ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

ʻಭಾರತ ದುಬೈನಲ್ಲಿ ಮಾತ್ರ ಆಡುತ್ತಿದೆʼ: ಐಸಿಸಿಯ ಪಕ್ಷಪಾತ ಧೋರಣೆ ವಿರುದ್ದ ಇಂಗ್ಲೆಂಡ್‌ ದಿಗ್ಗಜರ ಆರೋಪ!

England greats accuse ICC of favouritism: ಪ್ರಸ್ತುತ ಪಾಕಿಸ್ತಾನ ಆತಿಥ್ಯದಲ್ಲಿ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿ ನಡೆಯುತ್ತಿದೆ. ಆದರೆ, ಭಾರತ ತಂಡದ ಪಂದ್ಯಗಳು ಕೇವಲ ದುಬೈ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಮಾತ್ರ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಐಸಿಸಿ ವಿರುದ್ಧ ಇಂಗ್ಲೆಂಡ್‌ ಮಾಜಿ ಕ್ರಿಕೆಟಿಗರಾದ ಮೈಕಲ್‌ ಅಥರ್ಟನ್‌ ಹಾಗೂ ನಾಸರ್‌ ಹುಸೇನ್‌ ಆರೋಪ ಮಾಡಿದ್ದಾರೆ.

ʻಭಾರತ ಏಕೆ ದುಬೈನಲ್ಲಿ ಮಾತ್ರ ಆಡುತ್ತಿದೆ?ʼ: ಐಸಿಸಿ ವಿರುದ್ಧ ಗಂಭೀರ ಆರೋಪ!

ಐಸಿಸಿ ವಿರುದ್ಧ ಆರೋಪ ಮಾಡಿದ ಇಂಗ್ಲೆಂಡ್‌ ಮಾಜಿ ಆಟಗಾರರು.

Profile Ramesh Kote Feb 26, 2025 12:14 PM

ನವದೆಹಲಿ: ಭಾರತ ತಂಡ ದುಬೈ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಮಾತ್ರ ಆಡಲು ಅವಕಾಶ ಮಾಡಿಕೊಟ್ಟಿರುವ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ICC)ನ ಪಕ್ಷಪಾತ ಧೋರಣೆಯನ್ನು ಇಂಗ್ಲೆಂಡ್‌ನ ಮಾಜಿ ಆಟಗಾರರಾದ ಮೈಕಲ್‌ ಅಥರ್ಟನ್‌ ಮತ್ತು ನಾಸರ್‌ ಹುಸೇನ್‌ ಖಂಡಿಸಿದ್ದಾರೆ. ರಾಜಕೀಯ ಕಾರಣಗಳಿಂದಾಗಿ ಭಾರತ ತಂಡ, ಪಾಕಿಸ್ತಾನಕ್ಕೆ ಪ್ರಯಾಣ ಮಾಡಲು ಸಾಧ್ಯವಿಲ್ಲ. ಈ ಕಾರಣಗಳಿಂದ ಈ ಟೂರ್ನಿಯನ್ನು ಹೈಬ್ರಿಡ್‌ ಮಾಡೆಲ್‌ನಲ್ಲಿ ನಡೆಸಲಾಗುತ್ತಿದೆ. ಭಾರತದ ವಿರುದ್ಧದ ಪಂದ್ಯಗಳನ್ನು ಆಡಲು ಬೇರೆ ಎಲ್ಲಾ ತಂಡಗಳು ಕೂಡ ದುಬೈಗೆ ಪ್ರಯಾಣ ಬೆಳೆಸಬೇಕಾಗಿದೆ. ಇದರ ವಿರುದ್ಧ ಇದೀಗ ಅಸಮಾಧಾನದ ಕೂಗು ಕೇಳಿ ಬರುತ್ತಿದೆ.

