ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕೃಷಿಕೂಲಿಕಾರರ ಸಂಘದ ವಿಭಾಗೀಯ ಮಟ್ಟದ ಸಭೆ; ಶ್ರೀಮಂತರ ಸಂಪತ್ತು ದುಪ್ಪಟ್ಟು

ಪ್ರತಿ ವರ್ಷವು ದೇಶದ ಸಂಪತ್ತು ಖಾಸಗಿ ಕಂಪನಿಯವರ, ಶ್ರೀಮಂತರ, ಶಾಸಕರ, ಸಂಸದರ ಆಸ್ತಿ, ಸಂಪತ್ತು ದ್ವಿಗುಣ ಆಗುತ್ತಿದೆ. ಕೃಷಿ ಕೂಲಿ ಕಾರ್ಮಿಕರು ದೇಶದ ಸಂಪತ್ತನ್ನು ಹೆಚ್ಚು ಮಾಡು ತ್ತಿದ್ದಾರೆ. ಬೆವರ ಹನಿಗಳು ಸುರಿಸಿ, ಕಷ್ಟಪಟ್ಟು ದುಡಿಯುವ ವರ್ಗದ ಜನರಿಗೆ, ಸಾಮಾನ್ಯ ಜನರಿಗೆ ಹೆಚ್ಚು ಸುಂಕ ವಿಧಿಸಲಾಗುತ್ತಿದೆ.

ಜನಸಾಮಾನ್ಯರ ಸಂಪತ್ತು ಮಾತ್ರ ಹೆಚ್ಚಾಗಿಲ್ಲ: ಬಿ.ವೆಂಕಟ್ ಆರೋಪ

Profile Ashok Nayak Mar 31, 2025 10:01 PM

ಬಾಗೇಪಲ್ಲಿ: ಕೇಂದ್ರದ ಬಿಜೆಪಿ ಹಾಗೂ ರಾಜ್ಯ ಸರ್ಕಾರದ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಂತೆ ವರ್ತನೆಯಿಂದ, ಕಾರ್ಪೋರೇಟ್ ಕಂಪನಿಗಳ, ಶ್ರೀಮಂತರ, ಶಾಸಕರ, ಸಂಸದರ ಸಂಪತ್ತುಗಳು ಹೆಚ್ಚಾಗುತ್ತಿದೆಯೇ ಹೊರತು, ಜನಸಾಮಾನ್ಯರ, ಕೃಷಿಕೂಲಿಕಾರ್ಮಿಕರ ಆದಾಯ ಮಾತ್ರ ಹೆಚ್ಚಾಗುತ್ತಿಲ್ಲ ಎಂದು ಅಖಿಲ ಭಾರತ ಕೃಷಿಕೂಲಿಕಾರರ ಸಂಘಟನೆಯ ಪ್ರಧಾನ ಕಾರ್ಯ ದರ್ಶಿ ಬಿ.ವೆಂಕಟ್ ಆರೋಪಿಸಿದರು. 

ಪಟ್ಟಣದ ಸುಂದರಯ್ಯ ಭವನದಲ್ಲಿ ಪ್ರಾಂತ ಕೃಷಿಕೂಲಿಕಾರರ ಸಂಘಟನೆಯ ಜಿಲ್ಲಾ ಸಮಿತಿ ಯಿಂದ ಹಮ್ಮಿಕೊಂಡಿದ್ದ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಪ್ರಾಂತ ಕೃಷಿಕೂಲಿಕಾರರ ಸಂಘದ ವಿಭಾಗೀಯ ಮಟ್ಟದ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. 

ಇದನ್ನೂ ಓದಿ: Chikkaballapur News: ಶಾಂತಿಯನ್ನು ಮೈಗೂಡಿಸಿಕೊಳ್ಳುವಂತೆ ಸಲಹೆ ನೀಡಿ, ಎಲ್ಲರ ಜೀವನದಲ್ಲಿ ಸುಖ ಶಾಂತಿ ನೆಲೆಸಲಿ

