ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Manipal Foundation: ದಕ್ಷಿಣ ಕನ್ನಡ ಆರೋಗ್ಯ ಇಲಾಖೆಗೆ ಲಸಿಕೆ ಸಂಗ್ರಹಿಸುವ ರೆಫ್ರಿಜರೇಟರ್ ದಾನ ನೀಡಿದ ಮಣಿಪಾಲ್ ಫೌಂಡೇಶನ್

ಜಿಲ್ಲಾ ಆರೋಗ್ಯ ಇಲಾಖೆಗೆ 11 ಎಂವೊಲಿಯೊ ಪೋರ್ಟೆಬಲ್ ಬ್ಯಾಟರಿ ಚಾಲಿತ ಲಸಿಕೆ ಸಂಗ್ರಹಿಸುವ ರೆಫ್ರಿಜರೇಟರ್ನ್ನು ಕೊಡುಗೆಯಾಗಿ ನೀಡಿದೆ. ಮಾ.26 ರಂದು ಡಾ.ಬಿ ಆರ್.ಅಂಬೇಡ್ಕರ್ ವೃತ್ತದ ಬಳಿಯ ಕೆಎಂಸಿ ಆಸ್ಪತ್ರೆಯಲ್ಲಿ ಅಧಿಕೃತ ಹಸ್ತಾಂತರ ಸಮಾರಂಭ ನಡೆಯಿತು.

ದಕ್ಷಿಣ ಕನ್ನಡ ಆರೋಗ್ಯ ಇಲಾಖೆಗೆ ಲಸಿಕೆ ಸಂಗ್ರಹಿಸುವ ರೆಫ್ರಿಜರೇಟರ್ ದಾನ

Profile Vishakha Bhat Mar 27, 2025 4:59 PM

ಮಂಗಳೂರು: ಜಿಲ್ಲೆಯಲ್ಲಿ ಲಸಿಕೆ ಲಭ್ಯತೆ ಹಾಗೂ ಸುರಕ್ಷಿತ ಲಸಿಕಾಕರಣವನ್ನು ಸಾಧಿಸುವ ನಿಟ್ಟಿನಲ್ಲಿ ಮಣಿಪಾಲ್ ಫೌಂಡೇಶನ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಜಿಲ್ಲಾ ಆರೋಗ್ಯ ಇಲಾಖೆಗೆ 11 ಎಂವೊಲಿಯೊ ಪೋರ್ಟೆಬಲ್ ಬ್ಯಾಟರಿ ಚಾಲಿತ ಲಸಿಕೆ ಸಂಗ್ರಹಿಸುವ ರೆಫ್ರಿಜರೇಟರ್ನ್ನು ಕೊಡುಗೆಯಾಗಿ ನೀಡಿದೆ. ಮಾ.26 ರಂದು ಡಾ.ಬಿ ಆರ್.ಅಂಬೇಡ್ಕರ್ ವೃತ್ತದ ಬಳಿಯ ಕೆಎಂಸಿ ಆಸ್ಪತ್ರೆಯಲ್ಲಿ ಅಧಿಕೃತ ಹಸ್ತಾಂತರ ಸಮಾರಂಭ ನಡೆಯಿತು. ಪೋರ್ಟಬಲ್ ಬ್ಯಾಟರಿ ಚಾಲಿತ ರೆಫ್ರಿಜರೇಟರ್ ಸಾಧನಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಕೀಯ ಅಧಿಕಾರಿಗಳಿಗೆ ಡಿಎಚ್ಒ, ಆರ್ಸಿಎಚ್ಒ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇತರ ಅಧಿಕಾರಿಗಳ ಸಮ್ಮುಖದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಪ್ರಾದೇಶಿಕ ಮುಖ್ಯ ಕಾರ್ಯಾನಿರ್ವಾಹಕ ಅಧಿಕಾರಿ ಶ್ರೀ ಸಾಘೀರ್ ಸಿದ್ದಿಕಿ ಅವರು ಹಸ್ತಾಂತರಿಸಿದರು.

