ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ugadi Bombe Bhavishya: ರಾಜ್ಯದಲ್ಲಿ ಸಿಎಂ ಬದಲಾಗ್ತಾರಾ? ಯುಗಾದಿಯಂದು ಬೊಂಬೆಗಳಿಂದ ಸ್ಫೋಟಕ ಭವಿಷ್ಯ!

Ugadi Bombe Bhavishya: ಧಾರವಾಡ ತಾಲೂಕಿನ ಹನುಮನಕೊಪ್ಪದ ಯುಗಾದಿ ಬೊಂಬೆ ಭವಿಷ್ಯ ಭಾನುವಾರ ಹೊರಬಿದ್ದಿದೆ. ರಾಜ್ಯ ರಾಜಕಾರಣ, ಪ್ರಾಕೃತಿಕ ವಿಕೋಪಗಳು ಸೇರಿ ಒಂದು ವರ್ಷದಲ್ಲಿ ನಡೆಯಲಿರುವ ಮಹತ್ವದ ಘಟನೆಗಳ ಬಗ್ಗೆ ಬೊಂಬೆಗಳು ಭವಿಷ್ಯ ನುಡಿದಿವೆ.

ಸಿಎಂ ಬದಲಾಗ್ತಾರಾ? ಯುಗಾದಿಯಂದು ಬೊಂಬೆಗಳಿಂದ ಸ್ಫೋಟಕ ಭವಿಷ್ಯ!

Profile Prabhakara R Mar 30, 2025 5:55 PM

ಧಾರವಾಡ: ಐತಿಹಾಸಿಕ ಹಿನ್ನೆಲೆಯುಳ್ಳ ಧಾರವಾಡ ತಾಲೂಕಿನ ಹನುಮನಕೊಪ್ಪದ ಯುಗಾದಿ ಬೊಂಬೆ ಭವಿಷ್ಯ ಭಾನುವಾರ ಹೊರಬಿದ್ದಿದೆ. ಈ ಬೊಂಬೆಗಳು ಪ್ರತಿ ಯುಗಾದಿ ಹಬ್ಬದಂದು ಅಚ್ಚರಿ ಭವಿಷ್ಯ ನುಡಿಯುತ್ತವೆ. ಈ ಪೈಕಿ ಬಹುತೇಕ ಭವಿಷ್ಯವಾಣಿಗಳು ನಿಜವಾಗಿರುವ ನಿದರ್ಶನವೂ ಇದೆ. ಇಂದು ಕೂಡ ರಾಜ್ಯ ರಾಜಕೀಯ ಸೇರಿ ಹಲವು ವಿಷಯಗಳ ಬಗ್ಗೆ ಬೊಂಬೆಗಳು ಭವಿಷ್ಯ ನುಡಿದಿವೆ.

ಹನುಮನಕೊಪ್ಪ ಗ್ರಾಮದಲ್ಲಿ ಸುಮಾರು 1936ರಿಂದಲೂ ಬೊಂಬೆ ಭವಿಷ್ಯವಾಣಿ ಪ್ರಸಿದ್ಧಿ ಪಡೆದಿದೆ. ರಾಜ್ಯ ರಾಜಕಾರಣ, ಪ್ರಾಕೃತಿಕ ವಿಕೋಪಗಳು ಸೇರಿ ಒಂದು ವರ್ಷದಲ್ಲಿ ನಡೆಯಲಿರುವ ಮಹತ್ವದ ಘಟನೆಗಳ ಬಗ್ಗೆ ಬೊಂಬೆಗಳು ಭವಿಷ್ಯ ನುಡಿಯುತ್ತವೆ. ಅದರಂತೆ ಈ ಬಾರಿಯೂ ರಾಜ್ಯ ರಾಜಕಾರಣ ಹಾಗೂ ಮುಖ್ಯವಾಗಿ ಸಿಎಂ ಕುರ್ಚಿ ಬದಲಾವಣೆ ಬಗ್ಗೆಯೂ ಭವಿಷ್ಯ ಹೊರಬಿದ್ದಿದೆ. ಈ ಸಲ ಮುಂಗಾರು ಮಳೆ ಕಡಿಮೆ ಆಗಲಿದೆ. ಆದರೆ ಹಿಂಗಾರು ಮಳೆಯೂ ರೈತರಿಗೆ ವರದಾನವಾಗಲಿದೆ. ಉಳಿದಂತೆ ಕೊಬ್ಬರಿ, ಶೇಂಗಾ, ಬೆಲ್ಲ, ಜೋಳ ಸೇರಿದಂತೆ ವಿವಿಧ ಧಾನ್ಯಗಳಿಗೆ ಒಳ್ಳೆಯ ಬೆಲೆ ಸಿಗಲಿದೆ ಎಂದು ಬೊಂಬೆಗಳ ಭವಿಷ್ಯವಾಣಿಯನ್ನು ವಿಶ್ಲೇಷಿಸಲಾಗಿದೆ.