ಪ್ರತಿ ವರ್ಷವು ದೇಶದ ಸಂಪತ್ತು ಖಾಸಗಿ ಕಂಪನಿಯವರ, ಶ್ರೀಮಂತರ, ಶಾಸಕರ, ಸಂಸದರ ಆಸ್ತಿ, ಸಂಪತ್ತು ದ್ವಿಗುಣ ಆಗುತ್ತಿದೆ. ಕೃಷಿ ಕೂಲಿ ಕಾರ್ಮಿಕರು ದೇಶದ ಸಂಪತ್ತನ್ನು ಹೆಚ್ಚು ಮಾಡು ತ್ತಿದ್ದಾರೆ. ಬೆವರ ಹನಿಗಳು ಸುರಿಸಿ, ಕಷ್ಟಪಟ್ಟು ದುಡಿಯುವ ವರ್ಗದ ಜನರಿಗೆ, ಸಾಮಾನ್ಯ ಜನರಿಗೆ ಹೆಚ್ಚು ಸುಂಕ ವಿಧಿಸಲಾಗುತ್ತಿದೆ. ಶ್ರೀಮಂತರ, ಕಾರ್ಪೋರೇಟ್ ಕಂಪನಿಗಳ ಸಾಲ ಮನ್ನಾ ಮಾಡುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ, ಮಹಿಳೆಯರ, ಕೃಷಿಕೂಲಿಕಾರ್ಮಿಕರ ಸಾಲ ಮನ್ನಾ ಮಾಡಲು ಆಗುವುದಿಲ್ಲವೇ? ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು. 

ರೈತರು ಬೆಳೆಯುವ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗಧಿಪಡಿಸಿಲ್ಲ. ದಲ್ಲಾಳಿಗಳ, ಏಜೆಂಟರು ಕಮೀಷನ್ ಪಡೆದು ಶ್ರೀಮಂತರಾಗಿದ್ದಾರೆ. ಕೃಷಿಕರು ಬೆಳೆಯುವ ಬೆಳೆಗಳನ್ನು ಮಾರುಕಟ್ಟೆಗಳಲ್ಲಿ ದಲ್ಲಾಳಿಗಳ, ವ್ಯಾಪಾರಸ್ಥರ ಒಪ್ಪಂದಗಳಿAದ ರೈತರಿಗೆ ಉತ್ತಮ ಬೆಲೆ ನಿಗಧಿ ಆಗುತ್ತಿಲ್ಲ. ರೈತರೇ ನೇರವಾಗಿ ವ್ಯಾಪಾರಸ್ಥರಿಗೆ ಮಾರಾಟ ಮಾಡಲು ಸರ್ಕಾರಗಳು ಮುಂದಾಗಬೇಕು. ದಲ್ಲಾಳಿ, ಏಜೆಂಟರ ಹಾವಳಿ ತಡೆಯಬೇಕು. ಶೇ 8 ರಷ್ಟು ಮಂದಿಗೆ ದೇಶದಲ್ಲಿ ನಿವೇಶನ, ಮನೆಗಳು ಇಲ್ಲ. ಸ್ಮಶಾನಗಳು ಇಲ್ಲ. ನಿವೇಶನ, ಮನೆಗಳು ಇಲ್ಲದೇ ಕೊಳಚೆ ಪ್ರದೇಶ, ಚರಂಡಿಗಳ, ಹೊರಗಡೆಟೆಂಟ್ ಗಳಲ್ಲಿ ಜೀವನ ಮಾಡುತ್ತಿದ್ದಾರೆ. ಆದರೆ ಪ್ರತಿ ವರ್ಷ ಆದಾಯ ದುಪ್ಪಟ್ಟು ಮಾಡಿಕೊಂಡ ಶ್ರೀಮಂತರು, ಕೋಟ್ಯಾಂತರ ರೂಪಾಯಿಗಳಲ್ಲಿ ರಾಜವೈಭೋಗದ ಮನೆಗಳನ್ನು ಕಟ್ಟಿಕೊಂಡು ಸುಖಜೀವನ ಮಾಡುತ್ತಿದ್ದಾರೆ. ಕಷ್ಟ ಪಡುವವರು ಜನಸಾಮಾನ್ಯರು, ಸುಖಜೀವನ ಅನುಭವಿಸು ತ್ತಿರುವುದು ಶ್ರೀಮಂತರು ಆಗಿದ್ದಾರೆ ಎಂದರು. 

