ನಾಡಿನ ಜನರು ಮೆಲುಕು ಹಾಕುವ ರೀತಿಯಲ್ಲಿ ಕೆಂಪೇಗೌಡರು ಸುಮಾರು 48 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದರು.ಅವರ ಆಡಳಿತ ಮತ್ತು ದೂರದೃಷ್ಟಿ ಇಂದಿನ ಆಡಳಿತ ವ್ಯವಸ್ಥೆಗೆ ಮಾದರಿಯಾಗಿದೆ ಎಂದು  ಅವರು ಕೆಂಪೇಗೌಡರಂತೆ ನೆಲ ಜಲ ಸಂರಕ್ಷಣೆಯು ಪ್ರತಿ ಪ್ರಜೆಯ ಮೊದಲ ಆದ್ಯತೆಯಾಗಬೇಕು. ನಿಸರ್ಗ ದತ್ತ ದೊರಕುವ ನೀರನ್ನು ಪ್ರತಿಯೊಬ್ಬರು ಹಿತಮಿತವಾಗಿ ಬಳಸಬೇಕು. ಕೋಲಾರ ಚಿಕ್ಕಬಳ್ಳಾಪುರ ಎಂಬ ಅವಳಿ ಜಿಲ್ಲೆಗಳಲ್ಲಿ ನೀರಾವರಿ ಯೋಜನೆಗಳನ್ನು ಜಾರಿಗೆ ತರಲು ಸಂಘಟನೆಗಳು ಹೋರಾ ಟಗಳು ಮಾಡಬೇಕು ಎಂದು ಕರೆ ನೀಡಿದರು.

ಶಾಸಕರಾದ ಜಿ ಟಿ ದೇವೇಗೌಡ ಮಾತನಾಡಿ ಇಂದು ದೇಶ ವಿದೇಶಗಳು ಬೆಂಗಳೂರಿನ ಕಡೆ ತಿರುಗಿ ನೋಡುವಂತಾಗಿದೆ ಎಂದರೆ ಇದಕ್ಕೆ ಕಾರಣ ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡರಾಗಿದ್ದಾರೆ. ಅವರ ಅವತ್ತಿನ ದೂರಾಲೋಚನೆಯೇ ಇವತ್ತು ಬೆಂಗಳೂರು ವಿಶಾಲವಾಗಿ ಬೆಳೆದು ಸಿಲಿಕಾನ್ ಸಿಟಿಯಾಗಿ ವಿಶ್ವದ ಗಮನ ಸೆಳೆಯಲು ಕಾರಣವಾಗಿದೆ ಎಂದರು.

ಕೆಂಪೇಗೌಡರಿಂದ ನಿರ್ಮಿತವಾದ ಬೆಂಗಳೂರು ದಿನದಿಂದ ಬೆಳೆಯುತ್ತಲೇ ಸಾಗುತ್ತಿದೆ. ಅದನ್ನು ಸುತ್ತಮುತ್ತಲ ಹಳ್ಳಿ ಪಟ್ಟಣಗಳನ್ನೆಲ್ಲ ವ್ಯಾಪಿಸಿಕೊಂಡು ಬೃಹತ್ ಮಟ್ಟದಲ್ಲಿ ಅಭಿವೃದ್ಧಿಯಾಗು ತ್ತಿದೆ. ಜಗತ್ತಿನ ಎಲ್ಲ ದೇಶಗಳು ಇತ್ತ ನೋಡುತ್ತಿವೆ. ಇಂತಹ ಸಂದರ್ಭದಲ್ಲಿ ನಾವು ಕೆಂಪೇಗೌಡ ರನ್ನು ನೆನಪಿಸಿಕೊಳ್ಳಲೇ ಬೇಕಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಜಿಎಸ್ ರಘುನಾಥ್ ರೆಡ್ಡಿ,ಗೌರವಾಧ್ಯಕ್ಷರಾದ ಯಲವಹಳ್ಳಿ ರಮೇಶ್,ಕಿಮ್ಸ್ ಆಸ್ಪತ್ರೆಯ ಮಾಜಿ ಅಧ್ಯಕ್ಷರು ಹಾಗೂ ನಿರ್ದೇಶಕರಾದ ಡಾ!ಟಿ ರಮೇಶ್, ಸಮಾಜ ಸೇವಕರಾದ ಸೀಕಲ್ ರಾಮಚಂದ್ರಗೌಡ, ರಾಜ್ಯ ಕಾರ್ಯಧ್ಯಕ್ಷರಾದ ಅಭಿಷೇಕ್ ಎ ಸಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ಕೆ ಕೆ ಮಂಜುನಾಥ್, ರಾಜ್ಯ ಉಪಾಧ್ಯಕ್ಷರಾದ ಜೆಪಿ ಚಂದ್ರಶೇಖರ್ ರೆಡ್ಡಿ,ರವೀಂದ್ರ ಗೌಡ ಜಿ,ಮಧು ಎಸ್, ಸುರೇಂದ್ರ ರೆಡ್ಡಿ ಬಿ,ಎನ್ ದೇವರಾಜ್, ಸದಾಶಿವರೆಡ್ಡಿ ಸಿ, ಮನೋಹರ್ ಸಿ ಎಸ್,ಸೇರಿದಂತೆ ಮತ್ತಿತರರು ಇದ್ದರು.