ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fraud Case: ನಟಿ ಸಂಜನಾ ಗಲ್ರಾನಿಗೆ ವಂಚನೆ, ಆರೋಪಿಗೆ ಜೈಲು, 61 ಲಕ್ಷ ರೂ. ದಂಡ

ಕನ್ನಡದ ನಟಿ ಸಂಜನಾ ಗಲ್ರಾನಿಗೆ ಸ್ನೇಹಿತನಾಗಿದ್ದ ರಾಹುಲ್ ತೋನ್ಸೆ ನಟಿಗೆ ರಿಯಲ್‌ ಎಸ್ಟೇಟ್‌ ಹೂಡಿಕೆ ಭರವಸೆ ನೀಡಿ ಆಕೆಯಿಂದ ಲಕ್ಷಾಂತರ ರೂಪಾಯಿ ಪಡೆದು, ಯಾವುದೇ ಆಸ್ತಿ ನೋಂದಣಿ ಮಾಡಿಸದೆ ವಂಚಿಸಿದ್ದಾನೆ ಎಂದು ನಟಿ ದೂರು ದಾಖಲಿಸಿದ್ದರು.

ನಟಿ ಸಂಜನಾ ಗಲ್ರಾನಿಗೆ ವಂಚನೆ, ಆರೋಪಿಗೆ ಜೈಲು, 61 ಲಕ್ಷ ರೂ. ದಂಡ

ನಟಿ ಸಂಜನಾ ಗಲ್ರಾನಿ

ಹರೀಶ್‌ ಕೇರ ಹರೀಶ್‌ ಕೇರ Apr 7, 2025 8:25 AM

ಬೆಂಗಳೂರು: ನಟಿ ಸಂಜನಾ ಗಲ್ರಾನಿ (Kannada actress Sanjana Galrani) ಅವರಿಗೆ 45 ಲಕ್ಷ ರೂ.ಗಳನ್ನು ವಂಚಿಸಿದ (Fraud Case) ಪ್ರಕರಣದ ಅಪರಾಧಿ ರಾಹುಲ್ ತೋನ್ಸೆ ಎಂಬಾತನಿಗೆ 61.50 ಲಕ್ಷ ರೂ ದಂಡ (Fine) ಮತ್ತು 6 ತಿಂಗಳು ಜೈಲು (Jail) ಶಿಕ್ಷೆ ವಿಧಿಸಿ 33ನೇ ಎಸಿಜೆಎಂ ನ್ಯಾಯಾಲಯ ತೀರ್ಪು ನೀಡಿದೆ. ಬನಶಂಕರಿ 3ನೇ ಹಂತದ ನಿವಾಸಿ ರಾಹುಲ್ ತೋನ್ಸೆ ಅಲಿಯಾಸ್ ರಾಹುಲ್ ಶೆಟ್ಟಿ ವಿರುದ್ಧ 2018-19ರಲ್ಲಿ ಸಂಜನಾ ಗಲ್ರಾನಿಯಿಂದ 45 ಲಕ್ಷ ರೂ ಪಡೆದು ವಂಚಿಸಿದ್ದ ಆರೋಪವಿತ್ತು.

ದಂಡದ ಮೊತ್ತದಲ್ಲಿ 10 ಸಾವಿರ ರೂ ಕೋರ್ಟ್ ಶುಲ್ಕವನ್ನು ಕಡಿತಗೊಳಿಸಿ ಉಳಿದ 61.40 ಲಕ್ಷ ರೂಪಾಯಿಗಳನ್ನು ದೂರುದಾರೆ ಸಂಜನಾಗೆ ನೀಡಬೇಕು. ನಿಗದಿತ ಸಮಯದಲ್ಲಿ ದಂಡದ ಮೊತ್ತವನ್ನು ಪಾವತಿ ಮಾಡಿದರೆ 6 ತಿಂಗಳ ಶಿಕ್ಷೆಯನ್ನು ಮಾಫಿ ಮಾಡಲಾಗುತ್ತದೆ. ಇಲ್ಲವಾದರೆ, 6 ತಿಂಗಳು ಜೈಲು ಮತ್ತು ದಂಡವನ್ನು ಪಾವತಿ ಮಾಡಬೇಕೆಂದು ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ.