ಇನ್ನು ಕಳೆದ ವರ್ಷವೂ ಕೇಂದ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬೊಂಬೆಗಳು ಭವಿಷ್ಯ ನುಡಿದಿದ್ದವು. ಅದು ಕೂಡ ನಿಜವಾಗಿದೆ. ಇನ್ನು ಈ ಬಾರಿಯೂ ಕೇಂದ್ರ-ರಾಜ್ಯ ರಾಜಕಾರಣವು ಯಥಾಸ್ಥಿತಿಯಲ್ಲೇ ಇರಲಿದೆ ಎಂದು ಭವಿಷ್ಯ ನುಡಿದಿದೆ. ಇದರಿಂದ ಸಿದ್ದರಾಮಯ್ಯ ಅವರೇ ಸಿಎಂ ಕುರ್ಚಿಯಲ್ಲಿ ಮುಂದುವರಿಯುತ್ತಾರೆ ಎಂದು ಗೊಂಬೆಗಳು ಭವಿಷ್ಯ ನುಡಿದಿವೆ. ಇನ್ನು ಗೋವಾ ದಿಕ್ಕಿನ ಕಡೆಗೆ ಇದ್ದ ಗೊಂಬೆಗೆ ಧಕ್ಕೆಯಾಗಿದ್ದು, ಈ ಹಿನ್ನೆಲೆ ಗೋವಾ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆ ಆಗಲಿದೆಯಂತೆ ಎಂದು ಬೊಂಬೆಗಳು ಭವಿಷ್ಯವಾಣಿ ನುಡಿದಿವೆ.

ಯುಗಾದಿ ಹಬ್ಬದ ವೇಳೆ ಅಮವಾಸ್ಯೆ ದಿನ ಇಲ್ಲಿನ ಹಳ್ಳದಲ್ಲಿ ಒಂದು ಆಕೃತಿ ಮಾಡಿ ಅದರ ನಾಲ್ಕೂ ದಿಕ್ಕಿಗೆ ರಾಜಕೀಯದ ಭವಿಷ್ಯ ನುಡಿಯುವ ಗೊಂಬೆಗಳನ್ನು ಇಡಲಾಗುತ್ತದೆ. ಮರುದಿನ ಬೆಳಗ್ಗೆ ಎಲ್ಲ ಗೊಂಬೆಗಳನ್ನು ಪರಿಶೀಲಿಸಲಾಗುತ್ತದೆ. ಆಗ ಯಾವುದಾದರೂ ಗೊಂಬೆಗೆ ಹಾನಿಯಾಗಿದ್ದರೆ ಅದರ ಮೇಲೆ ಈ ಭವಿಷ್ಯ ಹೇಳಲಾಗುತ್ತದೆ. ಈ ಹಿಂದೆ ಕಾಂಗ್ರೆಸ್‌ನ ಪಕ್ಷದ ನಾಯಕಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ಸಮಯದಲ್ಲೂ ಇಲ್ಲಿದ್ದ ಗೊಂಬೆಗೆ ಹಾನಿಯಾಗಿತ್ತು. ಆಗ ದೊಡ್ಡ ರಾಜಕಾರಣಿಯೊಬ್ಬರು ಸಾಯುತ್ತಾರೆ ಎಂದು ಗೊಂಬೆಗಳು ಭವಿಷ್ಯ ನುಡಿದಿದ್ದವು. ಅದರಂತೆ ಅದೇ ವರ್ಷ ಇಂದಿರಾ ಗಾಂಧಿ ಅವರು ಮೃತಪಟ್ಟಿದ್ದರು.

ಈ ಸುದ್ದಿಯನ್ನೂ ಓದಿ | Vinayak V Bhat Column: ಕಾಲಚಕ್ರದೊಳಗೊಂದು ಭರವಸೆಯ ಕಾಲ: ಯುಗಾದಿ

ಇನ್ನು ರಾಜ್ಯದಲ್ಲಿ ಬಿಎಸ್‌ ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಕೆಳಗಿಳಿಯುವ ಬಗ್ಗೆಯೂ ಮುನ್ಸೂಚನೆ ನೀಡಿ ಗೊಂಬೆಗಳು ತಲೆಕೆಳಗಾಗಿದ್ದವು. ಅದರಂತೆ ಯಡಿಯೂರಪ್ಪ ಅವರು ಅಧಿಕಾರದಿಂದ ಕೆಳಗಿಳಿದಿದ್ದರು. ಈಗ ರಾಜ್ಯ ರಾಜಕಾರಣ ಯತಾಸ್ಥಿತಿಯಲ್ಲಿರುತ್ತೆ ಎಂದು ಭವಿಷ್ಯ ನುಡಿದಿದ್ದು, ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ಸೇಫ್‌ ಎನ್ನಲಾಗಿದೆ.