ಯುಎಇನಲ್ಲಿ ದಬೈ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದ ಜೊತೆಗೆ ಶಾರ್ಜಾ ಮತ್ತು ಅಬುದಾಬಿಯಲ್ಲಿಯೂ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣಗಳಿವೆ. ಆದರೂ, ರೋಹಿತ್‌ ಶರ್ಮಾ ನಾಯಕತ್ವದ ಟೀಮ್‌ ಇಂಡಿಯಾ, ತನ್ನ ಎಲ್ಲಾ ಪಂದ್ಯಗಳನ್ನು ಕೇವಲ ದುಬೈನಲ್ಲಿ ಮಾತ್ರ ಆಡುತ್ತಿದೆ. ಹಾಗಾಗಿ ಪ್ರಯಾಣ ಸಮಯ ಉಳಿಯಲಿದೆ, ಕಂಡೀಷನ್ಸ್‌ಗೆ ಸುಲಭವಾಗಿ ಹೊಂದಿಕೊಳ್ಳಬಹುದು. ಆದರೆ, ಬೇರೆ ತಂಡಗಳಿಗೆ ಹೋಲಿಕೆ ಮಾಡಿದಾಗ ಭಾರತಕ್ಕೆ ಇದು ತುಂಬಾ ಲಾಭದಾಯಕವಾಗಿದೆ.

IND vs PAK: ʻಬಾಬರ್‌ ಆಝಮ್‌ ಒಬ್ಬ ಮೋಸಗಾರʼ-ಮಾಜಿ ನಾಯಕನ ವಿರುದ್ಧ ಶೋಯೆಬ್‌ ಅಖ್ತರ್‌ ಕಿಡಿ!

ಭಾರತಕ್ಕೆ ಲಾಭದಾಯಕವಾಗಿದೆ: ಅಥರ್ಟನ್‌ ಆರೋಪ

ಸ್ಕೈ ಸ್ಪೋರ್ಟ್ಸ್‌ ಜೊತೆ ಮಾತನಾಡಿದ ನಾಸರ್‌ ಹುಸೇನ್‌ ಹಾಗೂ ಮೈಕಲ್‌ ಅಥರ್ಟನ್‌ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. "ಭಾರತ ತಂಡ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಮಾತ್ರ ಆಡಲಿವೆ. ದುಬೈನಲ್ಲಿ ಮಾತ್ರ. ಇದರ ಲಾಭದಾಯಕ ಸಂಗತಿಯನ್ನು ಅಳೆಯುವುದು ನನಗೆ ಕಷ್ಟಕರವಾಗಿದೆ ಹಾಗೂ ನಿರಾಕರಿಸಲಾಗದ ಪ್ರಯೋಜನ. ಭಾರತ ತಂಡ ಆಡುವುದು ಕೇವಲ ಒಂದೇ ಕ್ರೀಡಾಂಗಣದಲ್ಲಿ ಮಾತ್ರ. ಸ್ಥಳದಿಂದ ಸ್ಥಳಕ್ಕೆ ಭಾರತ ಪ್ರಯಾಣ ಮಾಡುವ ಅಗತ್ಯವಿಲ್ಲ. ಆದರೆ, ಇತರ ತಂಡಗಳು ಸಾಕಷ್ಟು ಪ್ರಯಾಣ ನಡೆಸಬೇಕಾಗಿದೆ," ಎಂದು ಮೈಕಲ್‌ ಅಥರ್ಟನ್‌ ಆರೋಪ ಮಾಡಿದ್ದಾರೆ.

ನಾಸರ್‌ ಹುಸೇನ್‌ ಹೇಳಿದ್ದೇನು?