ಸಂಜನಾ ಗಲ್ರಾನಿಗೆ ಸ್ನೇಹಿತನಾಗಿದ್ದ ರಾಹುಲ್ ತೋನ್ಸೆ, "ಗೋವಾ ಮತ್ತು ಕೊಲಂಬೋದಲ್ಲಿ ಕ್ಯಾಸಿನೋಗಳ ವ್ಯವಸ್ಥಾಪಕ ನಿರ್ದೇಶಕನಾಗಿದ್ದೇನೆ. ನಾನು ಹೇಳಿದ ಕಡೆಗಳಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಸಿಗಲಿದೆ" ಎಂದು ಆಮಿಷವೊಡ್ಡಿದ್ದ. "ರಾಹುಲ್ ಮಾತು ನಂಬಿ 45 ಲಕ್ಷ ರೂ. ಅನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿದ್ದೆ. ಆದರೆ, ಯಾವುದೇ ಆಸ್ತಿಯನ್ನು ನೋಂದಣಿ ಮಾಡಿಸಿಕೊಡಲಿಲ್ಲ. ನಂತರ ನಾನು ಹಣಕ್ಕೆ ಒತ್ತಾಯ ಮಾಡಿದಾಗ ರಾಹುಲ್ 30 ಲಕ್ಷ ರೂ. ಮತ್ತು 15 ಲಕ್ಷ ರೂ. ಮೌಲ್ಯದ ಚೆಕ್‌ಗಳನ್ನು ನೀಡಿದ್ದ. 30 ಲಕ್ಷ ರೂ. ಚೆಕ್ ಬ್ಯಾಂಕ್‌ಗೆ ಜಮೆ ಮಾಡಿದಾಗ ರಾಹುಲ್ ಚೆಕ್ ತಡೆ ಹಿಡಿಯುವಂತೆ ಲೆಟರ್ ಕೊಟ್ಟಿದ್ದ. ಉಳಿದ 15 ಲಕ್ಷ ರೂ. ಮೌಲ್ಯದ ಚೆಕ್ ಜಮೆ ಮಾಡಿದಾಗ ಬೌನ್ಸ್ ಆಗಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಪ್ರಾಣ ಬೆದರಿಕೆ ಒಡ್ಡಿದ್ದ" ಎಂದು ಸಂಜನಾ ಗಲ್ರಾನಿ ದೂರಿನಲ್ಲಿ ಆರೋಪಿಸಿದ್ದರು.

ಕೋರ್ಟ್‌ನಲ್ಲಿ ಖಾಸಗಿ ದೂರು ದಾಖಲಿಸಿ ಅದರ ಆದೇಶದ ಮೇಲೆ ಇಂದಿರಾನಗರ ಠಾಣೆಯಲ್ಲಿ ರಾಹುಲ್ ತೋನ್ಸೆ, ಆತನ ತಂದೆ ರಾಮಕೃಷ್ಣ ಮತ್ತು ತಾಯಿ ರಾಜೇಶ್ವರಿ ವಿರುದ್ಧ ವಂಚನೆ (ಐಪಿಸಿ 420) ಅಪರಾಧ ಒಳ ಸಂಚು (120ಬಿ), ಜೀವ ಬೆದರಿಕೆ (506), ಅವಾಚ್ಯ ಶಬ್ಧಗಳಿಂದ ನಿಂದನೆ (406) ಇತರೆ ಆರೋಪದಡಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು, ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು.

ಇದನ್ನೂ ಓದಿ:Actress Ragini: ನಟಿ ಸಂಜನಾ, ರಾಗಿಣಿಗೆ ಮತ್ತೆ ಹೆಗಲೇರಿದ ಡ್ರಗ್ಸ್‌ ಕೇಸ್‌, ಸುಪ್ರೀಂ ಕೋರ್ಟ್‌ಗೆ ಹೋದ ಸಿಸಿಬಿ