ಸಾವಿತ್ರಿಬಾಯಿ ಪುಲೆ ಶಿಕ್ಷಣದ ಮಹತ್ವ ಸಾರಿದ ದಿಟ್ಟ ಮಹಿಳೆ: ಮಾಜಿ ಶಾಸಕ ಎನ್.ಹೆಚ್.ಶಿವಶಂಕರ್‌ರೆಡ್ಡಿ
ಶಾಲೆಗೆ ಅಕ್ಷರ ಕಲಿಸಲು ಹೋಗುವಾಗ ದಾರಿಯಲ್ಲಿ ಅವರ ಮೇಲೆ ಸಗಣಿ ಹೊಲಸು ಎಸೆದರೂ ಧೃತಿ ಗೆಡದೆ, ಸಮ ಸಮಾಜದ ಆಶಯಗಳನ್ನು ಗಟ್ಟಿಗೊಳಿಸಿದ ಧೀಮಂತ ದಂಪತಿಗಳು ಜ್ಯೋತಿಬಾ ಪುಲೆ ಸಾವಿತ್ರಿಬಾಯಿ ಪೂಲೆ ಇವರ ಜೀವನದ ಸಂದೇಶವನ್ನು ಸಾರುವಂತಹ ಕಥಾವಸ್ತುವನ್ನು ರಂಗ ರೂಪಕ್ಕೆ ತಂದು ಜನ ಸಮುದಾಯಗಳಿಗೆ ಜಾಗೃತಿ ಮೂಡಿಸುತ್ತಿರುವುದು ಬಹಳ ಸಂತೋಷ ಎಂದರು
!["ಸರಸ್ವತಿ ಯಾಗಲೊಲ್ಲಿ" ನಾಟಕಕ್ಕೆ ಚಾಲನೆ](https://cdn-vishwavani-prod.hindverse.com/media/original_images/CHK_9_ok.jpg)
ಮಹಿಳಾ ಹಕ್ಕುಗಳ ಹೋರಾಟಕ್ಕೆ ಮುನ್ನುಡಿ ಬರೆದ ಭಾರತದ ಮೊಟ್ಟಮೊದಲ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ದಣಿವರಿಯದ ಸತ್ಯ ಶೋಧಕ ಹಿಂದುಳಿದ ಸಮುದಾಯಕ್ಕೆ ಶಿಕ್ಷಣ ನಿಶಿದ್ಧವಾಗಿದ್ದ ಸಾಮಾಜಿಕ ಸಂದರ್ಭದಲ್ಲಿ ಶಿಕ್ಷಣದ ಮಹತ್ವ ಸಾರಿದ ದಿಟ್ಟ ಮಹಿಳೆ ಎಂದು ಮಾಜಿ ಸಚಿವ ಎನ್.ಎಚ್ ಶಿವಶಂಕರರೆಡ್ಡಿ ತಿಳಿಸಿದರು
![Profile](https://vishwavani.news/static/img/user.png)
ಗೌರಿಬಿದನೂರು: 18ನೇ ಶತಮಾನದಲ್ಲಿ ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಕ್ಕೆ ಮುನ್ನುಡಿ ಬರೆದ ಭಾರತದ ಮೊಟ್ಟಮೊದಲ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ದಣಿವರಿಯದ ಸತ್ಯ ಶೋಧಕ ಹಿಂದುಳಿದ ಸಮುದಾಯಕ್ಕೆ ಶಿಕ್ಷಣ ನಿಶಿದ್ಧವಾಗಿದ್ದ ಸಾಮಾಜಿಕ ಸಂದರ್ಭದಲ್ಲಿ ಶಿಕ್ಷಣದ ಮಹತ್ವ ಸಾರಿದ ದಿಟ್ಟ ಮಹಿಳೆ ಎಂದು ಮಾಜಿ ಸಚಿವ ಎನ್.ಎಚ್ ಶಿವಶಂಕರರೆಡ್ಡಿ ತಿಳಿಸಿದರು. ಅವರು ತಾಲ್ಲೂಕಿನ ಇಡಗೂರು ಗಾಮದಲ್ಲಿನ ರುದ್ರ ಕವಿ ರಂಗಮಂದಿರದಲ್ಲಿ ಗೌತಮ ಬುದ್ದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ ಇಡಗೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಕ್ಷರದ ಅವ್ವ,ಮಾತೆ ಸಾವಿತ್ರಿ ಬಾಯಿ ಪುಲೆ ಅವರ ಕಥೆ ಆಧಾರಿತ"ಸರಸ್ವತಿ ಯಾಗಲೊಲ್ಲಿ" ನಾಟಕಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಶಾಲೆಗೆ ಅಕ್ಷರ ಕಲಿಸಲು ಹೋಗುವಾಗ ದಾರಿಯಲ್ಲಿ ಅವರ ಮೇಲೆ ಸಗಣಿ ಹೊಲಸು ಎಸೆದರೂ ಧೃತಿಗೆಡದೆ, ಸಮ ಸಮಾಜದ ಆಶಯಗಳನ್ನು ಗಟ್ಟಿಗೊಳಿಸಿದ ಧೀಮಂತ ದಂಪತಿಗಳು ಜ್ಯೋತಿಬಾ ಪುಲೆ ಸಾವಿತ್ರಿಬಾಯಿ ಪೂಲೆ ಇವರ ಜೀವನದ ಸಂದೇಶವನ್ನು ಸಾರುವಂತಹ ಕಥಾವಸ್ತುವನ್ನು ರಂಗ ರೂಪಕ್ಕೆ ತಂದು ಜನ ಸಮುದಾಯಗಳಿಗೆ ಜಾಗೃತಿ ಮೂಡಿಸುತ್ತಿರುವುದು ಬಹಳ ಸಂತೋಷ ಎಂದರು.