ವಿಶಾಲವಾದ, ವ್ಯಾಪಕವಾಗಿ ಹರಡಿದ ಜನಸಂಖ್ಯೆ ಮತ್ತು ಹೆಚ್ಚಿನ ವಲಸೆ ಪ್ರಮಾಣವನ್ನು ಹೊಂದಿರುವ ಉಡುಪಿ ಮತ್ತು ದಕ್ಷಿಣ ಕನ್ನಡವು ಆರೋಗ್ಯ ಸೇವೆಯಲ್ಲಿ ಲಸಿಕೆ ಸಂಗ್ರಹ ಮತ್ತು ಸರಬರಾಜು ಸೇರಿ ಹಲವು ವಿಶಿಷ್ಟವಾದ ಸಮಸ್ಯೆಯನ್ನು ಎದುರಿಸುತ್ತಿದೆ. ಲಸಿಕೆಗಳ ಪರಿಣಾಮವನ್ನು ಕಾಯ್ಡುಕೊಳ್ಳಲು , ಕಾಲೋಚಿತ ರೋಗಗಳನ್ನು ತಡೆಗಟ್ಟಲು ಹಾಗೂ ಲಸಿಕಾಕರಣವನ್ನು ಪರಿಣಾಮಕಾರಿಯಾಗಿ ಸಾಧಿಸಲು ವಿಶ್ವಾಸಾರ್ಹ ಹಾಗೂ ಪರಿಣಾಮಕಾರಿಯಾದ ಕೋಲ್ಡ್ ಚೈನ್ ಸೆಲ್ಯೂಶನ್ ( ಕೋಲ್ಡ್ ಸ್ಟೋರೇಜ್) ಅಗತ್ಯವಿದೆ. ಐಸ್ ಬಾಕ್ಸ್ನಂತಹ ಸಾಂಪ್ರದಾಯಿಕ ವಿಧಾನಗಳು ಅಗತ್ಯವಿರುವ 2-8 ಡಿಗ್ರಿ ಸೆಲ್ಶಿಯಸ್ ತಾಪಮಾನವನ್ನು ಕಾಪಾಡಿಕೊಳ್ಳುವಲ್ಲಿ ವಿಫಲವಾಗುತ್ತವೆ. ಇದರಿಂದ ಲಸಿಕೆಗಳು ಕೆಡುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬ್ಲ್ಯಾಕ್ಫ್ರಾಗ್ ಟೆಕ್ನಾಲಜಿಸ್ ಪ್ರೈವೆಟ್ ಲಿಮಿಟೆಡ್ ಎಂವೊಲಿಯೊ ಎಂಬ ಸಾಧನವನ್ನು ಪರಿಚಯಿಸಿದೆ. ಇದು 12 ಗಂಟೆಗಳ ಕಾಲ ತಾಪಮಾನವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಎಲ್ಲಾ ರೀತಿಯ ಪರೀಕ್ಷೆಯಲ್ಲಿ ಸಫಲತೆ ತೋರಿದೆ. ಈ ಪೇಟೆಂಟ್ ಹೊಂದಿರುವ ಸಾಧನ ತಾಪ ಹೆಚ್ಚಿರುವ ವಾತಾವರಣದಲ್ಲಿ ಕೂಡ ತನ್ನೊಳಗೆ ಲಸಿಕೆ, ಬ್ಲಡ್ ಸಿರಮ್, ಇನ್ಸೂಲಿನ್ ಹಾಗೂ ಇನ್ನೀತರ ಜೈವಿಕ ವಸ್ತುಗಳನ್ನು ಸುರಕ್ಷಿತವಾಗಿಡಬಲ್ಲದಾಗಿದೆ. ಎಂವೊಲಿಯೊ ಸಾಧನದ ವಿಶಿಷ್ಟ ಡಿಸೈನ್ ತಾಪಮಾಣ ಬದಲಾವಣೆಯಿಂದ ಲಸಿಕೆಗಳು ಕೆಡದಂತೆ ಕಾಪಾಡುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಕೆಎಂಸಿ ಆಸ್ಪತ್ರೆ ಮಂಗಳೂರಿನ ಪ್ರಾದೇಶಿಕ ಮುಖ್ಯ ಕಾರ್ಯಾನಿರ್ವಾಹಕ ಅಧಿಕಾರಿ ಶ್ರೀ ಸಘೀರ್ ಸಿದ್ಧಿಕಿ , " ವಿಶೇಷವಾಗಿ ಭೌಗೋಳಿಕ ಮತ್ತು ಸಾಗಣೆ ಸವಾಲುಗಳಿರುವ ಪ್ರದೇಶ ಗಳಲ್ಲಿ. ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆ ವಿತರಣೆಯನ್ನು ಖಚಿತಪಡಿಸಿಕೊಳ್ಳುವುದು ಅತ್ಯಂತ ಮುಖ್ಯ ವಾಗಿದೆ.