ಇದರಿಂದ ಪ್ರತಿಯೊಬ್ಬ ಪ್ರಜೆಯು ತಮ್ಮ ಅಮೂಲ್ಯವಾದ ಮತಗಳನ್ನು ಮಾರಾಟಕ್ಕೆ ಇಡಬಾ ರದು, ಆಸೆ, ಆಮಿಷಗಳು, ಹಣ, ಹೆಂಡ ಕ್ಷಣಿಕ ಆಗಿದೆ. ಮತದಾರರು ಎಚ್ಚೆತ್ತುಕೊಳ್ಳಬೇಕು. ಕಳೆದ ಸಿಪಿಎಂ ಆಡಳಿತದ ಶಾಸಕ ಜಿ.ವಿ.ಶ್ರೀರಾಮರೆಡ್ಡಿರವರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ದ್ದರು. ಸಿಪಿಎಂ ಶಾಸಕರ ಅವಧಿಯಲ್ಲಿ ಕ್ಷೇತ್ರದಲ್ಲಿ ಕುಡಿಯುವ ನೀರು, ಸರ್ಕಾರಿ ಶಾಲೆ, ಕಾಲೇಜು ಗಳು, ಆಸ್ಪತ್ರೆ, ನಿವೇಶನ, ಮನೆಗಳನ್ನು ವಿತರಣೆ ಮಾಡಲಾಗಿದೆ. ಆದರೆ ಇದೀಗ ಶಾಶ್ವತ ನೀರಾವರಿ, ಕೈಗಾರಿಕೆಗಳು ಇಲ್ಲ. ಕೃಷಿಕೂಲಿಕಾರ್ಮಿಕರು ದುಡಿದು ಜೀವನ ಮಾಡಬೇಕಾಗಿದೆ. ಯುವಕರ, ಯುವತಿಯರಿಗೆ ಉದ್ಯೋಗ ಇಲ್ಲ. ಇದರಿಂದ ಮತ ಚಲಾಯಿಸುವಾಗ, ಯೋಚಿಸಿ ಮತ ಚಲಾ ಯಿಸಬೇಕು ಎಂದು ತಿಳಿಸಿದರು. 

ಕೃಷಿಕೂಲಿಕಾರ್ಮಿಕರ, ಜನಸಾಮಾನ್ಯರ, ಎಲ್ಲಾ ಸಮುದಾಯದವರ ಅಭಿವೃದ್ಧಿಗೆ, ಜನವಿರೋಧಿ ನೀತಿಗಳ ಸರ್ಕಾರಗಳ ವಿರುದ್ಧ ಹೋರಾಟ ಮಾಡುವುದು ಕಮ್ಯೂನಿಸ್ಟ್ ರು ಮಾತ್ರ ಆಗಿದೆ. ಕಮ್ಯೂನಿಸ್ಟರು ಹಣ, ಹೆಂಡ, ಆಸೆ, ಆಮಿಷಗಳು ತೋರಲ್ಲ. ಆದರೆ ಕಾಂಗ್ರೆಸ್, ಬಿಜೆಪಿಯವರು ಚುನಾವಣೆಗಳಲ್ಲಿ ಕೋಟ್ಯಾಂತರ ಹಣ ವ್ಯಯ ಮಾಡುತ್ತಾರೆ. ಜನರಿಗೆ ಆಸೆ, ಆಮಿಷ, ಹಣ, ಹೆಂಡ ಹಂಚುತ್ತಾರೆ. ಚುನಾವಣಾ ವ್ಯವಸ್ಥೆಯ ಮೇಲೆ ಕಪ್ಪುಚುಕ್ಕೆ ಬಂದಿದೆ. ಇದರಿಂದ ಮತ ಚಲಾಯಿ ಸುವ ಮುನ್ನಾ ಯೋಚನೆ ಮಾಡಿ, ಯೋಗ್ಯವಾದ, ಕ್ಷೇತ್ರ ಅಭಿವೃದ್ಧಿ ಪಡಿಸುವ, ಜನರ ಪರ ಇರುವ ವ್ಯಕ್ತಿಗೆ ಮತ ಚಲಾಯಿಸಬೇಕು. ಶ್ರೀಮಂತರಿಗೆ, ರಿಯಲ್ ಎಸ್ಟೇಟ್ ಧಂಧೆಯವರಿಗೆ ಮತ ಚಲಾ ಯಿಸಿದರೆ ಅವರ ಆಸ್ತಿ, ಸಂಪತ್ತು ಹೆಚ್ಚಿಸಿಕೊಳ್ಳುತ್ತಾರೆಯೇ, ವಿನಃ ವಿಧಾನಸೌಧದಲ್ಲಿ, ಸಂಸತ್ತಿನಲ್ಲಿ ಜನರ ಪರ ಮಾತನಾಡುವುದು ಇಲ್ಲ ಎಂದರು. 

ಕ್ಷೇತ್ರದ ಪ್ರತಿ ಮನೆಗೆ ಭೇಟಿ ಮಾಡಬೇಕು. ಜನರ ಸಮಸ್ಯೆಗಳು ತಿಳಿದು ಸಂಘಟನೆಗಳ ಮೂಲಕ ಹೋರಾಟ ಮಾಡಬೇಕು. ಹೋರಾಟದಿಂದ ಮಾತ್ರ ಹಕ್ಕುಗಳನ್ನು ಪಡೆಯಬಹುದು. ಸಾಮೂಹಿಕ ಸಂಘಟನೆಗಳ ಸದಸ್ಯತ್ವ ಮಾಡಿಸಬೇಕು. ಹೋರಾಟಗಳಿಂದ ಜನರಿಗೆ ಅನುಕೂಲ ಆದರೆ, ಪಕ್ಷದ ಹಾಗೂ ನಾಯಕರ ಬಗ್ಗೆ ನಂಬಿಕೆ, ವಿಶ್ವಾಸ ಸಿಗುತ್ತದೆ ಎಂದು ತಿಳಿಸಿದರು.  

ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಪಿ.ಮುನಿವೆAಕಟಪ್ಪ ಮಾತನಾಡಿ, 'ನಿವೇಶನ, ಮನೆರಹಿತರು ಜಿ.ವಿ.ಶ್ರೀರಾಮರೆಡ್ಡಿರವರ ನೇತೃತ್ವದಲ್ಲಿ ನಿವೇಶನ, ಮನೆಗಳಿಗೆ ಅರ್ಜಿ ಸಲ್ಲಿಸಿ 15 ವರ್ಷಗಳು ಕಳೆದರೂ, ಇದುವರಿಗೂ ಜನಪ್ರತಿನಿಧಿಗಳು, ಅಧಿಕಾರಿಗಳು ನಿವೇಶನ, ಮನೆಗಳು ಹಂಚಿಲ್ಲ. 200 ದಿನಗಳಿಗೆ ಪ್ರತಿ ಕೂಲಿಯವರಿಗೆ 600 ರೂಫಾಯಿಯಂತೆ ಕೂಲಿ ಹಣ ನೀಡಬೇಕು. ಸಾಗುವಳಿ ಚೀಟಿ, ದರಖಾಸ್ತು ಭೂಮಿಯನ್ನು ಫಲಾನುಭವಿಗಳಿಗೆ ಹಂಚಬೇಕು. ಕೃಷಿಯ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡ ಸರ್ಕಾರಗಳು ಕಡಿಮೆ ಧರವನ್ನು ರೈತರಿಗೆ ವಿತರಣೆ ಮಾಡುತ್ತಿರುವುದು ಖಂಡನೀಯ ಆಗಿದೆ. ಕೃಷಿಕರಿಗೆ ರಾಷ್ಟಿçÃಕೃತ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ಸಿಗುತ್ತಿಲ್ಲ. ಹೈನುಗಾರಿಕೆ, ಕೃಷಿ, ತರಕಾರಿ ಬೆಳೆಗಳು ಬೆಳೆದ ಬೆಳೆಗಳಿಗೆ ನಿಗಧಿತ ಬೆಲೆಯನ್ನು ಕಲ್ಪಿಸಿಲ್ಲ. ಎಲ್ಲಾ ಕೃಷಿಕೂಲಿಕಾರರು ಸಂಘದ ಸದಸ್ಯತ್ವ ಪಡೆದು, ಸಂಘಟಿತರಾಗಬೇಕು. ಆ ಮೂಲಕ ಕೃಷಿ ಕೂಲಿಯವರ ವಿರೋಧಿನೀತಿಗಳ ವಿರುದ್ಧ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು. 

ಕಾರ್ಯಕ್ರಮದಲ್ಲಿ ಪಂಚಾಯಿತಿ ಮಟ್ಟದ ಸಂಘಟನೆಗಳ ಮುಖಂಡರು ಸಂಘಟನೆಯ, ಜನರ ಸಮಸ್ಯೆಗಳ, ಸರ್ಕಾರಗಳ ವಿರೋಧಿ ನೀತಿಗಳ ವಿರುದ್ಧ ಹೋರಾಟ ಮಾಡಬೇಕಾಗಿದೆ ಎಂದು ಒತ್ತಾಯಿಸಿದರು. 

ಸಭೆಯಲ್ಲಿ ಪ್ರಾಂತ ಕೃಷಿಕೂಲಿಕಾರರ ಸಂಘಟನೆಯ ಜಿಲ್ಲಾ ಅಧ್ಯಕ್ಷ ಬಿಳ್ಳೂರುನಾಗರಾಜು, ಮುಖಂಡರಾದ ಸಿದ್ದಗಂಗಪ್ಪ, ಡಾ.ಅನಿಲ್‌ಕುಮಾರ್, ಎಂ.ಎನ್.ರಘುರಾಮರೆಡ್ಡಿ, ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಚನ್ನರಾಯಪ್ಪ, ಮುಖಂಡರಾದ ದೇವಿಕುಂಟೆಶ್ರೀನಿವಾಸ್, ಕೆ.ಮುನಿಯಪ್ಪ, ಚಂಚುರಾಯನಪಲ್ಲಿಕೃಷ್ಣಪ್ಪ, ಜಿ.ಮುಸ್ತಾಫ ಮತ್ತಿತರರು ಇದ್ದರು.