ಇದನ್ನೂ ಓದಿ: Chikkaballapur News: ನೂತನ ಬಿಜೆಪಿ ಜಿಲ್ಲಾಧ್ಯಕ್ಷ 2 ವಾರದಲ್ಲಿ ಬದಲಾಗಲಿದ್ದಾರೆ : ಹೆಚ್.ಆರ್.ಸಂದೀಪ್‌ರೆಡ್ಡಿ ಭವಿಷ್ಯ
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ದಲಿತ ಮುಖಂಡರಾದ ಸಿಜಿ ಗಂಗಪ್ಪ ಮಾತನಾಡಿ ಸಮ ಸಮಾ ಜದ ಆಶಯಗಳನ್ನು ಗಟ್ಟಿಗೊಳಿಸಿದ ಸಾವಿತ್ರಿಬಾಯಿ ಫುಲೆ ೧೮ ನೇ ಶತಮಾನದ ಮೌಢ್ಯ ಕಂದಾ ಚಾರ ಅಸಮಾನತೆ ತೀವ್ರ ಸ್ವರೂಪದಲ್ಲಿ ಇದ್ದಂತಹ ಕಾಲಘಟ್ಟದಲ್ಲಿ ಗಟ್ಟಿತನದಿಂದ ಸಾರ್ವತ್ರಿಕ ಶಿಕ್ಷಣಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟವರು ಎಂದರು ನಿವೃತ್ತ ಶಿಕ್ಷಕ ಎಲ್ ನಾಗರಾಜ್ ಮಾತ ನಾಡಿ ವರ್ಣ ತಾರತಮ್ಯ ವರ್ಗ ತಾರತಮ್ಯ ಲಿಂಗ ತಾರತಮ್ಯ ಇವುಗಳಿಗೆ ಶಿಕ್ಷಣವೇ ಆಯುಧ ಎಂದು ಅರಿತ ಸಾವಿತ್ರಿಬಾಯಿ ಫುಲೆ ಸರ್ವರಿಗೂ ಶಿಕ್ಷಣದ ಮೌಲ್ಯವನ್ನು ಸಾರಿದ ಶ್ರೇಷ್ಠ ಸಮಾಜ ಚಿಂತಕರು ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಜಿ ಸೋಮಯ್ಯ ಮಾತನಾಡಿ ಸಾಮಾಜಿಕ ಕ್ರಾಂತಿಯ ಮೂಲಕ ವಿಧವೆಯರ ತಲೆ ಬೋಳಿಸುವ ಪದ್ಧತಿಯನ್ನು ಪ್ರಬಲವಾಗಿ ವಿರೋಧಿಸಿ ದಲಿತ ಮತ್ತು ಹಿಂದುಳಿದ ವರ್ಗದ ಹೆಣ್ಣು ಮಕ್ಕಳಿಗೆ ಸತ್ಯಶೋಧಕ ಸಮಾಜದ ಮೂಲಕ ಸಾಮಾಜಿಕ ಸಾಮರಸ್ಯ ಮೂಡಿಸಿ ದವರು ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಅಸ್ಪೃಶ್ಯರಷ್ಟೇ ಅಸಮಾನತೆಗೆ ಗುರಿಯಾಗಿದ್ದವರು ಈ ದೇಶದ ಎಲ್ಲ ಜಾತಿಯ ಹೆಣ್ಣುಮಕ್ಕಳು ಹೆಣ್ಣು ಮಕ್ಕಳಿಗೆ ಶಿಕ್ಷಣದ ಸತ್ಯವನ್ನ ಅರ್ಥೈಸಿದ ಸಂತರು ಎಂದರು.
ಕಾರ್ಯಕ್ರಮದಲ್ಲಿ ವಿಎಂ ಶ್ರೀಕಾಂತ್ ರವರಿಂದ ಗೀತ ಗಾಯನ ಅನಿಲ್ ರವರಿಂದ ತಮಟೆ ವಾದ್ಯ ಬಳ್ಳಾರಿಯ ಸಿರುಗುಪ್ಪದ ಧಾತ್ರಿ ರಂಗಸಂಸ್ಥೆಯಿಂದ ಸರಸ್ವತಿಯಾಗಲು ಲೊಲ್ಲೆ ನಾಟಕ ಮೆರೆದಿದ್ದ ಅಪಾರ ಜನಸ್ತೋಮವನ್ನು ನಿಬ್ಬೆರಗಾಗಿಸುವಂತೆ ಮಾಡಿತು.
ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನರಸಿಂಹಪ್ಪ ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಎನ್ ಪ್ರಸನ್ನ ಕುಮಾರ್ ಗೌತಮ ಬುದ್ಧ ಸಂಸ್ಥೆ ಅಧ್ಯಕ್ಷ ಪ್ರಸನ್ನ ಕುಮಾರ್ ಶಿವು ಸುರೇಶ್ ರಾಮಕೃಷ್ಣಪ್ಪ ಕೃಷ್ಣಪ್ಪ ಇದ್ದರು.