ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ನೋಟ್​ಬುಕ್ ಸೆಲೆಬ್ರೇಷನ್ ಮಾಡಿ ದಂಡಕ್ಕೆ ಗುರಿಯಾದ ದಿಗ್ವೇಶ್ ರಾಠಿ

Digvesh Rathi Notebook Celebration: ದಿಗ್ವೇಶ್ ರಾಠಿಗೆ ಪಂದ್ಯ ಶುಲ್ಕದ ಶೇ.25 ರಷ್ಟು ದಂಡ ವಿಧಿಸಲಾಗಿದೆ. ಅಲ್ಲದೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ. ಸದ್ಯ ಒಂದು ಡಿಮೆರಿಟ್ ಪಾಯಿಂಟ್ ಪಡೆದಿರುವ ದಿದಿಗ್ವೇಶ್ ರಾಠಿಗೆ ಮೂರು ವರ್ಷದೊಳಗೆ 4 ಡಿಮೆರಿಟ್ ಪಾಯಿಂಟ್ ಪಡೆದರೆ ಒಂದು ಪಂದ್ಯದಿಂದ ನಿಷೇಧಕ್ಕೆ ಒಳಗಾಗಲಿದ್ದಾರೆ.

ನೋಟ್​ಬುಕ್ ಸೆಲೆಬ್ರೇಷನ್ ಮಾಡಿ ದಂಡಕ್ಕೆ ಗುರಿಯಾದ ದಿಗ್ವೇಶ್ ರಾಠಿ

Profile Abhilash BC Apr 2, 2025 10:44 AM

ಲಖನೌ: ಮಂಗಳವಾರ ಏಕಾನ ಕ್ರೀಡಾಂಗಣದಲ್ಲಿ ಪಂಜಾಬ್‌ ಮತ್ತು ಲಕ್ನೋ ತಂಡಗಳ(LSG vs PBKS) ನಡುವೆ ನಡೆದ ಪಂದ್ಯದಲ್ಲಿ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ(Priyansh Arya) ಅವರನ್ನು ಔಟ್ ಮಾಡಿದ ಬಳಿಕ ನೋಟ್​ಬುಕ್ ಸೆಲೆಬ್ರೇಷನ್ ಮಾಡಿದ್ದ ಲಕ್ನೋ ಸ್ಪಿನ್ನರ್‌ ದಿಗ್ವೇಶ್ ರಾಠಿ(Digvesh Rathi)ಗೆ ಐಪಿಎಲ್‌(IPL 2025) ಆಡಳಿತ ಮಂಡಳಿ ದಂಡದ ಬಿಸಿ ಮುಟ್ಟಿಸಿದೆ.

ರಾಠಿಗೆ ಪಂದ್ಯ ಶುಲ್ಕದ ಶೇ.25 ರಷ್ಟು ದಂಡ ವಿಧಿಸಲಾಗಿದೆ. ಅಲ್ಲದೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ. ಸದ್ಯ ಒಂದು ಡಿಮೆರಿಟ್ ಪಾಯಿಂಟ್ ಪಡೆದಿರುವ ದಿದಿಗ್ವೇಶ್ ರಾಠಿಗೆ ಮೂರು ವರ್ಷದೊಳಗೆ 4 ಡಿಮೆರಿಟ್ ಪಾಯಿಂಟ್ ಪಡೆದರೆ ಒಂದು ಪಂದ್ಯದಿಂದ ನಿಷೇಧಕ್ಕೆ ಒಳಗಾಗಲಿದ್ದಾರೆ.

ಈ ಹಿಂದೆ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್, ನಿತೀಶ್ ರಾಣಾ ಮತ್ತು ಹೃತಿಕ್ ಶೊಕೀನ್ ಮೈದಾನದಲ್ಲಿ ಜಗಳವಾಡಿಕೊಂಡು ದಂಡ ಕಟ್ಟಿದ್ದರು. ಇದೀಗ ಈ ಪಟ್ಟಿಗೆ ದಿಗ್ವೇಶ್ ರಾಠಿ ಸೇರ್ಪಡೆಗೊಂಡಿದ್ದಾರೆ.



ಕೆಲ ವರ್ಷಗಳ ಹಿಂದೆ ಇಂಡೀಸ್​ನ ಕೆಸ್ರಿಕ್ ವಿಲಿಯಮ್ಸ್ ಭಾರತ ವಿರುದ್ಧದ ಪಂದ್ಯದಲ್ಲಿ ನೋಟ್​ಬುಕ್ ಸೆಲೆಬ್ರೇಷನ್ ಮಾಡಿ ವಿರಾಟ್‌ ಕೊಹ್ಲಿ ಅವರಿಂದ ಸರಿಯಾಗಿ ದಂಡಿಸಿಕಿಕೊಂಡಿದ್ದರು. ಇದಾದ ಬಳಿಕ ಕೆಸ್ರಿಕ್ ವಿಲಿಯಮ್ಸ್ ಇದುವರೆಗೂ ಈ ಸಂಭ್ರಮಾಚರಣೆ ಮಾಡಿಲ್ಲ. ಇದೀಗ ಈ ಸೆಲೆಬ್ರೇಷನ್ ಐಪಿಎಲ್​ನಲ್ಲಿ ಕಾಣಿಸಿಕೊಂಡಿದೆ. ಆದರೆ ಇದಕ್ಕೆ ದಂಡದ ಬರೆ ಬಿದ್ದಿದೆ.

ಇದನ್ನೂ ಓದಿ IPL 2025: 27 ಕೋಟಿ ರೂ ಕೊಟ್ಟಿದ್ದೇಕೆ? 2 ರನ್‌ಗೆ ವಿಕೆಟ್‌ ಒಪ್ಪಿಸಿದ ರಿಷಭ್‌ ಪಂತ್‌ ವಿರುದ್ದ ಫ್ಯಾನ್ಸ್‌ ಗರಂ!

ಪಂದ್ಯ ಗೆದ್ದ ಪಂಜಾಬ್‌

ಈ ಪಂದ್ಯದಲ್ಲಿ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಅಮೋಘ ನಿರ್ವಹಣೆ ನೀಡಿದ ಪಂಜಾಬ್‌ ಕಿಂಗ್ಸ್‌ ತಂಡವು ಲಕ್ನೋ ಸೂಪರ್‌ ಜೈಂಟ್ಸ್‌ ತಂಡವನ್ನು 8 ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿತು. ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಲಕ್ನೋ 7 ವಿಕೆಟಿಗೆ 171 ರನ್‌ ಬಾರಿಸಿತು. ಜವಾಬಿತ್ತ ಪಂಜಾಬ್‌ ತಂಡವು ಆಬಳಿಕ ಆರಂಭಿಕ ಆಟಗರ ಪ್ರಭ್‌ಸಿಮ್ರಾನ್‌ ಸಿಂಗ್‌, ನಾಯಕ ಶ್ರೇಯಸ್‌ ಅಯ್ಯರ್‌ ಅವರ ಉತ್ತಮ ಆಟದಿಂದಾಗಿ 16.2 ಓವರ್‌ಗಳಲ್ಲಿ ಕೇವಲ ಎರಡು ವಿಕೆಟಿಗೆ 177 ರನ್‌ ಗಳಿಸಿ ಜಯಭೇರಿ ಬಾರಿಸಿತು.