ಮಣಿಪಾಲ್ ಫೌಂಡೇಶನ್ನ ಎಂವೊಲಿಯೊ ಘಟಕಗಳ ಕೊಡುಗೆಯು ಕೊನೆಯ ಹಂತದ ಲಸಿಕೆ ಸಾಗಣೆಯ ದಕ್ಷತೆಯನ್ನು ಹೆಚ್ಚಿಸಿದೆ, ಅಂತಿಮವಾಗಿ ದುರ್ಬಲ ಸಮುದಾಯಗಳನ್ನು ತಡೆಗಟ್ಟಬಹುದಾದ ರೋಗಗಳಿಂದ ರಕ್ಷಿಸುತ್ತದೆ" ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ: Udupi News: 2025ರ ಕ್ಯೂಎಸ್ ಸಬ್ಜೆಕ್ಟ್ ಶ್ರೇಯಾಂಕದಲ್ಲಿ ಮಹತ್ವದ ಸಾಧನೆ ಮಾಡಿದ ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌

11 ಎಮ್ವೋಲಿಯೊ ಘಟಕಗಳ ಕೊಡುಗೆಯು ಜಿಲ್ಲೆಯ ರೋಗನಿರೋಧಕ ಮೂಲಸೌಕರ್ಯವನ್ನು ಬಲ ಪಡಿಸಿದೆ ಹಾಗೂ ಜೀವ ಉಳಿಸುವ ಲಸಿಕೆಗಳನ್ನು ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ತಲುಪಿಸುವ ಧ್ಯೇಯದಲ್ಲಿ ಆರೋಗ್ಯ ಕಾರ್ಯಕರ್ತರನ್ನು ಬೆಂಬಲಿಸುತ್ತದೆ. ಈ ಉಪಕ್ರಮವು ಮಣಿಪಾಲ್ ಫೌಂಡೇಶನ್ನ ಬ್ಲ್ಯಾಕ್ಫ್ರಾಗ್ ಟೆಕ್ನಾಲಜೀಸ್ ಮತ್ತು ಸ್ಥಳೀಯ ಆರೋಗ್ಯ ಅಧಿಕಾರಿಗಳ ಸಹಯೋಗ ದೊಂದಿಗೆ ಆರೋಗ್ಯ ರಕ್ಷಣೆ ಮತ್ತು ನಾವೀನ್ಯತೆಯನ್ನು ಮುನ್ನಡೆಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಹೆಚ್.ಆರ್.ತಿಮ್ಮಯ್ಯ ಈ ಸಂದರ್ಭದಲ್ಲಿ ಮಾತನಾಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮಣಿಪಾಲ್ ಫೌಂಡೇಶನ್ ನೀಡಿದ ದೇಣಿಗೆಯು, ಆರೋಗ್ಯ ಕ್ಷೇತ್ರದ ನಿರ್ಣಾಯಕ ಸವಾಲುಗಳನ್ನು ಎದುರಿಸುವಲ್ಲಿ ಮತ್ತು ಎಲ್ಲರಿಗೂ ಆರೋಗ್ಯಕರ ಭವಿಷ್ಯ ಖಾತ್ರಿಪಡಿಸುವಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಹತ್ವವನ್ನು ಒತ್ತಿ ಹೇಳುತ್ತದೆ ಎಂದು ಹೇಳಿದರು.