"ಇದು ಭಾರತಕ್ಕೆ ಲಾಭದಾಯಕವಾಗಿದೆ. ಟೂರ್ನಿಯ ಅತ್ಯುತ್ತಮ ತಂಡಕ್ಕೆ ಇದು ಲಾಭವಾಗಲಿದೆ. ಬೇರೆ ದಿನ ನಾನು ಮತೊಂದು ಟ್ವೀಟ್‌ ಅನ್ನು ನೋಡಿದ್ದೇನೆ: ಪಾಕಿಸ್ತಾನ ಆತಿಥ್ಯ ತಂಡವಾಗಿದೆ, ಭಾರತಕ್ಕೆ ತವರು ಕಂಡೀಷನ್ಸ್‌ನ ಲಾಭ ಸಿಗುತ್ತಿದೆ. ಭಾರತ ತಂಡ ಕೇವಲ ಒಂದು ಸ್ಥಳದಲ್ಲಿ ಮಾತ್ರ ಇರಲಿದೆ ಹಾಗೂ ಒಂದೇ ಹೋಟೆಲ್‌ನಲ್ಲಿ ಉಳಿಯಲಿದೆ. ಇಲ್ಲಿ ಪ್ರಯಾಣ ಕೂಡ ಇರುವುದಿಲ್ಲ. ಅವರಿಗೆ ಒಂದೇ ಒಂದು ಡ್ರೆಸ್ಸಿಂಗ್‌ ರೂಂ. ಪಿಚ್‌ ಬಗ್ಗೆ ಅವರಿಗೆ ಗೊತ್ತಿದೆ. ಆ ಪಿಚ್‌ ಅನ್ನು ಅವರು ಅರ್ಥ ಮಾಡಿಕೊಂಡಿದ್ದಾರೆ. ಮೊದಲೇ ಭಾರತ ತಂಡಕ್ಕೆ ದುಬೈ ಪಿಚ್‌ ಹೇಗಿದೆ ಎಂದು ಗೊತ್ತಿದೆ," ಎಂದು ನಾಸರ್‌ ಹುಸೇನ್‌ ಹೇಳಿದ್ದಾರೆ.

IND vs PAK: 20 ರನ್‌ಗೆ ಔಟಾದರೂ ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ರೋಹಿತ್‌ ಶರ್ಮಾ!

ಕಳೆದ ಪಂದ್ಯದಲ್ಲಿ ಆತಿಥೇಯ ಹಾಗೂ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ತಂಡ 6 ವಿಕೆಟ್‌ಗಳಿಂದ ಗೆಲುವು ಪಡೆದಿತ್ತು. ಪ್ರಯಾಣ ಮಾಡುವ ಅಗತ್ಯವಿಲ್ಲದ ಕಾರಣ, ದುಬೈ ಕಂಡೀಷನ್ಸ್‌ಗೆ ತಕ್ಕಂತೆ ಭಾರತ ತಂಡದ ಟೀಮ್‌ ಮ್ಯಾನೇಜ್‌ಮೆಂಟ್‌ ಉತ್ತಮ ತಂತ್ರವನ್ನು ರೂಪಿಸಬಹುದು ಎಂದು ನಾಸರ್‌ ಹುಸೇನ್‌ ಮತ್ತು ಮೈಕಲ್‌ ಅಥರ್ಟನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ವಿರುದ್ದದ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ತಂಡ ಈಗಾಗಲೇ ಟೂರ್ನಿಯ ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ. ಬಾಂಗ್ಲಾದೇಶ ವಿರುದ್ಧ ಗೆಲುವು ಪಡೆಯುವ ಮೂಲಕ ನ್ಯೂಜಿಲೆಂಡ್‌ ತಂಡ ಕೂಡ ಅಂತಿಮ ನಾಲ್ಕರ ಘಟ್ಟಕ್ಕೆ ಅರ್ಹತೆ ಪಡೆದಿದೆ. ಇದರೊಂದಿಗೆ ಆರಂಭಿಕ ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿದ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಸೆಮಿಫೈನಲ್‌ ರೇಸ್‌ನಿಂದ ಅಧಿಕೃತವಾಗಿ ಹೊರ ಬಿದ್ದಿವೆ.